ನಿಯಮಿತ ವ್ಯಾಯಾಮದಿಂದ ಆರೋಗ್ಯ
ಎಪಿಎಂಸಿಯಲ್ಲಿ ವ್ಯಾಪಾರಸ್ಥರು, ರೈತರು, ಕಾರ್ಮಿಕರ ಆರೋಗ್ಯ ತಪಾಸಣೆ
Team Udayavani, May 29, 2022, 11:16 AM IST
ಹುಬ್ಬಳ್ಳಿ: ಇಲ್ಲಿನ ಅಮರಗೋಳ ಎಪಿಎಂಸಿಯ ಶ್ರೀ ಜಗಜ್ಯೋತಿ ಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯಾಪಾರಸ್ಥರ ಸಂಘ ಹಾಗೂ ಡಾ| ಮಹೇಶ ನಾಲವಾಡ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ, ಸುಚಿರಾಯು ಆಸ್ಪತ್ರೆ, ಎಚ್‌ಸಿಜಿ ಸ್ಕ್ಯಾನ್ ಸೆಂಟರ್ ಆಶ್ರಯದಲ್ಲಿ ಶನಿವಾರ ಸಂಘದ ಕಟ್ಟಡದಲ್ಲಿ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಶಿಬಿರ ಉದ್ಘಾಟಿಸಿ ಮಾತನಾಡಿದ ಡಾ| ಮಹೇಶ ನಾಲವಾಡ, ಮನುಷ್ಯ ದೈಹಿಕವಾಗಿ, ಮಾನಸಿಕವಾಗಿ, ಭೌತಿಕವಾಗಿ, ಸಾಮಾಜಿಕವಾಗಿ ಆರೋಗ್ಯವಾಗಿದ್ದರೆ ಮಾತ್ರ ಸಂಪೂರ್ಣ ಆರೋಗ್ಯವಾಗಿರುತ್ತಾನೆ. ಸಮತೋಲನ ಆಹಾರ ಸೇವನೆ, ಸರಿಯಾಗಿ ನಿದ್ರೆ, ದೈಹಿಕ ಚಟುವಟಿಕೆ, ಯೋಗಾಭ್ಯಾಸ, ವ್ಯಾಯಾಮ ನಿಯಮಿತವಾಗಿ ಮಾಡುವುದರಿಂದ ಸದೃಢವಾಗಿರಲು ಸಾಧ್ಯ.
ಸರಕಾರವು ಕೆಲವು ಆರೋಗ್ಯ ಕಾರ್ಡ್‌ಗಳನ್ನು ಮಾಡಿದ್ದು, ಅವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಸಂಘದ ಅಧ್ಯಕ್ಷ ಗಂಗನಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ಅತಿಥಿಗಳಾಗಿ ಎಪಿಎಂಸಿ ಕಾರ್ಯದರ್ಶಿ ಪ್ರಭಾಕರ ಅಂಗಡಿ, ಮಾಜಿ ಅಧ್ಯಕ್ಷ ಬಸವರಾಜ ಗಾಣಿಗೇರ, ಸಂಘದ ಮಾಜಿ ಅಧ್ಯಕ್ಷ ಜಗದೀಶಗೌಡ ಪಾಟೀಲ, ರಾಜಣ್ಣ ಬತ್ಲಿ, ಚಂದ್ರಶೇಖರ ಪೂಜಾರ, ಮಲ್ಲಿಕಾರ್ಜುನ ಬೋರಟ್ಟಿ, ಸಲೀಂ ಬ್ಯಾಹಟ್ಟಿ, ಶಿವನಗೌಡ ಪಾಟೀಲ, ಎ.ಎಸ್. ಬಾಳಿಕಾಯಿ, ಎಸ್.ಎಸ್. ಹೊಸಕಟ್ಟಿ, ಶಂಕರಣ್ಣ ಕೊಕಾಟಿ, ಜಿ.ಆರ್. ಬೆಲ್ಲದ, ಎ.ಆರ್. ನದಾಫ, ಸುರೇಶ ಓಸ್ತುವಾಲ, ಬಿ.ಜಿ. ಹೊಸಗೌಡ್ರ ಮೊದಲಾದವರಿದ್ದರು.
