ಪೌಷ್ಟಿಕ ಆಹಾರ ಸೇವಿಸಿ ಆರೋಗ್ಯ ಕಾಪಾಡಿ: ನವೀನಕುಮಾರ
ತಾಯಂದಿರು ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಅವರು ಕರೆ ನೀಡಿದರು.
Team Udayavani, Oct 1, 2021, 5:45 PM IST
ಕಲಬುರಗಿ: ಮಕ್ಕಳು, ಗರ್ಭಿಣಿಯರು ಹಾಗೂ ತಾಯಂದಿರು ನೀಡುವ ಪೌಷ್ಟಿಕ ಆಹಾರ ಸೇವಿಸಿ ಮೂಲಕ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಯು.ನವೀನಕುಮಾರ ಹೇಳಿದರು.
ತಾಲೂಕಿನ ನಂದೂರು (ಕೆ) ಗ್ರಾಮದ ಅಂಗನವಾಡಿ ಕೇಂದ್ರ-2ರಲ್ಲಿ ಗ್ರಾಮೀಣ ಶಿಶು ಅಭಿವೃದ್ಧಿ ಯೋಜನಾಧಿ ಕಾರಿಗಳ ಕಚೇರಿಯಿಂದ ಹಮ್ಮಿಕೊಂಡಿದ್ದ ಪೋಷಣ್ ಮಾಸಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪೌಷ್ಟಿಕಾಂಶ ಭರಿತ ಹಣ್ಣು ಮತ್ತು ತರಕಾರಿಗಳ ಸೇವನೆಯಿಂದ ಗರ್ಭಿಣಿಯರು ಹಾಗೂ ಬಾಣಂತಿಯರು ಆರೋಗ್ಯ ಸುಧಾರಿಸಲಿದೆ.
ಜತೆಗೆ ಜನಿಸುವ ಮಕ್ಕಳಿಗೂ ಪೌಷ್ಟಿಕತೆಯಿಂದ ಕೂಡಿರಲಿದ್ದಾರೆ. ಜತೆಗೆ ಅಂಗನವಾಡಿ ಕೇಂದ್ರಗಳಲ್ಲಿ ಸರ್ಕಾರ ನೀಡುವ ಪೌಷ್ಟಿಕ ಆಹಾರವನ್ನು ಮಕ್ಕಳು, ಗರ್ಭಿಣಿಯರು ಹಾಗೂ ತಾಯಂದಿರು ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಅವರು ಕರೆ ನೀಡಿದರು.
ಗ್ರಾಮೀಣ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರವೀಣ ಹೇರೂರ ಮಾತನಾಡಿದರು. ಆರೋಗ್ಯ ಇಲಾಖೆಯ ಸಂತೋಷ ಮುಳಜಿ ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ನಂದೂರ (ಕೆ) ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೀತಾಬಾಯಿ, ಸದಸ್ಯ ಶಾಂತಕುಮಾರ, ಗ್ರಾಮೀಣ ಸಹಾಯಕ ಶಿಶು ಅಭಿವೃದ್ಧಿ ಯೋಜನಾ ಧಿಕಾರಿ ವಿಜಯಲಕ್ಷ್ಮೀ ಹೇರೂರ, ನಂದೂರ (ಬಿ) ವೈದ್ಯಾ ಧಿಕಾರಿ ಗಿರಿಜಾದೇವಿ, ಮುಖ್ಯಶಿಕ್ಷಕಿ ಚನ್ನಮ್ಮ, ಕಲ್ಲಹಂಗರಗಾ ವಲಯದ ಮೇಲ್ವಿಚಾರಕಿ ಶಾಂತಾ, ಸಿಓಎಫ್ ಸಂಸ್ಥೆಯ ಸಂಯೋಜಕ ಮಲ್ಲಿಕಾರ್ಜುನ ಬೊಯಿನ್, ಪೋಷಣ ಅಭಿಯಾನ ಸಂಯೋಜಕ ಶಿವಕುಮಾರ ಮಿಣಜಗಿ, ಹಿರಿಯ ಮೇಲ್ವಿಚಾರಕಿ ಲಕ್ಷ್ಮಿ ನ್ಯಾಮಗೌಡರ, ಮೇಲ್ವಿಚಾರಕಿ ಹೀನಾ ಅತ್ತರ ಇದ್ದರು.