ಮಳೆ-ಗಾಳಿಗೆ ಧರೆಗುರುಳಿದ ಕಬ್ಬು


Team Udayavani, Nov 27, 2021, 10:29 AM IST

3sugarcane

ವಾಡಿ: ಪಟ್ಟಣ ವ್ಯಾಪ್ತಿಯಲ್ಲಿ ಇತ್ತೀಚೆಗೆ ಸುರಿದ ಅಕಾಲಿಕ ಮಳೆಯಿಂದ ಬಹುತೇಕ ಕಡೆ ತೋಟಗಾರಿಕೆ ಬೆಳೆ ನೆಲಕಚ್ಚಿದ್ದು, ರೈತರು ಮತ್ತೂಮ್ಮೆ ಆರ್ಥಿಕ ನಷ್ಟಕ್ಕೆ ತುತ್ತಾಗಿದ್ದಾರೆ. ಹವಮಾನ ವೈಪರಿತ್ಯದ ಪರಿಣಾಮ ರಾತ್ರಿ ಹಗಲೆನ್ನದೆ ಒಂದು ವಾರ ಕಾಲ ಸುರಿದ ಧಾರಾಕಾರ ಮಳೆಗೆ ಕಬ್ಬು ಬೆಳೆಗಾರರು ಕಂಗಾಲಾಗಿದ್ದಾರೆ.

ನಾಲವಾರ, ಸನ್ನತಿ, ಯಾಗಾಪುರ, ಅಳ್ಳೊಳ್ಳಿ ವಲಯದಲ್ಲಿ ಬೆಳೆಯಲಾದ ನೂರಾರು ಎಕರೆ ಕಬ್ಬು ಗಾಳಿಗೆ ಸಿಕ್ಕು ಮುಗ್ಗರಿಸಿದೆ. ಹೂಬಿಟ್ಟ ತೊಗರಿ, ಫಲಕೊಟ್ಟ ಹತ್ತಿ ಬೆಳೆ ಅತಿಯಾದ ಭೂಮಿಯ ತೇವಾಂಶದಿಂದ ನರಳಿ ಗೊಡ್ಡು ರೋಗಕ್ಕೆ ತುತ್ತಾಗಿವೆ. ಉತ್ತಮ ಇಳುವರಿ ನಿರೀಕ್ಷೆಯಲ್ಲಿರುವ ಈ ಭಾಗದ ಅನ್ನದಾತರು ಅಕಾಲಿಕ ಮಳೆ ಹೊಡೆತಕ್ಕೆ ಸಿಲುಕಿ ಮರುಗುತ್ತಿದ್ದಾರೆ.

ಮೊದಮೊದಲು ಅತಿವೃಷ್ಟಿಗೆ ತತ್ತರಿಸಿದ ಬೇಸಾಯಗಾರರು, ತಡವಾಗಿ ತೊಗರಿ ಬಿತ್ತನೆ ಮಾಡಿ ಕೈಸುಟ್ಟುಕೊಂಡಿದ್ದಾರೆ. ಮುಂಗಾರು ಬಿತ್ತನೆ ಮಾಡಿದವರ ಬೀಜ ಭೂಮಿಯಲ್ಲೇ ಕೊಳೆತು, ಬೆಳೆ ಬಾರದೇ ಮರುಬಿತ್ತನೆ ಮಾಡಿದ್ದಾರೆ. ಈಗ ತುಸು ಬೆಳೆ ಚೇತರಿಸಿಕೊಂಡು ಉತ್ತಮ ಇಳುವರಿ ಭರವಸೆ ನೀಡುತ್ತಿದ್ದಂತೆ ಅಕಾಲಿಕ ಮಳೆ ಹೊಸ ಆಪತ್ತು ತಂದಿಟ್ಟಿದೆ.

ಚಂಡಮಾರುತ ರೂಪದ ಬಿರುಗಾಳಿ ಮಿಶ್ರಿತ ವರ್ಷಧಾರೆ ಬೆಳೆಗಳ ಮೇಲೆ ದಾಳಿ ನಡೆಸಿದೆ. ತೊಗರಿ ಹೂಗಳು ಉದುರಿ ಬಿದ್ದರೇ, ಕಬ್ಬು ಬೆಳೆ ನೆಲಕಚ್ಚಿದೆ. ಅತಿವೃಷ್ಟಿ ಹಾಗೂ ಅನಾವೃಷ್ಟಿ ಎರಡರ ಹೊಡೆತ ತಿನ್ನುತ್ತಲೇ ಬದುಕು ದೂಡುತ್ತಿರುವ ಬಿಸಿಲು ನಾಡಿನ ರೈತರ ಎದೆಗೆ ಪ್ರಕೃತಿ ನಷ್ಟದ ಬರೆ ಎಳೆದಿದೆ.

