Udayavni Special

ಉದ್ಯೋಗ ಮೇಳ: 353 ಜನ ಆಯ್ಕೆ; 14 ಕಂಪನಿಗಳು ಭಾಗಿ

ಜಿಂದಾಲ್‌ ಸೇರಿದಂತೆ ಹಲವು ಕಂಪನಿಗಳಿಗಾಗಿ 155 ಜನರನ್ನು ಅಪ್ರಂಟಿಸ್‌ ಶಿಪ್‌ಗೆ ನೇಮಕ

Team Udayavani, Jan 22, 2021, 3:41 PM IST

ಉದ್ಯೋಗ ಮೇಳ: 353 ಜನ ಆಯ್ಕೆ; 14 ಕಂಪನಿಗಳು ಭಾಗಿ

ಕಲಬುರಗಿ: ನಗರದಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ಉದ್ಯೋಗ ಮೇಳದಲ್ಲಿ 353ಕ್ಕೂ ಅಧಿಕ ಜನ ನಿರುದ್ಯೋಗಿ ಯುವಕ ಮತ್ತು ಯುವತಿಯರು ವಿವಿಧ ಕಂಪನಿಗಳಿಗೆ ಸ್ಥಳದಲ್ಲೇ ಆಯ್ದೆಯಾದರು. ಇಲ್ಲಿನ ಎಂ.ಎಸ್‌.ಕೆ.ಮಿಲ್‌ ರಸ್ತೆಯಲ್ಲಿರುವ ಸರ್ಕಾರಿ ಕೈಗಾರಿಕಾ ಕೇಂದ್ರದ ಹಿಂಭಾಗದ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಆವರಣದಲ್ಲಿ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿತ್ತು. ಕಲಬುರಗಿ ಮತ್ತು ಬೆಂಗಳೂರು ಸೇರಿದಂತೆ ವಿವಿಧೆಡೆಯಿಂದ 14 ಕಂಪನಿಗಳು ಮೇಳದಲ್ಲಿ ಭಾಗವಹಿಸಿದ್ದವು.

ಜಿಲ್ಲಾದ್ಯಂತ ಒಟ್ಟಾರೆ 2,242 ನಿರುದ್ಯೋಗ ಯುವಕರು ಹಾಗೂ ಯುವತಿಯರು ಮೇಳದಲ್ಲಿ ಪಾಲ್ಗೊಂಡರು. ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ, ಐಟಿಐ, ಎಂಎಸ್ಸಿ, ಎಂಬಿಎ, ಡಿ.ಇಡಿ, ಬಿ.ಇಡಿ ಪೂರೈಸಿದ ವಿದ್ಯಾವಂತರು ಮೇಳಕ್ಕೆ ಆಗಮಿಸಿದ್ದರು. ಬಿಇ ಮೆಕ್ಯಾನಿಕಲ್‌ ಇಂಜಿನಿಯರಿಂಗ್‌ ಮಾಡಿದವರೂ ಭಾಗವಹಿಸಿದ್ದರು.

2,242 ಜನರ ಪೈಕಿ 353 ಜನರ ಸಂದರ್ಶನ ಮಾಡಿ ಉದ್ಯೋಗದ ಭರವಸೆ ನೀಡಲಾಯಿತು. ಅಲ್ಲಿಯೇ 14 ಯುವಕರಿಗೆ ಉದ್ಯೋಗ ಪ್ರಮಾಣಪತ್ರ ಕೊಟ್ಟು ಉದ್ಯೋಗ ಕಲ್ಪಿಸಲಾಯಿತು. ಅಲ್ಲದೇ, 253 ಯುವಕ ಹಾಗೂ ಯುವತಿಯರನ್ನು ನೇಮಕಕ್ಕೆ ಅಂತಿಮಗೊಳಿಸಿ, ನಿಗದಿತ ದಿನದಂದು ಮತ್ತೂಂದು ಸುತ್ತಿನ ಸಂದರ್ಶನಕ್ಕೆ ಬರುವಂತೆ ಕಂಪನಿಗಳು ಸೂಚಿಸಿದವು.

ಕೈಗಾರಿಕಾ ತರಬೇತಿ ಕೇಂದ್ರದಿಂದ ಜಿಂದಾಲ್‌ ಸೇರಿದಂತೆ ಹಲವು ಕಂಪನಿಗಳಿಗಾಗಿ 155 ಜನರನ್ನು ಅಪ್ರಂಟಿಸ್‌ ಶಿಪ್‌ಗೆ ನೇಮಕ ಮಾಡಿಕೊಳ್ಳಲಾಯಿತು. ಭಾರತ್‌ ಫೈನಾಶಿಯಲ್‌ ಲಿಮಿಟೆಡ್‌ಗೆ 24, ಸತ್ಯ ಮೈಕ್ರೊ ಕ್ಯಾಪಿಟಲ್‌ ಕಂಪನಿಗೆ 30, ಕಿರಣ ಇನ್ಫೋಟೆಕ್‌ಗೆ 16, ಅನ್ನಪೂರ್ಣ ಫೈನಾನ್ಸ್‌ಗೆ 17, ಸಾಯಿ ಫಾರ್ಮಿಕಲ್ಚರ್‌ಗೆ 26 ಮತ್ತು ಸ್ಪಂದನಾ ಬ್ರೈಟ್‌ ಪಿಚೂರ್‌ ಇನೋವೇಷನ್‌ ನಿಂದ 20, ಕರಾವಳಿ ಟೀಚರ್‌ ಸಂಸ್ಥೆಗೆ 22 ಜನರು ನೇಮಕಗೊಂಡರು.

