ಉಪಕರಣಗಳ ಖರೀದಿಯಲ್ಲಿ ಅಕ್ರಮ


Team Udayavani, Jul 10, 2020, 5:49 AM IST

upa-akrama

ಮೈಸೂರು: ಕೋವಿಡ್‌ 19 ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಖರೀದಿಸಿರುವ ಉಪಕರಣಗಳಲ್ಲಿ ಅವ್ಯವಹಾರ ನಡೆದಿದ್ದು, ತನಿಖೆಗೆ ಸೂಚಿಸುವಂತೆ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಡಾ.ವಿಜಯ್‌ಕುಮಾರ್‌ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಮೂಲಕ  ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಬಳಿಕ ಮಾತನಾಡಿದ ವಿಜಯ್‌ಕುಮಾರ್‌, ಕೋವಿಡ್‌ 19 ನಿಯಂತ್ರಣ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜವಾಬ್ದಾರಿಯಾಗಿದೆ.

ಔಷಧ ಸಾಮಗ್ರಿ ಮತ್ತು ವೈದ್ಯಕೀಯ ಸಲಕರಣೆಗಳ  ಖರೀದಿಗೆ 3,322 ಕೋಟಿ ರೂ. ಖರ್ಚಾಗಿರುವ ಮಾಹಿತಿ ನೀಡಿದ್ದಾರೆ. ಬಿಡುಗಡೆಯಾಗಿದ್ದ ಪ್ಯಾಕೇಜ್‌ಗಿಂತ ಹೆಚ್ಚಿನ ಮೊತ್ತ ವೆಚ್ಚವಾಗಿದೆ ಎಂಬ ಮಾಹಿತಿ ದಾಖಲೆಗಳಿಂದ ತಿಳಿದು ಬಂದಿದೆ ಎಂದು ಹೇಳಿದರು. ಲಾಕ್‌ಡೌನ್‌ ಜಾರಿಯಾದ  ಬಳಿಕ ವಲಸೆ ಕಾರ್ಮಿಕರಿಗೆ ಕಾರ್ಮಿಕ ಇಲಾಖೆ 48.09 ಕೋಟಿ ಖರ್ಚು ಮಾಡಿದೆ. ಅಲ್ಲದೆ ಬಿಬಿಎಂಪಿ 81 ಲಕ್ಷ ಊಟದ ಪ್ಯಾಕೆಟ್‌ ವಿತರಿಸಿದ್ದೇವೆ ಎಂದು ಹೈಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಿದೆ.

ಊಟದ ಪ್ಯಾಕೆಟ್‌ ವಿತರಣೆಯಲ್ಲಿ ಭಾರೀ  ಅವ್ಯವಹಾರ ನಡೆದಿದೆ. ಅದರ ಮಾಹಿತಿ ಸಾರ್ವಜನಿಕರಿಗೆ ನೀಡಬೇಕು ಎಂದು ಆಗ್ರಹಿಸಿದರು. ಆಟೋ ಚಾಲಕರಿಗೆ ನೀಡಲು ಉದ್ದೇಶಿಸಿರುವ 387.5ಕೋಟಿ, 1000 ವೆಂಟಿಲೇಟರ್‌, 4,89,000 ಪಿಪಿಇ ಕಿಟ್ಸ್‌, 10 ಲಕ್ಷ ಮಾಸ್ಕ್, 10 ಲಕ್ಷ ಸರ್ಜಿಕಲ್‌  ಗ್ಲೌಸ್‌, 20 ಲಕ್ಷ ಪರೀಕ್ಷಾ ಗ್ಲೌಸ್‌ಗಳು, 5000 ಆಕ್ಸಿಜನ್‌ ಸಿಲಿಂಡರ್‌, 6.2 ಲಕ್ಷ ಕೋವಿಡ್‌-19 ಟೆಸ್ಟ್‌, ಹ್ಯಾಂಡ್‌ ಸ್ಯಾನಿಟೈಸರ್‌, ಥರ್ಮಲ್‌ ಸ್ಕ್ಯಾನರ್‌ಗಳ ಖರೀದಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ.

