ಮೀಸಲು ಕಿತ್ತುಕೊಳ್ಳುವ ಅಗತ್ಯ ನಮಗಿಲ್ಲ; ದಾರಕೇಶ್ವರಯ್ಯ

ಗಂಧಂ, ಭೂತಂ, ತೂರಪತಿ ಎಂಬ ಉಪನಾಮಗಳಿಂದ ಕರೆಯಲಾಗುತ್ತದೆ.

Team Udayavani, Mar 29, 2022, 6:24 PM IST

ಮೀಸಲು ಕಿತ್ತುಕೊಳ್ಳುವ ಅಗತ್ಯ ನಮಗಿಲ್ಲ; ದಾರಕೇಶ್ವರಯ್ಯ

ದಾವಣಗೆರೆ: ಸಂವಿಧಾನ, ಕಾನೂನುಬದ್ಧವಾಗಿಯೇ ಬೇಡ ಜಂಗಮ ಜಾತಿ ಪ್ರಮಾಣಪತ್ರ ಪಡೆಯಲಾಗಿದೆ ಎಂದು ಅಖಿಲ ಕರ್ನಾಟಕ ಡಾ| ಅಂಬೇಡ್ಕರ್‌ ಬೇಡ ಜಂಗಮ ಪರಿಶಿಷ್ಟ ಜಾತಿ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಡಾ| ಎಂ.ಪಿ. ದಾರಕೇಶ್ವರಯ್ಯ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿ ಪಟ್ಟಿಗಳ ಕಲಂ 9ರಲ್ಲಿ ಬೇಡ ಜಂಗಮ ಇರುವ ಪ್ರಕಾರವೇ ಜಾತಿ ಪ್ರಮಾಣಪತ್ರ ಪಡೆಯಲಾಗಿದೆ. ನಾವು ಯಾರ ಮೀಸಲಾತಿ, ಸೌಲಭ್ಯವನ್ನೂ ಕಿತ್ತುಕೊಳ್ಳುತ್ತಿಲ್ಲ. ಜಂಗಮ ಸಮುದಾಯ 1921ನೇ ಸಾಲಿನಲ್ಲಿ ಖನ್ನತೆಗೆ ಒಳಗಾದ ವರ್ಗದ ಪಟ್ಟಿಯಲ್ಲಿದೆ.

1936ನೇ ಸಾಲಿನಲ್ಲಿ ಜಂಗಮ ಸಮುದಾಯ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸೇರ್ಪಡೆಯಾಗಿದೆ. ಭಿಕ್ಷಾಟನೆ, ಮತ್ತಿತರ ಕುಲಕಸುಬು ಆಧಾರದಲ್ಲಿ ಬೇಡ (ಬುಡ್ಗ) ಜಂಗಮ ಸಮುದಾಯವನ್ನು ಸೇರ್ಪಡೆ ಮಾಡಲಾಗಿತ್ತು. 1953, ಅ.8ರಂದು ಅಂದಿನ ಬಳ್ಳಾರಿ ಜಿಲ್ಲಾಧಿಕಾರಿ, ಚಿಗಟೇರಿ ಗ್ರಾಮದ ಗುರುಮೂರ್ತಿ ಶಿವಾಚಾರ್ಯ ಎಂಬುವರಿಗೆ ಬೇಡ ಜಂಗಮ ಜಾತಿ ಪ್ರಮಾಣಪತ್ರ ನೀಡಿದ್ದಾರೆ ಎಂದರು.

