2023 ಸಿರಿಧಾನ್ಯಗಳ ವರ್ಷವೆಂದು ಘೋಷಣೆ

ಮಾನಸಿಕ ಒತ್ತಡ ಕಾರಣದಿಂದ ವಂಶ ಪಾರಂಪರ್ಯವಾಗಿ ಇರದಿದ್ದರೂ ಮಧುಮೇಹ ಸಮಸ್ಯೆ ಕಾಡುತ್ತಿದೆ.

Team Udayavani, Apr 11, 2022, 6:00 PM IST

2023 ಸಿರಿಧಾನ್ಯಗಳ ವರ್ಷವೆಂದು ಘೋಷಣೆ

ಹುಬ್ಬಳ್ಳಿ: ನಮ್ಮ ಹಳೆಯ ಆಹಾರ ಪದ್ಧತಿ ಕಡಿಮೆ ಮಾಡಿದ್ದರಿಂದ ಹಾಗೂ ಜೀವನಶೈಲಿ ಬದಲಾಗಿದ್ದರಿಂದ ಮಧುಮೇಹ, ಬೊಜ್ಜು ಸೇರಿದಂತೆ ಇನ್ನಿತರೆ ಕಾಯಿಲೆಗಳು ನಮ್ಮನ್ನು ಆವರಿಸುತ್ತಿವೆ. ಮಕ್ಕಳಲ್ಲಿ ಪೌಷ್ಟಿಕತೆ ಕೊರತೆ ಆಗುತ್ತಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಗಾಮನಗಟ್ಟಿಯ ಮಹಿಳಾ ಕೈಗಾರಿಕಾ ಪಾರ್ಕ್‌ ನಲ್ಲಿ ನೂತನವಾಗಿ ಆರಂಭಿಸಲಾದ ಗಾಯತ್ರಿ ಇಂಡಸ್ಟ್ರೀಸ್‌ನ ಉತ್ಪನ್ನಗಳು ಹಾಗೂ ಲಾಂಛನ ಬಿಡುಗಡೆ ಮಾಡಿ ಅವರು ಮಾತನಾಡಿದರು. ವಿಶ್ವಾದ್ಯಂತ 2023ನ್ನು ಸಿರಿಧಾನ್ಯಗಳ ವರ್ಷವೆಂದು ಘೋಷಿಸಲಾಗಿದೆ. ಸಿರಿಧಾನ್ಯಗಳ ಬಳಕೆಯಿಂದ ಬೊಜ್ಜು, ಮಧುಮೇಹ ಸೇರಿದಂತೆ ಇತರೆ ಕಾಯಿಲೆಗಳು ದೂರವಾಗುತ್ತವೆ. ಅಕ್ಕಿ, ಗೋಧಿ ಬಳಸುವುದರಿಂದ ತೀವ್ರತರದ ಬೊಜ್ಜು ಬೆಳೆಯುವ ಸಾಧ್ಯತೆಯಿದೆ. ಇಂದಿನ ಅವಸರದ
ಮತ್ತು ಬದಲಾದ ಜೀವನಶೈಲಿ, ಅನಗತ್ಯ ಮಾನಸಿಕ ಒತ್ತಡ ಕಾರಣದಿಂದ ವಂಶ ಪಾರಂಪರ್ಯವಾಗಿ ಇರದಿದ್ದರೂ ಮಧುಮೇಹ ಸಮಸ್ಯೆ ಕಾಡುತ್ತಿದೆ.