ಈ ಎಲ್ಲಾ ಆರೋಪಗಳು  ಮೇಲ್ನೋಟಕ್ಕೆ ಸಾಬೀತಾಗುತ್ತಿದ್ದರೂ ಮೊಂಡು ಹಠದ ರಾಜಕಾರಣ ಮಾಡುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಸಾರ್ವಜನಿಕರ ಹಿತದೃಷ್ಟಿಯಿಂದ ಉನ್ನತ ಮಟ್ಟದ ಸಿಬಿಐ ತನಿಖೆ ನಡೆಸಬೇಕೆಂದು ಆಗ್ರಹಿಸಿದರು. ಗೋಷ್ಠಿಯಲ್ಲಿ ಕಾಂಗ್ರೆಸ್‌ ನಗರಾಧ್ಯಕ್ಷ ಮೂರ್ತಿ, ಹೆಡತಲೆ ಮಂಜುನಾಥ್‌, ಬಸವರಾಜ್‌ ನಾಯಕ್‌, ಶಿವಪ್ರಸಾದ್‌, ಪ್ರಕಾಶ್‌ ಕುಮಾರ್‌, ಶಿವಣ್ಣ, ಈಶ್ವರ್‌ ಚಕಡಿ, ಸೀತಾರಾಮ್‌, ವಕೀಲರಾದ ಸಿ.ಎಂ.ಜಗದೀಶ್‌, ಗೋಪಾಲ್‌, ಸುರೇಶ್‌ ಪಾಳ್ಯ, ವೈದ್ಯನಾಥ್‌  ಮೊದಲಾದವರಿದ್ದರು.

ಟಾಪ್ ನ್ಯೂಸ್

7gopalayya

ಮಳೆಯಿಂದ ಹಾನಿಗೊಳಗಾದ ಕುಟುಂಬಗಳಿಗೆ ಶೀಘ್ರ ಪರಿಹಾರ: ಸಚಿವ ಕೆ.ಗೋಪಾಲಯ್ಯ

Untitled-1

ವೇಣೂರು: ಮರಬಿದ್ದು ಅರ್ಧ ತಾಸು ಹೆದ್ದಾರಿ ಬಂದ್!

6death

ವಿಟ್ಲ: ಹೃದಯಾಘಾತದಿಂದ 9ನೇ ತರಗತಿ ವಿದ್ಯಾರ್ಥಿನಿ ಸಾವು

5DKShi

ಚುನಾವಣಾ ಆಯೋಗದ ಅಧಿಕಾರ ಕಸಿದುಕೊಂಡ ರಾಜ್ಯ ಸರ್ಕಾರ: ಡಿಕೆ ಶಿವಕುಮಾರ್

vittla-1

ವಿಟ್ಲ: ರಸ್ತೆಗೆ ಬಿದ್ದ ವಿದ್ಯುತ್ ಕಂಬ: ಸಂಚಾರ ಅಸ್ತವ್ಯಸ್ತ

4horatti

ಬೊಮ್ಮಾಯಿ ನಿವಾಸದಲ್ಲಿ ಬಿಜೆಪಿಗೆ ಸೇರ್ಪಡೆಯಾದ ಬಸವರಾಜ ಹೊರಟ್ಟಿ

3accident

ಕೊಪ್ಪಲಂಗಡಿ: ಚರಂಡಿಗೆ ಉರುಳಿದ ಪಿಕಪ್; ಇಬ್ಬರಿಗೆ ಗಾಯಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2rain

