Udayavni Special

ಮಿಡತೆಗಳ ನಿಯಂತ್ರಣಕ್ಕೆ ಕಾರ್ಯತಂತ್ರ


Team Udayavani, May 29, 2020, 5:30 AM IST

jaraki grass

ಮೈಸೂರು: ಉತ್ತರ ಭಾರತದಲ್ಲಿ ರಕ್ಕಸ ಮಿಡತೆಗಳು ಬೆಳೆ ನಾಶ ಪಡಿಸುತ್ತಿದ್ದು, ರಾಜ್ಯದಲ್ಲಿ ಕೃಷಿ ಇಲಾಖೆ ಹಾಗೂ ಜಲ ಸಂಪನ್ಮೂಲ ಇಲಾಖೆ ಒಟ್ಟಿಗೆ ಸಭೆ ನಡೆಸಿ ಮಿಡತೆಗಳ ನಿಯಂತ್ರಣಕ್ಕೆ ಕಾರ್ಯತಂತ್ರ ರೂಪಿಸಲಾಗುವುದು ಎಂದು  ಜಲ ಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ ತಿಳಿಸಿದರು.

ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಮಠಕ್ಕೆ ಭೇಟಿ ನೀಡಿ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿಯ ಆಶೀರ್ವಾದ ಪಡೆದು ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರ ಸಂಕಷ್ಟದ ಕಾಲದಲ್ಲಿ ಅತ್ಯುತ್ತಮ  ಆರ್ಥಿಕ ಪ್ಯಾಕೇಜ್‌ ಘೋಷಿಸಿದೆ. 20 ಲಕ್ಷ ಕೋಟಿ ರೂ. ಪ್ಯಾಕೇಜ್‌ ಇನ್ನೂ ಇಲಾಖೆಗಳಿಗೆ ಹಂಚಿಕೆಯಾಗಿಲ್ಲ. ಅದರಲ್ಲಿ ಜಲ ಸಂಪನ್ಮೂಲ ಇಲಾಖೆಗೆ ಎಷ್ಟು ಸಿಗುತ್ತದೆ ಎಂಬುದು ಶೀಘ್ರದಲ್ಲೇ  ತಿಳಿಯಲಿದೆ ಎಂದರು.

ಸ್ಥಿತಿಗತಿ ಗಮನಿಸಿ ತೀರ್ಮಾನ: ಕೃಷಿಗೆ ನೀರು ಹರಿಸುವ ವಿಚಾರ ಸಂಬಂಧ ಈಗಾಗಲೇ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಭೆ ನಡೆದಿದ್ದು, ರಾಜ್ಯದ ಜಲಾಶಯಗಳ ಸ್ಥಿತಿಗತಿ ಗಮನಿಸಿ ತೀರ್ಮಾನ ಕೈಗೊಳ್ಳಲಾಗುವುದು. ಕಾವೇರಿ ಹಾಗೂ  ಕಬಿನಿ ಜಲಾಶಯಗಳು ಅಂತರರಾಜ್ಯ ಸಂಬಂಧ ಹೊಂದಿವೆ.

ಈ ಜಲಾಶಯಗಳಿಂದ ನೀರು ಹರಿಸಲು ಕೇಂದ್ರೀಯ ಜಲ ಮಂಡಳಿಯಲ್ಲಿ ಅಧಿಕಾರಿಗಳ ಸಭೆ ನಡೆದಿದೆ. ಸಭೆಯಲ್ಲಿ ನೀರು ಹರಿಸುವ ಸಂಬಂಧ ಚರ್ಚೆಯಾಗಿದೆ. ಅಂತರ್ಜಲ  ಮಟ್ಟ ಹೆಚ್ಚಿಸಲು ರೈತರು ತುಂತುರು ನೀರಾವರಿ ಮೂಲಕ ವ್ಯವಸಾಯ ಮಾಡುವುದು ಒಳ್ಳೆಯದು. ಅಂತರ್ಜಲ ಮಟ್ಟ ಹೆಚ್ಚಿಸಲು ಇಲಾಖೆಯಿಂದ ಕಾರ್ಯ ಕ್ರಮ ರೂಪಿಸಲಾಗುವುದು ಎಂದರು.

