ಕೋವಿಡ್-19 ಜಾಗೃತಿ: ಕಾರ್ಯಾಗಾರ
Team Udayavani, Jun 8, 2020, 4:45 PM IST
ಜಗಳೂರು: ಗ್ರಾಮೀಣ ಭಾಗದ ಜನತೆಗೆ ಕೋವಿಡ್ ವೈರಸ್ ಬಗ್ಗೆ ಜಾಗೃತಿ ಮೂಡಿಸುವಂತ ಕೆಲಸವನ್ನು ಸಂಸ್ಥೆಯ ಸಿಬ್ಬಂದಿ ಮಾಡಬೇಕಾಗಿದೆ ಎಂದು ಶಕ್ತಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ತಾಲೂಕು ಯೋಜನಾಧಿಕಾರಿ ಗುಣಕಾರ್ ಹೇಳಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ವತಿಯಿಂದ ಗ್ರಾಮೀಣ ಭಾಗದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಕೋವಿಡ್-19 ಜಾಗೃತಿ ಮೂಡಿಸುವ ಸಲುವಾಗಿ ಹಮ್ಮಿಕೊಳ್ಳಲಾಗಿದ್ದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಎಸ್-ಎಸ್ಟಿ ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಅರವಿಂದನ್, ಆರೋಗ್ಯ ಶಿಕ್ಷಣಾಧಿಕಾರಿ ಗೌರಮ್ಮ ಶಿವಾನಂದ್, ಮಮತಾ, ಡಾ| ಮಲ್ಲಪ್ಪ ಸಿಬ್ಬಂದಿ ಇದ್ದರು.