ಅಪೂರ್ಣ ಕಾಮಗಾರಿ ಹಸ್ತಾಂತರ-ದೂರು

Team Udayavani, Nov 7, 2021, 10:35 AM IST

7transfer

ಚಿಂಚೋಳಿ: ನಗರೋತ್ಥಾನ ಯೋಜನೆಯಡಿ ಕೈಗೊಂಡಿರುವ ನೀರು ಸರಬರಾಜು ಯೋಜನೆ ಕಾಮಗಾರಿ ಅಪೂರ್ಣವಾಗಿದ್ದರೂ ಪುರಸಭೆಗೆ ಹಸ್ತಾಂತರಿಸಿಕೊಂಡಿದ್ದರ ಕುರಿತು ತನಿಖೆ ನಡೆಸಬೇಕು ಎಂದು ಪುರಸಭೆ ಉಪಾಧ್ಯಕ್ಷ ಸೈಯದ್‌ ಶಬ್ಬೀರ್‌ ಅಹಮೆದ್‌ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಟ್ಟಣದ ವಿವಿಧ ವಾರ್ಡ್ ಗಳಿಗೆ ನಳಗಳ ಮೂಲಕ ನೀರು ಪೂರೈಸಲು ಪುರಸಭೆಯ ನಗರೋತ್ಥಾನ ಯೋಜನೆ ಅಡಿಯಲ್ಲಿ 5.50 ಕೋಟಿ ರೂ. ನೀಡಲಾಗಿದೆ. ಕೆಲವು ವಾರ್ಡುಗಳಲ್ಲಿ ಸ್ವಲ್ಪಮಟ್ಟಿಗೆ ಕೆಲಸ ಮಾಡಲಾಗಿದೆ. ಇನ್ನಿತರ ವಾರ್ಡುಗಳಲ್ಲಿ ಇನ್ನು ಕೆಲಸ ಬಾಕಿಯಿದೆ. ಈ ಯೋಜನೆಯಡಿ ಯಾರ ಮನೆಗೂ ಇನ್ನೂ ನೀರು ಬಂದಿಲ್ಲ ಎಂದು ಆಪಾದಿಸಿದರು.

ಪುರಸಭೆ ಅಧ್ಯಕ್ಷೆ ಜಗದೇವಿ ಗಡಂತಿ, ಮುಖ್ಯಾಧಿಕಾರಿ ಚಂದ್ರಕಾಂತ ಪಾಟೀಲ, ಇಂಜಿನಿಯರ್‌ ದೇವೇಂದ್ರಪ್ಪ ಕೋರವಾರ ಕಾಮಗಾರಿ ಪೂರ್ಣವಾಗಿದೆ ಎಂದು ಸುಳ್ಳೂ ವರದಿ ನೀಡಿ ಕಳದೆ ಸೆ. 23ರಂದು ಕಾಮಗಾರಿಯನ್ನು ಪುರಸಭೆಗೆ ಹಸ್ತಾಂತರ ಮಾಡಿಕೊಂಡಿದ್ದಾರೆ. ಈ ಕುರಿತು ಎಲ್ಲ ಸದಸ್ಯರ ಗಮನಕ್ಕೆ ತರಬೇಕೆಂದು ಇದಕ್ಕೂ ಮುನ್ನ ಸಾಮಾನ್ಯ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಆದರೆ ಎಲ್ಲ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂದು ದೂರಿದರು.

ಪುರಸಭೆ ಸದಸ್ಯ ಸೈಯದ್‌ ಅನವರ ಖತೀಬ್‌ ಮಾತನಾಡಿ, ಪುರಸಭೆಯಲ್ಲಿ ಕಾಮಗಾರಿಗಳ ಬಗ್ಗೆ ಮೂರನೇ ತಂಡದಿಂದ ಪರಿಶೀಲನೆಯೂ ನಡೆಯುತ್ತಿಲ್ಲ. ಈ ಕುರಿತು ಜಿಲ್ಲಾಧಿಕಾರಿಗಳಿಗೆ ಹಾಗೂ ಯೋಜನಾಭಿವೃದ್ಧಿ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದು ಹೇಳಿದರು.

ಪುರಸಭೆ ಸದಸ್ಯ ಆನಂದ ಟೈಗರ್‌ ಮಾತನಾಡಿ, ಪುರಸಭೆ ಇತಿಹಾಸದಲ್ಲಿಯೇ 5.50ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿರುವ ಮೊದಲ ಕಾಮಗಾರಿ ಇದಾಗಿದೆ. ಸುಳ್ಳು ಮಾಹಿತಿ ನೀಡಿ ಜನರನ್ನು ವಂಚಿಸಲಾಗಿದೆ. ಚಂದಾಪುರ ಶುದ್ಧೀಕರಣ ಘಟಕ ದುರಸ್ತಿಗಾಗಿ 2.82 ಲಕ್ಷ ರೂ. ಬಿಲ್ಲು ತೋರಿಸಲಾಗಿದೆ. ಈ ಕುರಿತು ಲೋಕಾಯುಕ್ತರಿಗೆ ದೂರು ನೀಡಲಾಗುವುದು ಎಂದರು.

