ಚಿಂಚೋಳಿ ಸಕ್ಕರೆ ಕಾರ್ಖಾನೆ ಆರಂಭಕ್ಕೆಸಿಹಿ ಸುದ್ದಿ ಪ್ರಕಟಿಸುವರೇ ಮುಖ್ಯಮಂತ್ರಿ?

ಮನ್ನಾಎಕ್ಕೆಳ್ಳಿ, ಮಗದಾಳ, ಹಳ್ಳಿಖೇಡ, ಭಂಗೂರ ಕಾರ್ಖಾನೆಗಳಿಗೆ ಕಬ್ಬು ಸಾಗಿಸುತ್ತಿದ್ದಾರೆ.

Team Udayavani, Sep 17, 2021, 6:03 PM IST

ಚಿಂಚೋಳಿ ಸಕ್ಕರೆ ಕಾರ್ಖಾನೆ ಆರಂಭಕ್ಕೆಸಿಹಿ ಸುದ್ದಿ ಪ್ರಕಟಿಸುವರೇ ಮುಖ್ಯಮಂತ್ರಿ?

ಚಿಂಚೋಳಿ: ಇಲ್ಲಿನ ಸಕ್ಕರೆ ಕಾರ್ಖಾನೆ ಆರಂಭಿಸುವುದಾಗಿ ಚುನಾವಣೆಗೂ ಮುನ್ನ ಬಿಜೆಪಿ ಮುಖಂಡರು ನೀಡಿದ ಭರವಸೆ ಹಾಗೆ ಉಳಿದುಕೊಂಡಿದ್ದು, “ಕಲ್ಯಾಣ ಕರ್ನಾಟಕ ಉತ್ಸವ’ ದಿನದಂದು ಮುಖ್ಯಮಂತ್ರಿಗಳು ಸೂಕ್ತ ನಿರ್ಧಾರ ಪ್ರಕಟಿಸಿ ಸಿಹಿ ಸುದ್ದಿ ನೀಡುವರೆಂಬ ಭರವಸೆ ಇಟ್ಟುಕೊಂಡಿದ್ದಾರೆ ರೈತರು.

ಪಟ್ಟಣದ ಹೊರ ವಲಯ ಚಿಂಚೋಳಿ-ಕಲಬುರಗಿ ರಾಜ್ಯ ಹೆದ್ದಾರಿ ಪಕ್ಕದಲ್ಲಿ 1998ರಲ್ಲಿ ಚಿಂಚೋಳಿ ಸಕ್ಕರೆ ಕಾರ್ಖಾನೆ ಆರಂಭಿಸಲು 200 ಎಕರೆ ಜಮೀನು ಖರೀದಿಸಿ, ಅತ್ಯಾಧುನಿಕ ಕಬ್ಬು ನುರಿಸುವ ಯಂತ್ರಗಳನ್ನು ಅಳವಡಿಸಲಾಗಿತ್ತು. ನಂತರ ಹಣಕಾಸು ತೊಂದರೆಯಿಂದ ಕಳೆದ ಎರಡು ದಶಕಗಳಿಂದ ಈ ಕಾರ್ಖಾನೆ ಆರಂಭವಾಗೇ ಇಲ್ಲ.

ತಾಲೂಕಿನಲ್ಲಿ ಕುಂಚಾವರಂ, ವೆಂಕಟಾಪುರ, ಜಿಲವರ್ಷ, ಶಾದಿಪುರ, ಸಂಗಾಪುರ, ಮೊಗದಂಪುರ, ಶಿವರಾಮ ಪುರ, ಪೋಚಾವರಂ, ಸುಲೇಪೇಟ, ಐನೋಳಿ, ದೇಗಲಮಡಿ, ಚಿಮ್ಮನಚೋಡ, ಶಿವರೆಡ್ಡಿಪಳ್ಳಿ, ಲಚಮಾಸಾಗರ, ಬೊನಸಪುರ ಗ್ರಾಮಗಳಲ್ಲಿರುವ ಕಬ್ಬು ಬೆಳೆಗಾರರು ನೆರೆಯ ತೆಲಂಗಾಣದ ಕೊಹಿರ, ಜಹಿರಾಬಾದ್‌, ಯಾದಗಿರಿ, ಮನ್ನಾಎಕ್ಕೆಳ್ಳಿ, ಮಗದಾಳ, ಹಳ್ಳಿಖೇಡ, ಭಂಗೂರ ಕಾರ್ಖಾನೆಗಳಿಗೆ ಕಬ್ಬು ಸಾಗಿಸುತ್ತಿದ್ದಾರೆ.

