ಕುರುಬಾರಹಳ್ಳಿ ವಿವಾದಿತ ಭೂಮಿ ತೆರವು


Team Udayavani, Jun 12, 2020, 5:51 AM IST

affected

ಮೈಸೂರು: ನಗರದ ವಿವಾದಿತ ಕುರುಬಾರ ಹಳ್ಳಿ  ಸರ್ವೇ ನಂ.4ರ ವ್ಯಾಪ್ತಿಯ ಸುಮಾರು 350 ಎಕರೆ ಭೂಮಿಯನ್ನು ಬಿ ಖರಾಬಿನಿಂದ ತೆರವುಗೊಳಿಸಿದ್ದು, ಆ ಜಮೀನಿನ ಪೂರ್ಣ ಹಕ್ಕನ್ನು ಮಾಲೀಕರಿಗೆ ನೀಡುವ ಆದೇಶ ಜೂನ್‌  ತಿಂಗಳಾಂತ್ಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಬಿಡುಗಡೆ ಮಾಡಲಿದ್ದಾರೆ ಎಂದು ಶಾಸಕ ರಾಮದಾಸ್‌ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಸರ್ವೇ ನಂ.4 ಅನ್ನು “ಬಿ ಖರಾಬು’ ಎಂದು 2015ರಲ್ಲಿ ಅಂದಿನ  ಜಿಲ್ಲಾಧಿಕಾರಿ ಆದೇಶಿಸಿದ್ದರು. ಇದರಿಂದ ಸಿದ್ಧಾಥ ನಗರ, ಕೆಸಿ ಮತ್ತು ಜೆಸಿ ಬಡಾವಣೆಯ ನಿವಾಸಿಗಳು ಕಂಗಾಲಾಗಿದ್ದರು. ಬಿ ಖರಾಬಿನ 1500 ಎಕರೆ ಭೂಮಿ ಪೈಕಿ ಸಿದ್ದಾರ್ಥ ಬಡಾವಣೆಯ 205.09 ಎಕರೆ, ಕೆ.ಸಿ. ಬಡಾವಣೆಯ 105  ಎಕರೆ ಮತ್ತು ಜೆ.ಸಿ.ಬಡಾವಣೆಯ 44.20 ಎಕರೆ ಪ್ರದೇಶವನ್ನು ಸರ್ಕಾರ ಬಿ ಖರಾಬಿ ನಿಂದ ತೆರವುಗೊಳಿಸಿದೆ. ಇದರಿಂದ 25 ಸಾವಿರ ಕುಟುಂಬಕ್ಕೆ ಉಪಯೋಗವಾಗಿದೆ ಎಂದು ಹೇಳಿದರು.

ಎಲ್ಲರಿಗೂ ಧನ್ಯವಾದ: “ಬಿ ಖರಾಬು’ನಿಂದಾಗಿ ಸಿದ್ಧಾರ್ಥನಗರ, ಕೆಸಿ ಮತ್ತು ಜೆಸಿ ಬಡಾವಣೆಯ ನಿವಾಸಿಗಳು ಖಾತಾ ವರ್ಗಾವಣೆ, ಕಟ್ಟಡಕ್ಕೆ ರಹದಾರಿ, ಕಂಪ್ಲೀಷನ್‌ ರಿಪೋರ್ಟ್‌(ಸಿಸಿ), ಕಂದಾಯ ನಿಗದಿ, ಹಕ್ಕುಪತ್ರ ವಿತರಣೆ  ಸೇರಿದಂತೆ ಎಲ್ಲ ರೀತಿಯ ಭೂ ದಾಖಲೆ ವಹಿವಾಟು ಸ್ಥಗಿತಗೊಂಡಿದ್ದು, ನಿವೇಶನ ಪಡೆ ದವರು ಮನೆಕಟ್ಟಲು, ಕಟ್ಟಡಕ್ಕೆ ಸಿಆರ್‌ ಪಡೆಯಲು, ಬ್ಯಾಂಕ್‌ನಿಂದ ಸಾಲ ಪಡೆಯಲು ಅಥವಾ ನಿವೇಶನ ಮಾರಾಟ ಮಾಡಲು ಸಾಧ್ಯವಾಗದ  ಸ್ಥಿತಿ ನಿರ್ಮಾಣವಾಗಿತ್ತು. ಈ ಬಡಾವಣೆಗಳನ್ನು “ಬಿ.ಖರಾಬು’ ಪ್ರದೇಶ ದಿಂದ ಕೈಬಿಡಲು ನೆರವಾದ ಮುಖ್ಯಮಂತ್ರಿ ಯಡಿಯೂರಪ್ಪ, ಸರ್ಕಾರದ ಎಲ್ಲ ಸಚಿವರು ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಧನ್ಯ ವಾದ ಸಲ್ಲಿಸುತ್ತೇನೆ ಎಂದರು.

