ಕಲಬುರಗಿ ಉಸ್ತುವಾರಿ ಕೊಟ್ಟರೆ ನಿಭಾಯಿಸುವೆ: ಉಮೇಶ್ ಕತ್ತಿ
Team Udayavani, Jan 26, 2021, 11:20 AM IST
ಕಲಬುರಗಿ: ತಮ್ಮ ಹಿರಿತನ ಗುರುತಿಸಿ ಮುಖ್ಯಮಂತ್ರಿ ಸಚಿವರನ್ನಾಗಿಸಿದ್ದಾರೆ. ಈಗ ದೊಡ್ಡ ಜಿಲ್ಲೆಯಾಗಿರುವ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನಿಯೋಜಿಸಿದರೆ ನಿಭಾಯಿಸುವೆ ಎಂದು ಆಹಾರ, ನಾಗರಿಕ ಮತ್ತು ಗ್ರಾಹಕ ಸರಬರಾಜು ಸಚಿವ ಉಮೇಶ ಕತ್ತಿ ಹೇಳಿದರು.
ಗಣರಾಜ್ಯೋತ್ಸವದ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಸ್ತುವಾರಿ ಸಚಿವ ಸ್ಥಾನ ಕೊಟ್ಟರೂ ಸರಿ. ಕೊಡದಿದ್ದರೂ ಒಕೆ. ಬೇಕಿದ್ದರೆ ಈಗ ಕೊಟ್ಡಿರುವ ಖಾತೆ ಬದಲು ವಯಸ್ಕರ, ಸಾಂಖ್ಯಿಕ ಖಾತೆ ಕೊಟ್ಟರೂ ತೃಪ್ತಿಯಿಂದ ಇರುತ್ತಿದ್ದೆ ಎಂದು ಹೇಳಿದರು.
ಏಪ್ರಿಲ್ ಒಂದರಿಂದ ಪಡಿತರ ವಿತರಣೆಯಲ್ಲಿ ಹೊಸ ಧಾನ್ಯಗಳನ್ನು ಸೇರಿಸಲಾಗುತ್ತಿದೆ. ಸ್ಥಗಿತೊಂಡಿರುವ ತೊಗರಿ ಬೇಳೆಯನ್ನು ಮತ್ತೆ ಪ್ರಾರಂಭಿಸಲಾಗುವುದು. ರಾಗಿ, ಜೋಳ ಸೇರಿದಂತೆ ಇತರ ಆಹಾರಗಳು ಸಹ ಪೂರೈಕೆಯಾಗಲಿವೆ ಎಂದು ಸಚಿವರು ವಿವರಣೆ ನೀಡಿದರು.
ಇದನ್ನೂ ಓದಿ:ಕೇಂದ್ರದ ನೂತನ ಮೂರು ಕೃಷಿ ಕಾಯ್ದೆ ಮಹಾರಾಷ್ಟ್ರದಲ್ಲಿ ಜಾರಿಗೊಳಿಸಲ್ಲ: ಸ್ಪೀಕರ್ ಪಟೋಲೆ
ಕಲ್ಯಾಣ ಕರ್ನಾಟಕ ಅಭಿವೃದ್ಧಿಗೂ ಬದ್ದತೆ ಹೊಂದಲಾಗಿದೆ. ತಾವು ರಾಜ್ಯ ಒಡೆಯುವ ಉದ್ದೇಶ ಹೊಂದಿಲ್ಲ. ಬಳ್ಳಾರಿಯನ್ನು ಆಂಧ್ರಪ್ರದೇಶದಕ್ಕೆ ಸೇರಿಸುತ್ತೇವೆ ಎಂದುದಾಗಿ ಬಳ್ಳಾರಿ ಶಾಸಕರೊಬ್ಬರು ಈ ಹಿಂದೆ ಹೇಳಿರುವುದು ಅವರ ವೈಯುಕ್ತಿಕ ಅಭಿಪ್ರಾಯ. ಬೆಳಗಾವಿ ಒಡೆದು ಮೂರು ಜಿಲ್ಲೆಯಾಗಬೇಕು. ಆಗದಿದ್ದರೆ ಏನೇನೋ ಹೇಳಲು ಆಗುತ್ತದೆಯೇ ಎಂದು ಸಚಿವ ಕತ್ತಿ ಹೇಳಿದರು.
ಎಪಿಎಂಸಿ ಕಾಯ್ದೆ ಅನುಷ್ಠಾನಕ್ಕೆ ಬರಲಿ. ಸಾಧಕ- ಬಾಧಕ ನೋಡಿಕೊಂಡು ವಿರೋಧ ಮಾಡಬೇಕು. 70 ವರ್ಷ ಗಳ ಕಾಲದ ಕಾಯ್ದೆ ಬದಲಾವಣೆಯನ್ನು ಸಂಸತ್ತಿನಲ್ಲಿ ಅಂಗೀಕಾರಗೊಂಡಿದೆ. ಹೀಗಾಗಿ ಈಗಲೇ ಸಲ್ಲದು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಭಜರಂಗದಳದ ಬಗ್ಗೆ ಮಾತಾನಾಡುವ ನೈತಿಕ ಹಕ್ಕು ಇವರಿಗಿಲ್ಲ: ರಘು ಸಕಲೇಶಪುರ ವಾಗ್ದಾಳಿ
ರಾಷ್ಟ್ರಗೀತೆಯನ್ನು ನಮಗೆ ಮುತಾಲಿಕ್ ಹೇಳಿ ಕೊಡಬೇಕಾ?: ಜಮೀರ್ ಅಹ್ಮದ್ ಕಿಡಿ
ಒಬಿಸಿಗಳಿಗೆ ಆದ್ಯತೆ ನೀಡಿದ್ರೂ; ನ್ಯಾಯ ಸಿಗೋದು ಅನುಮಾನ
ಟೆಸ್ಟ್ ಡ್ರೈವ್ ಮಾಡುವ ನೆಪದಲ್ಲಿ ಕಾರು ಕದ್ದವ ಮೂರು ತಿಂಗಳ ಬಳಿಕ ಸಿಕ್ಕಿ ಬಿದ್ದಿದ್ದೇಗೆ ?
ಸೈದ್ದಾಂತಿಕ ಬದ್ಧತೆಯ ಬಗ್ಗೆ ರಾಹುಲ್ ಗಾಂಧಿ ಬಿಡಿಸಿ ಹೇಳಬೇಕು: ಕುಮಾರಸ್ವಾಮಿ