ಅತಿವೃಷ್ಟಿ: ಮಣ್ಣು ಪಾಲಾದ ಮುಂಗಾರು ಬೆಳೆ: 5152 ಹೆಕ್ಟೇರ್‌ ಬೆಳೆ ನಷ್ಟ

ಹತ್ತಿ ಬೆಳೆ ನಷ್ಟದ ವರದಿ ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸಿದ್ದೇವೆ.

Team Udayavani, Aug 6, 2021, 4:58 PM IST

Bele

ವಾಡಿ: ಕಳೆದ ಎರಡು ವರ್ಷಗಳಿಂದ ನಿರಂತರ ಅತಿವೃಷ್ಟಿಗೆ ತುತ್ತಾಗುತ್ತಿರುವ ಮುಂಗಾರು ಬೆಳೆ, ಈ ವರ್ಷವೂ ಮಹಾ ಮಳೆಗೆ ಮುಗ್ಗರಿಸಿ ಮಣ್ಣು ಮುಕ್ಕಿದೆ. ಹವಮಾನ ವೈಪರಿತ್ಯದಿಂದ ವರ್ಷಧಾರೆ ಆರ್ಭಟಿಸಿದ್ದು, ಜಮೀನುಗಳು ತತ್ತರಿಸಿ ಬೆಳೆ ಸರ್ವನಾಶವಾಗಿದೆ. ಚಿತ್ತಾಪುರ ತಾಲೂಕಿನಾದ್ಯಂತ ಕೊಳೆತ ಹೆಸರು ಬೆಳೆಗಳದ್ದೇ ದರ್ಶನವಾಗುತ್ತಿದೆ. ವಾಡಿ, ನಾಲವಾರ, ಸನ್ನತಿ, ರಾವೂರ ವಲಯದಲ್ಲಿ ಭೂಮಿ ತೇವಾಂಶ ಅತಿಹೆಚ್ಚಳದಿಂದ ಹೆಸರು ಬೆಳೆಯ ಹಸಿರೆಲೆಗಳಿಗೆ ಹಳದಿ ರೋಗ ಬಾ ಧಿಸಿದ್ದು, ರೈತರನ್ನು ಚಿಂತೆಗೀಡು ಮಾಡಿದೆ.

ಕೆಸರಿನ ಹೂಳಿನಲ್ಲಿ ಕೊಳೆತು ಹಾಳಾದ ಫಸಲಿನಿಂದಾಗಿ ಇಳುವರಿಗೆ ಕುತ್ತು ಬಂದೆರೆಗಿದೆ. ನೀರು ಹೊತ್ತು ನಿಂತ ಹೊಲಗಳಲ್ಲಿನ ಹೆಸರು ಬೆಳೆಯ ಹಸಿರೆಲೆಗಳು ಹಳದಿ ಬಣ್ಣಕ್ಕೆ ಮರಳಿದ್ದು ಒಂದೆಡೆಯಾದರೆ, ಪ್ರವಾಹಕ್ಕೆ ಸಿಲುಕಿ ನರಳಿದ ಸಾವಿರಾರು ಎಕರೆ ಕೃಷಿ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿ ಹಸಿ ಬರದ ಛಾಯೆ ಮೂಡಿದೆ.

ಹೆಸರು ಬೆಳೆ ಕೃಷಿಗೆ ಕಡಿಮೆ ವೆಚ್ಚವಾದರೂ ಅಲ್ಪಾವಧಿಯಲ್ಲಿಯೇ ಹೆಚ್ಚು ಲಾಭ ತಂದುಕೊಡುವ ಬೆಳೆಯಾಗಿದ್ದರಿಂದ ಒಕ್ಕಲಿಗರು ಮುಂಗಾರು ಹಂಗಾಮಿನಲ್ಲಿ ಹೆಚ್ಚಿನ ಪ್ರಮಾಣದ ಹೆಸರು ಬಿತ್ತನೆ ಮಾಡಿದ್ದಾರೆ. ಕೀಟ ಬಾಧೆ ಒಕ್ಕರಿಸಿ ಎಲೆಗಳು ಪುಡಿಪುಡಿಯಾಗಿವೆ. ಜಿಗಿ ಹುಳು, ಹೇನು, ನಂಜು, ಬೂದಿ ರೋಗ ತಗುಲಿ ಬೆಳೆ ನೆಲಕಚ್ಚಿದೆ. ಬಂಪರ್‌ ಬೆಳೆ ಹಾಗೂ ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದ ರೈತರಿಗೆ ಅತಿವೃಷ್ಟಿಯ ಬರಸಿಡಿಲು ಬಡಿದಿದೆ. ಬಿತ್ತನೆಗೆ ಖರ್ಚು ಮಾಡಿದ ಬಂಡವಾಳ ಅಕ್ಷರಶಃ ನೀರುಪಾಲಾಗಿದೆ. ಅಳಿದುಳಿದ ಬೆಳೆ ಉಳಿಸಿಕೊಳ್ಳಲು ರೋಗ ನಿಯಂತ್ರಣಕ್ಕೆ ಹರಸಾಹಸ ಪಡುತ್ತಿರುವ ರೈತರು ಔಷಧ ಸಿಂಪಡಣೆ ಮಾಡುತ್ತಿದ್ದಾರೆ. ಬೇಸಾಯಗಾರರ ಬೆವರು ಕೂಡ ಮಣ್ಣಿಗೆ ಸೇರಿ ಕಣ್ಣೀರಾಗಿ ಹರಿದಿದೆ.

