ಸಕ್ಕರೆ ಕಾರ್ಖಾನೆ ಜಮೀನಿನ ಸಾಲ ವಿಷಯ ಮುನ್ನೆಲೆಗೆ


Team Udayavani, Nov 22, 2021, 11:56 AM IST

7sugar

ಕಲಬುರಗಿ: ಚಿಂಚೋಳಿ ಜನರ ಎರಡು ದಶಕಗಳ ನಿರೀಕ್ಷೆಯಾದ ಸಕ್ಕರೆ ಕಾರ್ಖಾನೆಗೆ ಸೋಮವಾರ ಅಡಿಗಲ್ಲು ನೆರವೇರಿಸಲಾಗುತ್ತಿದೆ. ಈ ಹೊತ್ತಲ್ಲೇ ಈ ಕಾರ್ಖಾನೆ ತಲೆಎತ್ತಲಿರುವ ಜಮೀನಿಗೆ ಸಂಬಂಧಿಸಿದ 210 ಕೋಟಿ ರೂ. ಸಾಲದ ವಿಷಯ ಈಗ ಮುನ್ನೆಲೆಗೆ ಬರುತ್ತಿದೆ.

ವಿಜಯಪುರದ ಸಿದ್ಧಸಿರಿ ಸೌಹಾರ್ದ ಸಹಕಾರಿ ಸಂಘ ರೋಗಗ್ರಸ್ತ ಕಾರ್ಖಾನೆಗಳ ಪುನಶ್ಚೇತನ ಯೋಜನೆಯಡಿ ಖರೀದಿಸಿದ ಜಮೀನಿನಲ್ಲಿ “ಸಿದ್ಧಸಿರಿ ಸಕ್ಕರೆ ಕಾರ್ಖಾನೆ, ಸಿದ್ಧಸಿರಿ ಇಥೆನಾಲ್‌ ಹಾಗೂ ಪವರ್‌ ಉತ್ಪಾದನಾ ಘಟಕ’ ಆರಂಭವಾಗಲಿದೆ.

ಇನ್ನು ಚಿಂಚೋಳಿಯಲ್ಲಿ ಸಕ್ಕರೆ ಕಾರ್ಖಾನೆಯನ್ನು ಸಹಕಾರಿ ಸಂಘದಡಿ ಸ್ಥಾಪಿಸಲು ದಶಕಗಳ ಹಿಂದೆಯೇ ಉದ್ದೇಶಿಸಿ, “ಚಿಂಚೋಳಿ ಶುಗರ್ಸ್‌ ಮಿಲ್ಸ್‌ ಲಿ. ಕಂಪನಿ’ ಆರಂಭಿಸಿ ಕಂಪನಿ ಕಾಯ್ದೆಯಡಿ 1995ರಲ್ಲಿ ನೋಂದಣಿ ಮಾಡಲಾಗಿತ್ತು. ಬಳಿಕ ಈ ಕಂಪನಿ ಆಡಳಿತ ಮಂಡಳಿ ಇದನ್ನು ಹೈದ್ರಾಬಾದ್‌ನ ಟಬೋì ಇಂಡಸ್ಟ್ರೀಸ್‌ ಮತ್ತು ಮೆಷಿನರೀಸ್‌ ಮಾಲೀಕ ಟಿ. ಸುಬ್ಬರಾಯಡು ಅವರಿಗೆ ಮಾರಾಟ ಮಾಡಿತ್ತು. ರಾಜ್ಯ ಸರ್ಕಾರ ಕೆಐಎಡಿಬಿ ಸಂಸ್ಥೆ ಮುಖಾಂತರ ಕಾರ್ಖಾನೆ ಸ್ಥಾಪನೆಗೆಂದು 97.13 ಎಕರೆ ಜಮೀನು ಮಂಜೂರು ಮಾಡಿತು. ಈ ಭೂಮಿ ಸಾಕಾಗಲ್ಲ ಎಂದು ಕಂಪೆನಿ ಆಡಳಿತ ಮಂಡಳಿ 110 ಎಕರೆ ರೈತರ ಖಾಸಗಿ ಭೂಮಿ ಖರೀದಿಸಿತ್ತು.

