Udayavni Special

ಕೇಂದ್ರದ ನೀತಿ ರೈತರು-ಕಾರ್ಮಿಕರಿಗೆ ಮರಣ ಶಾಸನ


Team Udayavani, Jan 20, 2021, 6:10 PM IST

The center’s policy is death legislation for farmers-workers

ದಾವಣಗೆರೆ: ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿ ವಿರೋಧಿಸಿ ಜ. 20 ರಂದು ಬೆಂಗಳೂರಿನಲ್ಲಿ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಕೇಂದ್ರದ ಮಾಜಿ ಸಚಿವ ಕೆ.ಎಚ್‌. ಮುನಿಯಪ್ಪ ತಿಳಿಸಿದ್ದಾರೆ. ಬುಧವಾರ ಬೆಳಗ್ಗೆ 11ಕ್ಕೆ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಪ್ರೀಡಂ ಪಾರ್ಕ್‌ವರೆಗೆ ಮೆರವಣಿಗೆ ನಡೆಸಿ ನಂತರ ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕಠೊರ ಕಾಯ್ದೆಗಳ ಮೂಲಕ ದೇಶದ ಲಕ್ಷಾಂತರ ರೈತರು ಮತ್ತು ಕಾರ್ಮಿಕರ ಮರಣ ಶಾಸನ ಬರೆಯಹೊರಟಿದೆ. ಕೇಂದ್ರ ಸರ್ಕಾರದ ರೈತ ವಿರೋಧಿ ಕಾಯ್ದೆಗಳ ಜಾರಿಯಿಂದ ಲಕ್ಷಾಂತರ ರೈತರು, ಕಾರ್ಮಿಕರು ಬೀದಿಪಾಲಾಗುತ್ತಿದ್ದಾರೆ. ಕೇಂದ್ರ ಸರ್ಕಾರ ಕೂಡಲೇ ರೈತ, ಕಾರ್ಮಿಕ ವಿರೋಧಿ ನೀತಿ ರದ್ದುಪಡಿಸಬೇಕು. ಅಲ್ಲಿಯವರೆಗೆ ಕಾಂಗ್ರೆಸ್‌ ನಿರಂತರ ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದರು.

ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿ ವಿರೋಧಿಸಿ ಪಂಜಾಬ್‌, ಹರಿಯಾಣ, ಉತ್ತರಪ್ರದೇಶದ ರೈತರು ಕಳೆದ 53 ದಿನಗಳಿಂದ ನಿರಂತರವಾಗಿ ಕೊರೆಯುವ ಚಳಿಯಲ್ಲಿ ದೆಹಲಿಯಲ್ಲಿ ಹೋರಾಟ ನಡೆಸುತ್ತಿದ್ದಾರೆ. ಕಾಂಗ್ರೆಸ್‌ ರೈತರ ಹೋರಾಟಕ್ಕೆ ಬೆಂಬಲ ನೀಡುತ್ತಿದೆ. ರಾಜ್ಯದಲ್ಲೂ ರೈತರ ಪರ ಹೋರಾಟಕ್ಕೆ ಬೆಂಬಲಿಸಿ ಬುಧವಾರ ಬೆಂಗಳೂರಿನಲ್ಲಿ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದರು.

