ತ್ಯಾಜ್ಯ ಎಸೆಯುವವರ ವಿರುದ್ಧ ಗಾಂಧಿಗಿರಿ

ಇನ್ನಾದರೂ ಸಾರ್ವಜನಿಕರು ಸ್ಪಂದಿಸುವರೇ ಕಾಯ್ದು ನೋಡಬೇಕು.

Team Udayavani, Feb 3, 2022, 5:30 PM IST

ತ್ಯಾಜ್ಯ ಎಸೆಯುವವರ ವಿರುದ್ಧ ಗಾಂಧಿಗಿರಿ

ಹುಬ್ಬಳ್ಳಿ: ಸಾರ್ವಜನಿಕರು ತ್ಯಾಜ್ಯ ಎಸೆಯುವ ಜಾಗದಲ್ಲಿ ಸ್ವಚ್ಛಗೊಳಿಸಿ ರಂಗೋಲಿ ಬಿಡಿಸುವ, ಬಾಂಬೂ, ಇನ್ನಿತರೆ ವಸ್ತುಗಳನ್ನು ಬಳಸಿಕೊಂಡು ತಾತ್ಕಾಲಿಕ ಗುಡಿಸಲು ನಿರ್ಮಿಸುವ, ದಯವಿಟ್ಟು ಇಲ್ಲಿ ತ್ಯಾಜ್ಯ ಎಸೆಯಬೇಡಿ ಎಂದು ನಾಮಫಲಕ ಹಾಕುವ, ತ್ಯಾಜ್ಯ ಎಸೆಯಲು ಬಂದವರಿಗೆ ಹೂ ನೀಡಿ ಇಲ್ಲವೆ ಹೂ ಮಾಲೆ ಹಾಕಿ ಮನವಿ ಮಾಡಲಾಗುತ್ತಿದೆ.

ಮನಬಂದಂತೆ ತ್ಯಾಜ್ಯ ಎಸೆಯುವವರ ಮನಪರಿವರ್ತನೆಗೆ ಮಹಾನಗರ ಪಾಲಿಕೆ ಹಾಗೂ ಪೌರಕಾರ್ಮಿಕರ ಗಾಂಧಿಗಿರಿ ಪರಿ ಇದು. ಈ ಹಿಂದೆ ಸಾರ್ವಜನಿಕ ತ್ಯಾಜ್ಯ ಸಂಗ್ರಹ ತೊಟ್ಟಿಗಳಿರುತ್ತಿದ್ದ ಜಾಗದಲ್ಲಿ ತೊಟ್ಟಿಗಳನ್ನು ತೆಗೆದರೂ ಇಂದಿಗೂ ತ್ಯಾಜ್ಯ ಎಸೆಯುವುದಂತೂ ನಿಂತಿಲ್ಲ.

ತ್ಯಾಜ್ಯ ಸಂಗ್ರಹ ತೊಟ್ಟಿಗಳನ್ನು ಇರಿಸಿದರೆ ಸುಪ್ರೀಂಕೋರ್ಟ್‌ನ ಆದೇಶ ಉಲ್ಲಂಘನೆ ಭೀತಿ, ಇನ್ನೊಂದು ಕಡೆ ತೊಟ್ಟಿ ಇಲ್ಲದೆಯೇ ಎಲ್ಲೆಂದರಲ್ಲಿ ಹರಡುವ, ಗಬ್ಬು ನಾರುವ, ಹಂದಿ, ನಾಯಿ, ಬೀದಿಬದಿ ಜಾನುವಾರುಗಳಿಗೆ ತಾಣವಾಗುವ ತ್ಯಾಜ್ಯ ಸಂಗ್ರಹ ಸ್ಥಳ ನಿರ್ವಹಣೆ ಪಾಲಿಕೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಆರಂಭದಲ್ಲಿ ಕ್ರಮಕ್ಕೆ ಮುಂದಾಗಿದ್ದ ಪಾಲಿಕೆ ಇದಕ್ಕೆ ಸೂಕ್ತ ಸ್ಪಂದನೆ ದೊರೆಯದಿದ್ದಾಗ ಇದೀಗ ಗಾಂಧಿಗಿರಿಗಿಳಿದಿದೆ.

