ಇಎಸ್‌ಐಸಿ ದುರಸ್ತಿ ತ್ವರಿತ ಪೂರ್ಣಕ್ಕೆ ಸೂಚನೆ


Team Udayavani, May 29, 2021, 4:14 PM IST

ghfdjskal

ಶಹಾಬಾದ: ನಗರದ ಇಎಸ್‌ಐಸಿ ಆಸ್ಪತ್ರೆಗೆ ಶುಕ್ರವಾರ ಭೇಟಿ ನೀಡಿದ ಗಣಿ ಮತ್ತು ಭೂ ವಿಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ, ಶಾಸಕ ಬಸವರಾಜ ಮತ್ತಿಮಡು ನವೀಕರಣ ಕಾರ್ಯ ವೀಕ್ಷಿಸಿ ತ್ವರಿತವಾಗಿ ದುರಸ್ತಿ ಕಾರ್ಯ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಹತ್ತು ದಿನಗಳ ಹಿಂದೆ ಆಸ್ಪತ್ರೆಗೆ ಭೇಟಿ ನೀಡಿದ್ದ ಸಚಿವರು ಕೋವಿಡ್‌ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎಸ್‌ಐಸಿಯನ್ನು ಕೋವಿಡ್‌ ಕೇರ್‌ ಸೆಂಟರ್‌ ಮಾಡುವುದಾಗಿ ತಿಳಿಸಿ ನವೀಕರಣ ಕಾರ್ಯಕ್ಕೆ ನಿರ್ದೇಶನ ನೀಡಿದ್ದರು. ಅದರಂತೆ ಕಾರ್ಯ ನಡೆಯುತ್ತಿರುವುದನ್ನು ಸಚಿವರು ವೀಕ್ಷಿಸಿದರು.

ಸಚಿವರಿಗೆ ಕಾಲು ನೋವು ಇದ್ದರೂ, ಆಸ್ಪತ್ರೆಯ ಮೊದಲನೆ ಮತ್ತು ಎರಡನೇ ಮಹಡಿ ಸಂಪೂರ್ಣ ಸುತ್ತು ಹಾಕಿ ದುರಸ್ತಿ ಕಾರ್ಯ ಪರಿಶೀಲಿಸಿದರು. ಕಟ್ಟಡದ ಮೇಲ್ಭಾಗ ಮೇಲ್ಚಾವಣಿಯ ಮೇಲೆ ಹೋಗಿ ಅಲ್ಲಿನ ದುರಸ್ತಿ ಕಾರ್ಯ ವೀಕ್ಷಿಸಿದರು. ನವೀಕರಣ ಕಾರ್ಯದ ಬಗ್ಗೆ ಅ ಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು ಪ್ರಸ್ತುತ ನವೀಕರಣ ಕಾರ್ಯಕ್ಕೆ ನಿಯೋಜನೆಗೊಂಡ ಕಾರ್ಮಿಕರ ಸಂಖ್ಯೆಯನ್ನು ದ್ವಿಗುಣ ಮಾಡಿ ಸಮರೋಪಾದಿಯಲ್ಲಿ ದುರಸ್ತಿ ಕಾರ್ಯ ಕೈಗೊಳ್ಳಬೇಕು. ಒಂದು ತಿಂಗಳೊಳಗೆ ಎಲ್ಲ ಕಾರ್ಯ ಮುಗಿಸಬೇಕು ಎಂದು ಲೊಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಪ್ರತಿ ಮಹಡಿಯ ದುರಸ್ತಿ ಕಾರ್ಯಕ್ಕೆ ನಾಲ್ಕು ತಂಡ ರಚಿಸಿ, ಅವರಿಗೆ ಆಸ್ಪತ್ರೆಯ ಪ್ರತ್ಯೇಕ ವಿಂಗ್‌ ಕೆಲಸದ ಜವಾಬ್ದಾರಿ ಕೊಡಿ. ಜತೆಯಲ್ಲಿ ವಿದ್ಯುತ್ತೀಕರಣ ಕಾರ್ಯ ಪ್ರತ್ಯೇಕವಾಗಿ ನಡೆಯಲಿ. ಆಸ್ಪತ್ರೆ ಸುತ್ತಮುತ್ತ ರಸ್ತೆ ನಿರ್ಮಿಸಿ. ಕಟ್ಟಡದ ಬಾಗಿಲು, ಕಿಟಕಿ, ಗಾಜು ಬದಲಿಸಿ. ವಸತಿ ಗೃಹ ದುರಸ್ತಿ ಮಾಡಿ. ರಾಷ್ಟ್ರೀಯ ಹೆದ್ದಾರಿ ರಸ್ತೆಗೆ ಹತ್ತಿಕೊಂಡೇ ಆಸ್ಪತ್ರೆ ಇರುವುದರಿಂದ ಧೂಳು ಬಾರದಂತೆ ಆಸ್ಪತ್ರೆಯ ಕಾಂಪೌಂಡ್‌ ಗೋಡೆ ಎತ್ತರ ಮಾಡಿ ಸುತ್ತ ಗಿಡಗಳನ್ನು ನೆಡಿ. ರಸ್ತೆಗೆ ಸ್ಪೀಡ್‌ ಬ್ರೇಕರ್‌ ಹಾಕಿಸಿ ಎಂದು ಆದೇಶಿಸಿದರು.

