ಒಂದೇ ಕುಟುಂಬದ 12 ಮಂದಿಗೆ ಪಾಸಿಟಿವ್
Team Udayavani, Jul 6, 2020, 10:52 AM IST
ಜೇವರ್ಗಿ: ತಾಲೂಕಿನ ಆಂದೋಲಾ ಗ್ರಾಮದ ಒಂದೇ ಕುಟುಂಬದ 12 ಜನರು ಸೇರಿದಂತೆ ಪಟ್ಟಣದ ಬಸ್ ಡಿಪೋ ಹತ್ತಿರದ ಕ್ವಾರಂಟೈನ್ ಕೇಂದ್ರದಲ್ಲಿದ್ದ ಪತಿ, ಪತ್ನಿ ಸೇರಿದಂತೆ ಒಟ್ಟು 14 ಜನರಿಗೆ ಕೋವಿಡ್ ಸೋಂಕು ತಗುಲಿದೆ.
ಕಳೆದ ಒಂದು ವಾರದ ಹಿಂದೆ ಮುಂಬೈ ಮೂಲದ ವ್ಯಕ್ತಿಯೊಬ್ಬ ಆಂದೋಲಾ ಗ್ರಾಮಕ್ಕೆ ಬಂದಿದ್ದ. ಆತನಿಗೆ ಕೋವಿಡ್ ಸೋಂಕು ತಗುಲಿದ ಪರಿಣಾಮ ಕಲಬುರಗಿ ನಗರದ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವ್ಯಕ್ತಿಯ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ ಆಂದೋಲಾ ಗ್ರಾಮದ ಆಶಾ ಕಾರ್ಯಕರ್ತೆ (20) ಸೇರಿ 48-ಮಹಿಳೆ 17-ಯುವತಿ, 30-ಮಹಿಳೆ, 40- ಮಹಿಳೆ, 50-ಮಹಿಳೆ, 20-ಯುವಕ, 38- ಪುರುಷ, 12-ಬಾಲಕ, 10-ಬಾಲಕ, 27-ಪುರುಷ, 18-ಯುವಕ ಹಾಗೂ ಪಟ್ಟಣದ ಡಿಪೋ ಹತ್ತಿರದ ಕ್ವಾರಂಟೈನ್ ಕೇಂದ್ರದಲ್ಲಿರುವ ಪತಿ-51, ಪತ್ನಿ-41ಗೆ ಸೋಂಕು ದೃಢಪಟ್ಟಿದೆ. ಇವರನ್ನು ಕಲಬುರಗಿ ನಗರದ ಕೋವಿಡ್ ನಿಗದಿತ ಆಸ್ಪತ್ರೆ ಜಿಮ್ಸ್ಗೆ ದಾಖಲು ಮಾಡಲಾಗಿದೆ. ಅಲ್ಲದೇ ಆಂದೋಲಾ ಗ್ರಾಮವನ್ನು ಸೀಲ್ ಡೌನ್ ಮಾಡಲಾಗಿದೆ.
ಸ್ಥಳಕ್ಕೆ ತಹಶೀಲ್ದಾರ್ ಸಿದರಾಯ ಭೋಸಗಿ, ತಾಲೂಕು ಆರೋಗ್ಯಾಧಿಕಾರಿ ಡಾ| ಸಿದ್ಧು ಪಾಟೀಲ, ಸಿಪಿಐ ರಮೇಶ ರೊಟ್ಟಿ, ಜೇವರ್ಗಿ ಪಿಎಸ್ಐ ಮಂಜುನಾಥ ಹೂಗಾರ, ನೆಲೋಗಿ ಪಿಎಸ್ಐ ಸಂಗಮೇಶ ಅಂಗಡಿ, ಯಡ್ರಾಮಿ ಪಿಎಸ್ಐ ಗಜಾನಂದ ಬಿರೆದಾರ ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ
Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ
ಸಚಿವರು ಲೀಡ್ ಕೊಡಿಸದಿದ್ದರೆ ಪದತ್ಯಾಗ ಅನಿವಾರ್ಯ: ಪ್ರಿಯಾಂಕ್
ಮೋದಿ ರಾಷ್ಟ್ರ ಮಟ್ಟದಲ್ಲಿ ಸುಳ್ಳು ಹೇಳಿದರೆ, ಜಾಧವ್ ಜಿಲ್ಲಾ ಮಟ್ಟದಲ್ಲಿ… ಖರ್ಗೆ ವಾಗ್ದಾಳಿ