Udayavni Special

ವೆಬ್‌ಸೈಟ್‌ ಸಮಸ್ಯೆ ಸರಿಪಡಿಸಲು ಕ್ರಮ


Team Udayavani, Jun 3, 2020, 5:35 AM IST

krisna pancha

ಮೈಸೂರು: ಲಾಕ್‌ಡೌನ್‌ ಪರಿಣಾಮ ನಗರದಿಂದ ಗ್ರಾಮೀಣ ಪ್ರದೇಶಗಳಿಗೆ ಬಂದ ಯುವಕರು ನರೇಗಾ ಕೆಲಸದಲ್ಲಿ ತೊಡಗಿಕೊಂಡಿದ್ದು, ಈಗಾಗಲೇ 1325 ಮಂದಿ ಹೊಸಬರಿಗೆ ಜಾಬ್‌ಕಾರ್ಡ್‌ ವಿತರಣೆ ಮಾಡಲಾಗಿದೆ ಎಂದು ತಾಪಂ  ಇಒ ಕೃಷ್ಣಕುಮಾರ್‌ ತಿಳಿಸಿದರು. ಮಿನಿ ವಿಧಾನಸೌಧದಲ್ಲಿ ತಾಪಂ ಅಧ್ಯಕ್ಷೆ ಕಾಳಮ್ಮ ಅಧ್ಯಕ್ಷತೆಯಲ್ಲಿ ನಡೆದ ಮೈಸೂರು ತಾಪಂ ಕೆಡಿಪಿ ಸಭೆಯಲ್ಲಿ ಮಾತನಾಡಿದರು.

ನಗರ ಪ್ರದೇಶದಿಂದ ಸ್ವಗ್ರಾಗಳಿಗೆ ವಾಪಾಸಾಗಿರುವ  ಯುವಕರಿಂದ ಜಾಬ್‌ ಕಾರ್ಡ್‌ ಪಡೆಯಲು ಒತ್ತಡ ಹೆಚ್ಚಿದೆ ಎಂದು ಹೇಳಿದರು. ತಾಲೂಕು ಕೃಷಿ ಇಲಾಖೆ ಉಪ ನಿರ್ದೇಶಕ ವೀರಣ್ಣ ಮಾತನಾಡಿ, ಲಾಕ್‌ಡೌನ್‌ನಿಂದ ಗ್ರಾಮಾಂತರ ಪ್ರದೇಶಗಳಲ್ಲಿ ಕೃಷಿ ಚುಟುವಟಿಕೆ ಹಾಗೂ ನರೇಗಾ  ಚುಟುವಟಿಕೆ ಹೆಚ್ಚಾಗಿ ವೆಬ್‌ಸೈಟ್‌ ಸಮಸ್ಯೆಯಾಗಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಇಒ  ಕೃಷ್ಣಕುಮಾರ್‌, ಮೈಸೂರು ತಾಲೂಕು ಮಾತ್ರವಲ್ಲ. ರಾಜ್ಯದ ಎಲ್ಲ ಕಡೆ ಈ ಸಮಸ್ಯೆ ಇದೆ. ಶೀಘ್ರದಲ್ಲಿ ವೆಬ್‌ಸೈಟ್‌ ಸಮಸ್ಯೆ ಬಗೆಹರಿಸಲಾಗುವುದು ಎಂದು ತಿಳಿಸಿದರು.

ಪ್ರತಿ ಪಂಚಾಯಿತಿಗೆ 2 ಸಾವಿರ ಗಿಡ: ವಿಶ್ವ ಪರಿಸರ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲು ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್‌ ಸೂಚಿಸಿದ್ದು, ತಾಲೂಕಿನ ಪ್ರತಿ ಗ್ರಾಪಂಗೆ 2 ಸಾವಿರ ಸಸಿಗಳನ್ನು ನೀಡಲಾಗುತ್ತದೆ. ರಸ್ತೆ ಬದಿ,  ಸ್ಮಶಾನ ಸೇರಿದಂತೆ ಸಾರ್ವಜನಿಕ ಸ್ಥಳದಲ್ಲಿ ಸಸಿ, ನೆಡಲು ಉದ್ದೇಶಿಸಲಾಗಿದೆ. ಜೂ.6ರಿಂದ 8ರ ಅವಧಿಯಲ್ಲಿ ಶಾಲೆ, ವಸತಿ ಶಾಲೆಗಳ ಆವರಣದಲ್ಲಿ ಹೆಚ್ಚು ಹಸಿಕರೀಕರಣಕ್ಕೆ ಬಿಇಒಗಳು ಒತ್ತು ನೀಡಬೇಕೆಂದು ಇಒ ಕೃಷ್ಣಕುಮಾರ್‌  ತಿಳಿಸಿದರು. ಸಭೆಯಲ್ಲಿ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಮಂಜು, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶಂಕರ ಇದ್ದರು.

ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಿದ್ಧತೆ: ಮುಂದಿನ ತಿಂಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದೆ. ಪ್ರತಿ ಪರೀಕ್ಷಾ ಕೇಂದ್ರಕ್ಕೆ ಒಂದರಂತೆ ಥರ್ಮಲ್‌ ಸ್ಕ್ರೀನಿಂಗ್‌ ನೀಡಲಾಗಿದೆ. ಆದರೆ ಒಂದು ಥರ್ಮಲ್‌ ಸ್ಕ್ರೀನಿಂಗ್‌ನಿಂದ  ಅಷ್ಟೂ ವಿದ್ಯಾರ್ಥಿಗಳನ್ನು ಏಕಕಾಲದಲ್ಲಿ ಸ್ಕ್ರೀನಿಂಗ್‌ ನಡೆಸಲು ಸಾಧ್ಯವಿಲ್ಲ. ಇದರಿಂದ ಪರೀಕ್ಷೆ ಸಮಯಕ್ಕೆ ಯಡವಟ್ಟಾಗಬಹುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಮಸ್ಯೆ ಹೇಳಿಕೊಂಡರು.

ಇಲಾಖೆಯಿಂದ ಪ್ರತಿ ಶಾಲೆಗೆ ಒಂದೊಂದು  ಥರ್ಮಲ್‌ ಸ್ಕ್ರೀನಿಂಗ್‌ ಸಾಧನ ನೀಡಲಾಗಿದೆ. ಈ ಒಂದು ಯಂತ್ರದಲ್ಲಿ ತಪಾಸಣೆ ಮಾಡಿದರೆ ಪರೀಕ್ಷೆ ಆರಂಭಿಸಲು ತಡವಾಗಲಿದೆ. ಇನ್ನೂ ಮಕ್ಕಳು ಹೆಚ್ಚಾಗಿರುವ ಶಾಲೆಯಲ್ಲಿ ಭಾರಿ ಸಮಸ್ಯೆಯಾಗಲಿದೆ ಎಂದು ತಿಳಿಸಿದರು.  ತಾಲೂಕಿನಲ್ಲಿ 87 ಪ್ರೌಢ ಶಾಲೆಗಳಿದ್ದು, 16  ಕೇಂದ್ರಗಳಲ್ಲಿ 4,363 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಇದಕ್ಕೆ ಬೇಕಾದ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

