ಕೋವಿಡ್ : ಮೃತರ ಸಂಖ್ಯೆ 27 ಕ್ಕೇರಿಕೆ

ಕಲಬುರಗಿ-ಶಹಾಬಾದ್‌ನ ವೃದ್ಧರ ಸಾವು ನಿನ್ನೆ 49 ಜನರಿಗೆ ಸೋಂಕು, 52 ಜನ ಬಿಡುಗಡೆ

Team Udayavani, Jul 6, 2020, 10:36 AM IST

06-July-01

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಕಲಬುರಗಿ: ಉಸಿರಾಟ ಮತ್ತು ಜ್ವರದ ಸಮಸ್ಯೆಯುಳ್ಳವರಿಗೆ ಮಹಾಮಾರಿ ಕೋವಿಡ್‌ ಸೋಂಕು ಅಕ್ಷರಶಃ ಕಂಟಕವಾಗಿ ಪರಿಣಮಿಸಿದೆ. ಜಿಲ್ಲೆಯಲ್ಲಿ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಮತ್ತಿಬ್ಬರು ಬಲಿಯಾಗಿದ್ದಾರೆ. ಇದರೊಂದಿಗೆ ಕೋವಿಡ್ ನಿಂದ ಮೃತಪಟ್ಟವರ ಸಂಖ್ಯೆ 27ಕ್ಕೆ ಏರಿಕೆಯಾಗಿದೆ.

ಶುಕ್ರವಾರ ಮತ್ತು ಶನಿವಾರ ಎರಡೂ ದಿನಗಳಲ್ಲಿ ಆರು ಜನರು ಕೋವಿಡ್‌ ನಿಂದ ಮೃತಪಟ್ಟಿದ್ದರು. ರವಿವಾರ ಇಬ್ಬರು ಬಲಿಯಾಗಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಉಸಿರಾಟದ ಸಮಸ್ಯೆಯೊಂದಿಗೆ ಅಧಿಕ ರಕ್ತದೊತ್ತಡ, ಮಧುಮೇಹ ಹಾಗೂ ಹೃದ್ರೋಗದಿಂದ ಬಳಲುತ್ತಿದ್ದ ನಗರದ ಅನ್ನಪೂರ್ಣ ಕ್ರಾಸ್‌ ಪ್ರದೇಶದ 69 ವರ್ಷದ ವೃದ್ಧ (ಪಿ-21318) ಜು.3ರಂದು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಜು.4ರಂದು ಮೃತಪಟ್ಟಿದ್ದಾರೆ.  ಅದೇ ರೀತಿ ಶಹಾಬಾದ ಪಟ್ಟಣದ ಮಸ್ಜಿದ್‌ ಚೌಕ್‌ ಪ್ರದೇಶದ 66 ವರ್ಷದ ವೃದ್ಧ (ಪಿ-23,288) ಸಹ ಕೋವಿಡ್‌ಗೆ ಬಲಿಯಾಗಿದ್ದಾರೆ. ಇವರು ಸಹ ಉಸಿರಾಟ ತೊಂದರೆಯೊಂದಿಗೆ ತೀವ್ರ ಜ್ವರ, ಕೆಮ್ಮು ಹಾಗೂ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರು. ಜು.3ರಂದು ಜಿಮ್ಸ್‌ ಆಸ್ಪತ್ರೆಗೆ ದಾಖಲಾಗುವ ಮುನ್ನವೇ ವೃದ್ಧ ಮೃತಪಟ್ಟಿದ್ದಾರೆ. ಇಬ್ಬರ ವೈದ್ಯಕೀಯ ವರದಿ ರವಿವಾರ ಬಂದಿದ್ದು, ಕೋವಿಡ್ ಸೋಂಕು ತಗುಲಿರುವುದು ದೃಢವಾಗಿದೆ.