ಈ ರೈತರಿಂದ ಖರೀದಿಸಿದ ಹಾಗೂ ಕೆಐಎಡಿಬಿ ನೀಡಿದ ಭೂಮಿ ಮೇಲೆ ಒಟ್ಟು 210 ಕೋಟಿ ರೂ. ಸಾಲ ಪಡೆಯಿತು. ಆದರೆ ಕಾರ್ಖಾನೆ ಸ್ಥಾಪನೆಗೆ ಬದಲಾಗಿ ಇತರೆ ಉದ್ದೇಶಗಳಿಗೆ ಈ ಹಣ ಬಳಕೆ ಮಾಡಲಾಯಿತು ಎಂಬ ಆರೋಪ ಕೇಳಿಬಂದಿತ್ತು. 2016ರಲ್ಲಿ ಆಗಿನ ಸಿಐಡಿ ಪೊಲೀಸ್‌ ಮಹಾ ನಿರ್ದೇಶಕರಾಗಿದ್ದ ಹೇಮಂತ ನಿಂಬಾಳಕರ್‌ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಈ ಕುರಿತು ವರದಿ ಸಲ್ಲಿಸಿದ್ದರು. ಇದರ ನಡುವೆ ಕಾರ್ಖಾನೆಗೆ ರೈತರಿಂದ ಕಬ್ಬು ಪೂರೈಸಲಾಗುವುದು ಎಂದು ಹೇಳಿ ರೈತರ ಹೆಸರಿನಲ್ಲೂ ಡಿಸಿಸಿ ಬ್ಯಾಂಕ್‌ನಲ್ಲಿ ಸಾಲ ಎತ್ತಲಾಗಿದೆ. ಈ ವಿಷಯ ಸದ್ಯ ನ್ಯಾಯಾಲಯದಲ್ಲಿದೆ ಎನ್ನಲಾಗಿದೆ.

ಒಟ್ಟಾರೆ ಸಾಲ ಎತ್ತುವಳಿ ಹಾಗೂ ವಂಚನೆ ಪ್ರಕರಣವನ್ನು ಸಿಐಡಿ ಗಮನಕ್ಕೆ ತರುವಲ್ಲಿ ಹಾಗೂ ರೈತರಿಗೆ ನ್ಯಾಯ ಕೊಡಿಸಲು ಮಾಜಿ ಸಚಿವ ದಿ| ವೈಜನಾಥ ಪಾಟೀಲ ರೈತರೊಂದಿಗೆ ಹತ್ತಾರು ಹೋರಾಟ ಮಾಡಿದ್ದರು. ಈ ನಡುವೆ ಕಾರ್ಖಾನೆ ಸ್ಥಾಪನೆಯಾಗದ್ದಕ್ಕೆ ಕಾರಣರಾದವರು ಹಾಗೂ ರೈತರ ಜತೆ ಚೆಲ್ಲಾಟವಾಡಿದವರ ವಿರುದ್ಧ ಕ್ರಮ ಜರುಗಿಸಬೇಕು ಎಂಬ ಕೂಗು ಕೇಳಿಬಂದಿದೆ.

ಇನ್ನೊಂದೆಡೆ ಎರಡು ತಿಂಗಳ ಹಿಂದೆಯಷ್ಟೇ ಅಧಿಕಾರ ಸ್ವೀಕರಿಸಿರುವ ತಮಗೆ ಈ ಕಾರ್ಖಾನೆ ಕುರಿತು ಹೆಚ್ಚಿನ ಮಾಹಿತಿ ಇಲ್ಲ. ಕಚೇರಿಯಲ್ಲಿ ದಾಖಲಾತಿಗಳಿದ್ದರೆ ಪರಿಶೀಲನೆ ನಡೆಸುವುದಾಗಿ ಚಿಂಚೋಳಿ ತಹಶೀಲ್ದಾರ್‌ ಅಂಜುಂ ತಬ್ಸುಮ್‌ ತಿಳಿಸಿದ್ದಾರೆ.

