ಶಿಕ್ಷಕ ಫುಲಾರಿಗೆ ರಾಷ್ಟ್ರೀಯ ಪ್ರಶಸ್ತಿ


Team Udayavani, Nov 13, 2021, 12:32 PM IST

9teachers

ಸೊಲ್ಲಾಪುರ: “ನೋ ಬ್ಯಾಗ್‌ ಡೇ ಸ್ಕೂಲ್‌’ ಎನ್ನುವ ಮಹಾರಾಷ್ಟ್ರ ರಾಜ್ಯ ಸರ್ಕಾರದ ಯೋಜನೆಯನ್ನು ಶಾಲೆಯಲ್ಲಿ ಕಾರ್ಯರೂಪಕ್ಕೆ ತಂದಿದ್ದಕ್ಕಾಗಿ ಅಕ್ಕಲಕೋಟ ತಾಲೂಕಿನ ನಾಗಣಸೂರ ಗ್ರಾಮದ ಸರ್ಕಾರಿ ಕನ್ನಡ ಹೆಣ್ಣು ಮಕ್ಕಳ ಶಾಲೆ ಶಿಕ್ಷಕ ಶರಣಪ್ಪ ಫುಲಾರಿಗೆ ಸರ್‌ ಫೌಂಡೇಶನ್‌ ವತಿಯಿಂದ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪುಣೆ ಜಿಲ್ಲೆಯ ಲೋಣಾವಳಾದ ಸಿಂಹಗಡ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ “ಎಜ್ಯುಕೇಶನಲ್‌ ಟೀಚರ್‌ ಇನೋವ್ಹೇಶನ್‌’ ಎನ್ನುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ವಿಜ್ಞಾನಿ ಡಾ| ಅರವಿಂದ ನಾತು ಈ ರಾಷ್ಟ್ರೀಯ ಪ್ರಶಸ್ತಿಯನ್ನು ಶಿಕ್ಷಕ ಶರಣಪ್ಪ ಫುಲಾರಿಗೆ ನೀಡಿ, ಗೌರವಿಸಿದರು.

ಮಹಾರಾಷ್ಟ್ರ ರಾಜ್ಯದ ಮಾಧ್ಯಮಿಕ ಹಾಗೂ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಮಾಜಿ ಅಧ್ಯಕ್ಷೆ ಡಾ| ಶಕುಂತಲಾ ಕಾಳೆ, ರಾಜ್ಯ ಸಕ್ಕರೆ ಆಯುಕ್ತರಾದ ಶೇಖರ ಗಾಯಕವಾಡ, ಸೃಷ್ಟಿ , ಹನಿ ಬಿ ನೆಟವರ್ಕ್‌ನ ರಾಷ್ಟ್ರೀಯ ಸಮನ್ವಯಕ ಚೇತನ ಪಟೇಲ್‌, ಸರ್‌ ಫೌಂಡೇಶನ್‌ ರಾಜ್ಯ ಸಮನ್ವಯಕರಾದ ಸಿದ್ಧರಾಮ ಮಾಶಾಳೆ, ಬಾಳಾಸಾಹೇಬ ವಾಘ, ಹೇಮಾ ಶಿಂಧೆ ಹಾಜರಿದ್ದರು.