ಕುಲಕಸುಬು ಅರಿವೆ ಬೇಡುವುದು, ಕಣಿ ಹೇಳುವುದು. ಇವರನ್ನು ಗಂಧಂ, ಭೂತಂ, ತೂರಪತಿ ಎಂಬ ಉಪನಾಮಗಳಿಂದ ಕರೆಯಲಾಗುತ್ತದೆ. ಹಾಗಾಗಿ ಬೇಡ ಜಂಗಮ ಜಾತಿ ಪ್ರಮಾಣಪತ್ರ ನೀಡಬಾರದು ಎಂಬುದಾಗಿ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಹೊರಡಿಸಿದ್ದ ಮೂರು ಸುತ್ತೋಲೆಗಳನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ವಿಚಾರಣೆ ನಡೆಸಿದ ಹೈಕೋರ್ಟ್‌ ಎಸ್‌ಡಬ್ಲ್ಯೂಡಿ 328 ಎಸ್‌ಎಡಿ 95 ಸುತ್ತೋಲೆ ಹಿಂಪಡೆದು ಬೇಡ ಜಂಗಮ ಜಾತಿ ಪ್ರಮಾಣಪತ್ರ ನೀಡುವಾಗ ಯಾವುದೇ ಕಾರಣಕ್ಕೂ ಎಸ್‌ಡಬ್ಲ್ಯೂಡಿ 328 ಎಸ್‌ಎಡಿ 95 ಸುತ್ತೋಲೆ ಅನುಸರಿಸಕೂಡದು ಎಂದು ಕಟ್ಟುನಿಟ್ಟಿನ ಆದೇಶ ನೀಡಿದೆ.

ಅದರಂತೆ ಬೇಡ ಜಂಗಮ ಜಾತಿ ಪ್ರಮಾಣಪತ್ರ ಪಡೆಯಲಾಗಿದೆ. ಉತ್ಛ ನ್ಯಾಯಾಲಯವೇ ಆದೇಶದಲ್ಲಿ ಜಾತಿ ಪ್ರಮಾಣಪತ್ರಗಳಿಗೆ ಮಾನ್ಯತೆ ನೀಡುವ ಜತೆಗೆ ಕುಂದು ಕೊರತೆಗಳಿಗೆ ಸಂಪೂರ್ಣ ಪರಿಹಾರ ನೀಡಿದೆ. ಹಾಗಾಗಿ ನನ್ನ ತಮ್ಮ ರೇಣುಕಾಚಾರ್ಯ ಪುತ್ರಿ ಚೇತನಾ ಪಡೆದಿರುವ ಜಾತಿ ಪ್ರಮಾಣಪತ್ರ ರದ್ದುಪಡಿಸಲು ಬರುವುದಿಲ್ಲ ಎಂದರು. ಡಾ|ಅಂಬೇಡ್ಕರ್‌ ಬೇಡ ಜಂಗಮ ಪರಿಶಿಷ್ಟ ಜಾತಿ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಸಿದ್ದಲಿಂಗಸ್ವಾಮಿ ಇತರರಿದ್ದರು.

ಸಹೋದರನ ಮಗಳಲ್ಲ
ಮಾಜಿ ಸಿಎಂ ಸಿದ್ದರಾಮಯ್ಯ, ಸಮಾಜ ಕಲ್ಯಾಣ ಇಲಾಖೆ ಮಾಜಿ ಸಚಿವ ಎಚ್‌.ಆಂಜನೇಯ ಅವರು ಎಂ.ಪಿ.ಚೇತನಾಗೆ 45 ಲಕ್ಷ ರೂ. ಅನುದಾನ ನೀಡಲಾಗಿದೆ ಎಂದು ಹೇಳುತ್ತಿದ್ದಾರೆ. ಅವರು ನನ್ನ ತಮ್ಮ ಎಂ.ಪಿ. ರೇಣುಕಾಚಾರ್ಯ ಪುತ್ರಿ ಎಂ.ಪಿ. ಚೇತನಾ ಅಲ್ಲ, ಧಾರವಾಡದ ಎಂ.ಪಿ. ಚೇತನ್‌ ಹಿರೇಮಠ್ ಆದರೂ ಸುಳ್ಳು ಹೇಳುತ್ತಿದ್ದಾರೆ. ಎಂ.ಪಿ.ರೇಣುಕಾಚಾರ್ಯಗೆ ಬೇಡಜಂಗಮ ಜಾತಿ ಪ್ರಮಾಣಪತ್ರದ ಬಗ್ಗೆ ಗೊತ್ತಿರಲಿಲ್ಲ. ಆ ಬಗ್ಗೆ ಅರಿವೂ ಇರಲಿಲ್ಲ. ನಾವು ಜಾತಿ ಪ್ರಮಾಣಪತ್ರ ಪಡೆದಿದ್ದೇವೆ. ಆದರೆ ಯಾವುದೇ ಸೌಲಭ್ಯ ಪಡೆದಿಲ್ಲ. ಇನ್ನೊಬ್ಬರ ಸೌಲಭ್ಯ ಕಿತ್ತುಕೊಳ್ಳುವುದೂ ಇಲ್ಲ ಎಂದು ದಾರಕೇಶ್ವರಯ್ಯ ಹೇಳಿದರು.

