ಇಲ್ಲದ ಗ್ರಂಥಾಲಯಕ್ಕೆ ವಾರ್ಷಿಕ 10 ಲಕ್ಷ ರೂ. ತೆರಿಗೆ ಪಾವತಿ!

ಕೂಡಲೇ ಕಾಂಕ್ರಿಟ್‌ ರಸ್ತೆ ಸ್ಥಗಿತಗೊಳಿಸಿ ಡಾಂಬರೀಕರಣಕ್ಕೆ ಮುಂದಾಗಬೇಕು

Team Udayavani, May 19, 2022, 5:06 PM IST

ಇಲ್ಲದ ಗ್ರಂಥಾಲಯಕ್ಕೆ ವಾರ್ಷಿಕ 10 ಲಕ್ಷ ರೂ. ತೆರಿಗೆ ಪಾವತಿ!

ವಾಡಿ: ಕಳೆದ 20 ವರ್ಷಗಳಿಂದ ಪುರಸಭೆ ಆಡಳಿತ ಸಾರ್ವಜನಿಕರಿಗೆ ಗ್ರಂಥಾಲಯ ಸೌಲಭ್ಯ ಒದಗಿಸದೇ ಸರ್ಕಾರಕ್ಕೆ ನಿರಂತರವಾಗಿ ವಾರ್ಷಿಕ 10 ಲಕ್ಷ ರೂ. ತೆರಿಗೆ ಪಾವತಿಸುತ್ತಿದೆ. ಪ್ರಸಕ್ತ ಸಾಲಿನಲ್ಲೂ ಹತ್ತು ಲಕ್ಷ ರೂ. ತೆರಿಗೆ ಪಾವತಿಗಾಗಿ ಪುರಸಭೆ ನಿಧಿಯಲ್ಲಿ ಹಣ ತೆಗೆದಿರಿಸಲಾಗಿದೆ.

ಬುಧವಾರ ಪುರಸಭೆಯಲ್ಲಿ ನಡೆದ 2022/ 23ನೇ ಸಾಲಿನ ಪುರಸಭೆ ಅನುದಾನ 283.15 ಲಕ್ಷ ರೂ., ಎಸ್‌ಎಫ್‌ಸಿ ಅನುದಾನ 99 ಲಕ್ಷ ರೂ. ಹಾಗೂ 15ನೇ ಹಣಕಾಸಿನ 252 ಲಕ್ಷ ರೂ. ಸೇರಿದಂತೆ ಒಟ್ಟು 6.34 ಕೋಟಿ ರೂ. ಅನುದಾನಕ್ಕೆ ಕ್ರಿಯಾಯೋಜನೆ ಸಿದ್ಧಪಡಿಸುವ ಸಭೆಯಲ್ಲಿ ಗ್ರಂಥಾಲಯ ತೆರಿಗೆ ಪಾವತಿ ಚರ್ಚೆಗೆ ಬಂದು ಬಿಜೆಪಿ ಸದಸ್ಯರ ಆಕ್ರೋಶ ಕಾರಣವಾಯಿತು.

ಗ್ರಂಥಾಲಯವೇ ಇಲ್ಲ ತೆರಿಗೆ ಏಕೆ?: ಸರ್ಕಾರಕ್ಕೆ ತೆರಿಗೆ ಕೊಡುತ್ತೀರಿ ಎಂದಾದರೇ ಗ್ರಂಥಾಲಯ ಸೌಲಭ್ಯ ಏಕಿಲ್ಲ ಎಂದು ಬಿಜೆಪಿ ಸದಸ್ಯ, ಪ್ರತಿಪಕ್ಷದ ನಾಯಕ ಭೀಮಶಾ ಜಿರೊಳ್ಳಿ, ವೀರಣ್ಣ ಯಾರಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಗ್ರಂಥಾಲಯ ಇರಲಿ ಬಿಡಲಿ ಪ್ರತಿವರ್ಷ  ಸರ್ಕಾರಕ್ಕೆ ತೆರಿಗೆ ಕಟ್ಟಲೇಬೇಕು ಎಂದು ಮುಖ್ಯಾಧಿಕಾರಿ ಕಾಶೀನಾಥ ಧನ್ನಿ ಉತ್ತರಿಸಿ ಪೇಚಿಗೆ ಸಿಲುಕಿದರು.

