ಹೂಡಿಕೆ ಆಹ್ವಾನಕ್ಕೆ ಟಾಸ್ಕ್ ಪೋರ್ಸ್ ರಚನೆ

ದೊಡ್ಡ ಕೈಗಾರಿಕೆಗಳಿಗೆ ಆರ್ಥಿಕ ನೆರವು; ಕೇಂದ್ರದಿಂದ ಪ್ಯಾಕೇಜ್‌ ನೀಡಲು ಚಿಂತನೆ: ಶೆಟ್ಟ ರ್‌

Team Udayavani, May 9, 2020, 2:40 PM IST

ಹೂಡಿಕೆ ಆಹ್ವಾನಕ್ಕೆ ಟಾಸ್ಕ್ ಪೋರ್ಸ್ ರಚನೆ

ಮೈಸೂರು ಜಿಪಂ ಸಭಾಂಗಣದಲ್ಲಿ ಕೈಗಾರಿಕೋದ್ಯಮಿಗಳ ಸಭೆ ನಡೆಯಿತು.

ಮೈಸೂರು: ಈಗಾಗಲೇ ಎಲ್ಲೆಡೆ ಕೈಗಾರಿಕೆಗಳು ಪ್ರಾರಂಭವಾಗಿದ್ದು, ಸಣ್ಣ ಕೈಗಾರಿಕೆಗಳಿಗೆ ರಾಜ್ಯ ಸರ್ಕಾರ ವಿದ್ಯುತ್‌ ದರ ಮನ್ನಾ ಮಾಡಿದೆ. ದೊಡ್ಡ ಕೈಗಾರಿಕೆಗಳಿಗೂ ಆರ್ಥಿಕವಾಗಿ ನೆರವು ನೀಡಲಾಗಿದೆ ಎಂದು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಜಗದೀಶ್‌ ಶೆಟ್ಟರ್‌ ತಿಳಿಸಿದರು.

ನಗರದ ಜಿಪಂ ಸಭಾಂಗಣದಲ್ಲಿ ನಡೆದ ಕೈಗಾರಿಕೋದ್ಯಮಿಗಳ ಸಭೆಯಲ್ಲಿ ಮಾತನಾಡಿ, ಕೈಗಾರಿಕೋದ್ಯಮಿಗಳಿಗೆ ಸರ್ಕಾರದಿಂದ ಸೌಲಭ್ಯ ಸಿಕ್ಕಿವೆ. ಕೇಂದ್ರದಿಂದ ಸಣ್ಣ ಕೈಗಾರಿಕೆಗಳಿಗೆ ಪ್ಯಾಕೇಜ್‌ ನೀಡುವ ಬಗ್ಗೆ ಚಿಂತನೆ ನಡೆಯುತ್ತಿದೆ. ಕಳೆದ ತಿಂಗಳ ಸಂಬಳ ಮತ್ತಿತರ ಆರ್ಥಿಕ ವಿಚಾರಗಳಿಗೆ ಸಂಬಂಧಪಟ್ಟಂತೆ ಕೇಂದ್ರ ಶೀಘ್ರವೇ ನಿರ್ಧಾರ ಕೈಗೊಳ್ಳುತ್ತದೆ. ಮುಂದಿನ  ದಿನಗಳಲ್ಲಿ ಆರ್ಥಿಕ ಕ್ಷೇತ್ರವೂ ಚೇತರಿಕೆ ಕಾಣಲಿದೆ. ಯಾರೂ ಹೆದರುವ ಅವಶ್ಯವಿಲ್ಲ ಎಂದರು.

ವಿದೇಶಿ ಹೂಡಿಕೆಗೆ ಆಹ್ವಾನ: ರಾಜ್ಯದಲ್ಲಿ ಟಾಸ್ಕ್ ಪೋರ್ಸ್  ರಚನೆ ಮಾಡಿದ್ದು, ಬೇರೆ ದೇಶದಿಂದ ಬರುವ ಕೈಗಾರಿಕೋದ್ಯಮಿಗಳನ್ನು ಸ್ವಾಗತಿಸಬೇಕೆಂದು ಸಿಎಂಗೆ ಕೇಳಿಕೊಂಡಿದ್ದೇನೆ. ಇದರಿಂದ ಕರ್ನಾಟದಲ್ಲಿ ಬಂಡವಾಳ ಹೂಡಿಕೆ ಹೆಚ್ಚುವ ನಿರೀಕ್ಷೆ ಇದೆ. ಚೀನಾ ಕಂಪನಿಗಳನ್ನೂ ಸ್ವಾಗತಿಸಲಾಗುತ್ತದೆ. ಹೀಗೆ ಬೇರೆ ಬೇರೆ ದೇಶದಿಂದ ಕಂಪನಿಗಳು ಬಂದು ಇಲ್ಲಿ ಹೂಡಿಕೆ ಮಾಡಿದಾಗ ನಮ್ಮ ಆರ್ಥಿಕತೆ ಚೇತರಿಸಿಕೊಳ್ಳಲಿದೆ ಎಂದು ಹೇಳಿದರು.