ಮನೆ, ವಾಣಿಜ್ಯ ಕಟ್ಟಡಗಳಿಂದ ನಿತ್ಯ ತ್ಯಾಜ್ಯ ಸಂಗ್ರಹ ಮಾಡುತ್ತಿದ್ದರೂ, ಈ ಹಿಂದೆ ಸಾರ್ವಜನಿಕ ತ್ಯಾಜ್ಯ ಸಂಗ್ರಹ ತೊಟ್ಟಿಗಳಿದ್ದ ಜಾಗದಲ್ಲಿ ಕಸ ಎಸೆಯುವುದು ನಿಂತಿಲ್ಲ. ಸ್ವತ್ಛತೆ ಸವಾಲು ಜತೆಗೆ ಪ್ರತಿ ವರ್ಷ ಕೇಂದ್ರ ಸರಕಾರ ಕೈಗೊಳ್ಳುವ ರಾಷ್ಟ್ರದ ಸ್ವತ್ಛತಾ ಸರ್ವೇಕ್ಷಣಾ ಸಮೀಕ್ಷೆಯಲ್ಲಿ ರ್‍ಯಾಂಕಿಂಗ್‌ ಕುಸಿಯದಂತೆ ನೋಡಿಕೊಳ್ಳುವ ಜವಾಬ್ದಾರಿಯೂ ಪಾಲಿಕೆಯದ್ದಾಗಿದೆ.

ತಪ್ಪದ ಗೋಳು: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಈ ಹಿಂದೆ ವಾರ್ಡ್‌ಗಳಲ್ಲಿ ಅಲ್ಲಲ್ಲಿ ಸಾರ್ವಜನಿಕ ತ್ಯಾಜ್ಯ ಸಂಗ್ರಹ ತೊಟ್ಟಿಗಳನ್ನು ಇರಿಸಲಾಗುತ್ತಿತ್ತು. ಜನರು ತ್ಯಾಜ್ಯವನ್ನು ತೊಟ್ಟಿಗೆ ಹಾಕುತ್ತಿದ್ದರು. ಪಾಲಿಕೆಯವರು ನಿತ್ಯ ಇಲ್ಲವೆ ಎರಡು-ಮೂರು ದಿನಕ್ಕೊಮ್ಮೆ ಅದರ ವಿಲೇವಾರಿ ಮಾಡುತ್ತಿದ್ದರು.ಕೈಗಾಡಿಗಳ ಮೂಲಕವೂ ಪೌರ ಕಾರ್ಮಿಕರು ಓಣಿಗಳಲ್ಲಿನ ತ್ಯಾಜ್ಯ ಸಂಗ್ರಹಿಸಿ ಅದನ್ನು ತ್ಯಾಜ್ಯ ವಿಲೇವಾರಿ ವಾಹನ ಬಳಿ ಇಲ್ಲವೆ ಸಾರ್ವಜನಿಕ ತ್ಯಾಜ್ಯ ಸಂಗ್ರಹ ತೊಟ್ಟಿ ಬಳಿ ತರುತ್ತಿದ್ದರು.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ತ್ಯಾಜ್ಯ ವಿಲೇವಾರಿ ನಿಟ್ಟಿನಲ್ಲಿ ಅನೇಕ ಯತ್ನ-ಪ್ರಯೋಗಗಳನ್ನು ಕೈಗೊಂಡಿತ್ತು. ಹಸಿ ತ್ಯಾಜ್ಯವನ್ನು ಸಾಧ್ಯವಾದಷ್ಟು ಆಯಾ ವಾರ್ಡ್‌ ವ್ಯಾಪ್ತಿಯಲ್ಲಿಯೇ ವಿಲೇವಾರಿಯಾಗುವಂತೆ ಮಾಡುವ, ಸಾರ್ವಜನಿಕ ಸ್ಥಳಗಳಲ್ಲಿ ಗುಂಡಿ ತೋಡಿ ಅದನ್ನು ಮುಚ್ಚಿಟ್ಟು ಕಾಂಪೋಸ್ಟ್‌ ಆಗಿ ಪರಿವರ್ತಿಸುವ, ಸಂಗ್ರಹಿತ ತ್ಯಾಜ್ಯ ವಿಲೇವಾರಿ ನಿಟ್ಟಿನಲ್ಲಿ ಪುಣೆ ಇನ್ನಿತರೆ ಕಡೆಯ ಕಂಪೆನಿಗಳಿಗೆ ಆಹ್ವಾನ, ಮನೆಗಳಿಂದ ತ್ಯಾಜ್ಯ ಸಂಗ್ರಹಕ್ಕೆ ಆಟೋ ಟಿಪ್ಪರ್‌ಗಳ ಖರೀದಿ, ಕಾಂಪ್ಯಾಕ್ಟರ್‌ ಕೇಂದ್ರಗಳ ಸ್ಥಾಪನೆ ಹೀಗೆ ಹಲವು ಕ್ರಮ ಕೈಗೊಂಡಿದೆ. ಬೆಳಗಿನ ವೇಳೆ ಮನೆ, ಮನೆಗಳಿಂದ ತ್ಯಾಜ್ಯ ಸಂಗ್ರಹಿಸುವ ಆಟೋ ಟಿಪ್ಪರ್‌ಗಳು, ಮಧ್ಯಾಹ್ನ ವೇಳೆ ವಾಣಿಜ್ಯ ಕಟ್ಟಡಗಳಿಂದ ತ್ಯಾಜ್ಯ ಸಂಗ್ರಹಿಸಲಾಗುತ್ತಿದೆ. ಅವಳಿ ನಗರದಲ್ಲಿ ನಿತ್ಯ ಸುಮಾರು 350-400 ಟನ್‌ನಷ್ಟು ತ್ಯಾಜ್ಯ
ಉತ್ಪತ್ತಿಯಾಗುತ್ತಿದೆ.

