ಬೋಧನಾ ಶುಲ್ಕ ಇಳಿಕೆ ಆದೇಶ ಪರಾಮರ್ಶೆಗೆ ಆಗ್ರಹ

Team Udayavani, Feb 12, 2021, 3:08 PM IST

Request for tuition fee reduction order review

ಬಳ್ಳಾರಿ: ಅನುದಾನರಹಿತ ಖಾಸಗಿ ಶಾಲೆಗಳ ಬೋಧನಾ ಶುಲ್ಕವನ್ನು ಶೇ.30ಕ್ಕೆ ಇಳಿಸಬೇಕು ಎಂದು ಆದೇಶಿಸಿರುವ ರಾಜ್ಯ ಸರ್ಕಾರ, ಈಗಾಗಲೇ ನಷ್ಟದಲ್ಲಿರುವ ಇರುವ ಖಾಸಗಿ ಶಾಲೆಗಳ ಚೇತರಿಕೆಗೆ ಸೂಕ್ತ ಅನುದಾನ ನೀಡಬೇಕು. ಅಥವಾ ಆದೇಶವನ್ನು ಪುನರ್‌ ಪರಿಶೀಲಿಸಬೇಕು ಎಂದು ಜಿಲ್ಲಾ ಅನುದಾನರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಬಸವರೆಡ್ಡಿ ಆಗ್ರಹಿಸಿದರು.

ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ವಿದ್ಯಾರ್ಥಿ ಪಾಲಕ, ಪೋಷಕರನ್ನು ದೃಷ್ಟಿಯಲ್ಲಿಟ್ಟುಕೊಂಡು ಬೋಧನಾ ಶುಲ್ಕವನ್ನು ಶೇ.30ಕ್ಕೆ ಇಳಿಸುವಂತೆ ಹೊರಡಿಸಿರುವ ಆದೇಶವನ್ನು ನಾವು ಸಹ ಸ್ವಾಗತಿಸುತ್ತೇವೆ. ಆದರೆ, ಕೋವಿಡ್‌ ಸೋಂಕಿನ ಪರಿಣಾಮ ಸ್ಥಗಿತಗೊಂಡಿದ್ದ ಶಾಲೆಗಳಲ್ಲಿ ಈವರೆಗೂ ಪೂರ್ಣ ಪ್ರಮಾಣದಲ್ಲಿ ದಾಖಲಾತಿಯಾಗಿಲ್ಲ. ಕಳೆದ ವರ್ಷ ವಾರ್ಷಿಕ ಪರೀಕ್ಷೆ ವೇಳೆಯೇ ಶಾಲೆಗಳು ಸ್ಥಗಿತೊಂಡಿದ್ದರಿಂದ ಶೇ.50ರಿಂದ 60ರಷ್ಟು ಹಿಂದಿನ ಶುಲ್ಕವೂ ವಸೂಲಿಯಾಗಿಲ್ಲ.

ಇಂತಹ ಸಂದರ್ಭದಲ್ಲಿ ಸರ್ಕಾರ ಪುನಃ ಶುಲ್ಕವನ್ನು ಶೇ.30ಕ್ಕೆ ಇಳಿಸಿದರೆ, ಶಾಲೆಗಳನ್ನು ನಿರ್ವಹಿಸುವುದು ಕಷ್ಟವಾಗಲಿದೆ. ಹಾಗಾಗಿ ಖಾಸಗಿ ಶಾಲೆಗಳಿಗೆ ಅನುದಾನವಾದರೂ ನೀಡಿ ಅಥವಾ ಆದೇಶವನ್ನು ಪುನರ್‌ ಪರಿಶೀಲಿಸಬೇಕು ಎಂದವರು ಒತ್ತಾಯಿಸಿದ ಅವರು, ಈ ಕುರಿತು ಇದೇ ಫೆ.23 ರಂದು ಬೆಂಗಳೂರಿನಲ್ಲಿ ಬೃಹತ್‌ ಪಾದಯಾತ್ರೆ ನಡೆಸುವ ಕುರಿತು ಚಿಂತನೆ ನಡೆಸಲಾಗಿದೆ ಎಂದರು.