ಕುಡಿಯುವ ನೀರಿನ ನಿರ್ವಹಣೆಗೆ ಪ್ರತಿವರ್ಷ ಹತ್ತು ಲಕ್ಷಾಂತರ ರೂ. ಖರ್ಚು ಮಾಡಲಾಗುತ್ತಿದೆ. ಆದರೂ ಜನರಿಗೆ ಶುದ್ಧ ನೀರು ಸಿಗುತ್ತಿಲ್ಲ. ನೀರು ಶುದ್ಧೀಕರಣ ಘಟಕದಲ್ಲಿ ಬ್ಲೀಚಿಂಗ್‌ ಪೌಡರ್‌, ಪಿಒಸಿ ಪೌಡರ್‌ ಮತ್ತು ಆಲಂ ಸೇರಿದಂತೆ ಇತರ ಬಳಕೆ ದಾಸ್ತಾನು ಖರೀದಿಸದೆ ಹಣ ಲೂಟಿ ಮಾಡಲಾಗುತ್ತಿದೆ. ನೀರಿನಲ್ಲಿ ಮಿಶ್ರಣ ಮಾಡುವ ರಸಾಯನಿಕ ಬಳಕೆ ಕುರಿತು ಸಿಬ್ಬಂದಿಗೆ ತರಬೇತಿಯಿಲ್ಲ. ಕಲುಷಿತ ನೀರು ಕುಡಿದು ಜನರಿಗೆ ತೊಂದರೆಯಾದರೆ ಪುರಸಭೆಯೇ
ಹೊಣೆ ಎಂದು ಬಿಜೆಪಿಯ ಕಿಶನ್‌ ಜಧವ, ವೀರಣ್ಣ ಯಾರಿ ಎಚ್ಚರಿಕೆ ನೀಡಿದರು. ಇದೇ ವೇಳೆ ಜೆಇ ಅಶೋಕ ಪುಟ್‌ಪಾಕ್‌ ಹಾಗೂ ಬಿಜೆಪಿ ಸದಸ್ಯರ ನಡುವೆ ಮಾತಿನ ವಾಗ್ವಾದ ನಡೆಯಿತು.

ಮುಖ್ಯರಸ್ತೆ ಅಭಿವೃದ್ಧಿ ಅವೈಜ್ಞಾನಿಕ: ಪಟ್ಟಣದಲ್ಲಿ ನಿರ್ಮಿಸಲಾಗುತ್ತಿರುವ ಮುಖ್ಯ ರಸ್ತೆ ಕಾಮಗಾರಿ ಅವೈಜ್ಞಾನಿಕವಾಗಿದೆ. ಕೆಳಗಡೆ ಉತ್ತಮ ಸಿಸಿ ರಸ್ತೆಯಿದ್ದರೂ ಮತ್ತಷ್ಟು ಎತ್ತರದ ಸಿಸಿ ರಸ್ತೆ ನಿರ್ಮಿಸುತ್ತಿರುವುದು ಯಾವ ಕಾರಣಕ್ಕಾಗಿ ಎಂದು ಬಿಜೆಪಿ ಸದಸ್ಯರು ಪ್ರಶ್ನಿಸಿದರು. ಅಭಿವೃದ್ಧಿ ಹೆಸರಿನಲ್ಲಿ ಕೋಟಿಗಟ್ಟಲೇ ಹಣ ಲಪಟಾಯಿಸುವ ಹುನ್ನಾರ ಅಡಗಿದೆ. ಕೂಡಲೇ ಕಾಂಕ್ರಿಟ್‌ ರಸ್ತೆ ಸ್ಥಗಿತಗೊಳಿಸಿ ಡಾಂಬರೀಕರಣಕ್ಕೆ ಮುಂದಾಗಬೇಕು. ರಸ್ತೆಯುದ್ದಕ್ಕೂ ಹಾಕಲಾಗಿರುವ ಜಲ್ಲಿಕಲ್ಲು, ಮರಳಿನ ರಾಶಿ ಸ್ಥಳಾಂತರಿಸಬೇಕು. ಗುತ್ತಿಗೆದಾರನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಾಧಿಕಾರಿಯನ್ನು ಆಗ್ರಹಿಸಿದರು.