ಗಾಂಧಿಗಿರಿಗಿಳಿದ ಪಾಲಿಕೆ: ಸುಪ್ರೀಂಕೋರ್ಟ್‌ ಆದೇಶ ಹಿನ್ನೆಲೆಯಲ್ಲಿ ಸಾರ್ವಜನಿಕ ತ್ಯಾಜ್ಯ ಸಂಗ್ರಹ ಸ್ಥಳದಲ್ಲಿದ್ದ ತೊಟ್ಟಿಗಳನ್ನು ತೆಗೆದಿತ್ತು. ಈ ಸ್ಥಳದಲ್ಲಿ ತ್ಯಾಜ್ಯ ಹಾಕದಂತೆ ಮಾಡಿದ ಮನವಿಗೆ ಸ್ಪಂದನೆ ಇಲ್ಲವಾಗಿತ್ತು. ಪಾಲಿಕೆಯವರು ನಾಲ್ಕೈದು ದಿನಕ್ಕೊಮ್ಮೆ ಅಥವಾ ಪಾಲಿಕೆ ಸದಸ್ಯರು ಇಲ್ಲವೆ ಸಾರ್ವಜನಿಕರು ದೂರು ನೀಡಿದಾಗ ತ್ಯಾಜ್ಯ ಸಾಗಿಸುತ್ತಿದ್ದರು. ತ್ಯಾಜ್ಯ ಹಾಕುವುದು ತಡೆಯಲು ದಂಡ ಪ್ರಯೋಗ ಮಾಡಿದರೂ ಪ್ರಯೋಜನವಾಗಿರಲಿಲ್ಲ. ಕೆಲವರಂತೂ ದ್ವಿಚಕ್ರ ವಾಹನಗಳ ಮೇಲೆ ಆಗಮಿಸಿ, ವಾಹನ ನಿಲ್ಲಿಸದೆಯೇ ತ್ಯಾಜ್ಯ ಎಸೆದ ಮುಂದೆ ಸಾಗುತ್ತಿದ್ದದ್ದು ಇದೆ.