ಎಂಎಲ್‌ಸಿ ಸ್ಥಾನ ಹೈಕಮಾಂಡ್‌ ನಿರ್ಧಾರ: ಮಾಜಿ ಸಚಿವ ಎಚ್‌.ವಿಶ್ವನಾಥ್‌ ಅವರಿಗೆ ಎಂಎಲ್‌ಸಿ ಸ್ಥಾನ ನೀಡುವ ವಿಚಾರ ನನ್ನ ವ್ಯಾಪ್ತಿಗೆ ಬರುವುದಿಲ್ಲ. ಇದರಲ್ಲಿ ಪಕ್ಷದ ಹೈಕಮಾಂಡ್‌ ತೀರ್ಮಾನವೇ ಅಂತಿಮ. ಈ ಬಗ್ಗೆ ಚರ್ಚೆ  ಮಾಡಿದ ಬಳಿಕ ಯಾರಿಗೆ ಎಂಎಲ್‌ಸಿ ಸ್ಥಾನ ನೀಡಬೇಕು ಎಂಬುದನ್ನು ಅವರೇ ನಿರ್ಧರಿಸುತ್ತಾರೆ ಎಂದರು.

ಎಜು ಕೌಶಲ್‌ ಆಪ್‌ ಬಿಡುಗಡೆ: ಪ್ರಾಥಮಿಕ ಹಂತದ ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಕೌಶಲಗಳನ್ನು ಅಭಿವೃದ್ಧಿಪಡಿಸುವ ಎಜು ಕೌಶಲ್‌ ಆಪ್‌ ಬಿಡುಗಡೆ ಮಾಡಲಾಯಿತು. ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಜಲಸಂಪನ್ಮೂಲ ಸಚಿವ ರಮೇಶ್‌  ಜಾರಕಿಹೊಳಿ ಬಿಡುಗಡೆ ಮಾಡಿದರು. ಸಂಸದ ಪ್ರತಾಪಸಿಂಹ, ಜೆಎಸ್‌ಎಸ್‌ ಮಹಾವಿದ್ಯಾ ಪೀಠದ ಮುಖ್ಯ ಕಾರ್ಯ ನಿರ್ವಾಹಣಾ ಧಿಕಾರಿ ಡಾ.ಸಿ.ಜಿ.ಬೆಟ ಸೂರಮಠ, ಉಪ ಕಾರ್ಯದರ್ಶಿ ಎಸ್‌.ಶಿವಕುಮಾರಸ್ವಾಮಿ ಇದ್ದರು.

ಶೈಕ್ಷಣಿಕ ಪ್ರಗತಿಗೆ ಆಪ್‌ ಸಹಕಾರಿ: 1ರಿಂದ 5ನೇ ತರಗತಿ ವಿದ್ಯಾರ್ಥಿಗಳ ಶೈಕ್ಷಣಿಕ ಕಾರ್ಯಕ್ಷಮತೆ ಅಭಿವೃದ್ಧಿಪಡಿಸಲು ಅವರ ಪಠ್ಯ ಪುಸ್ತಕಗಳನ್ನು ಆಧರಿಸಿ, ಸ್ವತಂತ್ರವಾಗಿ ಶೈಕ್ಷಣಿಕ ಕೌಶಲಗಳನ್ನು ಡಿಜಿಟಿಲ್‌ ಇಂಡಿಯಾದ ಮೂಲಕ  ಅಭಿವೃದ್ಧಿಪಡಿಸುವುದು. ಎಜು ಕೌಶಲವನ್ನು ಬಳಸಿ ರಾಜ್ಯಪಠ್ಯಕ್ರಮವನ್ನು ಅನುಸರಿಸುತ್ತಿರುವ ಶಾಲೆಗಳಲ್ಲಿ ಮಕ್ಕಳ ಶೈಕ್ಷಣಿಕ ಕೌಶಲಗಳನ್ನು ಸುಲಭ ಮತ್ತು ಸ್ವಕಲಿಕೆಯಿಂದ ಕಲಿಯಲು ಅವಕಾಶ ಕಲ್ಪಿಸಲಾಗಿದೆ.

