ಅಭಿವೃದ್ಧಿ ತೋರಿಸಿ ಮತ ಕೇಳಿ: ಮರತೂರ


Team Udayavani, Nov 27, 2021, 10:40 AM IST

4vote

ಚಿಂಚೋಳಿ: ಕಲಬುರಗಿ-ಯಾದಗಿರಿ ವಿಧಾನಪರಿಷತ್‌ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಜಿ. ಪಾಟೀಲ ಕಳೆದ ಆರು ವರ್ಷಗಳಿಂದ ಜಿಲ್ಲೆಯ ಒಂದು ಗ್ರಾಮ ಪಂಚಾಯಿತಿಗೂ ಭೇಟಿ ನೀಡಿಲ್ಲ, ಅಲ್ಲದೇ ಯಾವುದೇ ಅಭಿವೃದ್ಧಿ ಕಾರ್ಯವನ್ನು ಕೈಗೊಂಡಿಲ್ಲ, ಈ ಕುರಿತು ಜನರಿಗೆ ಉತ್ತರ ನೀಡಿ ಅವರು ಮತಯಾಚಿಸಬೇಕು ಎಂದು ವಿಧಾನ ಪರಿಷತ್‌ ಚುನಾವಣೆಯ ಕಾಂಗ್ರೆಸ್‌ ಅಭ್ಯರ್ಥಿ ಶಿವಾನಂದ ಪಾಟೀಲ ಮರತೂರ ಸವಾಲು ಹಾಕಿದರು.

ತಾಲೂಕಿನ ಕಲ್ಲೂರ-ಮಿರಿಯಾಣ ಗ್ರಾಮದಲ್ಲಿ ತಮ್ಮ ಚುನಾವಣೆ ಪ್ರಚಾರ ಭಾಷಣದಲ್ಲಿ ಮಾತನಾಡಿದ ಅವರು, ಬಿಜೆಪಿ ಅಭ್ಯರ್ಥಿ ಬಿ.ಜಿ. ಪಾಟೀಲ ಆರು ವರ್ಷಗಳಲ್ಲಿ ವಿಧಾನ ಪರಿಷತ್‌ ಅಧಿ ವೇಶನದಲ್ಲಿ ನಮ್ಮ ಭಾಗದ ಗ್ರಾಪಂಗಳಿಗೆ ಸಿಗುವ ಸೌಕರ್ಯಗಳ ಬಗ್ಗೆ ಒಂದೂ ಪ್ರಶ್ನೆ ಮಾಡಿಲ್ಲ. ಅನೇಕ ಗ್ರಾಪಂಗಳಲ್ಲಿ ಮೂಲ ಸೌಕರ್ಯಗಳಿಲ್ಲ, ಗ್ರಾಪಂಗಳಿಂದ ನೀಡಿದ ಸಾವಿರಾರು ಮನೆಗಳ ಕಾಮಗಾರಿ ಅರ್ಧಕ್ಕೆ ಸ್ಥಗಿತವಾಗಿವೆ. ಅವರಿಗೆ ಯಾಕೆ ಅನುದಾನ ಕೊಡಿಸಲಿಲ್ಲ. ಆದ್ದರಿಂದ ಮತದಾರರು ಈ ಚುನಾವಣೆಯಲ್ಲಿ ಅವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಹೇಳಿದರು.

ತಾಲೂಕಿನ ಎಲ್ಲ 35 ಗ್ರಾಪಂಗಳಲ್ಲಿ 317 ಕಾಂಗ್ರೆಸ್‌ ಪಕ್ಷದ ಬೆಂಬಲಿತ ಸದಸ್ಯರು ಇದ್ದಾರೆ. 14 ಗ್ರಾಪಂಗಳಲ್ಲಿ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರೇ ಅಧಿ ಕಾರದಲ್ಲಿದ್ದಾರೆ. ನಾನೇನು ಶ್ರೀಮಂತ ಅಲ್ಲ. ನನಗೆ ಸ್ಥಳೀಯ ಸಂಸ್ಥೆಗಳ ಜನಪ್ರತಿನಿ ಗಳೇ ಆಸ್ತಿ, ಸಂಪತ್ತು ಆಗಿದ್ದಾರೆ ಎಂದರು.

