ನಿರುದ್ಯೋಗಿ ಯುವಕನ ಬದುಕನ್ನೇ ಬದಲಿಸಿದ ಹೈನೋದ್ಯಮ


Team Udayavani, Jan 21, 2022, 10:21 AM IST

3unemplyoement

ಆಳಂದ: ಇರುವ ಮೂರು ಎಕರೆ ಹೊಲದಲ್ಲಿ 30 ಆಕಳು ಕಟ್ಟಿ ಆಕಳ ಹಾಲು ಮತ್ತು ಗೊಬ್ಬರದಿಂದಲೇ ವರ್ಷಕ್ಕೆ 5ರಿಂದ 6 ಲಕ್ಷ ರೂ. ಆದಾಯ ಪಡೆಯುವ ಮೂಲಕ ಯುವಕನೊಬ್ಬ ಕಳೆದ ಆರು ವರ್ಷಗದಿಂದ ಯಶಸ್ವಿ ಹೈನೋದ್ಯಮಿಯಾಗಿದ್ದಾನೆ.

ತಾಲೂಕಿನ ತೀರ್ಥ ಗ್ರಾಮದ ಯುವ ರೈತ ಭೀಮರಾವ್‌ ಶಿವಲಾಲ ಪಾರಣೆ ಈ ಹೈನೋದ್ಯಮ ಸಾಧಕರು. ಇವರು ಓದಿದ್ದು ಪಿಯುಸಿ. ಉದ್ಯೋಗಕ್ಕಾಗಿ ಅರಸಿ ವಾಣಿಜ್ಯ ನಗರಕ್ಕೆ ದುಡಿಯಲು ಹೋಗಿ, ಇರುವ ಮೂರು ಎಕರೆ ಜಮೀನಿನಲ್ಲಿ ಕುಟುಂಬ ನಿರ್ವಹಣೆ ಅಸಾಧ್ಯ ಎಂದು ಅನೇಕರು ಇವರಿಗೆ ಸಲಹೆ ನೀಡಿದ್ದರು. ಆದರೆ ಭೀಮರಾವ್‌ ಹೈನುಗಾರಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಅವಿರತ ಶ್ರಮಿಸಿ, ಕುಟುಂಬಕ್ಕೆ ಆರ್ಥಿಕ ಹೊಳೆಯನ್ನೇ ಹರಿಸತೊಡಗಿದ್ದಾರೆ. ಅನೇಕರು ಹೈನೋದ್ಯಮ ಮಾಡಲು ಹೋಗಿ ಕೈಸುಟ್ಟುಕೊಂಡು ಸಾಲದ ಸುಳಿಗೆ ಸಿಲುಕಿದವರು ಸಾಕಷ್ಟು ಜನರಿದ್ದಾರೆ. ಇವರೆಲ್ಲರ ನಡುವೆ ಭೀಮರಾವ್‌ ಪ್ರೇರಕರಾಗಿ ನಿಂತುಕೊಂಡಿದ್ದಾರೆ.

ಕಲಬುರಗಿ ಜಿಲ್ಲೆಯಲ್ಲಿ ಅತಿ ಹೆಚ್ಚು ಹಾಲು ಉತ್ಪಾದಕರ ಸಾಲಿನಲ್ಲೂ ಇವರಿದ್ದಾರೆ. ಭೀಮರಾವ್‌ ಪಾರಾಣೆ ಇನ್ನೊಬ್ಬರಲ್ಲಿ ದುಡಿಯುವ ಬದಲು ಹಲವರಿಗೆ ಕೆಲಸ ನೀಡಿದ್ದಾರೆ. ಆರಂಭದಲ್ಲಿ ಇವರೊಬ್ಬ ಸಣ್ಣ ಹಿಡುವಳಿದಾರ. ಇಷ್ಟರಲ್ಲೇ ಬದುಕು ಕಟ್ಟಿಕೊಂಡು ಕುಟುಂಬ ಹೇಗೆ ನಿರ್ವಹಿಸಲು ಸಾಧ್ಯ? ದುಡಿಯಲು ಎಲ್ಲಾದರೂ ಹೋಗಬೇಕು ಎನ್ನುವ ಚಿಂತೆಯಲ್ಲಿದ್ದರು. ಆಗ ಅವರಿಗೆ ಹೊಳೆದಿದ್ದು ಹೈನುಗಾರಿಕೆ ವ್ಯವಸಹಾಯ. ಈ ಯೋಚನೆ ಕಾರ್ಯಗತಗೊಳಿಸಿದ್ದು ಅವರ ಬದುಕನ್ನೇ ಬದಲಾಯಿಸಿ ಬಿಟ್ಟಿದೆ.