ಜಾತಿ ಪ್ರಮಾಣ ಪತ್ರ: ಕೇಂದ್ರ ಸರ್ಕಾರ ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದವರಿಗೆ ಶೇ.10ರಷ್ಟು ಮೀಸ ಲಾತಿ ನೀಡಿರುವ ಹಿನ್ನೆಲೆಯಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಜಾತಿ ಪ್ರಮಾಣಪತ್ರದ ಅವಶ್ಯಕತೆ ಇದೆ. ಜಾತಿ ಪ್ರಮಾಣ ಪತ್ರ ನೀಡುವಲ್ಲಿ ತಹಶೀಲ್ದಾರ್‌ ಕಚೇರಿಯಲ್ಲಿ ಸಾಕಷ್ಟು ತೊಂದರೆಯಾಗುತ್ತಿದೆ. ಬ್ರಾಹ್ಮಣ ಜಾತಿಯ ಪ್ರಮಾಣ ಪತ್ರವನ್ನು ನೀಡದಿರುವುದು ನನ್ನ ಗಮನಕ್ಕೆ ಬಂದಿದೆ. ಆದ್ದರಿಂದ ಸರ್ಕಾರ ಈ ಕೂಡಲೇ ರಾಜ್ಯದ ಎಲ್ಲ ತಹಶೀಲ್ದಾರ್‌ಗಳಿಗೆ ಜಾತಿ  ಪ್ರಮಾಣ ಪತ್ರ ನೀಡುವಂತೆ ಸೂಚಿಸಲಿ ಎಂದು ಮನವಿ ಮಾಡಿದರು. ಸುದ್ದಿ ಗೋಷ್ಠಿಯಲ್ಲಿ ಬಿಜೆಪಿ ಮುಖಂಡ ಮಂಜುನಾಥ್‌ ಇತರರಿದ್ದರು.

ಟಾಪ್ ನ್ಯೂಸ್

ಪರಿಶ್ರಮಿ ಅಜ್ಜಿ ಕಟ್ಟಿದ ಕಲ್ಲಿನ ಕೋಟೆ

ಪರಿಶ್ರಮಿ ಅಜ್ಜಿ ಕಟ್ಟಿದ ಕಲ್ಲಿನ ಕೋಟೆ

ಗಣರಾಜ್ಯ ಪರೇಡ್‌ನ‌ಲ್ಲಿ ಸೇನಾ ವಿಕಾಸ ಅನಾವರಣ

ಗಣರಾಜ್ಯ ಪರೇಡ್‌ನ‌ಲ್ಲಿ ಸೇನಾ ವಿಕಾಸ ಅನಾವರಣ

ಸಿಗುವುದೇ ವರ್ಕ್‌ ಫ್ರಂ ಹೋಂ ಭತ್ತೆ?

ಸಿಗುವುದೇ ವರ್ಕ್‌ ಫ್ರಂ ಹೋಂ ಭತ್ತೆ?

astrology today

ಸೋಮವಾರದ ರಾಶಿ ಫಲ, ಇಲ್ಲಿವೆ ನಿಮ್ಮ ರಾಶಿ ಫಲ

ನೇತಾಜಿ ಸಾವಿನ ರಹಸ್ಯ ಸದ್ಯದಲ್ಲೇ ಬಯಲು: ಪ್ರಧಾನಿ ಮೋದಿ

ನೇತಾಜಿ ಸಾವಿನ ರಹಸ್ಯ ಸದ್ಯದಲ್ಲೇ ಬಯಲು: ಪ್ರಧಾನಿ ಮೋದಿ

ದೇವರಾಣೆ ಪಕ್ಷಾಂತರ ಮಾಡಲ್ಲ; ಗೋವಾದಲ್ಲಿ ಅಭ್ಯರ್ಥಿಗಳಿಂದ ಪ್ರಮಾಣ ಮಾಡಿಸಿಕೊಂಡ ಕಾಂಗ್ರೆಸ್‌

ದೇವರಾಣೆ ಪಕ್ಷಾಂತರ ಮಾಡಲ್ಲ; ಗೋವಾದಲ್ಲಿ ಅಭ್ಯರ್ಥಿಗಳಿಂದ ಪ್ರಮಾಣ ಮಾಡಿಸಿಕೊಂಡ ಕಾಂಗ್ರೆಸ್‌

ಮಹಾನಗರಗಳ ಮಾಸ್ಕ್ ಕಾರ್ಡ್‌

ಮಹಾನಗರಗಳ ಮಾಸ್ಕ್ ಕಾರ್ಡ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇಳಿ ವಯಸ್ಸಿನಲ್ಲಿ ವಿವಾಹವಾದ ಅಜ್ಜ-ಅಜ್ಜಿ: ಶುಭ ಹಾರೈಸಿದ ಮಕ್ಕಳು- ಮೊಮ್ಮಕ್ಕಳು