ತಾಲೂಕಿನಲ್ಲಿ ಒಟ್ಟು 3500 ಹೆಕ್ಟೇರ್‌ ಜಮೀನಿನಲ್ಲಿ ರೈತರು ಕಬ್ಬು ಬೆಳೆಯುತ್ತಿದ್ದು, ಆದರೆ ಮಾರಾಟ ಮಾಡಿಕೊಳ್ಳಲು ಬೇರೆ ಜಿಲ್ಲೆ ಹಾಗೂ ರಾಜ್ಯದಲ್ಲಿರುವ ಕಾರ್ಖಾನೆ ಅವಲಂಬಿಸುವಂತಾಗಿದೆ. ಚಿಂಚೋಳಿ ಮತಕ್ಷೇತ್ರಕ್ಕೆ 2019ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿ.ಎಸ್‌.ಯಡಿಯೂರಪ್ಪ ಅವರು ಚುನಾವಣೆ ಪ್ರಚಾರ ಭಾಷಣದಲ್ಲಿ ಚಿಂಚೋಳಿ ಮತಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಗೆಲುವು ಸಾ ಧಿಸಿದರೆ ಒಂದು ವರ್ಷದೊಳಗೆ ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದರು. ನಂತರ ಅವರು ಮುಖ್ಯಮಂತ್ರಿಯಾಗಿ ಎರಡು ವರ್ಷ ಅಧಿಕಾರ ಪೂರೈಸಿದರೂ ಬೇಡಿಕೆ ಇನ್ನೂ ಈಡೇರಿಲ್ಲ.

ಚಿಂಚೋಳಿ ತಾಲೂಕಿನಲ್ಲಿ ನನೆಗುದಿಗೆ ಬಿದ್ದಿರುವ ಸಕ್ಕರೆ ಕಾರ್ಖಾನೆ ಆರಂಭಿಸಬೇಕೆಂದು ಕಳೆದ ಎರಡು ದಶಕಗಳಿಂದ ರೈತರ ಪರವಾಗಿ ಹೋರಾಟ ಮಾಡುತ್ತಲೇ ಬರುತ್ತಿದ್ದೇವೆ. ಬಿಜೆಪಿ ಮುಖಂಡರು ನೀಡಿದ ಭರವಸೆ ಈಡೇರಿಸಬೇಕು.
ಭೀಮಶೆಟ್ಟಿ ಎಂಪಳ್ಳಿ, ರೈತ ಸಂಘದ ಮುಖಂಡ

ಸಕ್ಕರೆ ಕಾರ್ಖಾನೆ ಆರಂಭಿಸಬೇಕೆನ್ನುವುದು ಈ ಭಾಗದ ರೈತರ ಅನೇಕ ವರ್ಷಗಳ ಬೇಡಿಕೆಯಾಗಿದೆ. ರಾಜ್ಯ ಬಿಜೆಪಿ ಸರ್ಕಾರ ಇದಕ್ಕೆ ಸ್ಪಂದಿಸಬೇಕು.
ಸಿದ್ಧಲಿಂಗಯ್ಯ ಸ್ವಾಮಿ,
ತಾಲೂಕು ಕರ್ನಾಟಕ ರೈತ ಸಂಘದ ಅಧ್ಯಕ್ಷ

ಸಕ್ಕರೆ ಕಾರ್ಖಾನೆ ಯಾವಾಗ ಆರಂಭಗೊಳ್ಳಲಿದೆ ಎಂದು ಈ ಭಾಗದ ಕಬ್ಬು ಬೆಳೆಗಾರರು ಕಾಯುತ್ತಿದ್ದಾರೆ. ಉಪ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೀಡಿದ ಭರವಸೆ ಇನ್ನೂ ಈಡೇರಿಲ್ಲ. ಸಕ್ಕರೆ ಕಾರ್ಖಾನೆ ಆರಂಭಿಸುವುದಾಗಿ ಹೇಳಿ ಅಧಿಕಾರಕ್ಕೆ ಬಂದು ಈಗ ಮರೆತಿದ್ದಾರೆ.
ಶರಣಬಸಪ್ಪ ಮಮಶೆಟ್ಟಿ,
ಜಿಲ್ಲಾಧ್ಯಕ್ಷ, ಕರ್ನಾಟಕ ಪ್ರಾಂತ ರೈತ ಸಂಘ