1995 ರಿಂದ 2016ರ ವರಗಿನ ಎಲ್ಲ ಶಾಲೆಗಳಿಗೆ (ಕಲ್ಯಾಣ ಕರ್ನಾಟಕದ ಕನ್ನಡ ಮಾಧ್ಯಮ) ಶಾಲೆಗಳಿಗೆ ವೇತನಾನುದಾನ ನೀಡಬೇಕು. ಹಳೆಯ ಮತ್ತು ಸ್ವಾಭಾವಿಕವಾಗಿ ಬೆಳೆದು ಬಂದಂತಹ ಶಾಲೆಗಳಿಗೆ ಹೊಸ ನಿಯಮಗಳಿಂದ ರಿಯಾಯಿತಿ ನೀಡಬೇಕು. 1 ರಿಂದ 5 ನೇ ತರಗತಿಗಳನ್ನು ಈ ಕೂಡಲೇ ಆರಂಭಿಸಬೇಕು. ವಿದ್ಯಾರ್ಥಿಗಳ ಪೋಷಕರು ಸಹ 2019-20ನೇ ಸಾಲಿನ ಬಾಕಿ ಶುಲ್ಕವನ್ನು ಪಾವತಿಸಬೇಕು. ಪ್ರಸಕ್ತ 2020-21ನೇ ಸಾಲಿಗೆ ಮಕ್ಕಳ ದಾಖಲಾತಿಯನ್ನು ಕಡ್ಡಾಯವಾಗಿ ಮಾಡಬೇಕು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಜಿಲ್ಲಾಧ್ಯಕ್ಷ ಮರಿಸ್ವಾಮಿರೆಡ್ಡಿ, ಮನ್ನೆ ಶ್ರೀನಿವಾಸ್‌, ಖಜಾಂಚಿ ರಂಜಾನ್‌ಸಾಬ್‌, ಕುರುಗೋಡು ಅಧ್ಯಕ್ಷ ಚಕ್ರವರ್ತಿ, ಪರಮೇಶ್ವರಪ್ಪ, ಗಂಗಣ್ಣ, ಹನುಮಂತಪ್ಪ, ವರ್ಮಾ, ನಾಗಭೂಷಣ, ಹಂಪಾರೆಡ್ಡಿ, ಗಾಯತ್ರಿ, ಪ್ರಭಾ ಪಾಟೀಲ್‌, ಖುರ್ಷಿದ್‌ ಸೇರಿ ಹಲವರು ಇದ್ದರು.

ಟಾಪ್ ನ್ಯೂಸ್

ಬಳ್ಳಾರಿ: ಆಫ್ರಿಕಾದಿಂದ ಬಂದ ಇಬ್ಬರು ಕ್ವಾರಂಟೈನ್ ಗೆ: ಡಾ. ಜನಾರ್ಧನ್

ಬಳ್ಳಾರಿ: ಆಫ್ರಿಕಾದಿಂದ ಬಂದ ಇಬ್ಬರು ಕ್ವಾರಂಟೈನ್ ಗೆ: ಡಾ. ಜನಾರ್ಧನ್

ರೂಪಾಂತರಿ ವೈರಸ್ ಗೆ ಆಹ್ವಾನ! ದಕ್ಷಿಣ ಆಫ್ರಿಕಾದಿಂದ 1 ಸಾವಿರ ಪ್ರಯಾಣಿಕರು ಮುಂಬಯಿಗೆ ಆಗಮನ?

ರೂಪಾಂತರಿ ವೈರಸ್ ಗೆ ಆಹ್ವಾನ! ದಕ್ಷಿಣ ಆಫ್ರಿಕಾದಿಂದ 1 ಸಾವಿರ ಪ್ರಯಾಣಿಕರು ಮುಂಬಯಿಗೆ ಆಗಮನ?

Untitled-2

ಸದ್ಯಕ್ಕೆ ಲಾಕ್ ಡೌನ್ ಮಾಡುವ ಉದ್ದೇಶ ಸರ್ಕಾರದ ಮುಂದಿಲ್ಲ: ಸಿಎಂ ಬೊಮ್ಮಾಯಿ ಸ್ಪಷ್ಟನೆ

5banahatti

ಕಾಂಗ್ರೆಸ್ ಜಾತಿಯ ಟ್ರಂಪ್ ಕಾರ್ಡ್ ಬಳಸಿ ಮತ ಕೇಳುತ್ತಿದ್ದಾರೆ: ಬನಹಟ್ಟಿ

ಹೂಡಿಕೆದಾರರಲ್ಲಿ ಹುಮ್ಮಸ್ಸು: ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 500ಕ್ಕೂ ಅಧಿಕ ಅಂಕ ಏರಿಕೆ

ಹೂಡಿಕೆದಾರರಲ್ಲಿ ಹುಮ್ಮಸ್ಸು: ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 500ಕ್ಕೂ ಅಧಿಕ ಅಂಕ ಏರಿಕೆ

ಒಮಿಕ್ರಾನ್ ಆತಂಕ: ಭಾರತದಲ್ಲಿ 6,990 ಕೋವಿಡ್ ಪ್ರಕರಣ ಪತ್ತೆ, 3.4 ಕೋಟಿ ಮಂದಿ ಚೇತರಿಕೆ

ಒಮಿಕ್ರಾನ್ ಆತಂಕ: ಭಾರತದಲ್ಲಿ 6,990 ಕೋವಿಡ್ ಪ್ರಕರಣ ಪತ್ತೆ, 3.4 ಕೋಟಿ ಮಂದಿ ಚೇತರಿಕೆ

4nandibetta

ಚಿಕ್ಕಬಳ್ಳಾಪುರ: 3 ತಿಂಗಳ ಬಳಿಕ ಸಾರ್ವಜನಿಕರಿಗೆ ನಂದಿಬೆಟ್ಟ ಪ್ರವೇಶಕ್ಕೆ ಮುಕ್ತಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಳ್ಳಾರಿ: ಆಫ್ರಿಕಾದಿಂದ ಬಂದ ಇಬ್ಬರು ಕ್ವಾರಂಟೈನ್ ಗೆ: ಡಾ. ಜನಾರ್ಧನ್