ಮಳೆ ಹೊಡೆತಕ್ಕೆ ಸಿಲುಕಿ ನರಳುತ್ತಿರುವ ರೈತರಿಗೆ ಧೈರ್ಯ ಹೇಳಿ ಪರ್ಯಾಯ ಮಾರ್ಗ ತೋರಿಸಬೇಕಾದ ಕೃಷಿ ಇಲಾಖೆ ಅಧಿಕಾರಿಗಳು ಕಚೇರಿ ಸೇರಿಕೊಂಡಿದ್ದಾರೆ. ಹೆಸರು ಹಾಳಾಗಿ ಗೋಳಾಡುವವರು ಒಂದೆಡೆಯಾದರೆ, ತೊಗರಿ ಬೀಜದ ಮೊಳಕೆ ಕೊಳೆತು ಸಂಪೂರ್ಣ ಹಳ್ಳ ಹಿಡಿದಿದ್ದು ಕಂಡು ಬೆಳೆಗಾರ ಮರುಗುತ್ತಿದ್ದಾನೆ. ತೊಗರಿ ಬೆಳೆ ಹರಗಿ ಫಸಲು ಕಿತ್ತೆಸೆಯುತ್ತಿರುವ ಅನ್ನದಾತರು ಮರು ಬಿತ್ತನೆಗೆ ಚಾಲನೆ ನೀಡಿದ್ದಾರೆ.

ಹಳದಿ ರೋಗದಿಂದ ಶೇ.50ರಷ್ಟು ಇಳುವರಿ ನಷ್ಟ ಉಂಟಾಗಿದೆ. ತಗ್ಗು ಪ್ರದೇಶದ ಜಮೀನುಗಳಲ್ಲಿ ಬೆಳೆ ಸಂಪೂರ್ಣ ನಾಶವಾಗಿ ಶೇ.100ರಷ್ಟು ನಷ್ಟದ ಹೊಡೆತ ಬಿದ್ದಿದೆ. ಮಳೆ ನಂತರ ಬೆಳೆ ವೀಕ್ಷಣೆ ಮತ್ತು ಹಾನಿ ಸರ್ವೇಗೆ ಮುಂದಾಗಬೇಕಿದ್ದ ಅಧಿಕಾರಿಗಳು, ಜನಪ್ರತಿನಿಧಿಗಳು ರೈತರ ಕಷ್ಟಕ್ಕೆ ಬೆನ್ನು ತಿರುಗಿಸಿದ್ದು ಶೋಚನೀಯ.