*ಶಾಮರಾವ ಚಿಂಚೋಳಿ

ಟಾಪ್ ನ್ಯೂಸ್

ಅಕ್ರಮ ಗೋ ಸಾಗಾಣಿಕೆ ವಿರುದ್ಧ ಕಠಿಣ ಕ್ರಮ: ಗೃಹ ಸಚಿವ  ಆರಗ ಜ್ಞಾನೇಂದ್ರ

ಅಕ್ರಮ ಗೋ ಸಾಗಾಣಿಕೆ ವಿರುದ್ಧ ಕಠಿಣ ಕ್ರಮ: ಗೃಹ ಸಚಿವ  ಆರಗ ಜ್ಞಾನೇಂದ್ರ

Untitled-2

ಬೀದರ್: ಬಿಸಿಯೂಟದಲ್ಲಿ ಮೊಟ್ಟೆ: ಯೋಜನೆ ಕೈಬಿಡಲು ಆಗ್ರಹ

ದನಗಳ್ಳರನ್ನು ಹಿಡಿಯಲು ಹೋದವರ ಮೇಲೆ ವಾಹನ ಚಲಾಯಿಸಿ ಹಲ್ಲೆ: ಇಬ್ಬರಿಗೆ ಗಂಭೀರ ಗಾಯ

ದನಗಳ್ಳರನ್ನು ಹಿಡಿಯಲು ಹೋದವರ ಮೇಲೆ ವಾಹನ ಚಲಾಯಿಸಿ ಹಲ್ಲೆ: ಇಬ್ಬರಿಗೆ ಗಂಭೀರ ಗಾಯ

ಮುಂಬಯಿ ಷೇರುಪೇಟೆಯ ಸೆನ್ಸೆಕ್ಸ್ 195 ಅಂಕ ಇಳಿಕೆ; 17 ಸಾವಿರಕ್ಕಿಂತ ಕೆಳಕ್ಕೆ ಕುಸಿದ ನಿಫ್ಟಿ

ಮುಂಬಯಿ ಷೇರುಪೇಟೆಯ ಸೆನ್ಸೆಕ್ಸ್ 195 ಅಂಕ ಇಳಿಕೆ; 17 ಸಾವಿರಕ್ಕಿಂತ ಕೆಳಕ್ಕೆ ಕುಸಿದ ನಿಫ್ಟಿ

ಡಿಕೆಶಿ, ಸಿದ್ಧರಾಮಯ್ಯನವರು ಭಂಡಾಸುರ- ಮಂಡಾಸುರರು: ಶ್ರೀರಾಮುಲು

ಡಿಕೆಶಿ, ಸಿದ್ದರಾಮಯ್ಯನವರು ಭಂಡಾಸುರ- ಮಂಡಾಸುರರು: ಶ್ರೀರಾಮುಲು

ಯಾವುದೇ ಕಾರಣಕ್ಕೂ ಸನ್ ಬರ್ನ್ ಸಂಗೀತೋತ್ಸವಕ್ಕೆ ಅವಕಾಶ ನೀಡುವುದಿಲ್ಲ: ಪ್ರಮೋದ್ ಸಾವಂತ್

ಯಾವುದೇ ಕಾರಣಕ್ಕೂ ಸನ್ ಬರ್ನ್ ಸಂಗೀತೋತ್ಸವಕ್ಕೆ ಅವಕಾಶ ನೀಡುವುದಿಲ್ಲ: ಪ್ರಮೋದ್ ಸಾವಂತ್

ಟ್ರೈಲರ್ ನಲ್ಲಿ ಮಿಂಚು ಹರಿಸಿದ ರಣವೀರ್ ಸಿಂಗ್ ಅಭಿನಯದ ‘83’

ಟ್ರೈಲರ್ ನಲ್ಲಿ ಮಿಂಚು ಹರಿಸಿದ ರಣವೀರ್ ಸಿಂಗ್ ಅಭಿನಯದ ‘83’ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಈಶ್ವರಪ್ಪ