ಮುಂಜಾಗ್ರತೆ ಕ್ರಮ ಅನುಸರಿಸಿ: ಕೋವಿಡ್ ತಡೆಗೆ ಕ್ರಮ ಕೈಗೊಳ್ಳಲು ಕಾರ್ಖಾನೆಗಳಲ್ಲಿ ಮಾಸ್ಕ್, ಸ್ಯಾನಿಟೈಸರ್‌ ಬಳಕೆ ಕಡ್ಡಾಯ. ಹೆಚ್ಚು ಜನರು ಸೇರದೆ ಶೇ.50ರಷ್ಟು ಕಾರ್ಮಿಕರು ಪಾಳಿ ಪ್ರಕಾರ ಕೆಲಸ ಮಾಡಬೇಕು. ಕೆಲಸ ಮಾಡುವಾಗ ಸಾರ್ವಜನಿಕ ಅಂತರ ಇರಬೇಕು. ರಾಸಾಯನಿಕ ಕಾರ್ಖಾನೆಗಳಲ್ಲಿ ಗಮನ ತೆಗೆದುಕೊಂಡು ಸುರಕ್ಷಿತವಾಗಿರುವಂತೆ ಸೂಚಿಸಲಾಗಿದೆ ಎಂದರು.

ಈಗ ಮೈಸೂರಿನಲ್ಲಿ 7 ಮಂದಿ ಮಾತ್ರ ಸೋಂಕಿತರಿದ್ದಾರೆ. ಅವರನ್ನು ಗುಣಪಡಿಸಿ ಮೈಸೂರನ್ನು ಕೊರೊನಾ ಮುಕ್ತ ಮಾಡುವುದು ನಮ್ಮ ಮೊದಲ ಆದ್ಯತೆ. ಅದರ ನಂತರ ಜ್ಯುಬಿಲಿಯಂಟ್‌ ಕಾರ್ಖಾನೆ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ಸಭೆಯಲ್ಲಿ ಸಚಿವ ಎಸ್‌ .ಟಿ.ಸೋಮಶೇಖರ್‌, ಸಂಸದ ಪ್ರತಾಪ್‌ ಸಿಂಹ, ಶಾಸಕರಾದ ಜಿ.ಟಿ.ದೇವೇಗೌಡ, ಎಸ್‌ .ಎ. ರಾಮದಾಸ್‌, ಸಾ.ರಾ.ಮಹೇಶ್‌, ಎಲ್‌ .ನಾಗೇಂದ್ರ, ಬಿ.ಹರ್ಷವರ್ಧನ್‌, ನಿರಂಜನ್‌ ಕುಮಾರ್‌, ವಿಧಾನಪರಿಷತ್‌ ಸದಸ್ಯರಾದ ಸಂದೇಶ್‌ ನಾಗರಾಜ್‌, ಧರ್ಮಸೇನಾ, ಜಿಪಂ ಅಧ್ಯಕ್ಷೆ ಪರಿಮಳಾ ಶ್ಯಾಂ, ಡೀಸಿ ಅಭಿರಾಂ ಜಿ.ಶಂಕರ್‌, ನಗರಪಾಲಿಕೆ ಆಯುಕ್ತ ಗುರುದತ್ತ ಹೆಗಡೆ, ಮೈಸೂರು ಜಿಲ್ಲಾ ಕೈಗಾರಿಕಾ ಸಂಘದ ಅಧ್ಯಕ್ಷ ವಾಸು ಇದ್ದರು.

ಟಾಪ್ ನ್ಯೂಸ್

ಎಂಡೋ ಸಂತ್ರಸ್ತ ಮಕ್ಕಳ ಕೈಯಲ್ಲಿ ಅರಳುವ ಕರಕುಶಲತೆ

ಎಂಡೋ ಸಂತ್ರಸ್ತ ಮಕ್ಕಳ ಕೈಯಲ್ಲಿ ಅರಳುವ ಕರಕುಶಲತೆ

ಗರ್ಭಿಣಿಯರಲ್ಲಿ ಬಾಯಿಯ ಆರೋಗ್ಯ ಸವಾಲುಗಳು

ಗರ್ಭಿಣಿಯರಲ್ಲಿ ಬಾಯಿಯ ಆರೋಗ್ಯ ಸವಾಲುಗಳು

ವಿಭಿನ್ನವಾಗಿರುವುದಕ್ಕೆ ಭಯ ಪಡಬೇಕೇ?

