ಸತತ 3ನೇ ಬಾರಿ ಗದ್ದುಗೆ ಏರಲು ಕಮಲ ತಯಾರಿ­

Team Udayavani, Sep 7, 2021, 1:37 PM IST

scSD

ಹುಬ್ಬಳ್ಳಿ: ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮಿಷನ್‌-60 ಎಂದು ಅಬ್ಬರಿಸಿದ್ದ ಬಿಜೆಪಿ 39ಕ್ಕೆ ನಿಂತಿದೆ, ನಾಯಕತ್ವಕೊರತೆಯ ಕಾಂಗ್ರೆಸ್‌ 33ಕ್ಕೆ ತಲುಪಿದೆ,ಸದ್ದುಗದ್ದಲವೇ ಇಲ್ಲದೆ ಎಐಎಂಐಎಂ3 ಸ್ಥಾನ ಗಳಿಸಿದೆ, ಕಳೆದ ಬಾರಿ 9 ಸ್ಥಾನಹೊಂದಿದ್ದ ಜೆಡಿಎಸ್‌ ಒಂದು ಸ್ಥಾನಕ್ಕಿಳಿದಿದೆ.

ಆಪ್‌ ಶೂನ್ಯ ಸಾಧನೆ ತೋರಿದ್ದು, ಆರು ಕಡೆಪಕ್ಷೇತರರು ಗೆಲುವಿನ ನಗೆ ಬೀರಿದ್ದಾರೆ.ಬಹುಮತಕ್ಕೆ ಮೂರು ಸ್ಥಾನಗಳ ಕೊರತೆಇದ್ದರೂ, ಶಾಸಕರು ಹಾಗೂ ಸಂಸದಮತಗಳಗೊಂದಿಗೆ ಬಿಜೆಪಿ ಸತತ ಮೂರನೇಬಾರಿಗೆ ಅಧಿಕಾರಕ್ಕೇರಲು ಯಾವುದೇ ಅಡ್ಡಿಇಲ್ಲ.

ಪಾಲಿಕೆ ಫಲಿತಾಂಶ ಪಕ್ಷಗಳಿಗೆ ಹಲವುಪಾಠಗಳನ್ನು ಕಲಿಸಿದೆ, ಎಚ್ಚರಿಕೆ ಸಂದೇಶರವಾನಿಸಿದೆ.ಪಾಲಿಕೆ ಚುನಾವಣೆಯಲ್ಲಿ ಟಿಕೆಟ್‌ಹಂಚಿಕೆ ಅಸಮಾಧಾನ, ಪಕ್ಷದೊಳಗಿನಒಳಪೆಟ್ಟುಗಳು ತಮ್ಮದೇ ರೀತಿಯಲ್ಲಿ ಕೆಲಸಮಾಡಿವೆ ಎಂಬುದಕ್ಕೆ ಪಾಲಿಕೆ ಫಲಿತಾಂಶಪುಷ್ಟಿ ನೀಡಿದೆ.

ಆರು ಕಡೆ ಪಕ್ಷೇತರರಗೆಲುವು ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳಿಗೆಹಲವು ರೀತಿಯ ಸಂದೇಶ ನೀಡಿವೆ. ಟಿಕೆಟ್‌ದೊರೆತಿಲ್ಲ ಎಂದು ಮುನಿಸಿಕೊಂಡುಬಂಡಾಯ ಸಾರಿ ಸ್ಪರ್ಧೆಗಿಳಿದವರಿಗೆಸಿಹಿ-ಕಹಿ ಫಲಿತಾಂಶ ಲಭ್ಯವಾಗಿದೆ. ನಾವುಎಡವಿದ್ದೆಲ್ಲಿ ಎಂದು ಪಕ್ಷಗಳ ನಾಯಕರುಆತ್ಮಾವಲೋಕನಕ್ಕಿಳಿಯುವಂತೆ ಮಾಡಿದೆ.

ಮಿಷನ್‌-60 ನಲವತ್ತಕ್ಕೂ ತಲುಪಲಿಲ್ಲ:ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯೊಂದಿಗೆಮುಂದಡಿ ಇರಿಸಿದ್ದ ಬಿಜೆಪಿ ಮಿಷನ್‌-60ಎಂಬ ಘೋಷಣೆಯೊಂದಿಗೆ ಚುನಾವಣೆಎದುರಿಸಿತ್ತು. ಪಕ್ಷದ ನಾಯಕರು,ಮುಖಂಡರು ಪಕ್ಷ 60ಕ್ಕೂ ಹೆಚ್ಚುಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದೇಹೇಳಿದ್ದರು. ಆದರೆ, ಬಿಜೆಪಿಯವರಆಶಯಕ್ಕೆ ತಕ್ಕಂತೆ ಮತದಾರ ಮನಸ್ಸುಮಾಡಿಲ್ಲ. ಗುಪ್ತಚರ ಇಲಾಖೆ ಪ್ರಕಾರಬಿಜೆಪಿ ಪಾಲಿಕೆಯಲ್ಲಿ 37-38 ಸ್ಥಾನಗಳನ್ನುಗಳಿಸಬಹುದು ಎಂಬುದಾಗಿತ್ತು.