ಪಟ್ಟಣಕ್ಕೆ ಮಂಜೂರಾಗಿದ್ದ ವಿವಿಧ ವೃತ್ತಗಳ ಐದು ಮಿನಿ ಬಸ್‌ ನಿಲ್ದಾಣಗಳನ್ನು ಸ್ಥಾಪಿಸಲು ಕಾಂಗ್ರೆಸ್‌ ಕಾರ್ಯಕರ್ತರೇ ಅಡ್ಡಿಪಡಿಸಿದ್ದಾರೆ ಎಂದು ಗೊತ್ತಾಗಿದೆ. ಶಾಸಕ ಪ್ರಿಯಾಂಕ್‌ ಖರ್ಗೆ ನಾನು ಅಭಿವೃದ್ಧಿಪರ ಎನ್ನುತ್ತಾರೆ. ಆದರೆ ಪುರಸಭೆಯಲ್ಲಿ ಕಾಂಗ್ರೆಸ್‌ ಸದಸ್ಯರೇ ಬಸ್‌ ನಿಲ್ದಾಣ ಅಭಿವೃದ್ಧಿ ವಿರೋ ಧಿಸಿದ್ದಾರೆ ಎಂದು ಬಿಜೆಪಿಯ ವೀರಣ್ಣ ಯಾರಿ ವ್ಯಂಗ್ಯವಾಡಿದರು.

ಪುರಸಭೆ ಅಧ್ಯಕ್ಷೆ ಝರೀನಾಬೇಗಂ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ದೇವಿಂದ್ರ ಕರದಳ್ಳಿ, ಮುಖ್ಯಾಧಿ ಕಾರಿ ಕಾಶೀನಾಥ ಧನ್ನಿ, ಸಮುದಾಯ ಸಂಘಟನಾ ಧಿಕಾರಿ ಚಂದ್ರಕಾಂತ ಪಾಟೀಲ, ಕಂದಾಯ ಅಧಿಕಾರಿ ಎ.ಪಂಕಜಾ, ಹಿರಿಯ ಆರೋಗ್ಯ ನೈರ್ಮಲ್ಯ ನಿರೀಕ್ಷಕಿ ಲತಾಮಣಿ, ಲೆಕ್ಕಾಧಿಕಾರಿ ಕೆ.ವಿರೂಪಾಕ್ಷಿ, ನೂಡಲ್‌ ಅಭಿಯಂತರ ಮನೋಜಕುಮಾರ ಹಿರೋಳಿ, ಮಲ್ಲಿಕಾರ್ಜುನ ಯಳಸಂಗಿ, ಬಸವರಾಜ ಪೂಜಾರಿ, ಕಾಂಗ್ರೆಸ್‌ನ ಮಲ್ಲಯ್ಯ ಗುತ್ತೇದಾರ, ಶರಣು ನಾಟೇಕರ, ಮಹ್ಮದ್‌ ಗೌಸ್‌, ಮೈನಾಬಾಯಿ ರಾಠೊಡ, ಸುಗಂದಾ ಜೈಗಂಗಾ, ಗುಜ್ಜಾಬಾಯಿ ಸಿಂಗೆ, ಅಫ್ಸರಾಬೇಗಂ, ಬಿಜೆಪಿಯ ಭೀಮರಾಯ ನಾಯ್ಕೋಡಿ,
ರವಿ ಜಾಧವ ಪಾಲ್ಗೊಂಡಿದ್ದರು. ವ್ಯವಸ್ಥಾಪಕ ಮಲ್ಲಿಕಾರ್ಜುನ ಹಾರಕೂಡ ಕ್ರಿಯಾಯೋಜನೆ ಮಂಡಿಸಿದರು.

