ಒಂದೇ ದಿನ 17 ಪ್ರಕರಣ ದೃಢ


Team Udayavani, Jun 8, 2020, 11:21 AM IST

08-June-03

ದಾವಣಗೆರೆ: ಬಹಳ ದಿನಗಳ ನಂತರ ನಡು ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆಯಲ್ಲಿ ಮಹಾಮಾರಿ ಕೋವಿಡ್ ಸ್ಫೋಟಗೊಂಡಿದೆ. ಭಾನುವಾರ ಒಂದೇ ದಿನ ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರು ನರ್ಸ್‌, ಇಬ್ಬರು ಅಟೆಂಡರ್‌ ಮತ್ತು 9 ವರ್ಷದ ಬಾಲಕ ಒಳಗೊಂಡಂತೆ 17 ಜನರಲ್ಲಿ ಸೋಂಕು ಪ್ರಕರಣ ಮತ್ತೆ ದಾವಣಗೆರೆ ಜನರನ್ನು ಧೃತಿಗೆಡುವಂತೆ ಮಾಡಿದೆ. ಮೇ 3ರಂದು ಒಂದೇ ದಿನ 21ಪಾಸಿಟಿವ್‌ ಪ್ರಕರಣ ಪತ್ತೆಯಾದ ನಂತರ ನಿನ್ನೆ 17 ಜನರಲ್ಲಿ ಸೋಂಕು ವಕ್ಕರಿಸಿದೆ.

ನಾಲ್ವರು ನರ್ಸ್‌ ಒಳಗೊಂಡಂತೆ ಒಟ್ಟಾರೆ ಆರು ಪ್ರಕರಣಗಳಿಗೆ ಸಂಬಂಧಿಸಿದಂತೆ ಸೋಂಕಿನ ಸಂಪರ್ಕ ಮೂಲವೇ ಗೊತ್ತಾಗಿಲ್ಲ. ಅವರಲ್ಲಿ ಕೋವಿಡ್ ವಾರಿಯರ್ಸ್‌ಗಳಾಗಿ ಕೆಲಸ ಮಾಡುತ್ತಿರುವವರೇ ಕೋವಿಡ್ ಸೋಂಕು ತಗುಲಿರುವುದು ಎಂಬುದು ಜಿಲ್ಲಾಡಳಿತವನ್ನ ಚಿಂತೆಗೀಡು ಮಾಡಿದೆ. ನಾಲ್ವರು ನರ್ಸ್‌ಗಳು 31 ವರ್ಷ (ರೋಗಿ ನಂ. 5310), 36 ವರ್ಷ (ರೋಗಿ ನಂ. 5311), 42 ವರ್ಷದ (ರೋಗಿ ನಂ. 5312), 48 ವರ್ಷದ (ರೋಗಿ ನಂ. 5313) ಕೊರೊನಾ ಸೋಂಕಿತರ ಚಿಕಿತ್ಸಾ ವಿಭಾಗದಲ್ಲಿ ಕೆಲಸ ಮಾಡುತ್ತಿರಲಿಲ್ಲ. ಬೇರೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಸೋಂಕು ಹೇಗೆ ಕಾಣಿಸಿಕೊಂಡಿದೆ ಎಂಬುದನ್ನ ಪತ್ತೆ ಹಚ್ಚಲಾಗುತ್ತಿದೆ ಎಂದು ಜಿಲ್ಲಾ ಆಸ್ಪತ್ರೆ ಮೂಲಗಳು ತಿಳಿಸಿವೆ.