ಪ್ರಸ್ತುತ 50 ಹಾಸಿಗೆಯ ಈ ಆಸ್ಪತ್ರೆಗೆ ಮುಂದೆ ಪೂರ್ಣ ಪ್ರಮಾಣದ 120 ಹಾಸಿಗೆಯ ಒಂದು ಮಾದರಿ ಆಸ್ಪತ್ರೆಯನ್ನಾಗಿ ಮಾಡಲು ಬೇಕಾಗುವ ನವೀನ ಮಾದರಿಯ ವೈದ್ಯಕೀಯ ಉಪಕರಣ ಖರೀದಿಸಲಾಗುವುದು. ಇದಕ್ಕಾಗಿ ಅಗತ್ಯ ಉಪಕರಣಗಳ ಪಟ್ಟಿ ನೀಡಬೇಕು ಎಂದು ಡಿ.ಎಚ್‌.ಒ ಡಾ| ಶರಣಬಸಪ್ಪ ಗಣಜಲಖೇಡ್‌ ಅವರಿಗೆ ಸಚಿವರು ಸೂಚಿಸಿದರು. ಅಲ್ಲದೇ ಖರೀದಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ನೇತೃತ್ವದ ಅ ಧಿಕಾರಿಗಳ ಸಮಿತಿ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಹೇಳಿದರು. ಆಸ್ಪತ್ರೆ ನವೀಕರಣಕ್ಕೆ ಬೇಕಾಗುವ ಉಪಕರಣ, ಆಗಬೇಕಾದ ಕೆಲಸ-ಕಾರ್ಯಗಳ ಪಟ್ಟಿಯನ್ನು ಕೂಡಲೇ ನೀಡುವಂತೆ ಆರೋಗ್ಯ, ಜೆಸ್ಕಾಂ, ಲೋಕೋಪಯೋಗಿ, ಅರಣ್ಯ ಅ ಧಿಕಾರಿಗಳಿಗೆ ಸಚಿವರು ನಿರ್ದೇಶನ ನೀಡಿದರು. ಆರೋಗ್ಯ ಸಚಿವರಿಗೆ ದೂರವಾಣಿ ಕರೆ: ಸ್ಥಳದಿಂದಲೇ ಆರೋಗ್ಯ ಸಚಿವ ಡಾ| ಕೆ. ಸುಧಾಕರಗೆ ಮೊಬೈಲ್‌ ಮೂಲಕ ಕರೆ ಮಾಡಿ ಮಾತನಾಡಿದ ಸಚಿವ ಮುರುಗೇಶ ನಿರಾಣಿ, ಇಎಸ್‌ಐಸಿ ಆಸ್ಪತ್ರೆ ಹಿನ್ನೆಲೆ ವಿವರಿಸಿದರು.

ಅಲ್ಲದೇ ಆಸ್ಪತ್ರೆ ಪುನರ್‌ ಆರಂಭಕ್ಕೆ ವೈದ್ಯ ಸಿಬ್ಬಂದಿ ನೀಡುವುದಾಗಿ ಕಾರ್ಮಿಕ ಸಚಿವ ಶಿವರಾಮ ಹೆಬ್ಟಾರ್‌ ಒಪ್ಪಿದ್ದಾರೆ. ಹೀಗಾಗಿ ಇದನ್ನು ಆರೋಗ್ಯ ಇಲಾಖೆ ವಶಕ್ಕೆ ಪಡೆದು ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೋರಿದರು.