ಟಾಪ್ ನ್ಯೂಸ್

3baby

ಮಧುಗಿರಿ: ಚರಂಡಿ ಬಳಿ ನವಜಾತ ಶಿಶು ಪತ್ತೆ

2sulya1

ಸುಳ್ಯ, ಕೊಡಗಿನ ಕೆಲವೆಡೆ ಭಾರಿ ಶಬ್ದದೊಂದಿಗೆ ಭೂಕಂಪನ

ಅನ್ಯಪಕ್ಷ ಅಧಿಕಾರದಲ್ಲಿರುವುದು ಬಿಜೆಪಿಗೆ ಅಪಥ್ಯ: ವಾರ್ಡ್ ವಿಂಗಡಣೆ ವಿರುದ್ಧ ಎಚ್ ಡಿಕೆ ಗರಂ

ಅನ್ಯಪಕ್ಷ ಅಧಿಕಾರದಲ್ಲಿರುವುದು ಬಿಜೆಪಿಗೆ ಅಪಥ್ಯ: ವಾರ್ಡ್ ವಿಂಗಡಣೆ ವಿರುದ್ಧ ಎಚ್ ಡಿಕೆ ಗರಂ

26/11 ಮುಂಬೈ ದಾಳಿಯ ಪ್ರಾಜೆಕ್ಟ್ ಮ್ಯಾನೇಜರ್ ಗೆ 15 ವರ್ಷ ಜೈಲು ಶಿಕ್ಷೆ ವಿಧಿಸಿದ ಪಾಕಿಸ್ಥಾನ

26/11 ಮುಂಬೈ ದಾಳಿಯ ಪ್ರಾಜೆಕ್ಟ್ ಮ್ಯಾನೇಜರ್ ಗೆ 15 ವರ್ಷ ಜೈಲು ಶಿಕ್ಷೆ ವಿಧಿಸಿದ ಪಾಕಿಸ್ಥಾನ

‘ಹರಿಕಥೆ ಅಲ್ಲ ಗಿರಿಕಥೆ’ ಚಿತ್ರವಿಮರ್ಶೆ: ಸಿನಿ ಕನಸಿನ ಹುಡುಗರ ಜಾಲಿರೈಡ್‌

‘ಹರಿಕಥೆ ಅಲ್ಲ ಗಿರಿಕಥೆ’ ಚಿತ್ರವಿಮರ್ಶೆ: ಸಿನಿ ಕನಸಿನ ಹುಡುಗರ ಜಾಲಿರೈಡ್‌

ಹೋಗುವವರು ಹೋಗಿ.. ನಾನು ಹೊಸ ಶಿವಸೇನೆ ರಚಿಸುತ್ತೇನೆ: ಉದ್ಧವ್ ಠಾಕ್ರೆ

ಹೋಗುವವರು ಹೋಗಿ.. ನಾನು ಹೊಸ ಶಿವಸೇನೆ ರಚಿಸುತ್ತೇನೆ: ಉದ್ಧವ್ ಠಾಕ್ರೆ

ಕುಡುಪು ದೇಗುಲಕ್ಕೆ ಬಾಳೆಹಣ್ಣು ಪೂರೈಕೆ ವಿಚಾರದಲ್ಲಿ ವಿವಾದ

ಕುಡುಪು ದೇಗುಲಕ್ಕೆ ಬಾಳೆಹಣ್ಣು ಪೂರೈಕೆ ವಿಚಾರದಲ್ಲಿ ವಿವಾದಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1law