ಆರಂಭದಲ್ಲಿ ಉಪಕಸಬು ಹೈನುಗಾರಿಕೆ ಆಯ್ಕೆ ಮಾಡಿಕೊಂಡಿದ್ದ ಇವರು ಈಗ ಹೈನುಗಾರಿಕೆಯನ್ನೇ ಪ್ರಮುಖ ಕಸಬಾಗಿಸಿಕೊಂಡಿದ್ದಾರೆ. ವಾರ್ಷಿಕ ಕನಿಷ್ಠ 5ರಿಂದ 6 ಲಕ್ಷ ರೂ. ಆದಾಯದ ಜೊತೆಗೆ ಸ್ವಯಂ ಉದ್ಯೋಗಕ್ಕೆ ಇತರರಿಗೆ ಪ್ರೇರಣೆಯಾಗಿದ್ದಾರೆ. ಇವರಿಗೆ ಪ್ರತಿವರ್ಷದ ಅತಿವೃಷ್ಟಿ, ಅನಾವೃಷ್ಟಿ ಇದ್ಯಾವುದೂ ಪೀಡಿಸುವುದಿಲ್ಲ. ಕೆಎಂಎಫ್‌ ಡೈರಿಯಲ್ಲೂ ಇವರ ಗುಣಮಟ್ಟದ ಹಾಲು ಹಾಗೂ ಅತಿ ಹೆಚ್ಚು ಹಾಲು ಸರಬರಾಜು ಮಾಡಿದ ರೈತ ಎಂಬ ಹೆಸರಿದೆ. ಅಲ್ಲದೇ ಇವರಿಗೆ ಹಾಲಿನ ಡೈರಿಯನ್ನೇ ನಿರ್ವಹಿಸಿಕೊಂಡು ಹೋಗಲು ಮಂಜೂರಾತಿ ನೀಡಲಾಗಿದೆ. 2016ರ ಆರಂಭದಲ್ಲಿ ನಾಲ್ಕು ಹಸು ಖರೀದಿಸಿ ಹೈನೋದ್ಯಮ ಆರಂಭಿಸಿದ ಪಾರಾಣೆ, ಈಗ ಆರು ವರ್ಷಗಳಿಂದ ನಷ್ಟದ ಸುಳಿವಿಲ್ಲದೆ, ಸತತ ಆರ್ಥಿಕ ಏರಿಕೆಯನ್ನೇ ಕಂಡಿದ್ದಾರೆ.

ಆರಂಭದ ನಾಲ್ಕು ಹಸುಗಳ ಹಾಲಿನ ಆದಾಯದವನ್ನೇ ವಿಸ್ತರಿಸುತ್ತಾ ಈಗ ಬರೋಬ್ಬರಿ 30 ಹಸುಗಳನ್ನು ಕಟ್ಟಿದ್ದಾರೆ. ಈ ಪೈಕಿ ಅರ್ಧದಷ್ಟು ಹಸುಗಳಿಂದ ಕರೆಯುವ ಹಾಲು ನಿತ್ಯ 120ರಿಂದ 130 ಲೀಟರ್‌ ವರೆಗೆ ಆಗುತ್ತದೆ. ಈ ಹಾಲು ನೇರವಾಗಿ ಕೆಎಂಎಫ್‌ ಡೈರಿಗೆ ಹೋಗುತ್ತದೆ. ಪ್ರತಿ ತಿಂಗಳು ಕನಿಷ್ಟ ಒಂದು ಲಕ್ಷ ರೂಪಾಯಿ ಕೈ ಸೇರಿದರೆ ಇದರ ಅರ್ಧದಷ್ಟು ಕೂಲಿಯಾಳು, ಮೇವು, ಪಶು ಆಹಾರ ಖರೀದಿ, ವೈದ್ಯಕೀಯ ಚಿಕಿತ್ಸೆ ವೆಚ್ಚ ಹೀಗೆ ಕನಿಷ್ಟ 50 ಸಾವಿರ ರೂ. ಖರ್ಚಾಗಿ ಬಾಕಿ 50 ಸಾವಿರ ರೂ. ಉಳಿಯುತ್ತಿದೆ.

