ಇನಾಂದಾರ ವರ್ಗಾವಣೆ ರದ್ಧು ಪಡಿಸಲು ಆಗ್ರಹ
Team Udayavani, Jan 26, 2022, 12:09 PM IST
ಜೇವರ್ಗಿ: ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಯ್ಯ ಇನಾಂದಾರ ವರ್ಗಾವಣೆ ರದ್ದುಪಡಿಸುವಂತೆ ಆಗ್ರಹಿಸಿ ತಾಲೂಕು ವೀರಶೈವ ಸಮಾಜದ ವತಿಯಿಂದ ಮಂಗಳವಾರ ಶಾಸಕ ಡಾ| ಅಜಯಸಿಂಗ್, ತಹಶೀಲ್ದಾರ್ ವಿನಯಕುಮಾರ ಪಾಟೀಲ ಮೂಲಕ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ವೀರಶೈವ ಸಮಾಜದ ತಾಲೂಕು ಘಟಕದ ಅಧ್ಯಕ್ಷ ಸಿದ್ಧು ಸಾಹು ಅಂಗಡಿ, ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಯ್ಯ ಇನಾಂದಾರ ಅವರನ್ನು ಜೇವರ್ಗಿಯಿಂದ ಯಾದಗಿರಿ ಜಿಲ್ಲೆ ಡಯಟ್ ಹಿರಿಯ ಉಪನ್ಯಾಸಕರಾಗಿ ವರ್ಗಾವಣೆ ಮಾಡಲಾಗಿದೆ. ಅವರಿಂದ ತಾಲೂಕಿನಲ್ಲಿ ಶಿಕ್ಷಣ ಕ್ಷೇತ್ರ ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ಆದ್ದರಿಂದ ಯಾರಧ್ದೋ ಒತ್ತಡಕ್ಕೆ ಮಣಿದು ವರ್ಗಾವಣೆ ಮಾಡಬಾರದು ಎಂದು ಆಗ್ರಹಿಸಿದರು.
ವೀರಶೈವ ಸಮಾಜದ ಮುಖಂಡರಾದ ರಾಜಶೇಖರ ಸೀರಿ, ಸಂಗನಗೌಡ ಪಾಟೀಲ ಗುಳ್ಳಾಳ, ಶಿವಕುಮಾರ ಕಲ್ಲಾ, ಗುರುಲಿಂಗಯ್ಯಸ್ವಾಮಿ ಯನಗುಂಟಿ, ಅಶೋಕ ಗುಡೂರ, ಶಾಂತವೀರ ಪಾಟೀಲ, ಮಲ್ಲಿಕಾರ್ಜುನ ಬಿರಾದಾರ, ಭಗವಂತ್ರಾಯ ನೆಂಗಾ, ಶ್ರೀಶೈಲಗೌಡ ಕರಕಿಹಳ್ಳಿ, ರವಿ ಅವಂಟಿ, ಈರಣ್ಣಗೌಡ ಅವರಾದ, ವಿಶ್ವ ಪಾಟೀಲ, ಸಾಹೇಬಗೌಡ ಬುಟ್ನಾಳ, ಪ್ರಕಾಶ ಪಾಟೀಲ, ಸಿದ್ಧು ಸ್ಥಾವರಮಠ, ಅಯ್ಯಣಗೌಡ ಮಾವನೂರ, ಕೇದಾರಲಿಂಗಯ್ಯ ಹಿರೇಮಠ, ವಿಶಾಲ ಭಂಕೂರ, ವಿಶಾಲ ಪವಾರ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮಣಿಪಾಲ: ನಿಯಂತ್ರಣ ತಪ್ಪಿ ಡಿವೈಡರ್ ಗೆ ಢಿಕ್ಕಿಯಾದ ಬೈಕ್ ; ವಿದ್ಯಾರ್ಥಿ ಸಾವು
ಆರ್ಮಿ ಏವಿಯೇಷನ್ಗೆ ಮೊದಲ ಮಹಿಳಾ ಪೈಲೆಟ್; ಹೊಸ ಇತಿಹಾಸ ಬರೆದ ಕ್ಯಾಪ್ಟನ್ ಅಭಿಲಾಷಾ ಬರಕ್
ಗಂಡು, ಗಂಡನ್ನೇ ಮದುವೆಯಾದರೆ ಮಕ್ಕಳಾಗುತ್ತವೆಯೇ?: ಬಿಹಾರ ಸಿಎಂ ನಿತೀಶ್ ಕುಮಾರ್ ಪ್ರಶ್ನೆ
ಲಖೀಂಪುರ ಖೇರಿ ಪ್ರಕರಣ: ಮೇ 30ಕ್ಕೆ ಆಶಿಶ್ ಮಿಶ್ರಾ ಜಾಮೀನು ವಿಚಾರಣೆ
ಕೊಳ್ಳೇಗಾಲ : ಬೈಕ್ ಕದ್ದು ಜೂಜಾಡುತ್ತಿದ್ದ ವ್ಯಕ್ತಿಯ ಬಂಧನ