ಚಾಮನೂರ, ಕುಂದನೂರ, ಕಡಬೂರ, ಇಂಗಳಗಿ, ಕೊಲ್ಲೂರ, ಸನ್ನತಿ ವ್ಯಾಪ್ತಿಯ ಭೀಮಾ ದಡದಲ್ಲಿರುವ ಜಮೀನುಗಳಲ್ಲಿ ಕಬ್ಬು ಬೆಳೆಯಲಾಗಿದ್ದು, ಮೊನ್ನೆ ಸುರಿದ ಮಳೆಯಿಂದ ಕಬ್ಬಿನ ಗಣಿಕೆ ಫಸಲು ಧರೆಗುರುಳಿ ರೈತರಿಗೆ ಕಣ್ಣೀರು ತರಿಸಿದೆ. ಕೂಡಲೇ ಸರ್ಕಾರ ಬೆಳೆ ನಷ್ಟ ಪಟ್ಟಿ ತಯಾರಿಸಿ, ರೈತರಿಗೆ ಪರಿಹಾರ ಒದಗಿಸಬೇಕು ಎಂದು ನಗರದ ಯುವ ರೈತ ಸಿದ್ಧು ಪಂಚಾಳ ಒತ್ತಾಯಿಸಿದ್ದಾರೆ.

ಟಾಪ್ ನ್ಯೂಸ್

ಮುಖ್ಯಮಂತ್ರಿಗಳ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ಕೆಲಸ ಮಾಡುವೆ : ಸಚಿವ ‌ಶಿವರಾಮ ಹೆಬ್ಬಾರ್

ಉತ್ತರ ಕನ್ನಡ ನನ್ನ ಕರ್ಮ ಭೂಮಿ ಅದರ ಅಭಿವೃದ್ಧಿಗೆ ಸದಾ ಶ್ರಮಿಸುವೆ :ಸಚಿವ ‌ಶಿವರಾಮ ಹೆಬ್ಬಾರ್

ಅಕ್ರಮ ಮರಳು ಗಣಿಗಾರಿಕೆ ಪ್ರದೇಶಕ್ಕೆ ಗಣಿ ಅಧಿಕಾರಿ ದಾಳಿ : ಮೂರು ದೋಣಿಗಳು ವಶಕ್ಕೆ

ಅಕ್ರಮ ಮರಳು ಗಣಿಗಾರಿಕೆ ಪ್ರದೇಶಕ್ಕೆ ಗಣಿ ಅಧಿಕಾರಿ ದಾಳಿ : ಮೂರು ದೋಣಿಗಳು ವಶಕ್ಕೆ

akhilesh

ಪಾಕಿಸ್ಥಾನದ ಪರ ಅಖಿಲೇಶ್ ಅನುಕಂಪದ ಮಾತು : ಬಿಜೆಪಿ ಆಕ್ರೋಶ

1-ae2

ವಿ.ವಿ.ಗಳಲ್ಲಿ ಸುಗಮ ಪರೀಕ್ಷಾ ವ್ಯವಸ್ಥೆಗೆ ತಂತ್ರಾಂಶ; ‘ಇ-ಸಹಮತಿ’ಗೆ ಹಸಿರು ನಿಶಾನೆ

ನಿಂತ ನೀರಾಗಿರುವ ಚಾ.ನಗರ ಅಭಿವೃದ್ಧಿಗೆ ಹರಿಯೋ ನೀರಾಗುವರೇ ಸೋಮಣ್ಣ?

ನಿಂತ ನೀರಾಗಿರುವ ಚಾ.ನಗರ ಅಭಿವೃದ್ಧಿಗೆ ಹರಿಯೋ ನೀರಾಗುವರೇ ಸೋಮಣ್ಣ?