ಪಶುಗಳಿಗೆ ತಮ್ಮ ಮೂರು ಎಕರೆಯಲ್ಲೇ ಸಂಪೂರ್ಣವಾಗಿ ಮೇವು ಬೆಳೆದು ಸಾಕಿದ 30 ಹಸುಗಳಿಗೆ ಪೂರೈಕೆ ಮಾಡುತ್ತಿದ್ದಾರೆ. ಹಾಲಿನ ಜೊತೆಗೆ ಸೆಗಣಿಯನ್ನು ಮಾರಾಟ ಮಾಡಿ ಪ್ರತಿವರ್ಷ 2ರಿಂದ 3 ಲಕ್ಷ ರೂ. ವರೆಗೆ ಆದಾಯ ಪಡೆಯುತ್ತಿದ್ದು, ಇನ್ನು ಹೆಚ್ಚಿನ ಆದಾಯದ ನಿರೀಕ್ಷೆಯಲ್ಲಿದ್ದಾರೆ.

ಸದ್ಯ ಕಲಬುರಗಿ ಜಿಲ್ಲಾ ಮಟ್ಟದಲ್ಲಿ ಹೈನುಗಾರಿಕೆಯಲ್ಲಿ ಪ್ರಥಮ ಸ್ಥಾನ ಪಡೆದ ಹೆಗ್ಗಳಿಕೆ ಇವರದ್ದಾಗಿದೆ. ಇವರ ಸಾಧನೆಗೆ ಬೀದರನಲ್ಲಿ ಹೈನುಗಾರಿಕೆ ಕ್ಷೇತ್ರದಲ್ಲಿ ಜಿಲ್ಲಾ ಮಟ್ಟದ ಹಾಗೂ ತಾಲೂಕಿನಿಂದ ಕೃಷಿ ಪಂಡಿತ ಪ್ರಶಸ್ತಿ ಸೇರಿ ಹಲವು ಸಂಘ, ಸಂಸ್ಥೆಗಳಿಂದ ಹಾಗೂ ತಾಲೂಕು ಆಡಳಿತದಿಂದ ಸನ್ಮಾನಿಸಿ ಗೌರವಿಸಲಾಗಿದೆ.

ಮರೆಯಲಾಗದ ಗೆಳೆಯನ ಸಹಾಯ

ನಾನು ಹೈನುಗಾರಿಕೆ ಮಾಡಲು ಗೆಳೆಯನೊಬ್ಬನ ಎದುರು ಪ್ರಸ್ತಾಪಿಸಿದಾಗ, ದೊಡ್ಡ ಪ್ರಮಾಣದಲ್ಲೇ ಮಾಡು ಎಂದು ಹಣದ ಸಹಾಯ ಮಾಡಿದ್ದರು. ಅದನ್ನು ಸದ್ಬಳಕೆ ಮಾಡಿಕೊಂಡು ನಾಲ್ಕು ಆಕಳು ಮತ್ತು ಹೊಲದಲ್ಲಿ ದನದ ಕೊಟ್ಟಿಗೆ ಶೆಡ್‌ ನಿರ್ಮಾಣ ಮಾಡಿ ಹೈನುಗಾರಿಕೆ ಆರಂಭಿಸಿದೆ. ಇದರಿಂದ ಆದಾಯ ಬರುತ್ತಿದ್ದಂತೆ ಎಲ್ಲವನ್ನೂ ವಿಸ್ತರಿಸಿ ಈಗ ಜಿಲ್ಲೆಯಲ್ಲೇ ಅತಿ ಹೆಚ್ಚಿನ ಹಾಲು ಪೂರೈಸುವ ರೈತ ಎಂಬ ಹೆಸರಿದೆ. ಗೆಳೆಯ ನೀಡಿದ ಹಣ ಮರಳಿಕೊಟ್ಟಿದ್ದೇನೆ. ನಿರೀಕ್ಷಿತ ಗಳಿಕೆಯಲ್ಲಿ ಖುಷಿಯಾಗಿದ್ದೇನೆ ಎನ್ನುತ್ತಾರೆ ಹೈನೋದ್ಯಮಿ ಭೀಮರಾವ್‌ ಎಸ್‌. ಪಾರಣೆ.