ಸಾರ್ವಜನಿಕ ತ್ಯಾಜ್ಯ ಸಂಗ್ರಹ ತೊಟ್ಟಿ ಇರಿಸುತ್ತಿದ್ದ ಸ್ಥಳಗಳಲ್ಲಿ ತ್ಯಾಜ್ಯ ಸಂಗ್ರಹವಾದಂತೆ ಮಾಡಲು ಪಾಲಿಕೆ ಇದೀಗ ಗಾಂಧಿಗಿರಿ ಹಾದಿ ಹಿಡಿದಿದೆ. ಪ್ರಮುಖವಾಗಿ ಮುಖ್ಯ ರಸ್ತೆಗಳಲ್ಲಿನ ತ್ಯಾಜ್ಯ ಸಂಗ್ರಹ ಸ್ಥಳಗಳನ್ನು ಸ್ವಚ್ಛಗೊಳಿಸಿ ಕಟ್ಟಿಗೆ, ಬಾಂಬೂಗಳಿಂದ ಅದಕ್ಕೆ ತಾತ್ಕಾಲಿಕ ತಡೆಗೋಡೆ ನಿರ್ಮಿಸಿ ಇಲ್ಲಿ ತ್ಯಾಜ್ಯ ಎಸೆಯಬಾರದು ಎಂದು ನಾಮಫಲಕ ಅಳವಡಿಸಲಾಗಿದೆ. ಇನ್ನು ಕೆಲವು ಕಡೆಗಳಲ್ಲಿ ತ್ಯಾಜ್ಯ ಎಸೆಯಲು ಬಂದವರಿಗೆ ಹೂ ನೀಡಿ, ಹೂವಿನ ಮಾಲೆ ಹಾಕುವ ಮೂಲಕ ಪಾಲಿಕೆ ಸಿಬ್ಬಂದಿ ಹಾಗೂ ಪೌರಕಾರ್ಮಿಕರು ಕೈ ಮುಗಿದು ಇನ್ನು ಮುಂದೆ ಇಲ್ಲಿ ತ್ಯಾಜ್ಯ ಎಸೆಯಬೇಡಿ, ಮನೆಗೆ ಬರುವ ವಾಹನಗಳಿಗೆ ನೀಡಿ ಎಂದು ಮನವಿ ಮಾಡುತ್ತಿದ್ದಾರೆ.

ಗಾಂಧಿಗಿರಿಯ ಮುಂದುವರಿದ ಭಾಗವಾಗಿ ಪಾಲಿಕೆ ಪರಿಸರ, ಆರೋಗ್ಯ ವಿಭಾಗ ಸಿಬ್ಬಂದಿ, ಪೌರಕಾರ್ಮಿಕರು ಸಾರ್ವಜನಿಕರು ತ್ಯಾಜ್ಯ ಎಸೆದ ಜಾಗಗಳಲ್ಲಿನ ತ್ಯಾಜ್ಯ ತೆಗೆಯುವುದಷ್ಟೇ ಅಲ್ಲ ಅದನ್ನು ಸ್ವಚ್ಛಗೊಳಿಸಿ ಅಲ್ಲಿ ರಂಗೋಲಿ ಬಿಡಿಸುವ ಮೂಲಕ ಜನರಿಗೆ ಇಲ್ಲಿ ತ್ಯಾಜ್ಯ ಹಾಕುವುದು ಬೇಡ ಎಂಬ ಜಾಗೃತಿ-ಮನವಿಗೆ ಮುಂದಾಗಿದ್ದಾರೆ. ಇನ್ನಾದರೂ ಸಾರ್ವಜನಿಕರು ಸ್ಪಂದಿಸುವರೇ ಕಾಯ್ದು ನೋಡಬೇಕು.