1ahan

ಯುಎಇ: ಭಾರತೀಯ ವಿದ್ಯಾರ್ಥಿ ಅಹಾನ್ ಶೆಟ್ಟಿ, SAT ನಲ್ಲಿ ಇತಿಹಾಸ

1-gaa

‘ವೈ ಐ ಕಿಲ್ಡ್ ಗಾಂಧಿ’ ಸಿನಿಮಾ ಬ್ಯಾನ್ ಮಾಡಲು ಕಾಂಗ್ರೆಸ್ ಮನವಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15karnataka

ಕ್ಷಯ ರೋಗ ಮುಕ್ತ ಕರ್ನಾಟಕಕ್ಕೆ ಕೈ ಜೋಡಿಸಿ

14social

ಸಮಾಜಮುಖೀ ಚಿಂತಕರನ್ನು ಪ್ರೋತ್ಸಾಹಿಸಿ

13nature

ದುರಾಸೆಗೆ ನಿಸರ್ಗವೇ ಕಲಿಸುತ್ತೆ ಪಾಠ: ಪಾಟೀಲ

12child

ಪಾಲಕರಿಂದ ಮಕ್ಕಳ ಆರೋಗ್ಯ ಕಾಳಜಿ ಅವಶ್ಯ: ಶರಣಬಸಪ್ಪ

11practicals

ಪ್ರಾಯೋಗಿಕ ಬೋಧನೆ ಪರಿಣಾಮಕಾರಿ

MUST WATCH

udayavani youtube

₹500 ವಿಷಯದಲ್ಲಿ ಜಡೆ ಎಳೆದು ಜಗಳವಾಡಿದ ಆರೋಗ್ಯ ಕಾರ್ಯಕರ್ತೆಯರು

udayavani youtube

ಪ್ರಕೃತಿಯನ್ನು ಲೂಟಿ ಮಾಡಿದ ಪರಿಣಾಮ ಹೀಗೆಲ್ಲ ಆಗಿದೆ !!

udayavani youtube

ಒಂದೇ ವಾಹನಕ್ಕೆ ಒಂದು ತಿಂಗಳ ಅಂತರದಲ್ಲಿ ಪೊಲೀಸರಿಂದ 16 ನೋಟಿಸ್

udayavani youtube

ರಾಷ್ಟ್ರೀಯ ಬಾಲ ಪುರಸ್ಕಾರ : ಪ್ರಧಾನಿ ಜೊತೆ ಮಂಗಳೂರಿನ ರೆಮೋನಾ ಪರೇರಾ ಮಾತುಕತೆ

udayavani youtube

ಬೆಳ್ಳಂಬೆಳಗ್ಗೆ ಟ್ರಾಫಿಕ್ ಜಾಮ್ ! ಕೆಲಸಕ್ಕೆ ಹೋಗುವವರ ಪರದಾಟ ಹೇಳತೀರದು…

ಹೊಸ ಸೇರ್ಪಡೆ

ಮುಖ್ಯಮಂತ್ರಿಗಳ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ಕೆಲಸ ಮಾಡುವೆ : ಸಚಿವ ‌ಶಿವರಾಮ ಹೆಬ್ಬಾರ್

ಉತ್ತರ ಕನ್ನಡ ನನ್ನ ಕರ್ಮ ಭೂಮಿ ಅದರ ಅಭಿವೃದ್ಧಿಗೆ ಸದಾ ಶ್ರಮಿಸುವೆ :ಸಚಿವ ‌ಶಿವರಾಮ ಹೆಬ್ಬಾರ್

ದೋಟಿಹಾಳ : ಆಶ್ರಯ ಮನೆ ಹಂಚಿಕೆ ವೇಳೆ ಗಲಾಟೆ : ಠಾಣಾಗೆ ದೂರು

ದೋಟಿಹಾಳ : ಆಶ್ರಯ ಮನೆ ಹಂಚಿಕೆ ವೇಳೆ ನಡೆದ ಗಲಾಟೆ ಪೊಲೀಸ್ ಠಾಣೆಯ ಮೆಟ್ಟಿಲೇರಿತು

1-ddsd

ಯಲ್ಲಾಪುರ: ಇದೇನು ಪಾಳುಬಿದ್ದ ಕಟ್ಟಡವೇ?  ಯಾರೂ ದಾತಾರರು ಇಲ್ಲವೇ?

1-sddds

ನೀರಾವರಿ ವಿಷಯದಲ್ಲಿ ರಾಜಕೀಯ ಸಲ್ಲ: ರಾಯರಡ್ಡಿ ಆಕ್ಷೇಪಕ್ಕೆ ಸಂಗಣ್ಣ ಕರಡಿ ತಿರುಗೇಟು

1-sasass

ಉಡುಪಿ: ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಕೌನ್ಸಿಲಿಂಗ್ :ವೇಳಾಪಟ್ಟಿ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.