ಟಾಪ್ ನ್ಯೂಸ್

ಶ್ರೀನಗರ: ಮತ್ತೆ ಉಗ್ರರು ಅಟ್ಟಹಾಸ; 2 ಕಡೆ ಗ್ರೆನೇಡ್‌ ದಾಳಿ

ಶ್ರೀನಗರ: ಮತ್ತೆ ಉಗ್ರರು ಅಟ್ಟಹಾಸ; 2 ಕಡೆ ಗ್ರೆನೇಡ್‌ ದಾಳಿ

ಭಾರತಕ್ಕೆ ಬರಬೇಕಿದ್ದ ವಿಮಾನ ಕರಾಚಿಯಲ್ಲಿ ತುರ್ತು ಭೂಸ್ಪರ್ಶ

ಭಾರತಕ್ಕೆ ಬರಬೇಕಿದ್ದ ವಿಮಾನ ಕರಾಚಿಯಲ್ಲಿ ತುರ್ತು ಭೂಸ್ಪರ್ಶ

ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಭ್ರಮದಲ್ಲಿ ತೇಲಾಡಿದ ಜನತೆ

ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಭ್ರಮದಲ್ಲಿ ತೇಲಾಡಿದ ಜನತೆ

ಕೆನಡಿಯನ್‌ ಓಪನ್‌ ಟೆನಿಸ್‌: ಮೂರನೇ ಪ್ರಶಸ್ತಿ ಗೆದ್ದ ಸಿಮೋನಾ ಹಾಲೆಪ್‌

ಕೆನಡಿಯನ್‌ ಓಪನ್‌ ಟೆನಿಸ್‌: ಮೂರನೇ ಪ್ರಶಸ್ತಿ ಗೆದ್ದ ಸಿಮೋನಾ ಹಾಲೆಪ್‌

ರಾಸ್‌ ಟೇಲರ್‌ ಪ್ರಕರಣ: ತಮಾಷೆಗಾಗಿ ಕಪಾಳಮೋಕ್ಷ ? 

ರಾಸ್‌ ಟೇಲರ್‌ ಪ್ರಕರಣ: ತಮಾಷೆಗಾಗಿ ಕಪಾಳಮೋಕ್ಷ ? 

ಭಾರತ-ಪಾಕಿಸ್ಥಾನ ಕೇವಲ ಮತ್ತೊಂದು ಪಂದ್ಯ ಅಷ್ಟೇ: ಸೌರವ್‌ ಗಂಗೂಲಿ

ಭಾರತ-ಪಾಕಿಸ್ಥಾನ ಕೇವಲ ಮತ್ತೊಂದು ಪಂದ್ಯ ಅಷ್ಟೇ: ಸೌರವ್‌ ಗಂಗೂಲಿ

ಭಾರತದ ಸ್ವಾತಂತ್ರ್ಯ ದಿನಾಚರಣೆಗೆ ಶುಭಾಶಯ ಕೋರಿದ ಡೇವಿಡ್‌ ವಾರ್ನರ್‌

ಭಾರತದ ಸ್ವಾತಂತ್ರ್ಯ ದಿನಾಚರಣೆಗೆ ಶುಭಾಶಯ ಕೋರಿದ ಡೇವಿಡ್‌ ವಾರ್ನರ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

zdfbhdfxgn

ತಿರಂಗಾ ನಡಿಗೆ ಯಶಸ್ವಿಗೊಳಿಸಿ

safSADgdsfg

ಆರು ಜನ ಹುತಾತ್ಮರ ನೆನಪಿನ್ನೂ ಹಸಿರು

dvg3

ವಿದ್ಯಾರ್ಥಿಗಳ ಬದುಕಿನಲ್ಲಿ ಹೊಸ ಚೈತನ್ಯ ಮೂಡಿಸುತ್ತಿದೆ ವಿಶ್ವಚೇತನ

ಬಟ್ಟೆ ಒಣಗಿಸುವ ತಂತಿಗೆ ವಿದ್ಯುತ್ ಸ್ಪರ್ಶ: ಪತ್ನಿಯನ್ನು ಉಳಿಸಿಲು ಹೋದ ಪತಿಯೂ ಸಾವು!