ಜಿಪಿವಿಗಳ ನಿರ್ಮೂಲನೆಗೆ ಕ್ರಮ: ಮಹಾನಗರ ಪಾಲಿಕೆಯ ಒಟ್ಟು 12 ವಲಯಗಳಲ್ಲಿ ಒಟ್ಟು ಸಾರ್ವಜನಿಕ ತ್ಯಾಜ್ಯ ಸಂಗ್ರಹ ನಿಟ್ಟಿನಲ್ಲಿ 630 ಜಿವಿಪಿಗಳು ಇವೆ. ವಲಯ ಸಂಖ್ಯೆ 5ರಲ್ಲಿ ಅತ್ಯಧಿಕ 117 ಜಿಪಿವಿಗಳಿದ್ದರೆ, ವಲಯ 11ರಲ್ಲಿ ಅತ್ಯಂತ ಕಡಿಮೆ 25 ಜಿಪಿವಿಗಳಿವೆ. ಒಟ್ಟು 630ರಲ್ಲಿ ಇದುವರೆಗೆ 295 ಜಿಪಿವಿಗಳನ್ನು ಪೂರ್ಣ ಪ್ರಮಾಣದಲ್ಲಿ ನಿರ್ಮೂಲನೆ ಮಾಡಲಾಗಿದ್ದು, ಇನ್ನು 335 ಕಡೆ ಆಗಬೇಕಾಗಿದೆ.

ಸರ್ವೇಕ್ಷಣೆಗೆಂದು ಸೀಮಿತವಾಗದಿರಲಿ…
ಸಾರ್ವಜನಿಕ ತ್ಯಾಜ್ಯ ಎಸೆಯುವ ಸ್ಥಳಗಳ ಸ್ವಚ್ಛತೆ ಹಾಗೂ ಗಾಂಧಿಗಿರಿಯ ಪಾಲಿಕೆ ಕ್ರಮ ಕೇವಲ ಸ್ವಚ್ಛತಾ ಸರ್ವೇಕ್ಷಣೆ ಉದ್ದೇಶಕ್ಕೆ ಮಾತ್ರ ಸೀಮಿತವಾಗದೆ ಅದು ಮುಂದುವರಿಯುವಂತಾಗಬೇಕು. ಮುಖ್ಯವಾಗಿ ನಗರ ಸ್ವತ್ಛತೆ ದೃಷ್ಟಿಯಿಂದ ಸಾರ್ವಜನಿಕರು ಸಹ ಪಾಲಿಕೆ ಆಶಯ-ಶ್ರಮಕ್ಕೆ ಸಾಥ್‌ ನೀಡಬೇಕಾಗಿದೆ. ಎಲ್ಲೆಂದರಲ್ಲದೆ ತ್ಯಾಜ್ಯ ಎಸೆಯುವ ಮನೋಭಾವದಿಂದ ಹೊರ ಬಂದು, ಮನೆ, ವಾಣಿಜ್ಯ ಕಟ್ಟಡಗಳ ಮುಂದೆಯೇ ಬರುವ ತ್ಯಾಜ್ಯ ಸಂಗ್ರಹ ವಾಹನಗಳಿಗೆ ತ್ಯಾಜ್ಯ ನೀಡುವ ನಾಗರಿಕ ಜವಾಬ್ದಾರಿ ತೋರಬೇಕಾಗಿದೆ.