ವಿಪರೀತ ಮಳೆಯಿಂದಾಗಿ ನಾಲವಾರ ಕೃಷಿ ಸಂಪರ್ಕ ಕೇಂದ್ರ ವ್ಯಾಪ್ತಿಯಲ್ಲಿ ಸುಮಾರು 5152 ಹೆಕ್ಟೆರ್‌ ಪ್ರದೇಶದಲ್ಲಿ ಬೆಳೆ ನಷ್ಟ ಉಂಟಾಗಿದೆ. ವಿವಿಧ ರೀತಿಯ ರೋಗ ಬಾಧೆಯಿಂದ ಹೆಸರು ಹಾಳಾಗಿದೆ. ತೇವಾಂಶ ಹೆಚ್ಚಾಗಿ ಬೆಳೆ ಚೇತರಿಸಿಕೊಳ್ಳದೆ ತೊಗರಿ ಫಸಲು ಸಂಪೂರ್ಣ ಕೊಳೆತುಹೋಗಿದೆ. ತೊಗರಿ ಮರು ಬಿತ್ತನೆಗಾಗಿ ಸಕಾಲದಲ್ಲಿ ಬೇಡಿಕೆಯಿದ್ದಷ್ಟು ರೈತರಿಗೆ ಬೀಜ ವಿತರಣೆ ಮಾಡಿದ್ದೇವೆ. ಅಂದಾಜು ರೂಪದಲ್ಲಿ ಈಗಾಗಲೇ ಬೆಳೆ ನಷ್ಟದ ಪಟ್ಟಿ ತಯಾರಿಸಿದ್ದೇವೆ. ತೊಗರಿ 3460 ಹೆಕ್ಟೇರ್‌, ಹೆಸರು 1120 ಹೆಕ್ಟೇರ್‌, ಉದ್ದು 92 ಹೆಕ್ಟೇರ್‌, 480 ಹೆಕ್ಟೇರ್‌ ಹತ್ತಿ ಬೆಳೆ ನಷ್ಟದ ವರದಿ ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸಿದ್ದೇವೆ. ಬೆಳೆ ಪರಿಹಾರ ನಿರೀಕ್ಷೆಯಲ್ಲಿ ರೈತರಿದ್ದು, ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಲಿದೆ.
ಸತೀಶಕುಮಾರ ಪವಾರ, ಕೃಷಿ ಅಧಿಕಾರಿ, ರೈತ ಸಂಪರ್ಕ ಕೇಂದ್ರ, ನಾಲವಾರ

*ಮಡಿವಾಳಪ್ಪ ಹೇರೂರ

ಟಾಪ್ ನ್ಯೂಸ್

ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಲು ಕೇಂದ್ರ ಸ್ಪಂದನೆ : ಸಿಎಂ

ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಲು ಕೇಂದ್ರ ಸ್ಪಂದನೆ : ಸಿಎಂ

ನವ ವೃಂದಾವನದಲ್ಲಿ ಉತ್ತರಾದಿ ಮಠದಿಂದ ಪದ್ಮನಾಭ ತೀರ್ಥರ ಪೂರ್ವಾರಾಧನೆ

ನವ ವೃಂದಾವನದಲ್ಲಿ ಉತ್ತರಾದಿ ಮಠದಿಂದ ಪದ್ಮನಾಭ ತೀರ್ಥರ ಪೂರ್ವಾರಾಧನೆ

dr-ashwat-narayan

ರಾಜ್ಯದಲ್ಲಿ ಒಮಿಕ್ರಾನ್ ಪತ್ತೆ: ಸಚಿವ ಡಾ. ಅಶ್ವಥ್ ನಾರಾಯಣ್ ಹೇಳಿದ್ದೇನು? 

ಒಮಿಕ್ರಾನ್ ಭೀತಿ ನಡುವೆಯೇ 777 ಅಂಕ ಏರಿಕೆ ಕಂಡ ಮುಂಬಯಿ ಷೇರುಪೇಟೆ, ನಿಫ್ಟಿ 17,400

ಒಮಿಕ್ರಾನ್ ಭೀತಿ ನಡುವೆಯೇ 777 ಅಂಕ ಏರಿಕೆ ಕಂಡ ಮುಂಬಯಿ ಷೇರುಪೇಟೆ, ನಿಫ್ಟಿ 17,400

covid-1

ಕರ್ನಾಟಕಕ್ಕೇ ಕಾಲಿಟ್ಟ ಒಮಿಕ್ರಾನ್ : ದೇಶದಲ್ಲಿ ಮೊದಲ 2 ಪ್ರಕರಣಗಳು!

ಸರ್ಕಾರಿ ಉದ್ಯೋಗ ಸಿಗುತ್ತಿಲ್ಲವೇಕೆ? ಯುವಕರು ಇನ್ನೆಷ್ಟು ದಿನ ತಾಳ್ಮೆ ವಹಿಸಬೇಕು: ವರುಣ್

ಸರ್ಕಾರಿ ಉದ್ಯೋಗ ಸಿಗುತ್ತಿಲ್ಲವೇಕೆ? ಯುವಕರು ಇನ್ನೆಷ್ಟು ದಿನ ತಾಳ್ಮೆ ವಹಿಸಬೇಕು: ವರುಣ್

ಅಧಿಕಾರಕ್ಕೆ‌ ಬಂದಾಗಲೆಲ್ಲಾ ಮೂವರು ಸಿಎಂ ಆಗುವುದೇ ಬಿಜೆಪಿ ಅಜೆಂಡಾ : ಬೇಳೂರು ವ್ಯಂಗ್ಯ

ಅಧಿಕಾರಕ್ಕೆ‌ ಬಂದಾಗಲೆಲ್ಲಾ ಮೂವರು ಸಿಎಂ ಆಗುವುದೇ ಬಿಜೆಪಿ ಅಜೆಂಡಾ : ಬೇಳೂರು ವ್ಯಂಗ್ಯಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಈಶ್ವರಪ್ಪ