ಮೂರು ಎಕರೆ ಹೊಲದಲ್ಲಿ 30 ಆಕಳು ಕಟ್ಟಿ ಹೈನುಗಾರಿಕೆಯಲ್ಲಿ ಮುಂ ದುವರಿದಿರುವುದು ಸಾಮಾನ್ಯ ಸಂಗತಿಯಲ್ಲ. ಇದಕ್ಕೆ ಸಮಯ, ಖರ್ಚು, ತಾಳ್ಮೆ ನೀಡಿದ್ದರಿಂದಲೇ ಆತನಿಗೆ ಆದಾಯ ಒಲಿದು ಬರುತ್ತಿದೆ. ಭೀಮರಾವ್‌ ಪಾರಾಣೆ ಹೈನುಗಾರಿಕೆಯಲ್ಲಿ ತಾಲೂಕಿನ ಕೀರ್ತಿ ಹೆಚ್ಚಿಸಿದ್ದಾರೆ. ಇವರಂತೆ ಯುವಕರು ಹೈನುಗಾರಿಕೆ ಕೈಗೊಳ್ಳಲು ಮುಂದೆ ಬರಬೇಕು. -ಡಾ| ಸಂಜಯ ರೆಡ್ಡಿ, ತಾಪಂ ಪ್ರಭಾರಿ ಇಒ, ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ, ಆಳಂದ

-ಮಹಾದೇವ ವಡಗಾಂವ

ಟಾಪ್ ನ್ಯೂಸ್

ಕನ್ನಡ ಸಂಘಟನೆಗಳು ಏನು ಮಾಡುತ್ತಿವೆ: ಡಿಕೆಶಿ ಪ್ರಶ್ನೆ

ಕನ್ನಡ ಸಂಘಟನೆಗಳು ಏನು ಮಾಡುತ್ತಿವೆ: ಡಿಕೆಶಿ ಪ್ರಶ್ನೆ

ವನಿತಾ ಟಿ20 ಚಾಲೆಂಜ್‌: ಸೂಪರ್‌ ನೋವಾ -ವೆಲಾಸಿಟಿ ಫೈನಲ್‌

ವನಿತಾ ಟಿ20 ಚಾಲೆಂಜ್‌: ಸೂಪರ್‌ ನೋವಾ -ವೆಲಾಸಿಟಿ ಫೈನಲ್‌

ರಾಷ್ಟ್ರೀಯ ಸರ್ಫಿಂಗ್‌: ಮೊದಲ ದಿನ ತಮಿಳುನಾಡು ಪ್ರಾಬಲ್ಯ

ರಾಷ್ಟ್ರೀಯ ಸರ್ಫಿಂಗ್‌: ಮೊದಲ ದಿನ ತಮಿಳುನಾಡು ಪ್ರಾಬಲ್ಯ

ಮೆಲ್ಟ್ ವಾಟರ್‌ ಚೆಸ್‌ : ಪ್ರಗ್ನಾನಂದ ಪ್ರಯತ್ನ ವಿಫ‌ಲ

ಮೆಲ್ಟ್ ವಾಟರ್‌ ಚೆಸ್‌ : ಪ್ರಗ್ನಾನಂದ ಪ್ರಯತ್ನ ವಿಫ‌ಲ

ಐಪಿಎಲ್‌ 2022: ಜಾಸ್‌ ಬಟ್ಲರ್‌ ಶತಕದ ಜೋಶ್‌; ಆರ್‌ಸಿಬಿ ಔಟ್‌

ಐಪಿಎಲ್‌ 2022: ಜಾಸ್‌ ಬಟ್ಲರ್‌ ಶತಕದ ಜೋಶ್‌; ಆರ್‌ಸಿಬಿ ಔಟ್‌

ಕೋವಿಡ್‌ ಲಸಿಕೆ ಪಡೆದ ತತ್‌ಕ್ಷಣ ಪ್ರಮಾಣಪತ್ರ: ಕೇಂದ್ರ ಸರಕಾರ

ಕೋವಿಡ್‌ ಲಸಿಕೆ ಪಡೆದ ತತ್‌ಕ್ಷಣ ಪ್ರಮಾಣಪತ್ರ: ಕೇಂದ್ರ ಸರಕಾರ

ನಾರಾವಿಯಲ್ಲಿ ಮುರಿದುಬಿತ್ತು ಅದ್ದೂರಿ ಮದುವೆ

ನಾರಾವಿಯಲ್ಲಿ ಮುರಿದುಬಿತ್ತು ಅದ್ದೂರಿ ಮದುವೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14protest