ಕಾಂಗ್ರೆಸ್‌ ಮುಖಂಡ ಸುಭಾಷ ರಾಠೊಡ ಮಾತನಾಡಿ, ಕಾಂಗ್ರೆಸ್‌ ಅಭ್ಯರ್ಥಿ ಶಿವಾನಂದ ಪಾಟೀಲ ಗ್ರಾಪಂ, ತಾಪಂ, ಜಿಪಂ ಸದಸ್ಯರಾಗಿ ಮತ್ತು ಜಿಪಂ ವಿರೋಧ ಪಕ್ಷದ ನಾಯಕರಾಗಿ ಕಾರ್ಯನಿರ್ವಹಿಸಿದ ಅನುಭವಿ ರಾಜಕಾರಣಿ ಆಗಿದ್ದಾರೆ. ಇವರಿಗೆ ಮತ ನೀಡಿದರೇ ಪಕ್ಷಕ್ಕೆ ಮುನ್ನುಡಿಯಾಗಲಿದೆ ಎಂದರು.

ಮುಖಂಡ ಮಧುಸೂಧನರೆಡ್ಡಿ ಪಾಟೀಲ ಕಲ್ಲೂರ, ಪುರಸಭೆ ಉಪಾಧ್ಯಕ್ಷ ಶಬ್ಬೀರ ಅಹೆಮದ್‌, ಅಬ್ದುಲ್‌ ರವೂಫ, ರವಿರಾಜ ಕೊರವಿ, ಸುದರ್ಶನರೆಡ್ಡಿ ಪಾಟೀಲ, ಬಸವರಾಜ ಮಲಿ, ಗಣಪತರಾವ್‌, ರೇವಣಸಿದ್ಧ ಪೂಜಾರಿ, ಅಬ್ದುಲ್‌ ಬಾಸಿತ್‌, ಜಗನ್ನಾಥ ಇದಲಾಯಿ, ಮಿರಿಯಾಣ ಗ್ರಾಪಂ ಅಧ್ಯಕ್ಷ ಗೋಪಾಲ ಭೋವಿ, ಸುರೇಶ ಬಂಟಾ, ಚಿತ್ರಶೇಖರ ಪಾಟೀಲ ದೇಗಲಮಡಿ, ಶರಣು ಮೋತಕಪಳ್ಳಿ, ಸಂತೋಷ ಗುತ್ತೇದಾರ ಹಾಗೂ ಮಿರಿಯಾಣ ಗ್ರಾಪಂ ಸದಸ್ಯರು ಇದ್ದರು.

ಟಾಪ್ ನ್ಯೂಸ್

dk shi 2

ಹಲ್ಲೆ ಪ್ರಕರಣ ನಡೆದೇ ಇಲ್ಲ: ನಲಪಾಡ್ ಪರ ಡಿಕೆಶಿ ಬ್ಯಾಟಿಂಗ್

dks

ನಿಯಮ ಉಲ್ಲಂಘಿಸಿದ ಬಿಜೆಪಿ ವಿರುದ್ಧವೂ ಪ್ರಕರಣ ದಾಖಲಾಗಬೇಕು: ಡಿಕೆಶಿ ಎಚ್ಚರಿಕೆ

ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಲು ಕಿರುಕುಳ; ವಿದ್ಯಾರ್ಥಿನಿ ಆತ್ಮಹತ್ಯೆ, ವಾರ್ಡನ್ ಬಂಧನ

ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಲು ಕಿರುಕುಳ; ವಿದ್ಯಾರ್ಥಿನಿ ಆತ್ಮಹತ್ಯೆ, ವಾರ್ಡನ್ ಬಂಧನ

congress

ಬಿಎಂಎಲ್ ಕಾಂತರಾಜು ಕಾಂಗ್ರೆಸ್ ಗೆ: ಕೆಪಿಸಿಸಿ ಕಚೇರಿಗೆ ಬಾರದಂತೆ ಕಾರ್ಯಕರ್ತರಿಗೆ ಮನವಿ

ಇನ್ನೊಂದು ವರ್ಷದಲ್ಲಿ ರಾಜ್ಯದಲ್ಲಿ ಎವಿಜಿಸಿ ನೀತಿ: ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ

ಇನ್ನೊಂದು ವರ್ಷದಲ್ಲಿ ರಾಜ್ಯದಲ್ಲಿ ಎವಿಜಿಸಿ ನೀತಿ: ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ

1fwerewr

ಬಾಗಲಕೋಟೆ :ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಭಾರಿ ಸ್ಪೋಟಕ ವಶ

ಲಾಭಾಂಶಕ್ಕೆ ಮುಗಿಬಿದ್ದ ಹೂಡಿಕೆದಾರರು: ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 630 ಅಂಕ ಕುಸಿತ

ಲಾಭಾಂಶಕ್ಕೆ ಮುಗಿಬಿದ್ದ ಹೂಡಿಕೆದಾರರು: ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 630 ಅಂಕ ಕುಸಿತಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13thefting

ಕಲಬುರಗಿ: ಅಂಗಡಿಗಳಲ್ಲಿ ಕಳ್ಳತನ; ಸಿಸಿಟಿವಿಯಲ್ಲಿ ಸೆರೆ

11karnataka

ಕ್ಷಯರೋಗ ಮುಕ್ತ ಕರ್ನಾಟಕಕ್ಕೆ ಕೈಜೋಡಿಸಿ

10thefts

ಕಳ್ಳ ಸಹೋದರರ ಸೆರೆ: ಐದು ಬೈಕ್‌ ಜಪ್ತಿ

9sheeps

ಹಳ್ಳದ ನೀರು ಕುಡಿದು 10 ಕುರಿ ಸಾವು

8road

ಯಡ್ರಾಮಿ ತಾಲೂಕಾದ್ರೂ ಸುಧಾರಿಸಿಲ್ಲ ರಸ್ತೆ ಸ್ಥಿತಿ

MUST WATCH

udayavani youtube

ನಾಳೆ ರಾಜ್ಯದ ಕರ್ಫ್ಯೂ ಭವಿಷ್ಯ ನಿರ್ಧಾರ : ಇಕ್ಕಟ್ಟಿಗೆ ಸಿಲುಕಿದ ಸಿಎಂ

udayavani youtube

ಪಾಕಿಸ್ತಾನದ ಲಾಹೋರ್‌ನಲ್ಲಿ ಬಾಂಬ್ ಬ್ಲಾಸ್ಟ್! 3 ಸಾವು

udayavani youtube

ಚಿಂಚೋಳಿ ಜನರ ನಿದ್ದೆಗೆಡಿಸಿದ ಕಳ್ಳರು : ಮತ್ತೆ ಎರಡು ಅಂಗಡಿಗೆ ನುಗ್ಗಿ ಕಳ್ಳತನ

udayavani youtube

ನಲಪಾಡ್ ಹಲ್ಲೆ ವಿಚಾರ, ಸಿದ್ದು ಹಳ್ಳೇಗೌಡ ಹೇಳಿದ್ದೇನು ?

udayavani youtube

24 ಅಡಿ ಎತ್ತರದ ಸೈಕಲ್ ತಯಾರಿಸಿ ರೈಡ್ ಮಾಡಿದ ವ್ಯಕ್ತಿ

ಹೊಸ ಸೇರ್ಪಡೆ

ರೀಲರ್‌ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ

ರೀಲರ್‌ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ

ಭೋಗ ಭೂಮಿಯಿಂದ ಯೋಗ ಭೂಮಿಯತ್ತ ನಡೆಯೋಣ

ಭೋಗ ಭೂಮಿಯಿಂದ ಯೋಗ ಭೂಮಿಯತ್ತ ನಡೆಯೋಣ

19kit

ಬೀದರ್‌: ಹೆಚ್ಚಿದ ಮನೆ ಮದ್ದು!

dk shi 2

ಹಲ್ಲೆ ಪ್ರಕರಣ ನಡೆದೇ ಇಲ್ಲ: ನಲಪಾಡ್ ಪರ ಡಿಕೆಶಿ ಬ್ಯಾಟಿಂಗ್

dks

ನಿಯಮ ಉಲ್ಲಂಘಿಸಿದ ಬಿಜೆಪಿ ವಿರುದ್ಧವೂ ಪ್ರಕರಣ ದಾಖಲಾಗಬೇಕು: ಡಿಕೆಶಿ ಎಚ್ಚರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.