ಹೈಕಮಾಂಡ್ ನಿಂದ ಸಚಿವರ ರಹಸ್ಯ ವರದಿ ವಿಚಾರ ನನಗೆ ಗೊತ್ತಿಲ್ಲ: ಈಶ್ವರಪ್ಪ

11police’

ಅಬಕಾರಿ ದಾಳಿ: 1 ಲಕ್ಷ ಮೌಲ್ಯದ ಮದ್ಯ ಜಪ್ತಿ

10crop

ಬೆಳೆ ಹಾನಿ; ಎಕರೆಗೆ 40 ಸಾವಿರ ನೀಡಲು ರೈತರ ಆಗ್ರಹ

8bankloan

ಸಾಲ ಪಡೆಯಲು ಜನಜಂಗುಳಿ

7devolop

ವಿಜ್ಞಾನ ಬೆಳವಣಿಗೆಗೆ ಕೊಡುಗೆ ನೀಡಿ: ಅಗಸರ

MUST WATCH

udayavani youtube

ಕಸ್ತೂರಿರಂಗನ್ ಸಮೀಕ್ಷೆ ಅವೈಜ್ಞಾನಿಕ !?

udayavani youtube

ಭಾರತದಲ್ಲಿ ವ್ಯಾಸಂಗ ಮಾಡಿದ್ದನಂತೆ ಈ ತಾಲಿಬಾನ್‌ ವಕ್ತಾರ!

udayavani youtube

ಉಡುಪಿ-ಕಾಸರಗೋಡು 400KV ವಿದ್ಯುತ್ ಮಾರ್ಗ ವಿರೋಧಿಸಿ ರೈತರ ಬೃಹತ್ ಪ್ರತಿಭಟನೆ

udayavani youtube

Side effects ಇಲ್ಲ ಎಂದು ಖುದ್ದು DC ಬರೆದುಕೊಟ್ಟರು !

udayavani youtube

ಈ ನೀರು ಕುಡಿದ್ರೆ ಕೊರೋನಾ, ಓಮಿಕ್ರಾನ್ ಅಲ್ಲ ಇನ್ನೂ ಅಪಾಯಕಾರಿ ರೋಗ ಬರಬಹುದು

ಹೊಸ ಸೇರ್ಪಡೆ

ಅಕ್ರಮ ಗೋ ಸಾಗಾಣಿಕೆ ವಿರುದ್ಧ ಕಠಿಣ ಕ್ರಮ: ಗೃಹ ಸಚಿವ  ಆರಗ ಜ್ಞಾನೇಂದ್ರ

ಅಕ್ರಮ ಗೋ ಸಾಗಾಣಿಕೆ ವಿರುದ್ಧ ಕಠಿಣ ಕ್ರಮ: ಗೃಹ ಸಚಿವ  ಆರಗ ಜ್ಞಾನೇಂದ್ರ

ಕೃಷಿ ಮೇಳ

ನಾಳೆ, ನಾಡಿದ್ದು ಕೃಷಿ ಮೇಳ

ಡಿ.13ಕ್ಕೆ ನಮ್ಮನೆ ಹಬ್ಬಕ್ಕೆ ದಶಮಾನೋತ್ಸವ, ‘ವಂಶೀವಿಲಾಸ’ ಲೋಕಾರ್ಪಣೆ

ಡಿ.13ಕ್ಕೆ ನಮ್ಮನೆ ಹಬ್ಬಕ್ಕೆ ದಶಮಾನೋತ್ಸವ, ‘ವಂಶೀವಿಲಾಸ’ ಲೋಕಾರ್ಪಣೆ

ಸ್ಥಳೀಯ ಸಂಸ್ಥೆ ಶಕ್ತಿ ಕುಂದಿಸುತ್ತಿದೆ ಬಿಜೆಪಿ ಸರ್ಕಾರ: ಅನ್ಸಾರಿ

ಸ್ಥಳೀಯ ಸಂಸ್ಥೆ ಶಕ್ತಿ ಕುಂದಿಸುತ್ತಿದೆ ಬಿಜೆಪಿ ಸರ್ಕಾರ: ಅನ್ಸಾರಿ

ರೂಪಾಂತರಿ ಆತಂಕ; ಮೈಮರೆತ ಜನತೆ

ರೂಪಾಂತರಿ ಆತಂಕ; ಮೈಮರೆತ ಜನತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.