ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳಕ್ಕೆ ಕ್ರಮ: ಡಾ| ಅಜಯಸಿಂಗ್‌

Team Udayavani, Jan 25, 2022, 12:23 PM IST

11sslc

ಜೇವರ್ಗಿ: ತಾಲೂಕಿನ ಎಲ್ಲ ಸರಕಾರಿ ಪ್ರೌಢ ಶಾಲೆಗಳಲ್ಲಿ ಪ್ರಸಕ್ತ ವರ್ಷ ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ವಿಧಾನಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕ, ಶಾಸಕ ಡಾ| ಅಜಯಸಿಂಗ್‌ ಹೇಳಿದರು.

ಪಟ್ಟಣದ ಮಿನಿ ವಿಧಾನಸೌಧದಲ್ಲಿ ಸೋಮವಾರ ನಡೆದ ಕರ್ನಾಟಕ ಅಭಿವೃದ್ಧಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕ್ಷೇತ್ರದಲ್ಲಿ ಶೈಕ್ಷಣಿಕ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಲಾಗುತ್ತಿದ್ದು, ಧರ್ಮಸಿಂಗ್‌ ಫೌಂಡೇಶನ್‌ ವತಿಯಿಂದ ಅಕ್ಷರ ಆವಿಷ್ಕಾರ ಯೋಜನೆ ಅಡಿ 4,500 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಅನೂಕೂಲವಾಗುವಂತಹ ಪುಸ್ತಕಗಳನ್ನು ವಿತರಿಸಲಾಗುವುದು. ಇಡೀ ಕಲಬುರಗಿ ಜಿಲ್ಲೆಯಲ್ಲಿಯೇ ಜೇವರ್ಗಿ ತಾಲೂಕಿನ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಪ್ರಥಮ ಸ್ಥಾನದಲ್ಲಿರುವಂತೆ ನೋಡಿಕೊಳ್ಳುವುದು ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಶಿಕ್ಷಕರ ಮೇಲಿದೆ ಎಂದು ಹೇಳಿದರು.

ತಾಲೂಕಿನಲ್ಲಿ ಶಾಲಾ, ಕೋಣೆಗಳ ನಿರ್ಮಾಣಕ್ಕೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ರೂ.5 ಕೋಟಿ ಅನುದಾನ ಬಿಡುಗಡೆಗೊಳಿಸಲಾಗಿದ್ದು, ಶಾಲಾ ಕೋಣೆಗಳ ನಿರ್ಮಾಣ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ ಎಂದರು.

ಪ್ರಸಕ್ತ ಸಾಲಿನಲ್ಲಿ ಅತಿವೃಷ್ಟಿಯಿಂದ ಮುಂಗಾರು ಮತ್ತು ಹಿಂಗಾರು ಬೆಳೆಗಳು ಹಾನಿಗೀಡಾಗಿವೆ. ಒಟ್ಟಾರೆ ಜೇವರ್ಗಿ ತಾಲೂಕಿನಲ್ಲಿ 28,925 ಜನ ರೈತರು ಬೆಳೆ ಹಾನಿ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅವರಲ್ಲಿ 25,995 ಜನ ರೈತರ ಬ್ಯಾಂಕ್‌ ಖಾತೆಗಳಿಗೆ ಬೆಳೆ ಹಾನಿ ಪರಿಹಾರ ಜಮೆ ಮಾಡಲಾಗಿದೆ. ಉಳಿದ ರೈತ ಖಾತೆಗಳಿಗೆ ಪರಿಹಾರ ಧನ ಜಮೆ ಮಾಡಬೇಕಾಗಿದೆ. ನಂತರ ಲೋಕೋಪಯೋಗಿ ಇಲಾಖೆ, ಪಂಚಾಯಿತಿರಾಜ್‌ ಇಲಾಖೆ, ಕರ್ನಾಟಕ ಮೂಲ ಸೌಕರ್ಯ ಅಭಿವೃದ್ಧಿ ನಿಗಮ, ಶಿಶು ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು.