ದಾವಣಗೆರೆಯಲ್ಲಿ ಕಂಟೈನ್‌ ಮೆಂಟ್‌ ಝೋನ್‌ ಸಂಪರ್ಕದಿಂದಲೂ ಸೋಂಕಿತರ ಪ್ರಮಾಣ ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗುತ್ತಿದೆ. ಲಾಕ್‌ಡೌನ್‌, ಸೀಲ್‌ಡೌನ್‌, ಜಾಗೃತಿ, ಕಟ್ಟೆಚ್ಚೆರದ ನಡುವೆಯೂ ಜನರು ಮುಕ್ತ ಓಡಾಟ ಸೋಂಕಿನ ಪ್ರಮಾಣ ಹೆಚ್ಚಳಕ್ಕೆ ಕಾರಣವಾಗುತ್ತಿದೆ. ಕಂಟೈನ್‌ ಮೆಂಟ್‌ ಝೋನ್‌ ಜಾಲಿನಗರದಲ್ಲಿ ಕೊರೊನಾ ಹರಡುವಿಕೆಯ ಜಾಲ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಜಾಲಿನಗರ ಒಂದರಲ್ಲಿಯೇ ಒಂದು ನೂರು ಪಾಸಿಟಿವ್‌ ಪ್ರಕರಣ ಪತ್ತೆಯಾಗಿವೆ. ಇತ್ತೀಚಿನ ದಿನಗಳಲ್ಲಿ ಬಸವರಾಜ ಪೇಟೆ, ಆನೆಕೊಂಡ ಕಂಟೈನ್‌ ಮೆಂಟ್‌ ಝೋನ್‌ನಲ್ಲಿ ಸೋಂಕಿಗೆ ಒಳಗಾಗುತ್ತಿರುವರ ಸಂಖ್ಯೆ ಹೆಚ್ಚಾಗುತ್ತಿದೆ.

50 ವರ್ಷದ ವೃದ್ಧೆ (ರೋಗಿ ನಂ. 5300), 42 ವರ್ಷದ ವ್ಯಕ್ತಿ (ರೋಗಿ ನಂ. 5309), ಸೋಂಕಿನ ಮೂಲ ಪತ್ತೆ ಹಚ್ಚಲಾಗುತ್ತಿದೆ. 71 ವರ್ಷದ (ರೋಗಿ ನಂ. 5299) ಕಂಟೈನ್‌ ಮೆಂಟ್‌ ಝೋನ್‌ ಸಂಪರ್ಕದಿಂದ ಸೋಂಕಿಗೆ ಒಳಗಾಗಿದ್ದಾರೆ. ರೋಗಿ ನಂ. 4093 ರ ಸಂಪರ್ಕದಿಂದ 50 ವರ್ಷದ ವೃದ್ಧೆ(ರೋಗಿ ನಂ. 5300), 23 ವರ್ಷದ ಯುವತಿ (ರೋಗಿ ನಂ. 5301), 20 ವರ್ಷದ ಯುವತಿ (ರೋಗಿ ನಂ. 5302), 46 ವರ್ಷದ ಹೆಣ್ಣು ಮಗಳು (ರೋಗಿ ನಂ. 5303), 45 ವರ್ಷದ ಪುರುಷ (ರೋಗಿ ನಂ. 5304), 42 ವರ್ಷದ ಹೆಣ್ಣು ಮಗಳು (ರೋಗಿ ನಂ. 5305) ಸೋಂಕು ಕಾಣಿಸಿಕೊಂಡಿದೆ. ರೋಗಿ ನಂ. 1247ರ ಸಂಪರ್ಕದಿಂದ 46 ವರ್ಷದ ಮಹಿಳೆ (ರೋಗಿ ನಂ. 5306), 24 ವರ್ಷದ ಯುವತಿ (ರೋಗಿ ನಂ. 5307) ಸೋಂಕು ಬಂದಿದೆ. ರೋಗಿ ನಂ. 3637 ರ ಸಂಪರ್ಕದಿಂದ 9 ವರ್ಷದ ಬಾಲಕನಿಗೆ (ರೋಗಿ ನಂ. 5308)ಸೋಂಕು ವಕ್ಕರಿಸಿದೆ.

53 ವರ್ಷದ ವೃದ್ಧೆ(ರೋಗಿ ನಂ. 5314) ರೋಗಿ ನಂ. 4813ರ ಸಂಪರ್ಕದಿಂದ ಸೋಂಕು ದೃಢಪಟ್ಟಿದೆ. 44 ವರ್ಷದ ಪುರುಷನಿಗೆ ರೋಗಿ ನಂ. 1247 ರ ಸಂಪರ್ಕದಿಂದ ಸೋಂಕು ಕಾಣಿಸಿಕೊಂಡಿದೆ. ದಾವಣಗೆರೆ ಜಿಲ್ಲೆಯಲ್ಲಿ ಈವರೆಗಿನ ಒಟ್ಟಾರೆ 203 ಪ್ರಕರಣಗಳಲ್ಲಿ 150 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸಾcರ್ಜ್‌ ಆಗಿದ್ದಾರೆ. ಆರು ಜನರು ಮೃತಪಟ್ಟಿದ್ದಾರೆ. 47 ಸಕ್ರಿಯ ಪ್ರಕರಣಗಳಿವೆ.

