ಪೊಲೀಸರಿಂದ ಸುರಂಗ ನಿರ್ಮಾಣ


Team Udayavani, Apr 16, 2020, 10:52 AM IST

16-April-17

ಕಲಬುರಗಿ: ವಾಜಪೇಯಿ ಬಡಾವಣೆ ತರಕಾರಿ ಮಾರುಕಟ್ಟೆಯಲ್ಲಿ ಪೊಲೀಸ್‌ ಆಯುಕ್ತಾಲಯದಿಂದ ಸೋಂಕು ಕಳೆಯುವ ಸುರಂಗ ಅವಳಡಿಸಲಾಗಿದೆ.

ಕಲಬುರಗಿ: ಕೊರೊನಾ ಸೋಂಕು ಆತಂಕ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ಪೊಲೀಸ್‌ ಇಲಾಖೆಯಿಂದ ನಗರದ ಪ್ರಮುಖ ಪ್ರದೇಶದಲ್ಲಿ ಸೋಂಕು ನಿವಾರಕ ಸುರಂಗಗಳನ್ನು ಸ್ಥಾಪಿಸಲಾಗಿದೆ. ನಗರದ ಡಿಎಆರ್‌ ಪೊಲೀಸ್‌ ವಸತಿ ಗೃಹದ ಪ್ರದೇಶದ ದ್ವಾರದಲ್ಲಿ ಜಿಲ್ಲಾ ಪೊಲೀಸ್‌ ಇಲಾಖೆಯಿಂದ ವೈರಾಣು ನಾಶಕ ಸುರಂಗ ಅಳವಡಿಸಲಾಗಿದೆ. ನಿತ್ಯ ಕೊರೊನಾ ನಿಯಂತ್ರಣದ ಕರ್ತವ್ಯದಲ್ಲಿ ತೊಡಗುವ ಪೊಲೀಸ್‌ ಸಿಬ್ಬಂದಿ ಹಿತರಕ್ಷಣೆ ಕಾಯುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌ ಮುತುವರ್ಜಿ ವಹಿಸಿ ರಾಸಾಯನಿಕ ಸಿಂಪಡಿಸುವ ಸುರಂಗ ಸ್ಥಾಪಿಸಿದ್ದಾರೆ.

ಇದು ಪೊಲೀಸ್‌ ಸಿಬ್ಬಂದಿ ಮಾತ್ರವಲ್ಲದೇ ಕುಟುಂಬದವರಿಗೂ ಅನುಕೂಲವಾಗಿದೆ. ಪೊಲೀಸರು ಕರ್ತವ್ಯಕ್ಕಾಗಿ ಮನೆ ಹೊರಗೆ ಬರುವಾಗ ಹಾಗೂ ಮರಳಿ ಮನೆಗೆ ಹೋಗುವಾಗ ಸುರಂಗದಲ್ಲಿ ಒಮ್ಮೆ ಹಾಯ್ದು ಹೋಗಿ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಲಿದ್ದಾರೆ. ಅದೇ ರೀತಿ ಕುಟುಂಬದವರು ಮನೆಯಿಂದ ಅಗತ್ಯ ವಸ್ತುಗಳಿಗೆ ಮನೆಯಿಂದ ಹೊರ ಬರಬೇಕಾದರೂ ಇದೇ ಸುರಂಗದ ಮೂಲಕ ಹಾಯ್ದು ಬರಬೇಕು. ಈ ಮೂಲಕ ಪೊಲೀಸ್‌ ಇಲಾಖೆ ತನ್ನ ಸಿಬ್ಬಂದಿ ಬಗ್ಗೆ ಕಾಳಜಿ ವಹಿಸುವುದಲ್ಲದೇ ಕುಟುಂಬದವರ ಕಾಳಜಿ ಮುಖ್ಯ ಎನ್ನುವ ಸಂದೇಶವನ್ನು ಎಸ್‌ಪಿ ಮಾರ್ಬನ್ಯಾಂಗ್‌ ಸಾರಿದ್ದಾರೆ.

ನಗರ ಪೊಲೀಸ್‌ ಆಯುಕ್ತಾಲಯದಿಂದ ನಗರದ ಮೂರು ಕಡೆಗಳಲ್ಲಿ ಸಾರ್ವಜನಿಕವಾಗಿ ಸುರಂಗ ಅಳವಡಿಸಲಾಗಿದೆ. ವಾಜಪೇಯಿ ಬಡಾವಣೆಯಲ್ಲಿರುವ ತರಕಾರಿ ಮಾರುಕಟ್ಟೆ, ಎಪಿಎಂಸಿ ಹಾಗೂ ಶಿವಾಜಿ ನಗರ ಬಡಾವಣೆಯಲ್ಲಿ ನಗರ ಪೊಲೀಸ್‌ ಇಲಾಖೆಯಿಂದ ಸೋಂಕು ನಿವಾರಕ ರಾಸಾಯನಿಕ ಸಿಂಪಡಿಸುವ ಸುರಂಗಗಳನ್ನು ನಿರ್ಮಾಣ ಮಾಡಲಾಗಿದೆ. ಸಾರ್ವಜನಿಕರು ಈ ಸುರಂಗಗಳಲ್ಲಿ ಹಾಯ್ದು ಹೋದರೆ ರಾಸಾಯನಿಕ ತಂತಾನೇ ಸಿಂಪಡಣೆಯಾಗಿ ಸೋಂಕು ಕಳೆಯಲಿದೆ.