ಶಾಸಕ ಬಸವರಾಜ ಮತ್ತಿಮಡು, ವಿಧಾನ ಪರಿಷತ್‌ ಸದಸ್ಯರಾದ ಬಿ.ಜಿ. ಪಾಟೀಲ, ಶಶೀಲ ಜಿ.ನಮೋಶಿ, ಸುನೀಲ ವಲ್ಯಾಪುರೆ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ಜೆಸ್ಕಾಂ ಎಂ.ಡಿ. ರಾಹುಲ್‌ ಪಾಂಡ್ವೆ, ಹೆಚ್ಚುವರಿ ಎಸ್‌ಪಿ ಪ್ರಸನ್ನ ದೇಸಾಯಿ, ಸಹಾಯಕ ಆಯುಕ್ತ ರಮೇಶ ಕೋಲಾರ, ಡಿಎಚ್‌ಒ ಡಾ| ಶರಣಬಸಪ್ಪ ಗಣಜಲಖೇಡ್‌, ಲೊಕೋಪಯೋಗಿ ಇಲಾಖೆಯ ಸೇಡಂ ವಿಭಾಗದ ಇಇ ಕೃಷ್ಣ ಅಗ್ನಿಹೋತ್ರಿ, ತಹಶೀಲ್ದಾರ್‌ ಸುರೇಶ ವರ್ಮಾ, ತಾಲೂಕು ಆರೋಗ್ಯಾ  ಧಿಕಾರಿ ಡಾ| ದೀಪಕ ಪಾಟೀಲ, ಶಹಾಬಾದ ಅಧಿ  ಸೂಚಿತ ಕ್ಷೇತ್ರ ಸಮಿತಿ ಮುಖ್ಯಾಧಿ ಕಾರಿ ಪೀರಶೆಟ್ಟಿ, ಬಿಜೆಪಿ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ, ಮಹೇಂದ್ರ ಕೋರಿ, ನಿಂಗಣ್ಣ ಹುಳಗೋಳಕರ್‌, ನಾಗರಾಜ ಮೇಲಗಿರಿ, ಸಂಜಯ ಸೂಡಿ ಹಾಗೂ ಇನ್ನಿತರರು ಇದ್ದರು.

ಟಾಪ್ ನ್ಯೂಸ್

ಈಶ್ವರಪ್ಪ

ಹೈಕಮಾಂಡ್ ನಿಂದ ಸಚಿವರ ರಹಸ್ಯ ವರದಿ ವಿಚಾರ ನನಗೆ ಗೊತ್ತಿಲ್ಲ: ಈಶ್ವರಪ್ಪ

ಕುತೂಹಲ ಮೂಡಿಸಿದ ಪ್ರಧಾನಿ ಮೋದಿ-ದೇವೇಗೌಡರ ಭೇಟಿ

ಕುತೂಹಲ ಮೂಡಿಸಿದ ಪ್ರಧಾನಿ ಮೋದಿ-ದೇವೇಗೌಡರ ಭೇಟಿ

corona-positive

ತುಮಕೂರಿನಲ್ಲಿ ಕೇರಳದಿಂದ ಬಂದ ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ದೃಢ

ಸಚಿವ ಅಶೋಕ್

ಕೋವಿಡ್ ಹೆಚ್ಚಾದರೆ ಹಿಂದೆ ಇದ್ದ ನಿಯಮಗಳೇ ಜಾರಿ: ಸಚಿವ ಅಶೋಕ್

ಭಾರತದಲ್ಲಿ ಈವರೆಗೆ ಒಮಿಕ್ರಾನ್ ವೈರಸ್ ಪತ್ತೆಯಾಗಿಲ್ಲ; ಕೇಂದ್ರ ಸಚಿವ ಮಾಂಡವೀಯಾ

ಭಾರತದಲ್ಲಿ ಈವರೆಗೆ ಒಮಿಕ್ರಾನ್ ವೈರಸ್ ಪತ್ತೆಯಾಗಿಲ್ಲ; ಕೇಂದ್ರ ಸಚಿವ ಮಾಂಡವೀಯಾ

k l rahul and rashid khan

ಐಪಿಎಲ್ ನಿಂದ ಕೆ.ಎಲ್.ರಾಹುಲ್ ಮತ್ತು ರಶೀದ್ ಖಾನ್ ಒಂದು ವರ್ಷ ಬ್ಯಾನ್?