1,600 ಗಡಿ ದಾಟಿತು: ಇಬ್ಬರು ಮೃತರು ಸೇರಿ ರವಿವಾರ ಹೊಸದಾಗಿ 49 ಜನರಿಗೆ ಕೋವಿಡ್‌ ಸೋಂಕು ಪತ್ತೆಯಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,646ಕ್ಕೆ ಏರಿಕೆಯಾಗಿದೆ. 49 ಜನ ಸೋಂಕಿರಲ್ಲಿ 11 ಮಂದಿ ಸೋಂಕಿತರು ಜ್ವರ ಮತ್ತು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದವರೇ ಆಗಿದ್ದಾರೆ. ಸೋಂಕಿತರ ಸಂಪರ್ಕದಿಂದ 12 ಜನರಿಗೆ ಸೋಂಕು ಹರಡಿದೆ. ಮಹಾರಾಷ್ಟ್ರದ ಪ್ರವಾಸ ಹಿನ್ನೆಲೆಯ ಹತ್ತು ಜನರು, ಬೆಂಗಳೂರಿಂದ ಬಂದ ಇಬ್ಬರು, ಗುಜರಾತ್‌ ಮತ್ತು ಬೀದರ್‌ ಪ್ರವಾಸ ಹಿನ್ನೆಲೆಯ ತಲಾ ಒಬ್ಬರು, ಕಂಟೇನ್ಮೆಂಟ್‌ ಝೋನ್‌ ಸಂಪರ್ಕದ ನಾಲ್ವರು ಹಾಗೂ ರ್‍ಯಾಂಡಮ್‌ ಪರೀಕ್ಷೆಯಲ್ಲಿ ಹತ್ತು ಜನರಿಗೆ ಮಹಾಮಾರಿ ಸೋಂಕು ಪತ್ತೆಯಾಗಿದೆ.

ತಾಲೂಕಾವಾರು: ರವಿವಾರ ಏಳು ತಾಲೂಕುಗಳಲ್ಲಿ ಸೋಂಕಿತರು ಪತ್ತೆಯಾಗಿದ್ದಾರೆ. ಕಲಬುರಗಿ ನಗರ-11, ಚಿತ್ತಾಪುರ-5, ಶಹಾಬಾದ-10, ಅಫಜಲಪುರ-7, ಜೇವರ್ಗಿ 14, ಆಳಂದ ಮತ್ತು ಕಮಲಾಪುರದಲ್ಲಿ ಒಬ್ಬರಿಗೆ ಕೊರೊನಾ ಹರಡಿದೆ. ಕಲಬುರಗಿ ನಗರದ ತಾರ್‌ಫೈಲ್‌ ಬಡಾವಣೆಯ 35 ವರ್ಷದ ಯುವಕ, ಛೋಟಾ ರೋಜಾದ 46 ವರ್ಷದ ಮಹಿಳೆ, ರಿಂಗ್‌ ರಸ್ತೆಯ ಮಹಾರಾಜ್‌ ಹೋಟೆಲ್‌ ಸಮೀಪದ 56 ವರ್ಷದ ಪುರುಷ, ಮಕ್ತಂಪುರದ 29 ವರ್ಷದ ಪುರುಷ, ಸಂಗಮೇಶ್ವರ ನಗರದ 62 ವರ್ಷದ ವೃದ್ಧ, ತಾಜ್‌ ನಗರದ 20 ವರ್ಷದ ಯುವಕ, ಕೈಲಾಸ ನಗರದ 44 ವರ್ಷದ ಪುರುಷ, ಪ್ರಗತಿ ಕಾಲೋನಿಯ 59 ವರ್ಷದ ಪುರುಷ, ರೇವಣಸಿದ್ದೇಶ್ವರ ಕಾಲೋನಿಯ 30 ವರ್ಷದ ಪುರುಷ, ಕರುಣೇಶ್ವರ ನಗರದ 37 ವರ್ಷದ ಪುರುಷ ಹಾಗೂ ಪೊಲೀಸ್‌ ವಸತಿ ಗೃಹದ 59 ವರ್ಷದ ಪುರುಷನಿಗೆ ಸೋಂಕು ಕಾಣಿಸಿಕೊಂಡಿದೆ.

ಅಫಜಲಪುರ ತಾಲೂಕಿನ ಗೌರ ಬಿ ಗ್ರಾಮದ 25 ವರ್ಷದ ಯುವಕ, 9 ವರ್ಷದ ಬಾಲಕ, ದೇವಲಗಾಣಗಪುರದ ಓರ್ವ ಮಹಿಳೆ ಸೇರಿ ನಾಲ್ವರು, ಆಳಂದ ತಾಲೂಕಿನ ಲೇಂಗಟಿ ಗ್ರಾಮದಲ್ಲಿ ಗುಜರಾತ್‌ನಿಂದ ಬಂದ 18 ವರ್ಷದ ಯುವಕನಿಗೆ ಕೊರೊನಾ ಪತ್ತೆಯಾಗಿದೆ.