ಮಕ್ಕಳ ಕಲಿಕೆಗಾಗಿ  ಅವಶ್ಯಕವಿರುವ ಆಡಿಯೋ ವಿಷುಯಲ್‌ ಮತ್ತು ಬಹು ಮುಖ್ಯವಾದ ಕೈನ್‌ಸ್ಥೆಟಿಕ್‌ ಪ್ರಕ್ರಿಯೆಗಳನ್ನು ಸಂಯೋಜಿಸಲಾಗಿದೆ. ಎಜು ಕೌಶಲವನ್ನು ಕನ್ನಡ, ಇಂಗ್ಲಿಷ್‌ ಮಾಧ್ಯಮದ ಮಕ್ಕಳಿಗಾಗಿ ಅಭಿವೃದ್ಧಿಪಡಿಸಲಾಗಿದೆ. ಮಕ್ಕಳು ಪಾಠ,  ಪ್ರಶ್ನೋತ್ತರ ಮತ್ತು ಸ್ವ ಮೌಲ್ಯಮಾಪನ ಮಾಡಿಕೊಳ್ಳಲು ಎಜು ಕೌಶಲ್‌ ಆಪ್‌ ಸಹಕಾರಿಯಾಗಲಿದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಸೋಂಕಿಗೆ ಮತ್ತೊಂದು ಬಲಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಸೋಂಕಿಗೆ ಮತ್ತೊಂದು ಬಲಿ

ಹಲೋ…ಪೊಲೀಸ್ ಕಂಟ್ರೋಲ್ ರೂಂ; ಸ್ಟಾರ್ ನಟ ವಿಜಯ್ ಮನೆಗೆ ಬಾಂಬ್ ಇಟ್ಟಿದ್ದೇವೆ

ಹಲೋ…ಪೊಲೀಸ್ ಕಂಟ್ರೋಲ್ ರೂಂ; ಸ್ಟಾರ್ ನಟ ವಿಜಯ್ ಮನೆಗೆ ಬಾಂಬ್ ಇಟ್ಟಿದ್ದೇವೆ!

ಟಿಡಿಎಸ್‌ ಯಾಕೆ ಕತ್ತರಿಸಲಿಲ್ಲ? ಮಾಹಿತಿ ನೀಡಿ

ಟಿಡಿಎಸ್‌ ಯಾಕೆ ಕತ್ತರಿಸಲಿಲ್ಲ? ಮಾಹಿತಿ ನೀಡಿ

Gold

ಚಿನ್ನವನ್ನು ಮನೆಯಲ್ಲಿಟ್ಟು ಏನು ಮಾಡ್ತೀರಿ?

ಒಂದೇ ದಿನ 24,912 ಪ್ರಕರಣಗಳು: ವಿಶ್ವದ ಸೋಂಕಿತರ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದ ಭಾರತ

ಒಂದೇ ದಿನ 24,912 ಪ್ರಕರಣಗಳು: ವಿಶ್ವದ ಸೋಂಕಿತರ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದ ಭಾರತ

ಕೇರಳ: ಮಾಸ್ಕ್ ಧರಿಸದಿದ್ದರೆ 10 ಸಾವಿರ ರೂ.ದಂಡ

ಕೇರಳ: ಮಾಸ್ಕ್ ಧರಿಸದಿದ್ದರೆ 10 ಸಾವಿರ ರೂ.ದಂಡ

ಮೌಲ್ಯಮಾಪನಕ್ಕೆ ಹೊಸ ಕೇಂದ್ರ

ಕೋವಿಡ್‌ ಭೀತಿ ಹಿನ್ನೆಲೆ: ಮೌಲ್ಯಮಾಪನಕ್ಕೆ ಹೊಸ ಕೇಂದ್ರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

stabhda

ಸಂಡೇ ಲಾಕ್‌ಡೌನ್‌: ಸಾಂಸ್ಕೃತಿಕ ನಗರಿ ಮೈಸೂರು ಸ್ತಬ್ಧ!