ಪ್ರತಿ ಜಿಲ್ಲೆಯಿಂದ ಪ್ರತಿ ವರ್ಷ ಐದು ಸಾವಿರ ಐಟಿಐ ವಿದ್ಯಾರ್ಥಿಗಳಿಗೆ ಅಪ್ರಂಟಿಸ್‌ ಶಿಪ್‌ ಮಾಡಲು ಅವಕಾಶ ಇದೆ. ಕೇಂದ್ರ ಸರ್ಕಾರ ಅಪ್ರಂಟಿಸ್‌ಶಿಪ್‌ ಯುವಕರಿಗೆ ಕನಿಷ್ಠ 7 ಸಾವಿರ ರೂ. ವೇತನ ನಿಗದಿ ಮಾಡಿದೆ. ಕೆಲ ಕಂಪನಿಗಳು ಇದಕ್ಕೂ ಹೆಚ್ಚಿನ ವೇತನ ನೀಡಿ ಅಪ್ರಂಟಿಸ್‌ಶಿಪ್‌ ಆಯ್ಕೆ ಮಾಡಿಕೊಳ್ಳುತ್ತೇವೆ ಎಂದು ಕೈಗಾರಿಕಾ ತರಬೇತಿ ಕೇಂದ್ರದ ಸಹಾಯಕ ನಿರ್ದೇಶಕ ಡಾ| ಶರಣಬಸಪ್ಪ ಸಂಡು ಮಾಹಿತಿ ನೀಡಿದರು.

ಉದ್ಯೋಗ ಮೇಳದಲ್ಲಿ ಆಯ್ಕೆಯಾದ ಯುವಕ, ಯುವತಿಯರು ಉದ್ಯೋಗಕ್ಕೆ ಸೇರಿಕೊಳ್ಳಬೇಕು. ಆಗಲೇ ಉದ್ಯೋಗ ಮೇಳ ಸಾರ್ಥಕತೆ ಆಗುತ್ತದೆ. ಜತೆಗೆ
ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಇಂತಹ ಮೇಳದಲ್ಲಿ ನಿರುದ್ಯೋಗಿಗಳು ಪಾಲ್ಗೊಳ್ಳಲು ವಿಶ್ವಾಸ ಮೂಡುತ್ತದೆ.
ಭಾರತಿ ಎಸ್‌.
ಪ್ರಭಾರಿ ಸಹಾಯಕ ನಿದೇರ್ಶಕಿ,
ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ

ಟಾಪ್ ನ್ಯೂಸ್

ಕೋವಿಡ್ ಹೆಚ್ಚಳ ಪಾಕಿಸ್ಥಾನ ಸೂಪರ್‌ ಲೀಗ್ ಮುಂದೂಡಿಕೆ

ಕೋವಿಡ್ ಹೆಚ್ಚಳ ಪಾಕಿಸ್ಥಾನ ಸೂಪರ್‌ ಲೀಗ್ ಮುಂದೂಡಿಕೆ

Untitled-1

ದುಬೈನಲ್ಲಿ 24 ಕೋಟಿ ರೂ. ಲಾಟರಿ ಗೆದ್ದ ಶಿವಮೊಗ್ಗದ ಅದೃಷ್ಟವಂತ!

ಮಗಳ ತಲೆ ಕಡಿದು, ಕೈಯಲ್ಲಿ ಹಿಡಿದು ತಣ್ಣಗೆ ನಡೆದ ಅಪ್ಪ

ಮಗಳ ತಲೆ ಕಡಿದು, ಕೈಯಲ್ಲಿ ಹಿಡಿದು ತಣ್ಣಗೆ ನಡೆದ ಅಪ್ಪ

ನಂದಿಯ ಶ್ರೀ ಭೋಗನಂದೀಶ್ವರ ದೇವಾಲಯದಲ್ಲಿ ಹುಂಡಿ ಹಣ ಕದ್ದಿದ್ದ ಆರೋಪಿಗಳ ಬಂಧನ

ನಂದಿಯ ಶ್ರೀ ಭೋಗನಂದೀಶ್ವರ ದೇವಾಲಯದಲ್ಲಿ ಹುಂಡಿ ಹಣ ಕದ್ದಿದ್ದ ಆರೋಪಿಗಳ ಬಂಧನ

My sugar Factory

ಬಜೆಟ್‌ನಲ್ಲಿ ಮೈಷುಗರ್‌ಗೆ ಸಿಗುತ್ತಾ ಮುಕ್ತಿ !