ಬಟ್ಟೆ ಒಣಗಿಸುವ ತಂತಿಗೆ ವಿದ್ಯುತ್ ಸ್ಪರ್ಶ: ಪತ್ನಿಯನ್ನು ಉಳಿಸಿಲು ಹೋದ ಪತಿಯೂ ಸಾವು!

1-asdasdasd

ಕಬ್ಬು ಬೆಳೆಗೆ ಬೆಲೆ ನಿಗದಿ: ದಾವಣಗೆರೆಯಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ರೈತರ ಪ್ರತಿಭಟನೆ

MUST WATCH

udayavani youtube

ಈ ನಡಿಗೆಯನ್ನು ಇಡೀ ದೇಶವೇ ಹಿಂತಿರುಗಿ ನೋಡಿತು!!

udayavani youtube

ಈ ನಡಿಗೆಯನ್ನು ಇಡೀ ದೇಶವೇ ಹಿಂತಿರುಗಿ ನೋಡಿತು!!

udayavani youtube

ಸ್ವಾತಂತ್ರ್ಯ ಅಮೃತ ಮಹೋತ್ಸವ ನಿಮಿತ್ತದ ಕಾಂಗ್ರೆಸ್ ನಡಿಗೆಯಲ್ಲಿ ಜನಸ್ತೋಮ

udayavani youtube

ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿಗೆ ಬೆದರಿಕೆ ಕರೆ

udayavani youtube

ಸಾವರ್ಕರ್, ಟಿಪ್ಪು ಫೋಟೋ ವಿಚಾರದಲ್ಲಿ ಹೊಡೆದಾಟ : ಶಿವಮೊಗ್ಗ ನಗರದಲ್ಲಿ 144 ಸೆಕ್ಷನ್‌ ಜಾರಿ

ಹೊಸ ಸೇರ್ಪಡೆ

ಶ್ರೀನಗರ: ಮತ್ತೆ ಉಗ್ರರು ಅಟ್ಟಹಾಸ; 2 ಕಡೆ ಗ್ರೆನೇಡ್‌ ದಾಳಿ

ಶ್ರೀನಗರ: ಮತ್ತೆ ಉಗ್ರರು ಅಟ್ಟಹಾಸ; 2 ಕಡೆ ಗ್ರೆನೇಡ್‌ ದಾಳಿ

ಭಾರತಕ್ಕೆ ಬರಬೇಕಿದ್ದ ವಿಮಾನ ಕರಾಚಿಯಲ್ಲಿ ತುರ್ತು ಭೂಸ್ಪರ್ಶ

ಭಾರತಕ್ಕೆ ಬರಬೇಕಿದ್ದ ವಿಮಾನ ಕರಾಚಿಯಲ್ಲಿ ತುರ್ತು ಭೂಸ್ಪರ್ಶ

ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಭ್ರಮದಲ್ಲಿ ತೇಲಾಡಿದ ಜನತೆ

ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಭ್ರಮದಲ್ಲಿ ತೇಲಾಡಿದ ಜನತೆ

ಕೆನಡಿಯನ್‌ ಓಪನ್‌ ಟೆನಿಸ್‌: ಮೂರನೇ ಪ್ರಶಸ್ತಿ ಗೆದ್ದ ಸಿಮೋನಾ ಹಾಲೆಪ್‌

ಕೆನಡಿಯನ್‌ ಓಪನ್‌ ಟೆನಿಸ್‌: ಮೂರನೇ ಪ್ರಶಸ್ತಿ ಗೆದ್ದ ಸಿಮೋನಾ ಹಾಲೆಪ್‌

ರಾಸ್‌ ಟೇಲರ್‌ ಪ್ರಕರಣ: ತಮಾಷೆಗಾಗಿ ಕಪಾಳಮೋಕ್ಷ ? 

ರಾಸ್‌ ಟೇಲರ್‌ ಪ್ರಕರಣ: ತಮಾಷೆಗಾಗಿ ಕಪಾಳಮೋಕ್ಷ ? 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.