ಇದೇ ವೇಳೆ 52 ಜನ ಸೋಂಕಿತರ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಇದರೊಂದಿಗೆ ಒಟ್ಟು ಸೋಂಕಿನಿಂದ ಗುಣಮುಖರಾದವರ ಸಂಖ್ಯೆ ಸಹ 1,241ಕ್ಕೆ ಏರಿಕೆಯಾಗಿದೆ. ಇನ್ನು, 378 ಜನ ಸೋಂಕಿತರು ಐಸೋಲೇಷನ್‌ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಟಾಪ್ ನ್ಯೂಸ್

1dgfdgdf

ಮಾಗಡಿ ಕಾಂಗ್ರೆಸ್ ನಲ್ಲಿ ಶುರುವಾದ ಜಟಾಪಟಿ: ಕೆಪಿಸಿಸಿ ಅಧ್ಯಕ್ಷರಿಗೆ ಪತ್ರ

ಅಭಿಮಾನಿಗಳಿಗೆ ಸಿಹಿ ಸುದ್ದಿ: ಜ್ಯೂ.NTR 31  ಫಸ್ಟ್ ಲುಕ್…ಪ್ರಶಾಂತ್ ನೀಲ್ ಹೊಸ ಚಿತ್ರ

ಅಭಿಮಾನಿಗಳಿಗೆ ಸಿಹಿ ಸುದ್ದಿ: ಜ್ಯೂ.NTR 31 ಫಸ್ಟ್ ಲುಕ್…ಪ್ರಶಾಂತ್ ನೀಲ್ ಹೊಸ ಚಿತ್ರ

cm-bommai

ಬೆಂಗಳೂರು; ಕೆರೆ ಪ್ರದೇಶದಲ್ಲಿ ಮನೆ ಕಟ್ಟಲು ಅವಕಾಶವಿಲ್ಲ : ಸಿಎಂ ಬೊಮ್ಮಾಯಿ

1-ddsad

ಮಳೆಯ ಆರ್ಭಟ : ತೀರ್ಥಹಳ್ಳಿ ಗದ್ದೆಯ ಹೊಂಡದಲ್ಲಿ ಬಿದ್ದು ವ್ಯಕ್ತಿ ಸಾವು

cm-@-3

ಸಿಎಂ ದಾವೋಸ್ ಪ್ರವಾಸ ಮೊಟಕು?; ಇಂದು ದಿಲ್ಲಿಗೆ ಹಠಾತ್ ಭೇಟಿ!

ಭಾರತದಲ್ಲಿ 24 ಗಂಟೆಯಲ್ಲಿ 2,259 ಕೋವಿಡ್ ಪ್ರಕರಣ ದೃಢ, ಸಕ್ರಿಯ ಪ್ರಕರಣ 15,044ಕ್ಕೆ ಇಳಿಕೆ

ಭಾರತದಲ್ಲಿ 24 ಗಂಟೆಯಲ್ಲಿ 2,259 ಕೋವಿಡ್ ಪ್ರಕರಣ ದೃಢ, ಸಕ್ರಿಯ ಪ್ರಕರಣ 15,044ಕ್ಕೆ ಇಳಿಕೆ

shobha-karandlaje

ಇಡೀ ದೇಶದಲ್ಲಿ ಕೃಷಿ ಭೂಮಿ ಸೈಟ್ ಗಳಾಗುತ್ತಿದೆ : ಸಚಿವೆ ಶೋಭಾ ಕರಂದ್ಲಾಜೆ ಆತಂಕಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sgsfd

ವಾಡಿ: ಯಂತ್ರಕ್ಕೆ ಸಿಕ್ಕು ಸಿಮೆಂಟ್ ಉತ್ಪಾದನಾ ಘಟಕದ ಕಾರ್ಮಿಕ ದುರ್ಮರಣ

ಶಹಾಬಾದ ಸರ್ಕಾರಿ ಶಾಲೆಗೆ ಡಿಮ್ಯಾಂಡ್‌

ಶಹಾಬಾದ ಸರ್ಕಾರಿ ಶಾಲೆಗೆ ಡಿಮ್ಯಾಂಡ್‌

ಇಲ್ಲದ ಗ್ರಂಥಾಲಯಕ್ಕೆ ವಾರ್ಷಿಕ 10 ಲಕ್ಷ ರೂ. ತೆರಿಗೆ ಪಾವತಿ!