ಬಳ್ಳಾರಿ: ಆಫ್ರಿಕಾದಿಂದ ಬಂದ ಇಬ್ಬರು ಕ್ವಾರಂಟೈನ್ ಗೆ: ಡಾ. ಜನಾರ್ಧನ್

Untitled-1

ಮನೆ ಕುಸಿದು ಮೃತಪಟ್ಟ ವೃದ್ಧೆ ಕುಟುಂಬಕ್ಕೆ ಪರಿಹಾರ ನೀಡಿ

ಹೆದ್ದಾರಿ ತಡೆದು ರೈತರಿಂದ ಪ್ರತಿಭಟನೆ

ಹೆದ್ದಾರಿ ತಡೆದು ರೈತರಿಂದ ಪ್ರತಿಭಟನೆ

ballari news

4 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ದ

28y-sathish

ಈ ಬಾರಿ ವೈ. ಸತೀಶ್ ಗೆಲುವು ನಿಶ್ಚಿತ: ಸಚಿವ ಆನಂದ್ ಸಿಂಗ್

MUST WATCH

udayavani youtube

‘Car’bar with Merwyn Shirva | Episode 1

udayavani youtube

ಭಾರತ – ನ್ಯೂಜಿಲ್ಯಾಂಡ್ ಟೆಸ್ಟ್ ಪಂದ್ಯ ಡ್ರಾ : ಜಯದ ಸನಿಹದಲ್ಲಿದ್ದ ಟೀಂ ಇಂಡಿಯಾಗೆ ನಿರಾಸೆ

udayavani youtube

ಫ್ರೆಂಡ್ ಪೆನ್ಸಿಲ್ ಕದ್ದ ಎಂದು ಪೊಲೀಸ್ ಠಾಣೆಗೆದೂರು ದಾಖಲಿಸಲು ಹೋದ ಪುಟ್ಟ ವಿದ್ಯಾರ್ಥಿಗಳು!

udayavani youtube

ಕಟ್ಟಡ ತೆರವಿಗೆ ಕೂಡಿ ಬರದ ಗಳಿಗೆ : ಅವಘಡ ಸಂಭವಿಸುವ ಮೊದಲು ಎಚ್ಚೆತ್ತುಕೊಳ್ಳಿ

udayavani youtube

ನೋಂದಣೆ ಕಚೇರಿಗೆ ವಕೀಲರು ಬರದಂತೆ ಅಧಿಕಾರಿಗಳ ತಾಕೀತು : ಪ್ರತಿಭಟನೆಗಿಳಿದ ವಕೀಲರು

ಹೊಸ ಸೇರ್ಪಡೆ

ಬಳ್ಳಾರಿ: ಆಫ್ರಿಕಾದಿಂದ ಬಂದ ಇಬ್ಬರು ಕ್ವಾರಂಟೈನ್ ಗೆ: ಡಾ. ಜನಾರ್ಧನ್

ಬಳ್ಳಾರಿ: ಆಫ್ರಿಕಾದಿಂದ ಬಂದ ಇಬ್ಬರು ಕ್ವಾರಂಟೈನ್ ಗೆ: ಡಾ. ಜನಾರ್ಧನ್

ರೂಪಾಂತರಿ ವೈರಸ್ ಗೆ ಆಹ್ವಾನ! ದಕ್ಷಿಣ ಆಫ್ರಿಕಾದಿಂದ 1 ಸಾವಿರ ಪ್ರಯಾಣಿಕರು ಮುಂಬಯಿಗೆ ಆಗಮನ?

ರೂಪಾಂತರಿ ವೈರಸ್ ಗೆ ಆಹ್ವಾನ! ದಕ್ಷಿಣ ಆಫ್ರಿಕಾದಿಂದ 1 ಸಾವಿರ ಪ್ರಯಾಣಿಕರು ಮುಂಬಯಿಗೆ ಆಗಮನ?

8bankloan

ಸಾಲ ಪಡೆಯಲು ಜನಜಂಗುಳಿ

Untitled-2

ಸದ್ಯಕ್ಕೆ ಲಾಕ್ ಡೌನ್ ಮಾಡುವ ಉದ್ದೇಶ ಸರ್ಕಾರದ ಮುಂದಿಲ್ಲ: ಸಿಎಂ ಬೊಮ್ಮಾಯಿ ಸ್ಪಷ್ಟನೆ

7devolop

ವಿಜ್ಞಾನ ಬೆಳವಣಿಗೆಗೆ ಕೊಡುಗೆ ನೀಡಿ: ಅಗಸರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.