ಕೃಷಿ ಇಲಾಖೆ ರಾಯಭಾರಿಯಾಗಿ ದರ್ಶನ್ ನಾಳೆ ಅಧಿಕಾರ ಸ್ವೀಕಾರ

Siddaramaiah

ಸಚಿವರಾದವರು ಇಂತಹ ಕೆಲಸ ಮಾಡುತ್ತಾರಾ?: ಸಿದ್ದರಾಮಯ್ಯಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಲಸಿಕೆ  ಸ್ವೀಕರಿಸಲು ಸರ್ವರ್‌ ಅಡ್ಡಿ!

ಲಸಿಕೆ  ಸ್ವೀಕರಿಸಲು ಸರ್ವರ್‌ ಅಡ್ಡಿ!

ಹೀಗೊಂದು ವೀಗನ್‌ ಶೈಲಿಯ ಮದುವೆ!

ಹೀಗೊಂದು ವೀಗನ್‌ ಶೈಲಿಯ ಮದುವೆ!

ಜಾಗತಿಕ ವಿವಿ ರ್‍ಯಾಂಕಿಂಗ್‌ಗೆ ಮಾಹೆ

ಜಾಗತಿಕ ವಿವಿ ರ್‍ಯಾಂಕಿಂಗ್‌ಗೆ ಮಾಹೆ

ಕೋವಿಡ್ ಹೆಚ್ಚಳ ಪಾಕಿಸ್ಥಾನ ಸೂಪರ್‌ ಲೀಗ್ ಮುಂದೂಡಿಕೆ

ಕೋವಿಡ್ ಹೆಚ್ಚಳ ಪಾಕಿಸ್ಥಾನ ಸೂಪರ್‌ ಲೀಗ್ ಮುಂದೂಡಿಕೆ

“ಒಟಿಟಿ ಶೋ ಸೆನ್ಸಾರ್‌ ಅಗತ್ಯ’

“ಒಟಿಟಿ ಶೋ ಸೆನ್ಸಾರ್‌ ಅಗತ್ಯ’

MUST WATCH

udayavani youtube

ಸುಲಲಿತ ಜೀವನ ಸೂಚ್ಯಂಕ: ದೇಶದಲ್ಲಿ 20ನೇ ಸ್ಥಾನ ಪಡೆದ ಮಂಗಳೂರು

udayavani youtube

ಕೂದಲಿನ ಸಮಸ್ಯೆಗೂ ಪಿಸಿಓಡಿ ಗೂ ಏನು ಸಂಬಂಧ?

udayavani youtube

ಇಂದಿನ ಸುದ್ದಿ ಸಮಾಚಾರ | Udayavani 04-March-2021 News Bulletin | Udayavani

udayavani youtube

ಪುತ್ತೂರು: ಜೆಸಿಬಿಯಲ್ಲಿ ಗುಂಡಿ ಅಗೆಯುವ ವೇಳೆ ಮಣ್ಣಿನಡಿ ಸಿಲುಕಿದ ಕಾರ್ಮಿಕರು!

udayavani youtube

ಗದ್ದೆಗೆ ಉಪ್ಪುನೀರು ಹರಿದು ಬಂದು ಬೆಳೆಗಳು ನಾಶ! |Udayavani

ಹೊಸ ಸೇರ್ಪಡೆ

ಲಸಿಕೆ  ಸ್ವೀಕರಿಸಲು ಸರ್ವರ್‌ ಅಡ್ಡಿ!

ಲಸಿಕೆ  ಸ್ವೀಕರಿಸಲು ಸರ್ವರ್‌ ಅಡ್ಡಿ!

ಹೀಗೊಂದು ವೀಗನ್‌ ಶೈಲಿಯ ಮದುವೆ!

ಹೀಗೊಂದು ವೀಗನ್‌ ಶೈಲಿಯ ಮದುವೆ!

ಜಾಗತಿಕ ವಿವಿ ರ್‍ಯಾಂಕಿಂಗ್‌ಗೆ ಮಾಹೆ

ಜಾಗತಿಕ ವಿವಿ ರ್‍ಯಾಂಕಿಂಗ್‌ಗೆ ಮಾಹೆ

ಕೋವಿಡ್ ಹೆಚ್ಚಳ ಪಾಕಿಸ್ಥಾನ ಸೂಪರ್‌ ಲೀಗ್ ಮುಂದೂಡಿಕೆ

ಕೋವಿಡ್ ಹೆಚ್ಚಳ ಪಾಕಿಸ್ಥಾನ ಸೂಪರ್‌ ಲೀಗ್ ಮುಂದೂಡಿಕೆ

“ಒಟಿಟಿ ಶೋ ಸೆನ್ಸಾರ್‌ ಅಗತ್ಯ’

“ಒಟಿಟಿ ಶೋ ಸೆನ್ಸಾರ್‌ ಅಗತ್ಯ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.