ಟಾಪ್ ನ್ಯೂಸ್

 ಪರ್ಯಾಯ ಮಹೋತ್ಸವ: 5ಡಿವೈಎಸ್‌ಪಿ, 62 ಮಂದಿ ಎಎಸ್‌ಐ; ಭದ್ರತೆಗೆ ಸಿಸಿಟಿವಿ ಕಣ್ಗಾವಲು

 ಪರ್ಯಾಯ ಮಹೋತ್ಸವ: 5ಡಿವೈಎಸ್‌ಪಿ, 62 ಮಂದಿ ಎಎಸ್‌ಐ; ಭದ್ರತೆಗೆ ಸಿಸಿಟಿವಿ ಕಣ್ಗಾವಲು

ಪರ್ಯಾಯದ ಸುಗ್ರಾಸ ಭೋಜನಕ್ಕೆ ಮಟ್ಟುಗುಳ್ಳ

ಪರ್ಯಾಯದ ಸುಗ್ರಾಸ ಭೋಜನಕ್ಕೆ ಮಟ್ಟುಗುಳ್ಳ

ಪರ್ಯಾಯ ಶ್ರೀಗಳಿಂದ ಉಗ್ರಾಣ ವೀಕ್ಷಣೆ

ಪರ್ಯಾಯ ಶ್ರೀಗಳಿಂದ ಉಗ್ರಾಣ ವೀಕ್ಷಣೆ

ದಂಡತೀರ್ಥ ಮಠ: ಕೃಷ್ಣಾಪುರ ಶ್ರೀಗಳ ತೀರ್ಥಸ್ನಾನಕ್ಕೆ ಸಜ್ಜು

ದಂಡತೀರ್ಥ ಮಠ: ಕೃಷ್ಣಾಪುರ ಶ್ರೀಗಳ ತೀರ್ಥಸ್ನಾನಕ್ಕೆ ಸಜ್ಜು

ನೊವಾಕ್‌ ಜೊಕೋವಿಕ್‌ ಇಲ್ಲದ ಆಸ್ಟ್ರೇಲಿಯನ್‌ ಓಪನ್‌

ನೊವಾಕ್‌ ಜೊಕೋವಿಕ್‌ ಇಲ್ಲದ ಆಸ್ಟ್ರೇಲಿಯನ್‌ ಓಪನ್‌

ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌ ಮೇಲೆ ಸವಾರಿ ಮಾಡಿದ ಪಾಟ್ನಾ ಪೈರೇಟ್ಸ್‌

ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌ ಮೇಲೆ ಸವಾರಿ ಮಾಡಿದ ಪಾಟ್ನಾ ಪೈರೇಟ್ಸ್‌

ಮಣಿಪಾಲ: ಮಂಚಿಯ ರಾಜೀವನಗರದ ಮೀಸಲು ಅರಣ್ಯದಲ್ಲಿ ಬೆಂಕಿ ಅವಘಡ; ತಪ್ಪಿದ ಭಾರೀ ದುರಂತ

ಮಣಿಪಾಲ: ಮಂಚಿ ರಾಜೀವನಗರದ ಮೀಸಲು ಅರಣ್ಯದಲ್ಲಿ ಬೆಂಕಿ ಅವಘಡ; ತಪ್ಪಿದ ಭಾರೀ ದುರಂತಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

