ಹೆಚ್ಚಿದ ಭೀತಿ:ಲಾಕ್‌ಡೌನ್‌ಬಿಗಿ

ಬಡಾವಣೆಗಳಲ್ಲಿ ರಸ್ತೆ ಬಂದ್‌ ಮಾಡಿದ ಜನತೆ ಜನ ಸಂದಣಿ ಸೇರುತ್ತಿದ್ದ ಅಂಗಡಿ ಬಂದ್‌

Team Udayavani, Apr 10, 2020, 10:42 AM IST

10-April-01

ಕಲಬುರಗಿ: ಕಳೆದ ಮೂರು ದಿನಗಳಿಂದ ಕೊರೊನಾ ಸೋಂಕು ಭೀತಿ ಮತ್ತಷ್ಟು ಹೆಚ್ಚಾಗಿರುವುದರಿಂದ ಜಿಲ್ಲಾದ್ಯಂತ ಲಾಕ್‌ಡೌನ್‌ ಮತ್ತು ನಿಷೇಧಾಜ್ಞೆ ಆದೇಶವನ್ನು ಪೊಲೀಸರು ಬಿಗಿಗೊಳಿಸಿದ್ದು, ಜನರು ಸ್ವಯಂಪ್ರೇರಿತವಾಗಿ ಎಚ್ಚೆತ್ತುಕೊಂಡಿದ್ದಾರೆ. ಮಹಾಮಾರಿ ಕೊರೊನಾ ಸೋಂಕು ಇಬ್ಬರನ್ನು ಬಲಿ ಪಡೆದಿದ್ದು, ಐವರು ಸೋಂಕಿತರು ಇಎಸ್‌ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮತ್ತಿಬ್ಬರು ಕೊರೊನಾ ಪೀಡಿತರು ಗುಣಮುಖರಾಗಿ ಮನೆಗೆ ಮರಳಿದ್ದರೂ ಜಿಲ್ಲಾಡಳಿತ ನಿಗಾವಣೆಯಲ್ಲಿ ಇದ್ದಾರೆ. 20 ಜನ ಕೊರೊನಾ ಶಂಕಿತರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಬುಧವಾರ ಎರಡನೇ ಸಾವು ಖಚಿತವಾಗುತ್ತಿದ್ದಂತೆ ಜನರು ಹೈ-ಅಲರ್ಟ್‌ ಆಗಿದ್ದು, ಗುರುವಾರ ಕೆಲ ಬಡಾವಣೆಗಳಲ್ಲಿ ತಾವೇ ರಸ್ತೆ ಬಂದ್‌ ಮಾಡಿದ್ದಾರೆ. ಗಂಗಾನಗರ, ಉದಯ ನಗರ, ಸಂತೋಷ ಕಾಲೋನಿ, ಮಕ್ತಂಪುರ ಬಡಾವಣೆ, ಬಸವೇಶ್ವರ ಕಾಲೋನಿ ಮತ್ತಿತರ ಕಡೆಗಳಲ್ಲಿ ಸ್ಥಳೀಯ ನಾಗರಿಕರು ಬೇರೆ ಪ್ರದೇಶದ ಜನರು ಪ್ರವೇಶದಂತೆ ಹಾಗೂ ಅಲ್ಲಿದ್ದ ಜನರೂ ಹೊರ ಹೋಗದಂತೆ ಕ್ರಮ ಕೈಗೊಂಡಿದ್ದಾರೆ.

ಬಡಾವಣೆಗಳ ಮುಖ್ಯ ರಸ್ತೆಗಳಿಗೆ ಅಡ್ಡವಾಗಿ ಮುಳ್ಳಿನ ಕಂಟಿ, ಕಟ್ಟಿಗೆ ದಿಣ್ಣೆಗಳು, ಸಿಮೆಂಟ್‌ ಇಟ್ಟಿಗೆ ಹಾಗೂ ಪತ್ರಾಗಳು ಹಾಕಿದ್ದಾರೆ. ಕೆಲವರು ಗಾಜಿನ ಚೂರುಗಳು ಹಾಕಿದ್ದಾರೆ. ಮತ್ತೆ ಕೆಲ ಬಡಾವಣೆಯವರು ತಳ್ಳುಬಂಡಿ, ಟಾಂಗಾಗಳನ್ನು ನಿಲ್ಲಿಸಿ ಸ್ವಯಂ ನಿರ್ಬಂಧ ಹೇರಿದ್ದಾರೆ. ನಿಷೇಧಾಜ್ಞೆಯನ್ನು ಜಿಲ್ಲಾಡಳಿತ ಹಾಗೂ ಪೊಲೀಸರು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಿದ್ದು, ಅನಗತ್ಯವಾಗಿ ಜನರು ಹೊರಬರದಂತೆ ತಡೆಯಲು ಕಠಿಣ ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ಕಿರಾಣಿ ಅಂಗಡಿಗಳು, ಸೂಪರ್‌ ಮಾರ್ಕೆಟ್‌ ಹಾಗೂ ರಿಲಯನ್ಸ್‌, ಬಿಗ್‌ ಬಜಾರ್‌ ಸೇರಿದಂತೆ ಜನ ಸಂದಣಿಗೆ ಹೆಚ್ಚಾಗಿ ಸೇರುತ್ತಿದ್ದ ಅಂಗಡಿಗಳನ್ನು ಬಂದ್‌ ಮಾಡಿಸಿದ್ದಾರೆ.