ಶಿಬಿರದಲ್ಲಿ ಆರ್ಥೋಪಿಡಿಕ್ ಡಾ| ವಿವೇಕ ಪಾಟೀಲ, ಚಿಕ್ಕಮಕ್ಕಳ ತಜ್ಞ ಡಾ| ಸೋಹೆಲ್ ಅಣಬಿ, ಸರ್ಜನ್ ಡಾ| ಸಂಜೀವ ನೇವನಾಳ, ಇಎನ್‌ಟಿ ಡಾ| ಪುನೀತ, ಮೂತ್ರಕೋಶ ತಜ್ಞ ಡಾ| ಭುವನೇಶ ಆರಾಧ್ಯ, ರೇಡಿಯೇಶನ್ ಡಾ| ಮಿಲ್ಲಿಂದ ಶೆಟ್ಟಿ, ಕ್ಯಾನ್ಸರ್ ತಜ್ಞ ಡಾ| ವಿಶಾಲ ಕುಲಕರ್ಣಿ, ಮುಖ್ಯ ವೈದ್ಯಕೀಯ ನಿರ್ವಾಹಕ ಡಾ| ಜಯಕಿಶನ್, ಮೆಡಿಕಲ್ ಹೆಡ್ ಡಾ| ವಿಶಾಕ ಮಧುರಕರ, ಡಯಟಿಸ್ಟ್ ಡಾ| ದೀಪಾ, ಡಾ| ಎಸ್. ಎ. ಪಾಟೀಲ ಅವರು ರಕ್ತದೊತ್ತಡ, ಮಧುಮೇಹ, ಕಣ್ಣು, ಮೂತ್ರಕೋಶ ತಪಾಸಣೆ, ತೂಕ, ಇಸಿಜಿ, ಚಿಕ್ಕಮಕ್ಕಳ ತಪಾಸಣೆ, ಕಿವಿ, ಮೂಗು, ಗಂಟಲು, ಸ್ತ್ರೀ ರೋಗ ತಪಾಸಣೆ, ಕ್ಯಾನ್ಸರ್ ಇತರೆ ಕಾಯಿಲೆಗಳ ತಪಾಸಣೆ ಮಾಡಿದರು ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಗೀತಾ ಬ್ಯಾಲ್ಯಾಳ, ರಾಜೇಶ್ವರಿ ಅವರು ಕೊರೊನಾ ಬೂಸ್ಟರ್ ಡೋಸ್ ಲಸಿಕೆ ನೀಡಿದರು.
ರಾಜಶೇಖರ ವಾಲಿ ಸ್ವಾಗತಿಸಿದರು. ರಾಜಕಿರಣ ಮೆಣಸಿನಕಾಯಿ ನಿರೂಪಿಸಿದರು. ಶಿಬಿರದಲ್ಲಿ 200ಕ್ಕೂ ಹೆಚ್ಚು ವ್ಯಾಪಾರಸ್ಥರು, ರೈತರು, ಕಾರ್ಮಿಕರು, ಸಾರ್ವಜನಿಕರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಚಂದ್ರಶೇಖರ ಗುರೂಜಿ ಅಂತ್ಯಕ್ರಿಯಗೆ ಬಂದ ನಿಡಸೋಸಿ ಶ್ರೀ ಕಾರು ಅಪಘಾತ
ಅವಶ್ಯಕತೆ ಇಲ್ಲದ ಜಾಗೆಯಲ್ಲಿ ಶೌಚಾಲಯ
ಕಿಮ್ಸ್ ಶವಾಗಾರದಿಂದ ಚಂದ್ರಶೇಖರ ಗುರೂಜಿ ಮೃತದೇಹ ರವಾನೆ : ಮುಗಿಲು ಮುಟ್ಟಿದ ಆಕ್ರಂದನ
ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣ : ಮರಣೋತ್ತರ ಪರೀಕ್ಷೆಯಲ್ಲಿ ಮಹತ್ವದ ಸುಳಿವು
ಚಂದ್ರಶೇಖರ ಗುರೂಜಿ ಅಂತ್ಯಕ್ರಿಯೆಗೆ ಸಿದ್ಧತೆ: ವೀರಶೈವ ಲಿಂಗಾಯತ ಸಂಪ್ರದಾಯದಂತೆ ವಿಧಿವಿಧಾನ
MUST WATCH
ಹೊಸ ಸೇರ್ಪಡೆ
ಬಂಟ್ವಾಳ: ಶೆಡ್ ಮೇಲೆ ಗುಡ್ಡ ಕುಸಿದು ಗಾಯಗೊಂಡಿದ್ದ ಮತ್ತಿಬ್ಬರು ಸಾವು
ತನ್ನದೇ ದೇಶದ ಬಿಗ್ ಬಾಶ್ ತ್ಯಜಿಸುತ್ತಾರಾ ಡೇವಿಡ್ ವಾರ್ನರ್?
ಮುಂದುವರಿದ ಮಳೆ: ಶಿವಮೊಗ್ಗ ಜಿಲ್ಲೆಯ ಪ್ರಾಥಮಿಕ-ಪ್ರೌಢ ಶಾಲೆಗಳಿಗೆ ರಜೆ ಘೋಷಣೆ
ಮಂಗಳೂರು : ಹುಟ್ಟುವಾಗಲೇ ನವಜಾತ ಶಿಶುವಿನಲ್ಲಿ ಹಲ್ಲು! ವೈದ್ಯರು ಹೇಳಿದ್ದೇನು ಗೊತ್ತೆ ?
10 ಲಕ್ಷ ಮಕ್ಕಳಿಗಿಲ್ಲ ಶಿಕ್ಷಣ: ಕೋವಿಡ್ ತಂದಿಟ್ಟ ಆಘಾತ ಸಮೀಕ್ಷೆ ವಿವರ ಹೈಕೋರ್ಟ್ಗೆ