ರೈತರು ದೇಶದ ಬೆನ್ನೆಲುಬು. ಆವರು ಇಲ್ಲದೇ ಹೋದರೆ ಯಾರು, ಏನೂ ಇಲ್ಲ. ಅಂತಹ ಆನ್ನದಾತರಿಗೆ ಮೋದಿ ಸರ್ಕಾರದಲ್ಲಿ ರಕ್ಷಣೆಯೇ ಇಲ್ಲ. ಕೇಂದ್ರದಲ್ಲಿ ಕಾಂಗ್ರೆಸ್‌ ಅಧಿಕಾರವಧಿಯಲ್ಲಿ 72 ಸಾವಿರ ಕೋಟಿಯಷ್ಟು ಸಾಲ ಮನ್ನಾ ಮಾಡುವ ಮೂಲಕ 4 ಕೋಟಿ ರೈತ ಕುಟುಂಬಗಳಿಗೆ ನೆರವು ನೀಡಲಾಗಿತ್ತು. ಮೋದಿ ಸರ್ಕಾರ ರೈತರ ಸಾಲ ಮನ್ನಾ ಮಾಡಲಿಲ್ಲ. ಕನಿಷ್ಠ ಬೆಂಬಲ ಬೆಲೆ ನೀಡಲಿಲ್ಲ. ರೈತರಿಗೆ ವಿರುದ್ಧವಾಗಿ ಕರಾಳ ಕಾಯ್ದೆ ಜಾರಿಗೆ ತರುವ ಮೂಲಕ ಅಂಬಾನಿ, ಅದಾನಿಯಂತಹವರಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ ಎಂದು ದೂರಿದರು. ತಾವು ಅಧಿಕಾರಕ್ಕೆ ಬಂದಲ್ಲಿ ವರ್ಷಕ್ಕೆ 2 ಕೋಟಿ ಜನರಿಗೆ ಉದ್ಯೋಗ ಒದಗಿಸುವ ಬಗ್ಗೆ ಮೋದಿ ಭರವಸೆ ನೀಡಿದ್ದರು.

7 ವರ್ಷದಲ್ಲಿ 14 ಕೋಟಿ ಉದ್ಯೋಗ ನೀಡಬೇಕಿತ್ತು. ಉದ್ಯೋಗ ನೀಡಲಿಕ್ಕೂ ಆಗದೆ ಕರಾಳ ಶಾಸನಗಳ ಮೂಲಕ ರೈತರು, ಕಾರ್ಮಿಕರನ್ನು ಬೀದಿಗೆ ತಳ್ಳುವ ಕೆಲಸ ಮಾಡಲಾಗುತ್ತಿದೆ. ಏಕಾಏಕಿ ಕೆಲಸ ಕಳೆದುಕೊಂಡವರು ಜೀವನ ನಡೆಸುವುದು ಹೇಗೆ ಎಂದು ಪ್ರಶ್ನಿಸಿದರು.

ಇದನ್ನೂ ಓದಿ:ಕೃಷಿಗೆ ಮಾರಕವಾದ ಕಾಯ್ದೆ ಹಿಂಪಡೆಯದಿದ್ದರೆ ರೈತರ ದಂಗೆ ಖಚಿತ : ಸರಕಾರಕ್ಕೆ ಸಿದ್ದು ಎಚ್ಚರಿಕೆ

ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋಲಿನ ಸುಳಿವು ದೊರೆಯುತ್ತಿದ್ದಂತೆ ಪುಲ್ವಾಮ, ಸರ್ಜಿಕಲ್‌ ದಾಳಿ ಮೂಲಕ ಜನರ ದಿಕ್ಕು ತಪ್ಪಿಸಲಾಯಿತು. ಮೋದಿ ಆವರ ಸರ್ವಾಧಿಕಾರಿ ಧೋರಣೆ ಬಹಳ ದಿನನಡೆಯುವುದಿಲ್ಲ. ಕೊನೆಗೆ ಆದೇ ಅವರ ಆವನತಿಗೆ ಕಾರಣವಾಗುತ್ತದೆ ಎಂದರು.

ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಎಚ್‌.ಬಿ. ಮಂಜಪ್ಪ ಮಾತನಾಡಿ, ಬೆಂಗಳೂರಿನಲ್ಲಿ ನಡೆಯುವ ಹೋರಾಟದಲ್ಲಿ ದಾವಣಗೆರೆಯ 1,500- 2 ಸಾವಿರ ಜನರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ವಿಧಾನ ಪರಿಷತ್‌ ಮಾಜಿ ಸದಸ್ಯ ಕೆ. ಅಬ್ದುಲ್‌ ಜಬ್ಟಾರ್‌, ಮಾಜಿ ಶಾಸಕ ಎಚ್‌.ಪಿ. ರಾಜೇಶ್‌, ಜಿಪಂ ಸದಸ್ಯರಾದ ಕೆ.ಎಸ್‌. ಬಸವಂತಪ್ಪ, ಕೆ.ಎಚ್‌. ಓಬಳಪ್ಪ, ದಿನೇಶ್‌ ಕೆ. ಶೆಟ್ಟಿ, ಎ. ನಾಗರಾಜ್‌, ಅನಿತಾಬಾಯಿ, ಡಾ| ವೈ. ರಾಮಪ್ಪ, ಬಿ.ಎಚ್‌. ವೀರಭದ್ರಪ್ಪ ಇತರರು ಇದ್ದರು.

ಟಾಪ್ ನ್ಯೂಸ್

ಕೋವಿಡ್ ಹೆಚ್ಚಳ ಪಾಕಿಸ್ಥಾನ ಸೂಪರ್‌ ಲೀಗ್ ಮುಂದೂಡಿಕೆ

ಕೋವಿಡ್ ಹೆಚ್ಚಳ ಪಾಕಿಸ್ಥಾನ ಸೂಪರ್‌ ಲೀಗ್ ಮುಂದೂಡಿಕೆ

Untitled-1

ದುಬೈನಲ್ಲಿ 24 ಕೋಟಿ ರೂ. ಲಾಟರಿ ಗೆದ್ದ ಶಿವಮೊಗ್ಗದ ಅದೃಷ್ಟವಂತ!

ಮಗಳ ತಲೆ ಕಡಿದು, ಕೈಯಲ್ಲಿ ಹಿಡಿದು ತಣ್ಣಗೆ ನಡೆದ ಅಪ್ಪ

ಮಗಳ ತಲೆ ಕಡಿದು, ಕೈಯಲ್ಲಿ ಹಿಡಿದು ತಣ್ಣಗೆ ನಡೆದ ಅಪ್ಪ

ನಂದಿಯ ಶ್ರೀ ಭೋಗನಂದೀಶ್ವರ ದೇವಾಲಯದಲ್ಲಿ ಹುಂಡಿ ಹಣ ಕದ್ದಿದ್ದ ಆರೋಪಿಗಳ ಬಂಧನ

ನಂದಿಯ ಶ್ರೀ ಭೋಗನಂದೀಶ್ವರ ದೇವಾಲಯದಲ್ಲಿ ಹುಂಡಿ ಹಣ ಕದ್ದಿದ್ದ ಆರೋಪಿಗಳ ಬಂಧನ

My sugar Factory

ಬಜೆಟ್‌ನಲ್ಲಿ ಮೈಷುಗರ್‌ಗೆ ಸಿಗುತ್ತಾ ಮುಕ್ತಿ !

ಕೃಷಿ ಇಲಾಖೆ ರಾಯಭಾರಿಯಾಗಿ ದರ್ಶನ್ ನಾಳೆ ಅಧಿಕಾರ ಸ್ವೀಕಾರ

Siddaramaiah

ಸಚಿವರಾದವರು ಇಂತಹ ಕೆಲಸ ಮಾಡುತ್ತಾರಾ?: ಸಿದ್ದರಾಮಯ್ಯಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dirstict Kannada sahitya Sammelana