ಮಹಾನಗರ ಪಾಲಿಕೆ ಆಯುಕ್ತರ ಕಟ್ಟುನಿಟ್ಟಿನ ಸೂಚನೆ..
ಮಹಾನಗರ ಪಾಲಿಕೆ ನೂತನ ಆಯುಕ್ತ ಡಾ| ಬಿ. ಗೋಪಾಲಕೃಷ್ಣ ಅವರು ಬೆಳಗಿನ ವೇಳೆ ವಿವಿಧ ವಾರ್ಡ್‌ ಗಳಿಗೆ ಭೇಟಿ ನೀಡುವ, ಸ್ವತ್ಛತಾ ಕಾರ್ಯ ಪರಿಶೀಲಿಸುವ, ಅಗತ್ಯ ಸಲಹೆ-ಸೂಚನೆ ನೀಡುವ ಕಾರ್ಯ ಕೈಗೊಳ್ಳುತ್ತಿದ್ದಾರೆ. ಮುಖ್ಯವಾಗಿ ಸಾರ್ವಜನಿಕ ತ್ಯಾಜ್ಯ ಸಂಗ್ರಹ ಸ್ಥಳಗಳಲ್ಲಿ
ಯಾವುದೇ ಕಾರಣಕ್ಕೂ ತ್ಯಾಜ್ಯ ಸಂಗ್ರಹವಾದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಪರಿಣಾಮವಾಗಿ ಪಾಲಿಕೆ ಪರಿಸರ, ಆರೋಗ್ಯ ಸಿಬ್ಬಂದಿ ಹಾಗೂ ಪೌರಕಾರ್ಮಿಕರು ವಿವಿಧ ಕ್ರಮಗಳಿಗೆ ಮುಂದಾಗಿದ್ದಾರೆ.

ಮಹಾನಗರವನ್ನು ಸ್ವಚ್ಛ ನಗರವನ್ನಾಗಿಸುವ ಕಾರ್ಯದ ಜತೆಗೆ ಈ ಹಿಂದೆ ಇದ್ದ ಸಾರ್ವಜನಿಕ ತ್ಯಾಜ್ಯ ಸಂಗ್ರಹ ಸ್ಥಳಗಳಲ್ಲಿ ತ್ಯಾಜ್ಯ ಎಸೆಯದಂತೆ ಜಾಗೃತಿ ಮೂಡಿಸುವ, ಮನವಿ ಮಾಡುವ ಕಾರ್ಯ ಮಾಡಲಾಗುತ್ತಿದೆ. ತ್ಯಾಜ್ಯ ಸಂಗ್ರಹ ಸ್ಥಳಗಳಲ್ಲಿ ಪಾಲಿಕೆ ಪರಿಸರ, ಆರೋಗ್ಯ ವಿಭಾಗ ಸಿಬ್ಬಂದಿ ಹಾಗೂ ಪೌರಕಾರ್ಮಿಕರು ರಂಗೋಲಿ ಬಿಡಿಸುವ ಮೂಲಕ ಸ್ವತ್ಛತೆ ಸಂದೇಶ ಸಾರುತ್ತಿದ್ದಾರೆ. ತ್ಯಾಜ್ಯ ಹಾಕದಂತೆ ಜನರಿಗೆ ಮನವಿ ಮಾಡಲಾಗುತ್ತಿದೆ.
ಸಂತೋಷ ಕುಮಾರ ಯರಂಗಳಿ,
ಕಾರ್ಯ ನಿರ್ವಾಹಕ ಇಂಜನಿಯರ್‌,
ಪಾಲಿಕೆ ಪರಿಸರ ವಿಭಾಗ

ಅಮರೇಗೌಡ ಗೋನವಾರ

ಟಾಪ್ ನ್ಯೂಸ್

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weewqewqe

LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Water Crisis; ರಾಜ್ಯ ಸರ್ಕಾರದಿಂದ ಟ್ಯಾಂಕರ್ ಲಾಬಿ: ಅರವಿಂದ ಬೆಲ್ಲದ್ ಆರೋಪ

Water Crisis; ರಾಜ್ಯ ಸರ್ಕಾರದಿಂದ ಟ್ಯಾಂಕರ್ ಲಾಬಿ: ಅರವಿಂದ ಬೆಲ್ಲದ್ ಆರೋಪ

MONEY (2)

Hubli ಅಪಾರ್ಟಮೆಂಟ್‌ ನಲ್ಲಿ ಸಿಕ್ಕ ಕೋಟಿ ಕೋಟಿ ಹಣ ಬ್ಯಾಂಕ್ ಗೆ ಜಮೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.