covid-death

ಕೋವಿಡ್ ಗೆ ಬಲಿಯಾದವರಲ್ಲಿ ಶೇ. 85% ಜನರು 45 ವರ್ಷಕ್ಕಿಂತ ಮೇಲ್ಪಟ್ಟವರು: ಆರೋಗ್ಯ ಸಚಿವಾಲಯ

ಆರು ತಿಂಗಳ ಬಳಿಕ ಸಿಇಒ ರಾಹುಲ್ ಜೊಹ್ರಿ ರಾಜೀನಾಮೆ ಅಂಗೀಕರಿಸಿದ ಬಿಸಿಸಿಐ

ಆರು ತಿಂಗಳ ಬಳಿಕ ಸಿಇಒ ರಾಹುಲ್ ಜೊಹ್ರಿ ರಾಜೀನಾಮೆ ಅಂಗೀಕರಿಸಿದ ಬಿಸಿಸಿಐ

3 ತಿಂಗಳಲ್ಲಿ 250ಕ್ಕೂ ಅಧಿಕ ಕೋವಿಡ್ ಬಾಧಿತರಿಗೆ ಉಚಿತ ಚಿಕಿತ್ಸೆ

ಡಾ|ಟಿಎಂಎ ಪೈ ಆಸ್ಪತ್ರೆ; 3 ತಿಂಗಳಲ್ಲಿ 250ಕ್ಕೂ ಅಧಿಕ ಕೋವಿಡ್ ಬಾಧಿತರಿಗೆ ಉಚಿತ ಚಿಕಿತ್ಸೆ

vikas-dube

ಪೊಲೀಸರ ಹತ್ಯೆ ಪ್ರಕರಣ: ನಟೋರಿಯಸ್ ರೌಡಿ ವಿಕಾಸ್ ದುಬೆ ಎನ್ ಕೌಂಟರ್ ಗೆ ಬಲಿ

Bridge-Singh

ಸೇನೆಗೆ ಸೇತುವೆ ಬಲ ; ಕಾಶ್ಮೀರದ 6 ಸುಸಜ್ಜಿತ ಸೇತುವೆ ರಾಷ್ಟ್ರಕ್ಕೆ ಸಮರ್ಪಣೆ

ಏಕಾಂಗಿಯಾದ ಸಿಎಂ ಪಿಣರಾಯಿ ವಿಜಯನ್‌ ; LDF ನಲ್ಲಿ ಸಂಚಲನ ತಂದ ಚಿನ್ನದ ಕಳಂಕ

ಏಕಾಂಗಿಯಾದ ಸಿಎಂ ಪಿಣರಾಯಿ ವಿಜಯನ್‌ ; LDF ನಲ್ಲಿ ಸಂಚಲನ ತಂದ ಚಿನ್ನದ ಕಳಂಕ

ಕೇರಳದ ಈ ಗ್ರಾಮಕ್ಕೆ ಕಮಾಂಡೋ ಕಾವಲು

ಕೇರಳದ ಈ ಗ್ರಾಮಕ್ಕೆ ಕಮಾಂಡೋ ಕಾವಲು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ecord

ದಾಖಲೆ ಸಮೇತ ಸಾಬೀತು ಪಡಿಸಿ

upa-akrama

ಉಪಕರಣಗಳ ಖರೀದಿಯಲ್ಲಿ ಅಕ್ರಮ

avasi-bandh

ಪ್ರವಾಸಿಗರಿಗೆ ನಿರ್ಬಂಧ: ಸಫಾರಿ ಬಂದ್‌

ys ahakarisi

ಕೋವಿಡ್‌ 19 ನಿಯಂತ್ರಣಕ್ಕೆ ಸಹಕರಿಸಿ

ಮೈಸೂರು : ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿಗಳನ್ನು ರಕ್ಷಿಸಿದ ಪೊಲೀಸರು!

ಮೈಸೂರು : ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿಗಳನ್ನು ರಕ್ಷಿಸಿದ ಪೊಲೀಸರು!

MUST WATCH

udayavani youtube

ಗಾಲ್ವಾನ್ ಕಣಿವೆ: ಚೀನಾದ ಉದ್ಧಟತನಕ್ಕೆ ಏನು ಕಾರಣ? | Udayavani Straight Talk

udayavani youtube

ಮಡಹಾಗಲ ಕಾಯಿ – Spiny gourd ಬೆಳೆದು ಯಶಸ್ವಿಯಾದ ರೈತ | Successful Farmer Vegetable

udayavani youtube

ಮಧ್ಯಕರ್ನಾಟಕದ ಆಶಾಕಿರಣ | SS Hospital Davangere

udayavani youtube

ಮಡಹಾಗಲ ಕಾಯಿ ಬೆಳೆಯುವ ಸೂಕ್ತ ವಿಧಾನ | How to grow Spiny gourd in your Home

udayavani youtube

Uday Innaje : Success story of Sugarcane Farmer | Udayavaniಹೊಸ ಸೇರ್ಪಡೆ

covid-death

ಕೋವಿಡ್ ಗೆ ಬಲಿಯಾದವರಲ್ಲಿ ಶೇ. 85% ಜನರು 45 ವರ್ಷಕ್ಕಿಂತ ಮೇಲ್ಪಟ್ಟವರು: ಆರೋಗ್ಯ ಸಚಿವಾಲಯ

ಸೋಂಕಿತರ ಸಾವು ಪ್ರಕರಣ ನಿಯಂತ್ರಿಸಿ

ಸೋಂಕಿತರ ಸಾವು ಪ್ರಕರಣ ನಿಯಂತ್ರಿಸಿ

ಕೋವಿಡ್ ಸೋಂಕು ತಡೆಗೆ ಔಷಧಿ ಮುಖ್ಯ

ಕೋವಿಡ್ ಸೋಂಕು ತಡೆಗೆ ಔಷಧಿ ಮುಖ್ಯ

daynta

ಮಯೂರಿ ಹುಟ್ಟುಹಬ್ಬಕ್ಕೆ “ಆದ್ಯಂತ’ ಪೋಸ್ಟರ್‌ ರಿಲೀಸ್

ಕೋವಿಡ್‌ ಸೋಂಕಿಗೆ ತಡೆ; ಕಜಕಿಸ್ಥಾನಕ್ಕೆ ವಿಶ್ವಾಸ

ಕೋವಿಡ್‌ ಸೋಂಕಿಗೆ ತಡೆ; ಕಜಕಿಸ್ಥಾನಕ್ಕೆ ವಿಶ್ವಾಸ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.