ನಗರ ಪ್ರದೇಶದಲ್ಲಿ ಹೆಚ್ಚು ಜನಸಂದಣಿ ಇರುವ ಪ್ರದೇಶಗಳಲ್ಲಿ ಸೋಂಕು ಕಳೆಯುವ ಸುರಂಗಗಳನ್ನು ಅಳವಡಿಸಲಾಗುತ್ತಿದೆ. ಈ ಮೂಲಕ ಸಂಭವನೀಯ ಕೊರೊನಾ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಬಹುದಾಗಿದೆ ಎಂದು ಪೊಲೀಸ್‌ ಆಯುಕ್ತ ಎನ್‌. ಸತೀಶಕುಮಾರ ತಿಳಿಸಿದ್ದಾರೆ. ನಗರದ ಇಂದಿರಾ ಸ್ಮಾರಕ ಭವನದ ಆವರಣದಲ್ಲಿ ಮಹಾನಗರ ಪಾಲಿಕೆಯಿಂದ ಪೌರ ಕಾರ್ಮಿಕರಿಗಾಗಿ ಸುರಂಗ ನಿರ್ಮಿಸಲಾಗಿದೆ. ಈ ಸುರಂಗಗಳಲ್ಲಿ ಹನಿ ನೀರಾವರಿ ಮಾದರಿ ಪೈಪ್‌ಗ್ಳನ್ನು ಅಳವಡಿಸಲಾಗಿದ್ದು, ಸೋಡಿಯಂ ಹೈಪೊಕ್ಲೋರೈಟ್‌ ಮಿಶ್ರಣದ ನೀರು ಸಿಂಪಡಣೆಯಾಗುತ್ತದೆ.

ಟಾಪ್ ನ್ಯೂಸ್

ವೆಸ್ಟ್ ಇಂಡೀಸ್ ಸರಣಿ: ಹಲವು ಅಚ್ಚರಿಗಳೊಂದಿಗೆ ತಂಡ ಪ್ರಕಟ; ರೋಹಿತ್ ನಾಯಕ

ವೆಸ್ಟ್ ಇಂಡೀಸ್ ಸರಣಿ: ಹಲವು ಅಚ್ಚರಿಗಳೊಂದಿಗೆ ತಂಡ ಪ್ರಕಟ; ರೋಹಿತ್ ನಾಯಕ

ಏರ್‌ ಇಂಡಿಯಾ ಇಂದು ಟಾಟಾ ವಶಕ್ಕೆ?

ಏರ್‌ ಇಂಡಿಯಾ ಇಂದು ಟಾಟಾ ವಶಕ್ಕೆ?

ದಿಲ್ಲಿಯಲ್ಲಿ ಮೆರೆದ ಉಡುಪಿ ವಿದ್ಯಾರ್ಥಿಗಳ ಕಂಗೀಲು ನೃತ್ಯ

ದಿಲ್ಲಿಯಲ್ಲಿ ಮೆರೆದ ಉಡುಪಿ ವಿದ್ಯಾರ್ಥಿಗಳ ಕಂಗೀಲು ನೃತ್ಯ

ನಾನಾಗಿಯೇ ಮಾತನಾಡಲ್ಲ, ಅವರಾಗಿ ಬಂದರೆ ಮಾತನಾಡುವೆ: ಸಿದ್ದರಾಮಯ್ಯ

ನಾನಾಗಿಯೇ ಮಾತನಾಡಲ್ಲ, ಅವರಾಗಿ ಬಂದರೆ ಮಾತನಾಡುವೆ: ಸಿದ್ದರಾಮಯ್ಯ

ಆಟಗಾರನಾಗಿ ಕಣಕ್ಕಿಳಿದ ಕ್ರಿಕೆಟ್‌ ಕೋಚ್‌!