ಹೈಕಮಾಂಡ್ ನಿಂದ ಸಚಿವರ ರಹಸ್ಯ ವರದಿ ವಿಚಾರ ನನಗೆ ಗೊತ್ತಿಲ್ಲ: ಈಶ್ವರಪ್ಪ

11police’

ಅಬಕಾರಿ ದಾಳಿ: 1 ಲಕ್ಷ ಮೌಲ್ಯದ ಮದ್ಯ ಜಪ್ತಿ

10crop

ಬೆಳೆ ಹಾನಿ; ಎಕರೆಗೆ 40 ಸಾವಿರ ನೀಡಲು ರೈತರ ಆಗ್ರಹ

8bankloan

ಸಾಲ ಪಡೆಯಲು ಜನಜಂಗುಳಿ

7devolop

ವಿಜ್ಞಾನ ಬೆಳವಣಿಗೆಗೆ ಕೊಡುಗೆ ನೀಡಿ: ಅಗಸರ

MUST WATCH

udayavani youtube

‘Car’bar with Merwyn Shirva | Episode 2|

udayavani youtube

ಕರ್ನಾಟಕಕ್ಕೂ ಎಂಟ್ರಿ ಕೊಟ್ಟ ಒಮಿಕ್ರಾನ್ ವೈರಸ್ : ಇಬ್ಬರಲ್ಲಿ ಪತ್ತೆಯಾದ ಸೋಂಕು

udayavani youtube

ಕ್ಲಾಸ್​ ರೂಂನೊಳಗೆ ನುಗ್ಗಿ ವಿದ್ಯಾರ್ಥಿ ಮೇಲೆ ದಾಳಿ ಮಾಡಿದ ಚಿರತೆ

udayavani youtube

ನಾಡಗೀತೆ ಮೇಲೆ ಈ ಹಸುವಿಗೆ ಅದೆಷ್ಟು ಗೌರವ ನೋಡಿ : ವಿಡಿಯೋ ವೈರಲ್

udayavani youtube

ಈ ಪ್ರಮುಖ ಕಾರಣಗಳಿಂದ ಜೀವನಶೈಲಿ ರೋಗಗಳಿಗೆ ನಾವು ತುತ್ತಾಗುತ್ತೇವೆ

ಹೊಸ ಸೇರ್ಪಡೆ

ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಲು ಕೇಂದ್ರ ಸ್ಪಂದನೆ : ಸಿಎಂ

ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಲು ಕೇಂದ್ರ ಸ್ಪಂದನೆ : ಸಿಎಂ

ನವ ವೃಂದಾವನದಲ್ಲಿ ಉತ್ತರಾದಿ ಮಠದಿಂದ ಪದ್ಮನಾಭ ತೀರ್ಥರ ಪೂರ್ವಾರಾಧನೆ

ನವ ವೃಂದಾವನದಲ್ಲಿ ಉತ್ತರಾದಿ ಮಠದಿಂದ ಪದ್ಮನಾಭ ತೀರ್ಥರ ಪೂರ್ವಾರಾಧನೆ

ಸಾಧನಾ ಪಥಕ್ಕೆ ಕಠಿಣ ಪ್ರಯತ್ನವೇ ರಾಜಮಾರ್ಗ

ಸಾಧನಾ ಪಥಕ್ಕೆ ಕಠಿಣ ಪ್ರಯತ್ನವೇ ರಾಜಮಾರ್ಗ

ಸುಗಮ ಸಂಚಾರ ಸಮಸ್ಯೆಗೆ ಸಿಗಬೇಕಿದೆ ಮುಕ್ತಿ

ಸುಗಮ ಸಂಚಾರ ಸಮಸ್ಯೆಗೆ ಸಿಗಬೇಕಿದೆ ಮುಕ್ತಿ

jeju gudu theft

ರೈತರ ನಿದ್ದೆಗೆಡಿಸಿದ ರೇಷ್ಮೆಗೂಡು ಕಳವು ಪ್ರಕರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.