ಚಿಕ್ಕಮಗಳೂರು: ಕಸ-ಕಡ್ಡಿ,ಹುಳ ಮಿಶ್ರಿತ ನೀರನ್ನೇ ಕುಡಿಯಬೇಕು:ಗ್ರಾಮಸ್ಥರ ಯಾತನೆಗೆ ಕೊನೆಯಿಲ್ಲ

ಚಿಕ್ಕಮಗಳೂರು: ಕಸ-ಕಡ್ಡಿ,ಹುಳ ಮಿಶ್ರಿತ ನೀರನ್ನೇ ಕುಡಿಯಬೇಕು:ಗ್ರಾಮಸ್ಥರ ಯಾತನೆಗೆ ಕೊನೆಯಿಲ್ಲಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಈಶ್ವರಪ್ಪ

ಹೈಕಮಾಂಡ್ ನಿಂದ ಸಚಿವರ ರಹಸ್ಯ ವರದಿ ವಿಚಾರ ನನಗೆ ಗೊತ್ತಿಲ್ಲ: ಈಶ್ವರಪ್ಪ

ಕುತೂಹಲ ಮೂಡಿಸಿದ ಪ್ರಧಾನಿ ಮೋದಿ-ದೇವೇಗೌಡರ ಭೇಟಿ

ಕುತೂಹಲ ಮೂಡಿಸಿದ ಪ್ರಧಾನಿ ಮೋದಿ-ದೇವೇಗೌಡರ ಭೇಟಿ

corona-positive

ತುಮಕೂರಿನಲ್ಲಿ ಕೇರಳದಿಂದ ಬಂದ ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ದೃಢ

18graps

ಮಳೆಯಿಂದ ದ್ರಾಕ್ಷಿ ಹಾನಿ: ತಹಶೀಲ್ದಾರ್‌ ಪರಿಶೀಲನೆ

ಈ ಬಾರಿಯೂ ಕಾಂಗ್ರೆಸ್‌ ಗೆಲುವು ನಿಶ್ಚಿತ

ಈ ಬಾರಿಯೂ ಕಾಂಗ್ರೆಸ್‌ ಗೆಲುವು ನಿಶ್ಚಿತ

MUST WATCH

udayavani youtube

‘Car’bar with Merwyn Shirva | Episode 1

udayavani youtube

ಭಾರತ – ನ್ಯೂಜಿಲ್ಯಾಂಡ್ ಟೆಸ್ಟ್ ಪಂದ್ಯ ಡ್ರಾ : ಜಯದ ಸನಿಹದಲ್ಲಿದ್ದ ಟೀಂ ಇಂಡಿಯಾಗೆ ನಿರಾಸೆ

udayavani youtube

ಫ್ರೆಂಡ್ ಪೆನ್ಸಿಲ್ ಕದ್ದ ಎಂದು ಪೊಲೀಸ್ ಠಾಣೆಗೆದೂರು ದಾಖಲಿಸಲು ಹೋದ ಪುಟ್ಟ ವಿದ್ಯಾರ್ಥಿಗಳು!

udayavani youtube

ಕಟ್ಟಡ ತೆರವಿಗೆ ಕೂಡಿ ಬರದ ಗಳಿಗೆ : ಅವಘಡ ಸಂಭವಿಸುವ ಮೊದಲು ಎಚ್ಚೆತ್ತುಕೊಳ್ಳಿ

udayavani youtube

ನೋಂದಣೆ ಕಚೇರಿಗೆ ವಕೀಲರು ಬರದಂತೆ ಅಧಿಕಾರಿಗಳ ತಾಕೀತು : ಪ್ರತಿಭಟನೆಗಿಳಿದ ವಕೀಲರು

ಹೊಸ ಸೇರ್ಪಡೆ

ಈಶ್ವರಪ್ಪ

ಹೈಕಮಾಂಡ್ ನಿಂದ ಸಚಿವರ ರಹಸ್ಯ ವರದಿ ವಿಚಾರ ನನಗೆ ಗೊತ್ತಿಲ್ಲ: ಈಶ್ವರಪ್ಪ

ಕುತೂಹಲ ಮೂಡಿಸಿದ ಪ್ರಧಾನಿ ಮೋದಿ-ದೇವೇಗೌಡರ ಭೇಟಿ

ಕುತೂಹಲ ಮೂಡಿಸಿದ ಪ್ರಧಾನಿ ಮೋದಿ-ದೇವೇಗೌಡರ ಭೇಟಿ

corona-positive

ತುಮಕೂರಿನಲ್ಲಿ ಕೇರಳದಿಂದ ಬಂದ ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ದೃಢ

18graps

ಮಳೆಯಿಂದ ದ್ರಾಕ್ಷಿ ಹಾನಿ: ತಹಶೀಲ್ದಾರ್‌ ಪರಿಶೀಲನೆ

ಈ ಬಾರಿಯೂ ಕಾಂಗ್ರೆಸ್‌ ಗೆಲುವು ನಿಶ್ಚಿತ

ಈ ಬಾರಿಯೂ ಕಾಂಗ್ರೆಸ್‌ ಗೆಲುವು ನಿಶ್ಚಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.