ಆಟಗಾರನಾಗಿ ಕಣಕ್ಕಿಳಿದ ಕ್ರಿಕೆಟ್‌ ಕೋಚ್‌!

astrology today

ಗುರುವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹ ಬಲ

3,026 ಗ್ರಾ.ಪಂ.ನಲ್ಲಿ “ಗ್ರಾಮ ಒನ್‌’ ಯೋಜನೆ

3,026 ಗ್ರಾ.ಪಂ.ನಲ್ಲಿ “ಗ್ರಾಮ ಒನ್‌’ ಯೋಜನೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಯತ್ನಾಳ್‌ ಆತ್ಮಾವಲೋಕನ ಮಾಡಿಕೊಳ್ಳಲಿ: ಸಚಿವ ಮುರುಗೇಶ ನಿರಾಣಿ

ಯತ್ನಾಳ್‌ ಆತ್ಮಾವಲೋಕನ ಮಾಡಿಕೊಳ್ಳಲಿ: ಸಚಿವ ಮುರುಗೇಶ ನಿರಾಣಿ

12function

ಕಲೆಗಳು ಉತ್ತಮ ಬದುಕಿಗೆ ದಿಕ್ಸೂಚಿ: ಕೊಲ್ಲೂರ

11land

ಭೂ ಸುಧಾರಣೆ ಕಾಯ್ದೆ ಹಿಂಪಡೆಯಲು ಒತ್ತಾಯ

10apeal

ಗಾಣಿಗರ ಸ್ಮಶಾನಭೂಮಿ ರಕ್ಷ ಣೆಗೆ ತಹಶೀಲ್ದಾರ್‌ ಯಲ್ಲಪ್ಪಗೆ ಒತ್ತಾಯ

9women

ಮಹಿಳೆಯರಿಗೆ ಆರೋಗ್ಯ ಕಾಳಜಿ ಅವಶ್ಯ: ವಿಜಯಲಕ್ಷ್ಮೀ

MUST WATCH

udayavani youtube

ರಾಜಪಥ ಪರೇಡ್ ನಲ್ಲಿ ಯುದ್ಧವಿಮಾನಗಳ ಪವರ್ ಶೋ

udayavani youtube

73ನೇ ಗಣರಾಜ್ಯೋತ್ಸವದಲ್ಲಿ NCC ತಂಡ ಮುನ್ನಡೆಸಿದ ಮೈಸೂರಿನ ಯುವತಿ

udayavani youtube

ಪುನೀತ್ ಗೆ ಸಿಗದ ಪದ್ಮಪ್ರಶಸ್ತಿ: ಮಾತು ತಪ್ಪಿದ ಬೊಮ್ಮಾಯಿ

udayavani youtube

BSF ಮಹಿಳಾ ‘ಸೀಮಾ ಭವಾನಿ’ ತಂಡದಿಂದ ರೋಮಾಂಚಕ ಬೈಕ್ ಸಾಹಸ

udayavani youtube

ಭಯಾನಕ ಹೆಬ್ಬಾವಿನ ಎದುರು ಈ ಬೆಕ್ಕಿನ ಧೈರ್ಯ ನೋಡಿ!!

ಹೊಸ ಸೇರ್ಪಡೆ

ವೆಸ್ಟ್ ಇಂಡೀಸ್ ಸರಣಿ: ಹಲವು ಅಚ್ಚರಿಗಳೊಂದಿಗೆ ತಂಡ ಪ್ರಕಟ; ರೋಹಿತ್ ನಾಯಕ

ವೆಸ್ಟ್ ಇಂಡೀಸ್ ಸರಣಿ: ಹಲವು ಅಚ್ಚರಿಗಳೊಂದಿಗೆ ತಂಡ ಪ್ರಕಟ; ರೋಹಿತ್ ನಾಯಕ

ಏರ್‌ ಇಂಡಿಯಾ ಇಂದು ಟಾಟಾ ವಶಕ್ಕೆ?

ಏರ್‌ ಇಂಡಿಯಾ ಇಂದು ಟಾಟಾ ವಶಕ್ಕೆ?

ದಿಲ್ಲಿಯಲ್ಲಿ ಮೆರೆದ ಉಡುಪಿ ವಿದ್ಯಾರ್ಥಿಗಳ ಕಂಗೀಲು ನೃತ್ಯ

ದಿಲ್ಲಿಯಲ್ಲಿ ಮೆರೆದ ಉಡುಪಿ ವಿದ್ಯಾರ್ಥಿಗಳ ಕಂಗೀಲು ನೃತ್ಯ

ನಾನಾಗಿಯೇ ಮಾತನಾಡಲ್ಲ, ಅವರಾಗಿ ಬಂದರೆ ಮಾತನಾಡುವೆ: ಸಿದ್ದರಾಮಯ್ಯ

ನಾನಾಗಿಯೇ ಮಾತನಾಡಲ್ಲ, ಅವರಾಗಿ ಬಂದರೆ ಮಾತನಾಡುವೆ: ಸಿದ್ದರಾಮಯ್ಯ

ಆಟಗಾರನಾಗಿ ಕಣಕ್ಕಿಳಿದ ಕ್ರಿಕೆಟ್‌ ಕೋಚ್‌!

ಆಟಗಾರನಾಗಿ ಕಣಕ್ಕಿಳಿದ ಕ್ರಿಕೆಟ್‌ ಕೋಚ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.