ಸಭೆಯಲ್ಲಿ ವಿಧಾನ ಪರಿಷತ್‌ ಸದಸ್ಯ ಬಿ.ಜಿ.ಪಾಟೀಲ, ತಹಶೀಲ್ದಾರ್‌ ವಿನಯಕುಮಾರ ಪಾಟೀಲ, ಯಡ್ರಾಮಿ ತಹಶೀಲ್ದಾರ್‌ ಶಾಂತಗೌಡ ಬಿರಾದಾರ, ತಾಲೂಕು ಆರೋಗ್ಯಾಧಿಕಾರಿ ಸಿದ್ದು ಪಾಟೀಲ, ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಯ್ಯ ಇನಾಮದಾರ, ಸಿಡಿಪಿಒ ಸಂಗನಗೌಡ ಪಾಟೀಲ ಗುಂದಗಿ, ಯಡ್ರಾಮಿ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಧನರಾಜ್‌ ಬೋರಾಳೆ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಅಶೋಕ ನಾಯಕ, ಲೋಕೋಪಯೋಗಿ ಇಲಾಖೆ ಎ.ಇ.ಇ ಮುರಳಿಧರರಾವ ಹಂಚಾಟೆ, ಪಂಚಾಯತ್‌ರಾಜ್‌ ಇಲಾಖೆಯ ಸಹಾಯಕ ಎಂಜಿನಿಯರ್‌ ಭೀಮರಾವ್‌ ಪಾಟೀಲ ನೇದಲಗಿ ಸೇರಿದಂತೆ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡಿದ್ದರು.

ಟಾಪ್ ನ್ಯೂಸ್

ಅಪಘಾತದಲ್ಲಿ ಗಾಯಗೊಂಡಿದ್ದ ನಿವೃತ್ತ ಲೆಕ್ಕಪತ್ರ ಪರಿಶೋಧಕ ಸಾವು

ಅಪಘಾತದಲ್ಲಿ ಗಾಯಗೊಂಡಿದ್ದ ನಿವೃತ್ತ ಲೆಕ್ಕಪತ್ರ ಪರಿಶೋಧಕ ಸಾವು

ಗಾಂಜಾ ಸೇವನೆ ಪ್ರಕರಣ: ಆರು ಮಂದಿ ಪೊಲೀಸರ ವಶಕ್ಕೆ

ಗಾಂಜಾ ಸೇವನೆ ಪ್ರಕರಣ: ಆರು ಮಂದಿ ಪೊಲೀಸರ ವಶಕ್ಕೆ

ಚರಂಡಿಗೆ ವಾಲಿದ ಕಂಟೈನರ್‌ ವಾಹನ: 3 ತಾಸು ಸಂಚಾರ ತಡೆ

ಚರಂಡಿಗೆ ವಾಲಿದ ಕಂಟೈನರ್‌ ವಾಹನ: 3 ತಾಸು ಸಂಚಾರ ತಡೆ

ವರದಕ್ಷಿಣೆ ಕಿರುಕುಳ ಪ್ರಕರಣ: ದೂರು ರದ್ದುಗೊಳಿಸಿದ ಹೈಕೋರ್ಟ್‌

ವರದಕ್ಷಿಣೆ ಕಿರುಕುಳ ಪ್ರಕರಣ: ದೂರು ರದ್ದುಗೊಳಿಸಿದ ಹೈಕೋರ್ಟ್‌

arrested

ಶ್ರೀನಗರ : ಐವರು ಹೈಬ್ರಿಡ್‌ ಉಗ್ರರ ಬಂಧನ

ಅಹಿಂಸಾ ಮಾರ್ಗ ಅನುಸರಿಸಿ: ರಾಜ್ಯಪಾಲ ಗೆಹ್ಲೋಟ್

ಅಹಿಂಸಾ ಮಾರ್ಗ ಅನುಸರಿಸಿ: ರಾಜ್ಯಪಾಲ ಗೆಹ್ಲೋಟ್

ವನಿತಾ ಟಿ20 ಚಾಲೆಂಜರ್‌ ಸರಣಿ: ಸೂಪರ್‌ ನೋವಾ ಸೂಪರ್‌ ಬ್ಯಾಟಿಂಗ್‌

ವನಿತಾ ಟಿ20 ಚಾಲೆಂಜರ್‌ ಸರಣಿ: ಸೂಪರ್‌ ನೋವಾ ಸೂಪರ್‌ ಬ್ಯಾಟಿಂಗ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಾಡಿ: ವಾರದಲ್ಲಿ ಪಹಣಿ ದೋಷ ಸರಿಪಡಿಸುವ ಡಿಸಿ ಭರವಸೆ ತಿಂಗಳು ದಾಟಿದರೂ ಈಡೇರಲಿಲ್ಲ