ಹಳೆಯ ಆಹಾರ ಪದ್ಧತಿಯಲ್ಲಿ ಬಳಸಲಾಗುವ ಜೋಳ, ಸಜ್ಜೆ, ಸಾವಿ, ನವಣೆ ಕೂಡ ಕ್ರಮೇಣ ಕಡಿಮೆಯಾಗುತ್ತಿದೆ. ಇದರಿಂದಾಗಿ ಸಾಮಾನ್ಯ ಬಡ ಮಕ್ಕಳಿಗೆ ಪೌಷ್ಟಿಕಾಂಶ ಕೊರತೆ ಆಗುತ್ತಿದೆ. ಹೀಗಾಗಿ ಪುನಃ ಹಳೆಯ ಪದ್ಧತಿ ಆಹಾರ ಬಳಕೆಗೆ ಬರುತ್ತಿದೆ. ಗಾಯತ್ರಿ ಇಂಡಸ್ಟ್ರೀಸ್‌ನವರು ಸಿರಿಧಾನ್ಯಗಳ ರೆಡಿ ಟು ಕುಕ್‌ (ಅಡುಗೆಗೆ ಸಿದ್ಧ) ಉತ್ಪನ್ನಗಳ ಉದ್ಯಮ ಆರಂಭಿಸಿದ್ದು ಶ್ಲಾಘನೀಯ ಎಂದರು.

ಉದ್ಯಮದಲ್ಲಿ ಹೊಸ ರೀತಿಯ ಯೋಚನೆ, ಚಿಂತನೆ ಹಾಗೂ ಸಾಹಸ, ಧೈರ್ಯದಿಂದ ಮುನ್ನುಗ್ಗುವವರಿಗೆ ಸಾಕಷ್ಟು ಅವಕಾಶ ಸಿಗುತ್ತದೆ. ಕೇಂದ್ರ ಸರಕಾರ ಹೊಸ ಉದ್ಯಮಕ್ಕೆ ಹೆಚ್ಚು ಪ್ರೋತ್ಸಾಹ ನೀಡುತ್ತಿದೆ. ಉದ್ಯಮಶೀಲತೆ ಕುರಿತ ಭಾವನೆ ಬದಲಾಗಿದೆ. ರಫ್ತಿಗೆ ಇನ್ನಷ್ಟು ಉತ್ತೇಜನ ನೀಡಲಾಗುತ್ತಿದೆ. ರಾಸಾಯನಿಕ ಬಳಕೆ ನಿಗದಿತ ಪ್ರಮಾಣದಲ್ಲಿ ಇರಿಸಿಕೊಂಡು ಗುಣಮಟ್ಟದ ಉತ್ಪಾದನೆ ಮಾಡಿದರೆ ಭಾರತದ ಆಹಾರ ಉತ್ಪನ್ನಗಳಿಗೆ ಜಗತ್ತಿನಲ್ಲಿ ಹೆಚ್ಚು ಬೇಡಿಕೆ ಇದೆ ಎಂದು ಹೇಳಿದರು.

ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಶಾಸಕ ಅರವಿಂದ ಬೆಲ್ಲದ, ಸಂಸ್ಕರಿತ ಆಹಾರಗಳ ಕೇಂದ್ರದ ನಿರ್ದೇಶಕ ಚೇತನ ಹಂಚಾಟೆ, ಯುನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದ ಪ್ರಾದೇಶಿಕ ವ್ಯವಸ್ಥಾಪಕ ಸಂತೋಷ ಪ್ರಭು, ಡಾ| ಜಿ.ಎಚ್‌. ನರೇಗಲ್‌, ಶ್ರೀಧರ ನಾಡಿಗೇರ, ನಾಗೇಶ ಕಲಬುರ್ಗಿ, ಬಸವರಾಜ ಕುಂದಗೋಳಮಠ, ಚಂದ್ರಶೇಖರ ಗೋಕಾಕ ಮೊದಲಾದವರಿದ್ದರು. ಜಯತೀರ್ಥ ಕಟ್ಟಿ ಸ್ವಾಗತಿಸಿದರು. ಪ್ರಸನ್ನ ಕಟ್ಟಿ ವಂದಿಸಿದರು.