ಮಕ್ಕಳ ಪ್ರತಿಭೆ ಬೆಳಕಿಗೆ ತಂದ ಶಿಕ್ಷಕ

ಶಿಕ್ಷಕ ಶರಣಪ್ಪ ಫುಲಾರಿ ಅವರು ಮಹಾರಾಷ್ಟ್ರ ಸರ್ಕಾರ ಜಾರಿಗೆ ತಂದ “ನೋ ಬ್ಯಾಗ್‌ ಡೇ ಸ್ಕೂಲ್‌’ ಎನ್ನುವ ಯೋಜನೆಯಡಿ ಪ್ರತಿ ಶನಿವಾರ ಪಠ್ಯ-ಪುಸ್ತಕದ ಬ್ಯಾಗ್‌ನ್ನು ಮಕ್ಕಳು ಶಾಲೆಗೆ ತರದೇ, ಅವರಲ್ಲಿನ ಕಲೆ, ಸಾಹಿತ್ಯ, ಸಂಗೀತ, ನೃತ್ಯ, ನಾಟ್ಯ, ಭಾಷಣ ಹಾಗೂ ಇನ್ನಿತರ ಸಾಂಸ್ಕೃತಿಕ ಪ್ರತಿಭೆಯನ್ನು ಬೆಳಕಿಗೆ ಬರುವಂತೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಶಸ್ತಿ ಲಭಿಸಿದೆ. ಅಲ್ಲದೇ ಜನರ ಸಹಭಾಗಿತ್ವದಿಂದ ಇವರು ಕಾರ್ಯ ನಿರ್ವಹಿಸಿದ ನಾಲ್ಕು ಶಾಲೆಗಳಲ್ಲಿ (ನಾಗಣಸೂರು, ಬಬಲಾದ, ತೋಳನೂರ, ಜಗಾಪುರ) ಈ ಲರ್ನಿಂಗ್‌, ಡಿಜಿಟಲ್‌, ಟ್ಯಾಬ್‌ ಶಾಲೆಗಳನ್ನಾಗಿ ಪರಿವರ್ತಿಸಿದ್ದರಿಂದ ಇವರಿಗೆ ಹಲವಾರು ರಾಜ್ಯ ಹಾಗೂ ರಾಷ್ಟ್ರಮಟ್ಟದ ಪ್ರಶಸ್ತಿಗಳು ಲಭಿಸಿವೆ.

ಸಂಸದ ಡಾ| ಜಯಸಿದ್ಧೇಶ್ವರ ಸ್ವಾಮೀಜಿ, ಶಾಸಕ ಸಚಿನ್‌ ಕಲ್ಯಾಣಶೆಟ್ಟಿ, ಮಾಜಿ ಶಾಸಕ ಸಿದ್ಧರಾಮ ಮ್ಹೇತ್ರೆ, ಸಿಇಒ ದಿಲೀಪ ಸ್ವಾಮಿ, ಪ್ರಾಥಮಿಕ ಶಿಕ್ಷಣಾಧಿಕಾರಿ ಡಾ| ಕಿರಣ ಲೋಹಾರ, ಬಿಇಒ ಅಶೋಕ ಭಾಂಜೆ, ವಿಸ್ತಾರ ಅಧಿಕಾರಿ ರತಿಲಾಲ ಭುಸೆ, ಸುಹಾಸ ಗುರವ, ಕೇಂದ್ರಪ್ರಮುಖ ಗುರುನಾಥ ನರೂಣೆ, ಮುಖ್ಯಶಿಕ್ಷಕಿ ಶಾಂತಾ ತೋಳನೂರೆ ಹಾಗೂ ಶಿಕ್ಷಕರು, ನಾಗಣಸೂರ ಗ್ರಾಪಂ ಅಧ್ಯಕ್ಷೆ ಅಂಬುಬಾಯಿ ನಾಗಲಗಾಂವ, ಉಪಾಧ್ಯಕ್ಷ ಬಸವರಾಜ ಗಂಗೋಂಡಾ, ಶಾಲೆ ವ್ಯವಸ್ಥಾಪನ ಸಮಿತಿ ಮುಖ್ಯಸ್ಥೆ ಗೀತಾಬಾಯಿ ಕೋನಾಪುರೆ, ಈರಮ್ಮಾ ಮೇಣಸೆ ಶಿಕ್ಷಕ ಶರಣಪ್ಪ ಫುಲಾರಿ ಅವರ ಕಾರ್ಯವನ್ನು ಶ್ಲಾಘಿಸಿ, ಪ್ರಶಸ್ತಿ ಲಭಿಸಿದ್ದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.