ನಾವು ಮುಳುಗುತ್ತಿದ್ದೇವೆಂದು ಪೊಲೀಸರಿಗೆ ಕರೆ ಮಾಡಿದ ವ್ಯಕ್ತಿ

ಚುನಾವಣೆಯಲ್ಲಿ 123 ಸ್ಥಾನ ಗೆಲ್ಲುವ ಗುರಿ : ಯಾರಿಗೂ ಬೆಂಬಲ ಕೊಡುವ ಪ್ರಶ್ನೆಯೇ ಇಲ್ಲ : HDK

ಚುನಾವಣೆಯಲ್ಲಿ 123 ಸ್ಥಾನ ಗೆಲ್ಲುವ ಗುರಿ : ಯಾರಿಗೂ ಬೆಂಬಲ ಕೊಡುವ ಪ್ರಶ್ನೆಯೇ ಇಲ್ಲ : HDK

ಹುಣಸೂರು: ತಟ್ಟೆಕೆರೆ ಗ್ರಾ.ಪಂ.ಅಧ್ಯಕ್ಷರಾಗಿ ಎ.ಎಂ.ದೇವರಾಜ್ ಅವಿರೋಧ ಆಯ್ಕೆ

ಹುಣಸೂರು: ತಟ್ಟೆಕೆರೆ ಗ್ರಾ.ಪಂ.ಅಧ್ಯಕ್ಷರಾಗಿ ಎ.ಎಂ.ದೇವರಾಜ್ ಅವಿರೋಧ ಆಯ್ಕೆ

ಮೊಮ್ಮಗಳ ಅಗಲಿಕೆ : ಮಾಜಿ ಸಚಿವ ಜಿ.ಟಿ.ದೇವೇಗೌಡರ ನಿವಾಸಕ್ಕೆ ಎಚ್ ಡಿಕೆ ಭೇಟಿ

ಮೊಮ್ಮಗಳ ಅಗಲಿಕೆ : ಮಾಜಿ ಸಚಿವ ಜಿ.ಟಿ.ದೇವೇಗೌಡರ ನಿವಾಸಕ್ಕೆ ಎಚ್ ಡಿಕೆ ಭೇಟಿ

ಮಳೆಗಾಲ ಆರಂಭವಾದ ಕೂಡಲೇ ಡೆಂಘೀ ಹೆಚ್ಚಳ

ಮಳೆಗಾಲ ಆರಂಭವಾದ ಕೂಡಲೇ ಡೆಂಘೀ ಹೆಚ್ಚಳ

MUST WATCH

udayavani youtube

ಹುಣಸೂರಿನಲ್ಲಿ ಭಾರೀ ಮಳೆಗೆ ಮನೆಗಳು ಜಲಾವೃತ

udayavani youtube

SSLC ನಂತ್ರ ನಿಮಗಿದೆ ಭರಪೂರ ಅವಕಾಶ !!

udayavani youtube

ಕಾರಿಂಜೇಶ್ವರ ದೇವಸ್ಥಾನದ ಬಳಿ ಬೃಹತ್ ಬಂಡೆಕಲ್ಲು ಕುಸಿತ

udayavani youtube

ವಿಧಾನಪರಿಷತ್ ಹಂಗಾಮಿ ಸಭಾಪತಿಯಾಗಿ ರಘುನಾಥ್ ಮಲ್ಕಾಪುರೆ ನೇಮಕ

udayavani youtube

ಉದ್ಘಾಟನೆಗೆ ಶಾಸಕರೇ ಬರಬೇಕಂತೆ; ಕಾಫಿನಾಡಲ್ಲಿ ರಸ್ತೆಗೆ ಬೀಗ ಹಾಕಿದ ಬಿಜೆಪಿ ಸದಸ್ಯರು!

ಹೊಸ ಸೇರ್ಪಡೆ

7gopalayya

ಮಳೆಯಿಂದ ಹಾನಿಗೊಳಗಾದ ಕುಟುಂಬಗಳಿಗೆ ಶೀಘ್ರ ಪರಿಹಾರ: ಸಚಿವ ಕೆ.ಗೋಪಾಲಯ್ಯ

nere

ಮೊದಲ ಮಳೆಗೆ ಕೆಂಚನಕೆರೆಯಲ್ಲಿ ಕೃತಕ ನೆರೆ

Untitled-1

ವೇಣೂರು: ಮರಬಿದ್ದು ಅರ್ಧ ತಾಸು ಹೆದ್ದಾರಿ ಬಂದ್!

heavy-rain

ಭಾರೀ ಗಾಳಿ-ಮಳೆ: ಲಕ್ಷಾಂತರ ರೂ. ನಷ್ಟ

6death

ವಿಟ್ಲ: ಹೃದಯಾಘಾತದಿಂದ 9ನೇ ತರಗತಿ ವಿದ್ಯಾರ್ಥಿನಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.