ಬಿಜೆಪಿ ಪುರಸಭೆ ಸದಸ್ಯ ಶಿವಕುಮಾರ ಪೋಚಾಲಿ, ಬಿಎಸ್ಪಿ ಸದಸ್ಯ ಸುಶೀಲಕುಮಾರ ಬೊಮ್ಮನಳ್ಳಿ, ಬಸವರಾಜ ಶಿರಸಿ, ಕಾಂಗ್ರೆಸ್‌ ಮುಖಂಡರಾದ ಗೋಪಾಲರಾವ್‌ ಕಟ್ಟಿಮನಿ, ಖಲೀಲ ಅಹಮೆದ್‌, ಮಹಮ್ಮದ ಹಾದಿ ಇನ್ನಿತರರಿದ್ದರು.

ಟಾಪ್ ನ್ಯೂಸ್

ಆಸ್ಟ್ರೇಲಿಯನ್‌ ಓಪನ್‌ ಸೆಮಿಫೈನಲ್‌: ಬಾರ್ಟಿ-ಕೀಸ್‌; ಬೆರೆಟಿನಿ-ನಡಾಲ್‌ ಮುಖಾಮುಖಿ

ಆಸ್ಟ್ರೇಲಿಯನ್‌ ಓಪನ್‌ ಸೆಮಿಫೈನಲ್‌: ಬಾರ್ಟಿ-ಕೀಸ್‌; ಬೆರೆಟಿನಿ-ನಡಾಲ್‌ ಮುಖಾಮುಖಿ

ಫುಟ್ ಬಾಲ್‌ ಪಂದ್ಯದ ವೇಳೆ ನೂಕುನುಗ್ಗಲು: 8 ಸಾವು

ಫುಟ್ ಬಾಲ್‌ ಪಂದ್ಯದ ವೇಳೆ ನೂಕುನುಗ್ಗಲು: 8 ಸಾವು

ವನಿತಾ ಟಿ20 ರ್‍ಯಾಂಕಿಂಗ್‌: ಶಫಾಲಿ ವರ್ಮ ಮತ್ತೆ ನಂ.1

ವನಿತಾ ಟಿ20 ರ್‍ಯಾಂಕಿಂಗ್‌: ಶಫಾಲಿ ವರ್ಮ ಮತ್ತೆ ನಂ.1

ಅಪಘಾತದಲ್ಲಿ ಮರ್ಮಾಂಗ ಶಾಶ್ವತ ಊನ : ಯುವಕನಿಗೆ 17 ಲಕ್ಷ ರೂ. ಪರಿಹಾರ ನೀಡಲು ಹೈಕೋರ್ಟ್‌ ಆದೇಶ

ಅಪಘಾತದಲ್ಲಿ ಮರ್ಮಾಂಗ ಶಾಶ್ವತ ಊನ : ಯುವಕನಿಗೆ 17 ಲಕ್ಷ ರೂ. ಪರಿಹಾರ ನೀಡಲು ಹೈಕೋರ್ಟ್‌ ಆದೇಶ

ಪ್ರೊ ಕಬಡ್ಡಿ: ಹರ್ಯಾಣ ಸ್ಟೀಲರ್-ತೆಲುಗು ಟೈಟಾನ್ಸ್‌ ಪಂದ್ಯ ಡ್ರಾ

ಪ್ರೊ ಕಬಡ್ಡಿ: ಹರ್ಯಾಣ ಸ್ಟೀಲರ್-ತೆಲುಗು ಟೈಟಾನ್ಸ್‌ ಪಂದ್ಯ ಡ್ರಾ

ಕೂದಲು  ರಫ್ತಿಗೆ  ನಿರ್ಬಂಧ ವಿಧಿಸಿದ ಕೇಂದ್ರ ಸರ್ಕಾರ

ಕೂದಲು ರಫ್ತಿಗೆ ನಿರ್ಬಂಧ ವಿಧಿಸಿದ ಕೇಂದ್ರ ಸರ್ಕಾರ

ಬಿಎಂಡಬ್ಲ್ಯೂ ಎಕ್ಸ್‌ 3 ಬಿಡುಗಡೆ; ಎರಡು ವೇರಿಯೆಂಟ್‌ಗಳಲ್ಲಿ ಕಾರು ಲಭ್ಯ

ಬಿಎಂಡಬ್ಲ್ಯೂ ಎಕ್ಸ್‌ 3 ಬಿಡುಗಡೆ; ಎರಡು ವೇರಿಯೆಂಟ್‌ಗಳಲ್ಲಿ ಕಾರು ಲಭ್ಯಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15achive