ಆಸ್ಪತ್ರೆಗಳು ಹಾಗೂ ಔಷಧಿಗಳು, ಕೆಲ ಅಗತ್ಯ ವಸ್ತುಗಳು ಮತ್ತು ಸೇವೆಗಳಿಗೆ ತೊಂದರೆ ಆಗದಂತೆ ಕ್ರಮ ವಹಿಸಿ, ಬೇಕಾಬಿಟ್ಟಿ ಸಂಚಾರಕ್ಕೆ ಕಡಿವಾಣ ಹಾಕಿದ್ದಾರೆ. ಕೆಲ ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್‌ ನಿಲ್ಲಿಸಿದ್ದಾರೆ. ಪ್ರತಿಯೊಬ್ಬ ವಾಹನ ಸವಾರರ ದಾಖಲೆ ತಪಾಸಣೆ ಮಾಡಿಯೇ ಬಿಡುತ್ತಿದ್ದಾರೆ. ಅನಗತ್ಯವಾಗಿ ರಸ್ತೆಗಿಳಿದ ಸವಾರರ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದು, ಲಾಠಿ ರುಚಿ ತೋರಿಸುತ್ತಿದ್ದಾರೆ.

ಟಾಪ್ ನ್ಯೂಸ್

ರ್‍ಯಾಂಕಿಂಗ್‌ನಲ್ಲಿ ಪ್ರಗತಿ ಸಾಧಿಸಿದ ವಿರಾಟ್‌ ಕೊಹ್ಲಿ, ಪಂತ್‌, ಬುಮ್ರಾ

ರ್‍ಯಾಂಕಿಂಗ್‌ನಲ್ಲಿ ಪ್ರಗತಿ ಸಾಧಿಸಿದ ವಿರಾಟ್‌ ಕೊಹ್ಲಿ, ಪಂತ್‌, ಬುಮ್ರಾ

ನೌಕರಶಾಹಿಯ ದಕ್ಷತೆಗೆ ಸರಕಾರದ ಪ್ರೋತ್ಸಾಹ ಅಗತ್ಯ

ನೌಕರಶಾಹಿಯ ದಕ್ಷತೆಗೆ ಸರಕಾರದ ಪ್ರೋತ್ಸಾಹ ಅಗತ್ಯ

ಗುಪ್ತಚರ ದಳದ ಮುನ್ನೆಚ್ಚರಿಕೆಯ ನಿರ್ಲಕ್ಷ್ಯ  ಬೇಡ

ಗುಪ್ತಚರ ದಳದ ಮುನ್ನೆಚ್ಚರಿಕೆಯ ನಿರ್ಲಕ್ಷ್ಯ  ಬೇಡ

ಕಾಶೀ ಮಠಾಧೀಶರಿಂದ ನೂತನ ಬ್ರಹ್ಮರಥ ವೀಕ್ಷಣೆ

ಕಾಶೀ ಮಠಾಧೀಶರಿಂದ ನೂತನ ಬ್ರಹ್ಮರಥ ವೀಕ್ಷಣೆ

ಸಯ್ಯದ್‌ ಮೋದಿ ಬ್ಯಾಡ್ಮಿಂಟನ್‌: ದ್ವಿತೀಯ ಸುತ್ತಿಗೆ ಏರಿದ ಸಿಂಧು

ಸಯ್ಯದ್‌ ಮೋದಿ ಬ್ಯಾಡ್ಮಿಂಟನ್‌: ದ್ವಿತೀಯ ಸುತ್ತಿಗೆ ಏರಿದ ಸಿಂಧು

ಪರ್ಯಾಯ ಕಳೆದರೂ ಜಾತ್ರೆಯ ಕಳೆ: ಶ್ರೀಕೃಷ್ಣನ ದರ್ಶನಕ್ಕೆ ಭಕ್ತ ಸಮೂಹ

ಪರ್ಯಾಯ ಕಳೆದರೂ ಜಾತ್ರೆಯ ಕಳೆ: ಶ್ರೀಕೃಷ್ಣನ ದರ್ಶನಕ್ಕೆ ಭಕ್ತ ಸಮೂಹ

ಅಂಡರ್‌-19 ವಿಶ್ವಕಪ್‌ ಕ್ರಿಕೆಟ್‌: ಇಂಗ್ಲೆಂಡ್‌ಗೆ ಸತತ ಎರಡನೇ ಗೆಲುವು

ಅಂಡರ್‌-19 ವಿಶ್ವಕಪ್‌ ಕ್ರಿಕೆಟ್‌: ಇಂಗ್ಲೆಂಡ್‌ಗೆ ಸತತ ಎರಡನೇ ಗೆಲುವುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದ್ತಯಜಗನಬವ