ಪಕ್ಷದ ಕೆಳಹಂತದ ಮುಖಂಡರು ಸಹ 35-40ಸ್ಥಾನಗಳಿಗೆ ತಲುಪಬಹುದು ಎಂಬ ಅನಿಸಿಕೆ ವ್ಯಕ್ತಪಡಿಸುತ್ತಿದ್ದರು.2013ರ ಪಾಲಿಕೆ ಚುನಾವಣೆಯಲ್ಲಿಬಿಜೆಪಿ 45 ಸ್ಥಾನಗಳ ಗೆಲುವು ಖಚಿತಎಂಬ ಅಬ್ಬರದ ಪ್ರಚಾರ ನಡೆಸಿತ್ತಾದರೂಅಂತಿಮವಾಗಿ 33 ಸ್ಥಾನಗಳನ್ನು ಗಳಿಸುವಲ್ಲಿಯಶಸ್ವಿಯಾಗಿತ್ತು.

ಅಲ್ಲಿಗೆ ನಿರೀಕ್ಷೆಗಿಂತ12 ಸ್ಥಾನಗಳ ಕೊರತೆ ಅನುಭವಿಸಿತ್ತು.2021ರಲ್ಲಿಯೂ 60 ಸ್ಥಾನ ಗೆಲ್ಲುತ್ತೇವೆಂದುಹೇಳಿಕೊಳ್ಳುತ್ತಿದ್ದರೂ ನಿರೀಕ್ಷೆಗಿಂತ 21 ಸ್ಥಾನಕಡಿಮೆ ಬಂದಿದೆ.ಬಿಜೆಪಿ ಸ್ಮಾರ್ಟ್‌ಸಿಟಿ ಯೋಜನೆಯಕಾಮಗಾರಿ,ಫ್ಲೆ çಓವರ್‌ನಿರ್ಮಾಣ,ರಸ್ತೆಗಳಅಭಿವೃದ್ಧಿ, ಪ್ರತಿ ಮನೆಗೂ ಕುಡಿಯುವನೀರಿನ ಯೋಜನೆ ಹೀಗೆ ವಿವಿಧ ಅಭಿವೃದ್ಧಿಯೋಜನೆಗಳ ವಿಷಯಗಳನ್ನು ಪ್ರಸ್ತಾಪಿಸಿತ್ತು.

ಪಾಲಿಕೆ ಚುನಾವಣೆ ಘೋಷಣೆ ಹಂತಹಾಗೂ ಮತದಾನಕ್ಕೆ ಕೆಲವೇ ದಿನಗಳುಇವೆ ಎನ್ನುವಾಗಲೇ ಕೆಲವೊಂದುರಸ್ತೆಗಳ ದುರಸ್ತಿ, ಫ್ಲೆ çಓವರ್‌ ನಿರ್ಮಾಣಆರಂಭಿಸುತ್ತೇವೆಂದು ನೆಲ ಅಗೆಯುವಿಕೆಇನ್ನಿತರ ಎಲ್ಲ ಕಾರ್ಯಗಳನ್ನು ಕೈಗೊಂಡಿತ್ತು.ಪಕ್ಷದ ರಾಜ್ಯಾಧ್ಯಕ್ಷ, ಹಲವು ಸಚಿವರು,ಕೇಂದ್ರ ಸಚಿವರು, ಮಾಜಿ ಮುಖ್ಯಮಂತ್ರಿ,ಪಕ್ಷದ ನಾಯಕರು, ಪದಾಧಿಕಾರಿಗಳು ಮನೆಮನೆ ಪ್ರಚಾರ ಕೈಗೊಂಡಿದ್ದರು.

ಇಷ್ಟೆಲ್ಲ ಸರ್ಕಸ್‌ ನಡುವೆಯೂ ಫಲಿತಾಂಶ ನಿರೀಕ್ಷಿತ ರೀತಿಯಲ್ಲಿ ದೊರೆಯಲಿಲ್ಲಯಾಕೆ ಎಂಬ ಆತ್ಮಾವಲೋಕನಕ್ಕೆ ಬಿಜೆಪಿ ಇಳಿಯಬೇಕಾಗಿದೆ. ಮತ್ತೂಂದೆಡೆಕಾಂಗ್ರೆಸ್‌ ಅಧಿಕಾರ ಹಿಡಿಯದಿದ್ದರೂ ಸ್ಥಾನ ಗಳಿಕೆಯಲ್ಲಿ ನೆಗೆತ ಕಂಡಿರುವುದು ಬಿಜೆಪಿಯನ್ನು ಚಿಂತೆಗೀಡು ಮಾಡಿದೆ.

ಅಮರೇಗೌಡ ಗೋನವಾ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.