ಆರ್ಥಿಕ ಸಬಲತೆ ಸಾಧಿಸಲು ಸ್ವ-ಸಹಾಯ ಸಂಘ ಸಹಕಾರಿ

14bridge

ಕಂಚನಾಳ ಬ್ರಿಡ್ಜ್ ಕಂ ಬ್ಯಾರೇಜ್‌ ಅಡಿಗಲ್ಲು

13transfer

ಇನಾಂದಾರ ವರ್ಗಾವಣೆ ರದ್ದುಪಡಿಸಲು ಆಗ್ರಹ

11sslc

ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳಕ್ಕೆ ಕ್ರಮ: ಡಾ| ಅಜಯಸಿಂಗ್‌

10achive

ಸಾಧನೆಗೆ ಅಸಾಧ್ಯವಾಗದ್ದುಯಾವುದೂ ಇಲ್ಲ

MUST WATCH

udayavani youtube

73ನೇ ಗಣರಾಜ್ಯೋತ್ಸವ ಹಿನ್ನೆಲೆ ರಾಷ್ಟ್ರವನ್ನುದ್ದೇಶಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾಷಣ

udayavani youtube

ಮದುವೆ ದಿನದಂದು ಕಾಫಿದೊರೆ ಸಿದ್ದಾರ್ಥ ಹೆಗ್ಗಡೆ ಅವರಿಗೆ ನುಡಿ ನಮನ ಸಲ್ಲಿಸಿದ ಮದುಮಗ

udayavani youtube

ಅಭಿಮಾನದಿಂದ ಹಾಕಿದ ಕೇಸರಿ ರುಮಾಲು ಕಿತ್ತೆಸೆದ ಸಿದ್ದರಾಮಯ್ಯ ! ದಂಗಾದ ಅಭಿಮಾನಿ

udayavani youtube

ಮುತ್ತಿನ ಪ್ರಕರಣ : ಶಿಲ್ಪಾ ಶೆಟ್ಟಿಯನ್ನು ’ಸಂತ್ರಸ್ತೆ’ ಎಂದ ಮುಂಬೈ ಕೋರ್ಟ್

udayavani youtube

ವಾಹನ ಸವಾರರ ಗೋಳು ಕೇಳುವವರು ಯಾರು

ಹೊಸ ಸೇರ್ಪಡೆ

ಆಸ್ಟ್ರೇಲಿಯನ್‌ ಓಪನ್‌ ಸೆಮಿಫೈನಲ್‌: ಬಾರ್ಟಿ-ಕೀಸ್‌; ಬೆರೆಟಿನಿ-ನಡಾಲ್‌ ಮುಖಾಮುಖಿ

ಆಸ್ಟ್ರೇಲಿಯನ್‌ ಓಪನ್‌ ಸೆಮಿಫೈನಲ್‌: ಬಾರ್ಟಿ-ಕೀಸ್‌; ಬೆರೆಟಿನಿ-ನಡಾಲ್‌ ಮುಖಾಮುಖಿ

ಫುಟ್ ಬಾಲ್‌ ಪಂದ್ಯದ ವೇಳೆ ನೂಕುನುಗ್ಗಲು: 8 ಸಾವು

ಫುಟ್ ಬಾಲ್‌ ಪಂದ್ಯದ ವೇಳೆ ನೂಕುನುಗ್ಗಲು: 8 ಸಾವು

ವನಿತಾ ಟಿ20 ರ್‍ಯಾಂಕಿಂಗ್‌: ಶಫಾಲಿ ವರ್ಮ ಮತ್ತೆ ನಂ.1

ವನಿತಾ ಟಿ20 ರ್‍ಯಾಂಕಿಂಗ್‌: ಶಫಾಲಿ ವರ್ಮ ಮತ್ತೆ ನಂ.1

ಅಪಘಾತದಲ್ಲಿ ಮರ್ಮಾಂಗ ಶಾಶ್ವತ ಊನ : ಯುವಕನಿಗೆ 17 ಲಕ್ಷ ರೂ. ಪರಿಹಾರ ನೀಡಲು ಹೈಕೋರ್ಟ್‌ ಆದೇಶ

ಅಪಘಾತದಲ್ಲಿ ಮರ್ಮಾಂಗ ಶಾಶ್ವತ ಊನ : ಯುವಕನಿಗೆ 17 ಲಕ್ಷ ರೂ. ಪರಿಹಾರ ನೀಡಲು ಹೈಕೋರ್ಟ್‌ ಆದೇಶ

ಪ್ರೊ ಕಬಡ್ಡಿ: ಹರ್ಯಾಣ ಸ್ಟೀಲರ್-ತೆಲುಗು ಟೈಟಾನ್ಸ್‌ ಪಂದ್ಯ ಡ್ರಾ

ಪ್ರೊ ಕಬಡ್ಡಿ: ಹರ್ಯಾಣ ಸ್ಟೀಲರ್-ತೆಲುಗು ಟೈಟಾನ್ಸ್‌ ಪಂದ್ಯ ಡ್ರಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.