ಸಮ್ಮೇಳನದಲ್ಲಿ ಸದ್ದು ಮಾಡಿದ ಕೃಷಿ ಕಾನೂನು

MP GM Siddeswar

ಕೋವ್ಯಾಕ್ಷಿನ್ ಲಸಿಕೆ ಪಡೆದ ಜಿ.ಎಂ ಸಿದ್ದೇಶ್ವರ ದಂಪತಿ

MLA MP Renukacharya

ಮಾನವೀಯತೆ ಮೆರೆದ ರೇಣುಕಾಚಾರ್ಯ

ಸರ್ಕಾರಿ ಬಸ್‌ಗಳಲ್ಲೇ ಸಂಚರಿಸಿ: ಶಾಸಕ ಚಂದ್ರಪ್ಪ

ಸರ್ಕಾರಿ ಬಸ್‌ಗಳಲ್ಲೇ ಸಂಚರಿಸಿ: ಶಾಸಕ ಚಂದ್ರಪ್ಪ

ಅತಿಥಿ ಉಪನ್ಯಾಸಕರ ಸೇವೆ ಕಾಯಂಗೊಳಿಸಿ

ಅತಿಥಿ ಉಪನ್ಯಾಸಕರ ಸೇವೆ ಕಾಯಂಗೊಳಿಸಿ

MUST WATCH

udayavani youtube

ಸುಲಲಿತ ಜೀವನ ಸೂಚ್ಯಂಕ: ದೇಶದಲ್ಲಿ 20ನೇ ಸ್ಥಾನ ಪಡೆದ ಮಂಗಳೂರು

udayavani youtube

ಕೂದಲಿನ ಸಮಸ್ಯೆಗೂ ಪಿಸಿಓಡಿ ಗೂ ಏನು ಸಂಬಂಧ?

udayavani youtube

ಇಂದಿನ ಸುದ್ದಿ ಸಮಾಚಾರ | Udayavani 04-March-2021 News Bulletin | Udayavani

udayavani youtube

ಪುತ್ತೂರು: ಜೆಸಿಬಿಯಲ್ಲಿ ಗುಂಡಿ ಅಗೆಯುವ ವೇಳೆ ಮಣ್ಣಿನಡಿ ಸಿಲುಕಿದ ಕಾರ್ಮಿಕರು!

udayavani youtube

ಗದ್ದೆಗೆ ಉಪ್ಪುನೀರು ಹರಿದು ಬಂದು ಬೆಳೆಗಳು ನಾಶ! |Udayavani

ಹೊಸ ಸೇರ್ಪಡೆ

ಬಜೆಟ್‌ನಲ್ಲಿ  25 ಕೋಟಿ ರೂ. ಪ್ಯಾಕೇಜ್‌ಗೆ ಮನವಿ

ಬಜೆಟ್‌ನಲ್ಲಿ 25 ಕೋಟಿ ರೂ. ಪ್ಯಾಕೇಜ್‌ಗೆ ಮನವಿ

ಗ್ರಾಮೀಣರ ಆದ್ಯತೆಗೆ ಬೆಲೆ ಸಿಗಲು ಜಿಲ್ಲೆ ಅಗತ್ಯ

ಗ್ರಾಮೀಣರ ಆದ್ಯತೆಗೆ ಬೆಲೆ ಸಿಗಲು ಜಿಲ್ಲೆ ಅಗತ್ಯ

ಪಿಲಿಕಜೆ ಗುಂಡ್ಯ ಸರಕಾರಿ ಶಾಲೆ ಮೇಲ್ದರ್ಜೆಗೆ ಬೇಡಿಕೆ

ಪಿಲಿಕಜೆ ಗುಂಡ್ಯ ಸರಕಾರಿ ಶಾಲೆ ಮೇಲ್ದರ್ಜೆಗೆ ಬೇಡಿಕೆ

ಬಜೆಟ್‌ ಘೋಷಣೆಗಷ್ಟೇ ಸೀಮಿತ ಹಂಗಾರಕಟ್ಟೆ ಬಂದರು ಅಭಿವೃದ್ಧಿ

ಬಜೆಟ್‌ ಘೋಷಣೆಗಷ್ಟೇ ಸೀಮಿತ ಹಂಗಾರಕಟ್ಟೆ ಬಂದರು ಅಭಿವೃದ್ಧಿ

ಜನವಸತಿ ಪ್ರದೇಶಗಳಲ್ಲಿ 10,748 ಆಸ್ತಿ ಗುರುತು

ಜನವಸತಿ ಪ್ರದೇಶಗಳಲ್ಲಿ 10,748 ಆಸ್ತಿ ಗುರುತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.