ಕಿಡಿಗೇಡಿಗಳ ಬಂಧನಕ್ಕೆ ಯುವ ವೇದಿಕೆ ಆಗ್ರಹ

16bus

ಗ್ರಾಮಗಳಿಗೆ ಬಸ್‌ ಸೌಲಭ್ಯ ಕಲ್ಪಿಸಿ: ಪ್ರಿಯಾಂಕ್‌

15appeal

ಹಕ್ಕುಪತ್ರ ವಿತರಿಸಲು ಮನವಿ

14sp

ರೌಡಿ ಶೀಟರ್‌ಗಳಿಗೆ ಎಸ್‌ಪಿ ಖಡಕ್‌ ಎಚ್ಚರಿಕೆ

13miss-conduct

ಜಯತೀರ್ಥರ ಮೂಲವೃಂದಾವನ ಅಪಪ್ರಚಾರ ನಿಲ್ಲಿಸಿ

MUST WATCH

udayavani youtube

ಗೃಹ ಪ್ರವೇಶ ಸಂದರ್ಭ ಅವಾಂತರ |ಮಂಗಳಮುಖಿಯರ ರಂಪಾಟ

udayavani youtube

ಕಿನ್ನಿಗೋಳಿ :ಪತ್ನಿ ಸೇರಿ ಮೂವರು ಮಕ್ಕಳನ್ನು ಬಾವಿಗೆ ತಳ್ಳಿ ತಾನೂ ಆತ್ಮಹತ್ಯೆ ಯತ್ನಿಸಿದ ಪತಿ

udayavani youtube

ನೀವು ಬಿಜೆಪಿಗೆ ಸೇರಿ, ನಾವು ಶಿವಸೇನೆಯನ್ನು ಮತ್ತೆ ಕಟ್ಟುತ್ತೇವೆ : ರಾವತ್

udayavani youtube

13,940 ಮೊಳೆಗಳಲ್ಲಿ ಕಲಾಕೃತಿ : India Book of Records ಗೆ ದಾಖಲಾದ ಕಾಪುವಿನ ಶಶಾಂಕ್

udayavani youtube

ಮನುಷ್ಯನ ಮನಸ್ಸು ಒಂದೇ ರೀತಿ ಇರುವುದಿಲ್ಲ.. ಯಾಕೆ ?

ಹೊಸ ಸೇರ್ಪಡೆ

3baby

ಮಧುಗಿರಿ: ಚರಂಡಿ ಬಳಿ ನವಜಾತ ಶಿಶು ಪತ್ತೆ

ಟಗರು ಹಾಡಿಗೆ ಸ್ಟೆಪ್ ಹಾಕಿದ ಹುಬ್ಬಳ್ಳಿ-ಧಾರವಾಡ ಪಾಲಿಕೆ ಕಮಿಷನರ್

ಟಗರು ಹಾಡಿಗೆ ಸ್ಟೆಪ್ ಹಾಕಿದ ಹುಬ್ಬಳ್ಳಿ-ಧಾರವಾಡ ಪಾಲಿಕೆ ಕಮಿಷನರ್

2sulya1

ಸುಳ್ಯ, ಕೊಡಗಿನ ಕೆಲವೆಡೆ ಭಾರಿ ಶಬ್ದದೊಂದಿಗೆ ಭೂಕಂಪನ

ಸಾಲುಮರದ ತಿಮ್ಮಕ್ಕಗೆ ಬಿಡಿಎ ನಿವೇಶನ ಮಂಜೂರು ಮಾಡಿದ ಸಿಎಂ ಬೊಮ್ಮಾಯಿ

ಸಾಲುಮರದ ತಿಮ್ಮಕ್ಕಗೆ ಬಿಡಿಎ ನಿವೇಶನ ಮಂಜೂರು ಮಾಡಿದ ಸಿಎಂ ಬೊಮ್ಮಾಯಿ

1law

ಕಿಡಿಗೇಡಿಗಳ ಬಂಧನಕ್ಕೆ ಯುವ ವೇದಿಕೆ ಆಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.