jagaluru

ಕರ್ಫ್ಯೂ ನಡುವೆಯೂ ಜಗಳೂರು ಶಾಸಕನ ಜನ್ಮದಿನಾಚರಣೆ : ಆರೋಗ್ಯ ಇಲಾಖೆ ಅಧಿಕಾರಿಗಳು ಭಾಗಿ

ಸದ್ಗಹಜಕಜಹಗ್ದಸಅ

ಸಂಕ್ರಾಂತಿ ನೆನೆಸಿಕೊಳ್ಳೋಕೇ ಭಯ

shivamogga news

ಲಿಂಗತ್ವ ಅಲ್ಪಸಂಖ್ಯಾತರಿಗೆ ಸೌಲಭ್ಯ ಒದಗಿಸಿ

davanagere news

ತಿಂಗಳಾಂತ್ಯದವರೆಗೆ ವಾರಾಂತ್ಯ ಕರ್ಫ್ಯೂ ವಿಸ್ತರಣೆ

davanagere news

ಕೊರೊನಾ ನಿಯಂತ್ರಣದಲ್ಲಿ ನಿರ್ಲಕ್ಷ್ಯ ಸಹಿಸಲ್ಲ

MUST WATCH

udayavani youtube

ಸಾಲಿಗ್ರಾಮ ಗುರುನರಸಿಂಹ, ಆಂಜನೇಯ ರಥೋತ್ಸವ ಸಂಪನ್ನ

udayavani youtube

ನನ್ನಮ್ಮ ಸೂಪರ್ ಸ್ಟಾರ್ ‘ಸಮನ್ವಿ’ ಅಸ್ತಿ ಕಾವೇರಿ ನದಿಯಲ್ಲಿ ವಿಸರ್ಜನೆ

udayavani youtube

ಮೈಸೂರು ಮೃಗಾಲಯದಲ್ಲಿ ಹುಟ್ಟುಹಬ್ಬ ಆಚರಣೆಗೊರಿಲ್ಲಾ ‘Demba’ ಗೆ ಖುಷಿಯೋ ಖುಷಿ

udayavani youtube

ವಿವಿಧ ಮುಹೂರ್ತಗಳು ಪರ್ಯಾಯದ ವಿಶೇಷತೆ

udayavani youtube

ಮೂಡಿಗೆರೆ : ಇಡೀ ಹಳ್ಳಿಯ ಜನರಿಗೆ ಕೆಮ್ಮು! ಇದು ಹೆದ್ದಾರಿ ಪ್ರಾಧಿಕಾರದ ಕಾಮಗಾರಿಯ ಫಲ

ಹೊಸ ಸೇರ್ಪಡೆ

 ಪರ್ಯಾಯ ಮಹೋತ್ಸವ: 5ಡಿವೈಎಸ್‌ಪಿ, 62 ಮಂದಿ ಎಎಸ್‌ಐ; ಭದ್ರತೆಗೆ ಸಿಸಿಟಿವಿ ಕಣ್ಗಾವಲು

 ಪರ್ಯಾಯ ಮಹೋತ್ಸವ: 5ಡಿವೈಎಸ್‌ಪಿ, 62 ಮಂದಿ ಎಎಸ್‌ಐ; ಭದ್ರತೆಗೆ ಸಿಸಿಟಿವಿ ಕಣ್ಗಾವಲು

ಪರ್ಯಾಯೋತ್ಸವಕ್ಕೆ ಸ್ವಚ್ಛತೆಯ ಸ್ಪರ್ಶ: ಮೊಬೈಲ್‌ ಶೌಚಾಲಯ ಬಳಕೆಗೆ ಸಿದ್ಧ

ಪರ್ಯಾಯೋತ್ಸವಕ್ಕೆ ಸ್ವಚ್ಛತೆಯ ಸ್ಪರ್ಶ: ಮೊಬೈಲ್‌ ಶೌಚಾಲಯ ಬಳಕೆಗೆ ಸಿದ್ಧ

“ಸಂಸ್ಕೃತದಲ್ಲಿ ಅಭಿನಂದನೆ ಹೆಮ್ಮೆಯ ವಿಚಾರ’

“ಸಂಸ್ಕೃತದಲ್ಲಿ ಅಭಿನಂದನೆ ಹೆಮ್ಮೆಯ ವಿಚಾರ’

ಪರ್ಯಾಯದ ಸುಗ್ರಾಸ ಭೋಜನಕ್ಕೆ ಮಟ್ಟುಗುಳ್ಳ

ಪರ್ಯಾಯದ ಸುಗ್ರಾಸ ಭೋಜನಕ್ಕೆ ಮಟ್ಟುಗುಳ್ಳ

ಅಶ್ವತ್ಥ ಎಲೆಯಲ್ಲಿ ಮೂಡಿಬಂದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು

ಅಶ್ವತ್ಥ ಎಲೆಯಲ್ಲಿ ಮೂಡಿಬಂದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.