ಧರ್ಮ, ಸಂಸ್ಕೃತಿ, ಆರೋಗ್ಯ, ಆಹಾರ ಸಂಪತ್ತಿನ ದೇಶ ನಮ್ಮದು. ಪೂರ್ವಿಕರು ನಮಗೆ ಕೊಟ್ಟ ಆಹಾರ ಪದ್ಧತಿ ಆರೋಗ್ಯಕರ ಮತ್ತು ಶ್ರೇಷ್ಠವಾಗಿತ್ತು. ಆದರೆ ಜೀವನಶೈಲಿ ಬದಲಾದಂತೆ ಆರೋಗ್ಯದ ಕ್ರಮ ವ್ಯತ್ಯಾಸವಾಗಿದೆ. ಅರಿಷಡ್ವರ್ಗಗಳನ್ನು ಹತೋಟಿಯಲ್ಲಿಟ್ಟುಕೊಂಡಾಗ ಸಮಾಜದ ಆರೋಗ್ಯ ಮತ್ತು ನಮ್ಮ ಶರೀರ ಉತ್ತಮವಾಗಿರುತ್ತದೆ.

ಅಭಿನವ ರೇವಣಸಿದ್ಧೇಶ್ವರ ಸ್ವಾಮೀಜಿ, ರಾಯನಾಳ ವಿರಕ್ತಮಠ

ಯುವಕರು ನೌಕರಿಯೇ ಬೇಕೆಂಬ ಮನಸ್ಥಿತಿ ಬದಲಿಸಿ ಸ್ವಯಂ ಉದ್ಯೋಗದತ್ತ ಒಲವು ಹೊಂದಬೇಕು. ಅಂದಾಗಲೇ ಇನ್ನೊಬ್ಬರಿಗೆ ಉದ್ಯೋಗ ಒದಗಿಸುವ ಮೂಲಕ ನಿರುದ್ಯೋಗ ಸಮಸ್ಯೆ ನಿವಾರಿಸಲು ಸಾಧ್ಯ.
ಅರವಿಂದರಾವ ದೇಶಪಾಂಡೆ, ಆರೆಸ್ಸೆಸ್‌
ಕರ್ನಾಟಕ ಉತ್ತರದ ಸಹ ಸಂಘಚಾಲಕ

ಟಾಪ್ ನ್ಯೂಸ್

Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು

Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು

ಹಂತ-1: ಬಹಿರಂಗ ಪ್ರಚಾರಕ್ಕೆ ಇಂದು ತೆರೆ, ನಾಳೆ ಮನೆ ಪ್ರಚಾರ

Lok Sabha Election ಹಂತ-1: ಬಹಿರಂಗ ಪ್ರಚಾರಕ್ಕೆ ಇಂದು ತೆರೆ, ನಾಳೆ ಮನೆ ಪ್ರಚಾರ

arvind kejriwal aap

Lok Sabha Election; ಕೇಜ್ರಿವಾಲ್‌ ಸೆರೆ‌ ಆಪ್‌ಗೆ ವರವೇ? ಶಾಪವೇ?

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

Apologize for the size of the wrong ad: Supreme to Ramdev

Patanjali; ತಪ್ಪು ಜಾಹೀರಾತಿನ ಗಾತ್ರದಲ್ಲೇ ಕ್ಷಮೆ ಕೇಳಿ: ರಾಮದೇವ್‌ ಗೆ ಸುಪ್ರೀಂ

Lok Sabha Election ; ಪ್ರಚಾರ ಜೋರು, ಚರ್ಚಾ ವಿಷಯ ಮೂರು!

Lok Sabha Election ; ಪ್ರಚಾರ ಜೋರು, ಚರ್ಚಾ ವಿಷಯ ಮೂರು!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

increase-in-number-of-crime-cases-after-congress-came-minister-joshi

Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ

Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು

Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು

ಹಂತ-1: ಬಹಿರಂಗ ಪ್ರಚಾರಕ್ಕೆ ಇಂದು ತೆರೆ, ನಾಳೆ ಮನೆ ಪ್ರಚಾರ

Lok Sabha Election ಹಂತ-1: ಬಹಿರಂಗ ಪ್ರಚಾರಕ್ಕೆ ಇಂದು ತೆರೆ, ನಾಳೆ ಮನೆ ಪ್ರಚಾರ

arvind kejriwal aap

Lok Sabha Election; ಕೇಜ್ರಿವಾಲ್‌ ಸೆರೆ‌ ಆಪ್‌ಗೆ ವರವೇ? ಶಾಪವೇ?

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.