pravasi-neeru

ಪ್ರವಾಸಿ ತಾಣಗಳಲ್ಲಿ ಶುದ್ಧ ನೀರು ಘಟಕ

antara-agatya

ಅಂತರ ಕಾಯ್ದುಕೊಳ್ಳುವುದು ಅಗತ್ಯ

mys-death

ಮೈಸೂರು: ಕೋವಿಡ್‌ 19ಗೆ ಮತ್ತೊಂದು ಬಲಿ

asu modi

ಮೋದಿಯಲ್ಲಿ ಅರಸು ಕಾಣುತ್ತಿರುವೆ: ವಿಶ್ವನಾಥ್‌

MUST WATCH

udayavani youtube

ಮಧ್ಯಕರ್ನಾಟಕದ ಆಶಾಕಿರಣ | SS Hospital Davangere

udayavani youtube

ಮಡಹಾಗಲ ಕಾಯಿ ಬೆಳೆಯುವ ಸೂಕ್ತ ವಿಧಾನ | How to grow Spiny gourd in your Home

udayavani youtube

Uday Innaje : Success story of Sugarcane Farmer | Udayavani

udayavani youtube

Manoj Kumar : Success story of Indigenous Dairy Farmer from Moodbidri

udayavani youtube

Udupi’s Master Chariot Maker Lakshmi Narayan Acharya


ಹೊಸ ಸೇರ್ಪಡೆ

ಗರ್ಭಿಣಿಗೆ ಪಾಸಿಟಿವ್‌: ಪ್ರಾರಂಭದಲ್ಲಿ ನಿರಾಕರಿಸಿದ ಆಸ್ಪತ್ರೆಯಲ್ಲಿ ಕೊನೆಗೂ ಹೆರಿಗೆ

ಗರ್ಭಿಣಿಗೆ ಪಾಸಿಟಿವ್‌: ಪ್ರಾರಂಭದಲ್ಲಿ ನಿರಾಕರಿಸಿದ ಆಸ್ಪತ್ರೆಯಲ್ಲಿ ಕೊನೆಗೂ ಹೆರಿಗೆ

ಒಂದೇ ದಿನ 51 ಜನರಿಗೆ ಕೋವಿಡ್ ಮಹಾಮಾರಿ

ಒಂದೇ ದಿನ 51 ಜನರಿಗೆ ಕೋವಿಡ್ ಮಹಾಮಾರಿ

ಜ್ಞಾನಯೋಗಾಶ್ರಮದಲ್ಲಿ ಗುರುಪೂರ್ಣಿಮೆ

ಜ್ಞಾನಯೋಗಾಶ್ರಮದಲ್ಲಿ ಗುರುಪೂರ್ಣಿಮೆ

ಅಮ್ಮುಂಜೆ ಡಿಜೆ ನೃತ್ಯ ವಿಚಾರ ಮದುಮಗ ಸೇರಿ ಇತರರ ವಿರುದ್ಧ ಪ್ರಕರಣ

ಅಮ್ಮುಂಜೆ ಡಿಜೆ ನೃತ್ಯ ವಿಚಾರ ಮದುಮಗ ಸೇರಿ ಇತರರ ವಿರುದ್ಧ ಪ್ರಕರಣ

ಲಾಕ್‌ಡೌನ್‌ ದಿನವೂ 10 ಮಂದಿಗೆ ಸೋಂಕು

ಲಾಕ್‌ಡೌನ್‌ ದಿನವೂ 10 ಮಂದಿಗೆ ಸೋಂಕು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.