ಇಲ್ಲದ ಗ್ರಂಥಾಲಯಕ್ಕೆ ವಾರ್ಷಿಕ 10 ಲಕ್ಷ ರೂ. ತೆರಿಗೆ ಪಾವತಿ!

ಕಲಬುರಗಿಯಲ್ಲಿ ರಸ್ತೆ ಒತ್ತುವರಿ ಕಾರ್ಯಾಚರಣೆ: ಮಾತಿನ ಚಕಮಕಿ

ಕಲಬುರಗಿಯಲ್ಲಿ ರಸ್ತೆ ಒತ್ತುವರಿ ಕಾರ್ಯಾಚರಣೆ: ಮಾತಿನ ಚಕಮಕಿ

ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮ: ಮತ್ತಿಬ್ಬರ ಜಾಮೀನು ಅರ್ಜಿ ತಿರಸ್ಕಾರ

ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮ: ಮತ್ತಿಬ್ಬರ ಜಾಮೀನು ಅರ್ಜಿ ತಿರಸ್ಕಾರ

MUST WATCH

udayavani youtube

ಎಸ್ಸೆಸ್ಸೆಲ್ಸಿ ಫಲಿತಾಂಶ : ಶಿರಸಿ ಸರಕಾರಿ ಶಾಲಾ ವಿದ್ಯಾರ್ಥಿಗಳ ಸಾಧನೆ

udayavani youtube

ಒಳ್ಳೆಯ ಆರೋಗ್ಯಕ್ಕೆ ಯಾವ ರೀತಿ ವ್ಯಾಯಾಮ ಮಾಡಬೇಕು ?

udayavani youtube

ಬೆಳಗ್ಗೆ 4 ಗಂಟೆಗೆ ಎದ್ದು ಫಿಶಿಂಗ್ ಕೆಲಸಕ್ಕೆ ಹೋಗುತ್ತಿದ್ದ ಉಡುಪಿಯ ವಿದ್ಯಾರ್ಥಿಗೆ 625 ಅಂಕ

udayavani youtube

ಕೃಷಿ ಚಟುವಟಿಕೆ ಕಂಡು ಖುಷಿ ಪಟ್ಟ ರಾಶಿ ರಾಶಿ ಕೊಕ್ಕರೆಗಳು !!

udayavani youtube

ಶಿವಮೊಗ್ಗದಲ್ಲಿ ರಸ್ತೆ ತುಂಬೆಲ್ಲಾ ನೀರು… ಅಪಾಯಕ್ಕೆ ಅಹ್ವಾನ ನೀಡುತ್ತಿವೆ ಗುಂಡಿಗಳು..

ಹೊಸ ಸೇರ್ಪಡೆ

1dgfdgdf

ಮಾಗಡಿ ಕಾಂಗ್ರೆಸ್ ನಲ್ಲಿ ಶುರುವಾದ ಜಟಾಪಟಿ: ಕೆಪಿಸಿಸಿ ಅಧ್ಯಕ್ಷರಿಗೆ ಪತ್ರ

bhagath

ಭಗತ್‌-ವಿವೇಕರ ಪಾಠ ಕೈಬಿಟ್ಟಿದ್ದು ಸರಿಯಲ್ಲ

10

ಸವಾಲಿನ ಪಾತ್ರದಲ್ಲಿ ಮಯೂರಿ : ಅಂಧ ಪಾತ್ರದ ಮೇಲೆ ಚೆಂದದ ನಿರೀಕ್ಷೆ

ಅಭಿಮಾನಿಗಳಿಗೆ ಸಿಹಿ ಸುದ್ದಿ: ಜ್ಯೂ.NTR 31  ಫಸ್ಟ್ ಲುಕ್…ಪ್ರಶಾಂತ್ ನೀಲ್ ಹೊಸ ಚಿತ್ರ

ಅಭಿಮಾನಿಗಳಿಗೆ ಸಿಹಿ ಸುದ್ದಿ: ಜ್ಯೂ.NTR 31 ಫಸ್ಟ್ ಲುಕ್…ಪ್ರಶಾಂತ್ ನೀಲ್ ಹೊಸ ಚಿತ್ರ

rain

ಕೊಪ್ಪಳ, ಗದಗದಲ್ಲಿ ನಿರಂತರ ಮಳೆ: ಅಂಗನವಾಡಿ, ಶಾಲೆಗಳಿಗೆ ಇಂದು ರಜೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.