ಟಾಪ್ ನ್ಯೂಸ್

ಏಶ್ಯ ಕಪ್‌ ಹಾಕಿ: ಭಾರತದ ವನಿತೆಯರಿಗೆ ಕಂಚಿನ ಪದಕ

ಏಶ್ಯ ಕಪ್‌ ಹಾಕಿ: ಭಾರತದ ವನಿತೆಯರಿಗೆ ಕಂಚಿನ ಪದಕ

ಪ್ರೊ ಕಬಡ್ಡಿ ಲೀಗ್‌: ದ್ವಿತೀಯ ಸ್ಥಾನಕ್ಕೆ ನೆಗೆದ ಪಾಟ್ನಾ ಪೈರೆಟ್ಸ್‌

ಪ್ರೊ ಕಬಡ್ಡಿ ಲೀಗ್‌: ದ್ವಿತೀಯ ಸ್ಥಾನಕ್ಕೆ ನೆಗೆದ ಪಾಟ್ನಾ ಪೈರೆಟ್ಸ್‌

ನಟಿ ಶ್ವೇತಾ ತಿವಾರಿ ವಿರುದ್ಧ ದೂರು

ಕಿರುತೆರೆ ನಟಿ ಶ್ವೇತಾ ತಿವಾರಿ ವಿರುದ್ಧ ಎಫ್​ಐಆರ್​ ದಾಖಲು

ಭಾರ್ತಿ ಏರ್ಟೆಲ್‌ನಲ್ಲಿ ಗೂಗಲ್‌ ಹೂಡಿಕೆ

ಭಾರ್ತಿ ಏರ್ಟೆಲ್‌ನಲ್ಲಿ ಗೂಗಲ್‌ ಹೂಡಿಕೆ

“ರಾಷ್ಟ್ರವೇ ಮೊದಲು’ ಎಂಬ ಯುವಕರಿಂದಲೇ ದೇಶದ ಅಭಿವೃದ್ಧಿ

“ರಾಷ್ಟ್ರವೇ ಮೊದಲು’ ಎಂಬ ಯುವಕರಿಂದಲೇ ದೇಶದ ಅಭಿವೃದ್ಧಿ

ಪಬ್‌ಜಿ ಸೈಡ್‌ ಎಫೆಕ್ಟ್: ಕುಟುಂಬದ ನಾಲ್ವರನ್ನು ಕೊಂದ ಬಾಲಕ

ಪಬ್‌ಜಿ ಸೈಡ್‌ ಎಫೆಕ್ಟ್: ಕುಟುಂಬದ ನಾಲ್ವರನ್ನು ಕೊಂದ ಬಾಲಕ

ರಾಜ್ಯದಲ್ಲಿಂದು 31,198 ಮಂದಿಗೆ ಸೋಂಕು ದೃಢ: 50 ಸಾವುರಾಜ್ಯದಲ್ಲಿಂದು 31,198 ಮಂದಿಗೆ ಸೋಂಕು ದೃಢ: 50 ಸಾವು

ರಾಜ್ಯದಲ್ಲಿಂದು 31,198 ಮಂದಿಗೆ ಸೋಂಕು ದೃಢ: 50 ಸಾವುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15kasapa