ಚಿಂಚೋಳಿ ಶುಗರ್ಸ್‌ ಮಿಲ್ಸ್‌ ಲಿ. ಕಂಪನಿಯನ್ನು ನಿರ್ದೇಶಕರ ಗಮನಕ್ಕೂ ತಾರದೆ ರಾತೋರಾತ್ರಿ ಬೇರೆಯವರಿಗೆ ಹೇಗೆ ಮಾರಾಟ ಮಾಡಲಾಯಿತು ಎಂಬುದೇ ತಿಳಿಯುತ್ತಿಲ್ಲ. ಹೇಗಾದರೂ ಆಗಲಿ ಸಕ್ಕರೆ ಕಾರ್ಖಾನೆ ಶುರುವಾಗಲಿ ಎಂಬುದೇ ತಮ್ಮ ಉದ್ದೇಶವಾಗಿತ್ತು. ಆದರೆ 210 ಕೋಟಿ ರೂ. ಸಾಲದ ಹೊಣೆಗಾರರ ವಿರುದ್ಧ ಹಾಗೂ ತಮಗಾದ ಅನ್ಯಾಯ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು. -ಡಾ|ವಿಕ್ರಂ ವೈಜನಾಥ ಪಾಟೀಲ, ಎಂಎಸ್‌ಐಎಲ್‌ ಮಾಜಿ ಅಧ್ಯಕ್ಷ

ಟಾಪ್ ನ್ಯೂಸ್

bomb

ಲಾಹೋರ್ : ಬಾಂಬ್ ಸ್ಫೋಟದಲ್ಲಿ ಇಬ್ಬರ ಸಾವು, 23 ಮಂದಿಗೆ ಗಾಯ

Minister Sunil kumar

ಟಿಪ್ಪು ಆದರ್ಶ ಪ್ರತಿಪಾದಕರಿಂದ ನಾರಾಯಣ ಗುರುಗಳಿಗೆ ಅವಮಾನ: ಸಿದ್ದು ವಿರುದ್ಧ ಸುನಿಲ್ ಆಕ್ರೋಶ

cm-bomm

ನೈಟ್ ಕರ್ಫ್ಯೂ ಸಡಿಲಿಕೆ : ಇಕ್ಕಟ್ಟಿನಲ್ಲಿ ಸಿಎಂ,ಬೆಂಬಲಕ್ಕೆ ಅಶೋಕ್

ಗೋರಖ್ ಪುರ್ ಕ್ಷೇತ್ರ: ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಚಂದ್ರಶೇಖರ್ ಆಜಾದ್ ಕಣಕ್ಕೆ

ಗೋರಖ್ ಪುರ್ ಕ್ಷೇತ್ರ: ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಚಂದ್ರಶೇಖರ್ ಆಜಾದ್ ಕಣಕ್ಕೆ

ಎಸ್ಎಸ್ಎಲ್ ಸಿ ಪ್ರಿಪರೇಟರಿ ಪರೀಕ್ಷೆ ವೇಳಾಪಟ್ಟಿ ಬಿಡುಗಡೆ

ಎಸ್ಎಸ್ಎಲ್ ಸಿ ಪ್ರಿಪರೇಟರಿ ಪರೀಕ್ಷೆ ವೇಳಾಪಟ್ಟಿ ಬಿಡುಗಡೆ

renukaacharya

ಯತ್ನಾಳ್ ಭೇಟಿಯಾದ ರೇಣುಕಾಚಾರ್ಯ: ಕಾಲ ಬಂದರೆ ವರಿಷ್ಠರ ಭೇಟಿ

babar azam

ವರ್ಷದ ಏಕದಿನ ತಂಡ ಪ್ರಕಟಿಸಿದ ಐಸಿಸಿ: ಭಾರತೀಯರಿಗೆ ಸ್ಥಾನವಿಲ್ಲ! ಬಾಬರ್ ಗೆ ನಾಯಕತ್ವಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13thefting