ಇಂಗ್ಲಿಷ್‌ ನಾಮಫಲಕಕ್ಕೆ ಮಸಿ ಬಳಿದು ಪ್ರತಿಭಟನೆ

12arrest

ಕಲಬೆರಕೆ ಸೇಂದಿ ಸಾಗಾಟ: ಇಬ್ಬರ ಬಂಧನ

10jail

ಸನ್ನಡತೆ; 11ಕೈದಿಗಳ ಬಿಡುಗಡೆ

8protest

ಪಹಣಿ ದೋಷ ಪ್ರಕರಣ: ರಾಷ್ಟ್ರೀಯ ಹೆದ್ದಾರಿಯಲ್ಲಿ ಎತ್ತಿನ ಗಾಡಿ ಮೆರವಣಿಗೆ ನಡೆಸಿ ಪ್ರತಿಭಟನೆ

7school

840ಕ್ಕೂ ಹೆಚ್ಚು ಮಕ್ಕಳಿಗೆ ಏಳೇ ಜನ ಶಿಕ್ಷಕರು!

MUST WATCH

udayavani youtube

ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಶ್ರೀ ಹುಲಿಗೆಮ್ಮ ದೇವಿಯ ಮಹಾರಥೋತ್ಸವ

udayavani youtube

ಶಂಕರನಾರಾಯಣ : ವಾರಾಹಿ ನದಿಯಲ್ಲಿ ಮುಳುಗಿ ರೈತ ಸಾವು

udayavani youtube

ಚಿತ್ರದುರ್ಗದ ಐತಿಹಾಸಿಕ ಮುರುಘಾ ಮಠದ ಉತ್ತರಾಧಿಕಾರಿಯಾಗಿ ಬಸವಾದಿತ್ಯ ಶ್ರೀ ಆಯ್ಕೆ

udayavani youtube

ಉಸಿರಾಟದ ಸಮಸ್ಯೆ: ಕೇದಾರನಾಥದಲ್ಲಿ ಮತ್ತೆ ನಾಲ್ವರು ಯಾತ್ರಾರ್ಥಿಗಳ ಸಾವು

udayavani youtube

ಮಳಲಿ ಮಸೀದಿಯ ಸರ್ವೇ ನಡೆಯಲಿ ಜನರು ಸತ್ಯ ತಿಳಿಯಲಿ : ಡಾ ಸುರೇಂದ್ರ ಕುಮಾರ್ ಜೈನ್

ಹೊಸ ಸೇರ್ಪಡೆ

ಕನ್ನಡ ಸಂಘಟನೆಗಳು ಏನು ಮಾಡುತ್ತಿವೆ: ಡಿಕೆಶಿ ಪ್ರಶ್ನೆ

ಕನ್ನಡ ಸಂಘಟನೆಗಳು ಏನು ಮಾಡುತ್ತಿವೆ: ಡಿಕೆಶಿ ಪ್ರಶ್ನೆ

ವನಿತಾ ಟಿ20 ಚಾಲೆಂಜ್‌: ಸೂಪರ್‌ ನೋವಾ -ವೆಲಾಸಿಟಿ ಫೈನಲ್‌

ವನಿತಾ ಟಿ20 ಚಾಲೆಂಜ್‌: ಸೂಪರ್‌ ನೋವಾ -ವೆಲಾಸಿಟಿ ಫೈನಲ್‌

ರಾಷ್ಟ್ರೀಯ ಸರ್ಫಿಂಗ್‌: ಮೊದಲ ದಿನ ತಮಿಳುನಾಡು ಪ್ರಾಬಲ್ಯ

ರಾಷ್ಟ್ರೀಯ ಸರ್ಫಿಂಗ್‌: ಮೊದಲ ದಿನ ತಮಿಳುನಾಡು ಪ್ರಾಬಲ್ಯ

ಮೆಲ್ಟ್ ವಾಟರ್‌ ಚೆಸ್‌ : ಪ್ರಗ್ನಾನಂದ ಪ್ರಯತ್ನ ವಿಫ‌ಲ

ಮೆಲ್ಟ್ ವಾಟರ್‌ ಚೆಸ್‌ : ಪ್ರಗ್ನಾನಂದ ಪ್ರಯತ್ನ ವಿಫ‌ಲ

ಐಪಿಎಲ್‌ 2022: ಜಾಸ್‌ ಬಟ್ಲರ್‌ ಶತಕದ ಜೋಶ್‌; ಆರ್‌ಸಿಬಿ ಔಟ್‌

ಐಪಿಎಲ್‌ 2022: ಜಾಸ್‌ ಬಟ್ಲರ್‌ ಶತಕದ ಜೋಶ್‌; ಆರ್‌ಸಿಬಿ ಔಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.