ವಾಡಿ: ವಾರದಲ್ಲಿ ಪಹಣಿ ದೋಷ ಸರಿಪಡಿಸುವ ಡಿಸಿ ಭರವಸೆ ತಿಂಗಳು ದಾಟಿದರೂ ಈಡೇರಲಿಲ್ಲ

ನ್ಯಾಯಾಲಯದ ಆದೇಶ ಪಾಲಿಸಿ:ಶಿವಪ್ರಸಾದ ಮಠದ್‌

ನ್ಯಾಯಾಲಯದ ಆದೇಶ ಪಾಲಿಸಿ: ಶಿವಪ್ರಸಾದ ಮಠದ್‌

ಅಕ್ರಮ ಚಟುವಟಿಕೆ ನಡೆದರೆ ತಿಳಿಸಿ; ಪೊಲೀಸ್‌ ವರಿಷ್ಠಾಧಿಕಾರಿ ಇಶಾ ಪಂತ್‌

ಅಕ್ರಮ ಚಟುವಟಿಕೆ ನಡೆದರೆ ತಿಳಿಸಿ; ಪೊಲೀಸ್‌ ವರಿಷ್ಠಾಧಿಕಾರಿ ಇಶಾ ಪಂತ್‌

23marrige

ಮದುವೆಗೆ ಬಂದು ಅಕ್ಷತೆ ಹಾಕಿದವರಿಗೆ ಪುಸ್ತಕ-ಸಸಿ ಕೊಟ್ಟ ಮದುಮಗ

5ride

ಅಕ್ರಮ ಮದ್ಯ ಸಾಗಾಟ: ಅಬಕಾರಿ ದಾಳಿ

MUST WATCH

udayavani youtube

ಶಿರೂರು ಆಳ ಸಮುದ್ರದಲ್ಲಿ‌ ಮುಳುಗಿದ ಮೀನುಗಾರಿಕಾ ದೋಣಿ

udayavani youtube

ಉಡುಪಿಯಲ್ಲಿ ‘ ಮಾವಿನ ಮೇಳ ‘ | ನಾಳೆ ( may 23) ಕೊನೇ ದಿನ

udayavani youtube

ಶಿರ್ವ : ನೂತನ ಹೈಟೆಕ್‌ ಬಸ್ಸು ನಿಲ್ದಾಣ ಲೋಕಾರ್ಪಣೆ

udayavani youtube

ಬೆಳ್ತಂಗಡಿಯಲ್ಲೊಂದು ಗೋಡಂಬಿಯಾಕಾರದ ಮೊಟ್ಟೆ ಇಡುವ ಕೋಳಿ..

udayavani youtube

ಆಗ ನಿಮ್ಮಲ್ಲಿ 2 ಆಯ್ಕೆಗಳಿರುತ್ತವೆ .. ಅದೇನಂದ್ರೆ..

ಹೊಸ ಸೇರ್ಪಡೆ

ಅಪಘಾತದಲ್ಲಿ ಗಾಯಗೊಂಡಿದ್ದ ನಿವೃತ್ತ ಲೆಕ್ಕಪತ್ರ ಪರಿಶೋಧಕ ಸಾವು

ಅಪಘಾತದಲ್ಲಿ ಗಾಯಗೊಂಡಿದ್ದ ನಿವೃತ್ತ ಲೆಕ್ಕಪತ್ರ ಪರಿಶೋಧಕ ಸಾವು

ಗಾಂಜಾ ಸೇವನೆ ಪ್ರಕರಣ: ಆರು ಮಂದಿ ಪೊಲೀಸರ ವಶಕ್ಕೆ

ಗಾಂಜಾ ಸೇವನೆ ಪ್ರಕರಣ: ಆರು ಮಂದಿ ಪೊಲೀಸರ ವಶಕ್ಕೆ

ಚರಂಡಿಗೆ ವಾಲಿದ ಕಂಟೈನರ್‌ ವಾಹನ: 3 ತಾಸು ಸಂಚಾರ ತಡೆ

ಚರಂಡಿಗೆ ವಾಲಿದ ಕಂಟೈನರ್‌ ವಾಹನ: 3 ತಾಸು ಸಂಚಾರ ತಡೆ

ವರದಕ್ಷಿಣೆ ಕಿರುಕುಳ ಪ್ರಕರಣ: ದೂರು ರದ್ದುಗೊಳಿಸಿದ ಹೈಕೋರ್ಟ್‌

ವರದಕ್ಷಿಣೆ ಕಿರುಕುಳ ಪ್ರಕರಣ: ದೂರು ರದ್ದುಗೊಳಿಸಿದ ಹೈಕೋರ್ಟ್‌

arrested

ಶ್ರೀನಗರ : ಐವರು ಹೈಬ್ರಿಡ್‌ ಉಗ್ರರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.