ಕಲಬುರಗಿ: ಅಂಗಡಿಗಳಲ್ಲಿ ಕಳ್ಳತನ; ಸಿಸಿಟಿವಿಯಲ್ಲಿ ಸೆರೆ

11karnataka

ಕ್ಷಯರೋಗ ಮುಕ್ತ ಕರ್ನಾಟಕಕ್ಕೆ ಕೈಜೋಡಿಸಿ

10thefts

ಕಳ್ಳ ಸಹೋದರರ ಸೆರೆ: ಐದು ಬೈಕ್‌ ಜಪ್ತಿ

9sheeps

ಹಳ್ಳದ ನೀರು ಕುಡಿದು 10 ಕುರಿ ಸಾವು

8road

ಯಡ್ರಾಮಿ ತಾಲೂಕಾದ್ರೂ ಸುಧಾರಿಸಿಲ್ಲ ರಸ್ತೆ ಸ್ಥಿತಿ

MUST WATCH

udayavani youtube

ಚಿಂಚೋಳಿ ಜನರ ನಿದ್ದೆಗೆಡಿಸಿದ ಕಳ್ಳರು : ಮತ್ತೆ ಎರಡು ಅಂಗಡಿಗೆ ನುಗ್ಗಿ ಕಳ್ಳತನ

udayavani youtube

ನಲಪಾಡ್ ಹಲ್ಲೆ ವಿಚಾರ, ಸಿದ್ದು ಹಳ್ಳೇಗೌಡ ಹೇಳಿದ್ದೇನು ?

udayavani youtube

24 ಅಡಿ ಎತ್ತರದ ಸೈಕಲ್ ತಯಾರಿಸಿ ರೈಡ್ ಮಾಡಿದ ವ್ಯಕ್ತಿ

udayavani youtube

ನೆಲಕಡಲೆಯ ಕೃಷಿಯಲ್ಲಿ ಯಶಸ್ವಿ ಕಂಡ ರೈತ

udayavani youtube

ಕರ್ಫ್ಯೂ ತೆಗೆಯಿರಿ : ತಮ್ಮ ಸರಕಾರದ ವಿರುದ್ಧವೇ ಗರ್ಜಿಸಿದ ಸಿಂಹ

ಹೊಸ ಸೇರ್ಪಡೆ

ಹೊಲದಲ್ಲೇ ಬೆಲೆ ಸಿಗುವಾಗ, ಖರೀದಿ ಕೇಂದ್ರ ಏಕೆ ?

ಹೊಲದಲ್ಲೇ ಬೆಲೆ ಸಿಗುವಾಗ, ಖರೀದಿ ಕೇಂದ್ರ ಏಕೆ ?

bomb

ಲಾಹೋರ್ : ಬಾಂಬ್ ಸ್ಫೋಟದಲ್ಲಿ ಇಬ್ಬರ ಸಾವು, 23 ಮಂದಿಗೆ ಗಾಯ

Minister Sunil kumar

ಟಿಪ್ಪು ಆದರ್ಶ ಪ್ರತಿಪಾದಕರಿಂದ ನಾರಾಯಣ ಗುರುಗಳಿಗೆ ಅವಮಾನ: ಸಿದ್ದು ವಿರುದ್ಧ ಸುನಿಲ್ ಆಕ್ರೋಶ

ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೋವಿಡ್‌ ಪ್ರಕರಣ :  ಶಾಲೆಗೆ ರಜೆ ಘೋಷಿಸಲು ಪೋಷಕರ ಒತ್ತಾಯ

ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೋವಿಡ್‌ ಪ್ರಕರಣ :  ಶಾಲೆಗೆ ರಜೆ ಘೋಷಿಸಲು ಪೋಷಕರ ಒತ್ತಾಯ

ಜಿಲೆಯಲ್ಲಿ 4 ಸಾವಿರ ಗಡಿದಾಟಿದ ಸಕ್ರೀಯ ಪ್ರಕರಣ : ಜನರಲ್ಲಿ ಆತಂಕ

ಜಿಲೆಯಲ್ಲಿ 4 ಸಾವಿರ ಗಡಿದಾಟಿದ ಸಕ್ರೀಯ ಪ್ರಕರಣ : ಜನರಲ್ಲಿ ಆತಂಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.