ಶರಣಬಸವ ವಿವಿಯಲ್ಲಿ ಪ್ರಶಸ್ತಿ ಪುರಸ್ಕೃತರ ಸನ್ಮಾನ

ದ್ಗಯುಕಮನಬವಚಷಱ

ನೀಲೂರು ರೈಲ್ವೆ ಸೇತುವೆಗೆ ಅನುದಾನ

ದ್ತಯುಇಕಮನಬವಚಷಱ

ಖರ್ಗೆದ್ವಯರಿಗಾಗಿ ದತ್ತ ದೇಗುಲದಲ್ಲಿ ಪೂಜೆ

ಎರತಯುಇಕಜನಬವಚಷ

ಶಿಕ್ಷಣ ಇಲಾಖೆ ಆದೇಶ ಹಿಂಪಡೆಯಲು ಆಗ್ರಹ

ಯುಇಒಇಉಯತರದಸಅ

ಪ್ರಥಮ ಪ್ರಜೆ ಆಯ್ಕೆಗೆ ಮೀನಮೇಷ

MUST WATCH

udayavani youtube

24 ಅಡಿ ಎತ್ತರದ ಸೈಕಲ್ ತಯಾರಿಸಿ ರೈಡ್ ಮಾಡಿದ ವ್ಯಕ್ತಿ

udayavani youtube

ನೆಲಕಡಲೆಯ ಕೃಷಿಯಲ್ಲಿ ಯಶಸ್ವಿ ಕಂಡ ರೈತ

udayavani youtube

ಕರ್ಫ್ಯೂ ತೆಗೆಯಿರಿ : ತಮ್ಮ ಸರಕಾರದ ವಿರುದ್ಧವೇ ಗರ್ಜಿಸಿದ ಸಿಂಹ

udayavani youtube

ಮೊಸಳೆಯ ಜೊತೆ ಯುವಕನ ಮೃತದೇಹ : ದಾಂಡೇಲಿಯ ಕಾಳಿ ನದಿಯಲ್ಲಿ ಘಟನೆ

udayavani youtube

ಕೃಷ್ಣಾಪುರ ಪರ್ಯಾಯ – 2022 Highlights

ಹೊಸ ಸೇರ್ಪಡೆ

ರ್‍ಯಾಂಕಿಂಗ್‌ನಲ್ಲಿ ಪ್ರಗತಿ ಸಾಧಿಸಿದ ವಿರಾಟ್‌ ಕೊಹ್ಲಿ, ಪಂತ್‌, ಬುಮ್ರಾ

ರ್‍ಯಾಂಕಿಂಗ್‌ನಲ್ಲಿ ಪ್ರಗತಿ ಸಾಧಿಸಿದ ವಿರಾಟ್‌ ಕೊಹ್ಲಿ, ಪಂತ್‌, ಬುಮ್ರಾ

ನೌಕರಶಾಹಿಯ ದಕ್ಷತೆಗೆ ಸರಕಾರದ ಪ್ರೋತ್ಸಾಹ ಅಗತ್ಯ

ನೌಕರಶಾಹಿಯ ದಕ್ಷತೆಗೆ ಸರಕಾರದ ಪ್ರೋತ್ಸಾಹ ಅಗತ್ಯ

ಗುಪ್ತಚರ ದಳದ ಮುನ್ನೆಚ್ಚರಿಕೆಯ ನಿರ್ಲಕ್ಷ್ಯ  ಬೇಡ

ಗುಪ್ತಚರ ದಳದ ಮುನ್ನೆಚ್ಚರಿಕೆಯ ನಿರ್ಲಕ್ಷ್ಯ  ಬೇಡ

ಕಾಶೀ ಮಠಾಧೀಶರಿಂದ ನೂತನ ಬ್ರಹ್ಮರಥ ವೀಕ್ಷಣೆ

ಕಾಶೀ ಮಠಾಧೀಶರಿಂದ ನೂತನ ಬ್ರಹ್ಮರಥ ವೀಕ್ಷಣೆ

ಸಯ್ಯದ್‌ ಮೋದಿ ಬ್ಯಾಡ್ಮಿಂಟನ್‌: ದ್ವಿತೀಯ ಸುತ್ತಿಗೆ ಏರಿದ ಸಿಂಧು

ಸಯ್ಯದ್‌ ಮೋದಿ ಬ್ಯಾಡ್ಮಿಂಟನ್‌: ದ್ವಿತೀಯ ಸುತ್ತಿಗೆ ಏರಿದ ಸಿಂಧು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.