ಕಸಾಪಕ್ಕೆ ವಾಹನ ನೀಡಲು ಕ್ರಮ: ಮುರುಗೇಶ ನಿರಾಣಿ

14bus

ಬಸ್‌ ನಿಲ್ದಾಣ ಕಾಮಗಾರಿ ಪೂರ್ಣಕ್ಕೆ ತೇಲ್ಕೂರ್‌ಗೆ ಒತ್ತಾಯ

13hostel

ಹಾಸ್ಟೆಲ್‌ಗೆ ಸೌಲಭ್ಯ ಒದಗಿಸಲು ಒತ್ತಾಯ

12youth

ಭಾರತಕ್ಕಿದೆ ಕ್ರಾಂತಿಕಾರಿ ಯುವಕರ ಅವಶ್ಯಕತೆ

9life

ಸದೃಢ ಆರೋಗ್ಯಕ್ಕೆ ಮುಂಜಾಗ್ರತೆ ಅವಶ್ಯ: ಶ್ರೀ

MUST WATCH

udayavani youtube

ಹುತಾತ್ಮ ಸೈನಿಕ ಮಗನ ಪ್ರತಿಮೆ ನಿರ್ಮಿಸಿದ ತಾಯಿ

udayavani youtube

ಇಲ್ಲಿದೆ ‘ಶುದ್ಧ’ ರಾಸಾಯನಿಕ ಅಕ್ಕಿ !ನೀವು ಕೇಳಿಯೇ ಇರದ 3 ವಿಶೇಷತೆಗಳು

udayavani youtube

400 ಕೋಟಿ ಬೆಲೆಬಾಳುವ 47 ಕೆಜಿ ಹೆರಾಯಿನ್ವಶಪಡಿಸಿಕೊಂಡ BSF

udayavani youtube

ಪ್ರಾಣವನ್ನೇ ಪಣಕ್ಕಿಟ್ಟು ನಾಯಿಯನ್ನು ರಕ್ಷಿಸಿದ ತೆಲಂಗಾಣ ಪೊಲೀಸ್​​ ಅಧಿಕಾರಿ

udayavani youtube

ಬೀದಿ ದೀಪ, ಸಿಬ್ಬಂದಿ ಸಂಬಳದ್ದೇ ಬಿಸಿ ಬಿಸಿ ಚರ್ಚೆ

ಹೊಸ ಸೇರ್ಪಡೆ

ಏಶ್ಯ ಕಪ್‌ ಹಾಕಿ: ಭಾರತದ ವನಿತೆಯರಿಗೆ ಕಂಚಿನ ಪದಕ

ಏಶ್ಯ ಕಪ್‌ ಹಾಕಿ: ಭಾರತದ ವನಿತೆಯರಿಗೆ ಕಂಚಿನ ಪದಕ

ಪ್ರೊ ಕಬಡ್ಡಿ ಲೀಗ್‌: ದ್ವಿತೀಯ ಸ್ಥಾನಕ್ಕೆ ನೆಗೆದ ಪಾಟ್ನಾ ಪೈರೆಟ್ಸ್‌

ಪ್ರೊ ಕಬಡ್ಡಿ ಲೀಗ್‌: ದ್ವಿತೀಯ ಸ್ಥಾನಕ್ಕೆ ನೆಗೆದ ಪಾಟ್ನಾ ಪೈರೆಟ್ಸ್‌

ನಟಿ ಶ್ವೇತಾ ತಿವಾರಿ ವಿರುದ್ಧ ದೂರು

ಕಿರುತೆರೆ ನಟಿ ಶ್ವೇತಾ ತಿವಾರಿ ವಿರುದ್ಧ ಎಫ್​ಐಆರ್​ ದಾಖಲು

ಭಾರ್ತಿ ಏರ್ಟೆಲ್‌ನಲ್ಲಿ ಗೂಗಲ್‌ ಹೂಡಿಕೆ

ಭಾರ್ತಿ ಏರ್ಟೆಲ್‌ನಲ್ಲಿ ಗೂಗಲ್‌ ಹೂಡಿಕೆ

“ರಾಷ್ಟ್ರವೇ ಮೊದಲು’ ಎಂಬ ಯುವಕರಿಂದಲೇ ದೇಶದ ಅಭಿವೃದ್ಧಿ

“ರಾಷ್ಟ್ರವೇ ಮೊದಲು’ ಎಂಬ ಯುವಕರಿಂದಲೇ ದೇಶದ ಅಭಿವೃದ್ಧಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.