ಇಳಿ ವಯಸ್ಸಿನಲ್ಲಿ ವಿವಾಹವಾದ ಅಜ್ಜ-ಅಜ್ಜಿ

1-chir

ಹುಣಸೂರು: ಅಪರಿಚಿತ ವಾಹನ ಢಿಕ್ಕಿಯಾಗಿ ಚಿರತೆ ಸಾವು

ನಾಗರಹೊಳೆ ಉದ್ಯಾನದಲ್ಲಿ ಬೆಂಕಿ ನಿಯಂತ್ರಣಕ್ಕೆ ಫೈರ್‌ಲೈನ್ ನಿರ್ಮಾಣ

ನಾಗರಹೊಳೆ ಉದ್ಯಾನದಲ್ಲಿ ಬೆಂಕಿ ನಿಯಂತ್ರಣಕ್ಕೆ ಫೈರ್‌ಲೈನ್ ನಿರ್ಮಾಣ

1-ffds

ಐವರ ಬಾಳಿಗೆ ಬೆಳಕಾದ ದರ್ಶನ್‌: ಏರ್‌ಲಿಫ್ಟ್ ಮೂಲಕ ಮೈಸೂರಿನಿಂದ ಚೆನ್ನೈಗೆ ಹೃದಯ

ಅಲೆಮಾರಿ ಸಮುದಾಯಗಳಿಗೆ  ಅರಸು-ಸಿದ್ದರಾಮಯ್ಯ ಕೊಡುಗೆ ಅಪಾರ: ಶಾಸಕ ಮಂಜುನಾಥ್

ಅಲೆಮಾರಿ ಸಮುದಾಯಗಳಿಗೆ ಅರಸು-ಸಿದ್ದರಾಮಯ್ಯ ಕೊಡುಗೆ ಅಪಾರ: ಶಾಸಕ ಮಂಜುನಾಥ್

MUST WATCH

udayavani youtube

ಕೋಲ್ಕತಾದಲ್ಲಿ ಬಿಜೆಪಿ ಮತ್ತು ಟಿಎಂಸಿ ಘರ್ಷಣೆ; ಸಂಸದರ ಮೇಲೆ ಕಲ್ಲು ತೂರಾಟ

udayavani youtube

ಹೆಣ ಸಾಗಿಸಲು ಹೆಣಗಾಟ..!| ಇದು ಹೊಳೆಕೂಡಿಗೆ ಗ್ರಾಮದ ಜನರ ನರಕದ ಬದುಕು

udayavani youtube

ಕತ್ತಲೆ ಬಸದಿಯ ಇತಿಹಾಸ

udayavani youtube

ತೊಕ್ಕೊಟ್ಟು : ಕಂಟೈನರ್ ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿತು ಬಾರಿ ಅನಾಹುತ

udayavani youtube

ತಪ್ಪಿಸುಕೊಳ್ಳಲು ಯತ್ನಿಸುವಾಗ ಕಟ್ಟಡದಿಂದ ಬಿದ್ದ ಕಳ್ಳ

ಹೊಸ ಸೇರ್ಪಡೆ

ಪರಿಶ್ರಮಿ ಅಜ್ಜಿ ಕಟ್ಟಿದ ಕಲ್ಲಿನ ಕೋಟೆ

ಪರಿಶ್ರಮಿ ಅಜ್ಜಿ ಕಟ್ಟಿದ ಕಲ್ಲಿನ ಕೋಟೆ

ಗಣರಾಜ್ಯ ಪರೇಡ್‌ನ‌ಲ್ಲಿ ಸೇನಾ ವಿಕಾಸ ಅನಾವರಣ

ಗಣರಾಜ್ಯ ಪರೇಡ್‌ನ‌ಲ್ಲಿ ಸೇನಾ ವಿಕಾಸ ಅನಾವರಣ

ಸಿಗುವುದೇ ವರ್ಕ್‌ ಫ್ರಂ ಹೋಂ ಭತ್ತೆ?

ಸಿಗುವುದೇ ವರ್ಕ್‌ ಫ್ರಂ ಹೋಂ ಭತ್ತೆ?

astrology today

ಸೋಮವಾರದ ರಾಶಿ ಫಲ, ಇಲ್ಲಿವೆ ನಿಮ್ಮ ರಾಶಿ ಫಲ

ನೇತಾಜಿ ಸಾವಿನ ರಹಸ್ಯ ಸದ್ಯದಲ್ಲೇ ಬಯಲು: ಪ್ರಧಾನಿ ಮೋದಿ

ನೇತಾಜಿ ಸಾವಿನ ರಹಸ್ಯ ಸದ್ಯದಲ್ಲೇ ಬಯಲು: ಪ್ರಧಾನಿ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.