ವಿಭಿನ್ನವಾಗಿರುವುದಕ್ಕೆ ಭಯ ಪಡಬೇಕೇ?

ದಿನಕ್ಕೊಂದು ಹವಾಮಾನ: ಗೇರು ಕೃಷಿಗೆ ಸಂಕಷ್ಟ

ದಿನಕ್ಕೊಂದು ಹವಾಮಾನ: ಗೇರು ಕೃಷಿಗೆ ಸಂಕಷ್ಟ

ವನಿತಾ ಚಾಲೆಂಜರ್‌ ಕ್ರಿಕೆಟ್‌ ಸರಣಿ: ಮಂಧನಾ, ಶಫಾಲಿ, ಕೌರ್‌ ಗೈರು

ವನಿತಾ ಚಾಲೆಂಜರ್‌ ಕ್ರಿಕೆಟ್‌ ಸರಣಿ: ಮಂಧನಾ, ಶಫಾಲಿ, ಕೌರ್‌ ಗೈರು

ಹೊಸ ರೂಪಾಂತರಿಯಿಂದ ಆತಂಕ :  ಹಲವು ದೇಶಗಳಲ್ಲಿ ಕಟ್ಟೆಚ್ಚರ, ವಿಮಾನಯಾನಕ್ಕೆ ನಿಷೇಧ

ಹೊಸ ರೂಪಾಂತರಿಯಿಂದ ಆತಂಕ :  ಹಲವು ದೇಶಗಳಲ್ಲಿ ಕಟ್ಟೆಚ್ಚರ, ವಿಮಾನಯಾನಕ್ಕೆ ನಿಷೇಧ

ಸಂಬಳ ನೀಡದೆ ಬಂಧಿಯಾಗಿದ್ದ 39 ಕಾರ್ಮಿಕರ ರಕ್ಷಣೆ

ಸಂಬಳ ನೀಡದೆ ಬಂಧಿಯಾಗಿದ್ದ 39 ಕಾರ್ಮಿಕರ ರಕ್ಷಣೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-fff

ಬಿಜೆಪಿ ದಲಿತರು, ಮಹಿಳೆಯರು, ಅಲ್ಪಸಂಖ್ಯಾತರಿಗೆ ಟಿಕೇಟ್ ನೀಡಿಲ್ಲ: ಧ್ರುವನಾರಾಯಣ

ಕಾಂಗ್ರೆಸ್‌ನಿಂದ ಮಾತ್ರ ಗ್ರಾಮೀಣ ಅಭಿವೃದ್ಧಿ ಸಾಧ್ಯ: ಹೆಚ್.ಸಿ.ಮಹದೇವಪ್ಪ

ಕಾಂಗ್ರೆಸ್‌ನಿಂದ ಮಾತ್ರ ಗ್ರಾಮೀಣ ಅಭಿವೃದ್ಧಿ ಸಾಧ್ಯ: ಹೆಚ್.ಸಿ.ಮಹದೇವಪ್ಪ

siddaramaiah

ಎ.ಮಂಜು ಕಾಂಗ್ರೆಸ್ ಗೆ ಬಂದರೂ ನಾವು ಸೇರಿಸಿಕೊಳ್ಳುವುದಿಲ್ಲ: ಸಿದ್ದರಾಮಯ್ಯ

ಮಾನವ ಹಕ್ಕುಗಳ ರಕ್ಷಣೆ ಎಲ್ಲರ ಹೊಣೆ: ಕೆ.ಸಿ.ಎನ್.ಸುರೇಶ್

ಮಾನವ ಹಕ್ಕುಗಳ ರಕ್ಷಣೆ ಎಲ್ಲರ ಹೊಣೆ: ಕೆ.ಸಿ.ಎನ್.ಸುರೇಶ್

1-fdffd

ಮೈಸೂರು: ಯುವಕ ಮತ್ತು ಮಹಿಳೆಯನ್ನ ವಿದ್ಯುತ್ ಕಂಬಕ್ಕೆ ಕಟ್ಟಿ ಮನಬಂದಂತೆ ಹಲ್ಲೆ

MUST WATCH

udayavani youtube

ಎರೆಹುಳು ಸಾಕಾಣಿಕೆ ಮಾಡಿ ಭೂಮಿಯ ಫಲವತ್ತತೆ ಹೆಚ್ಚಿಸಿ, ಕೈತುಂಬಾ ಆದಾಯವೂ ಗಳಿಸಿ

udayavani youtube

ಬೆಂಗಳೂರಿನಿಂದ ಪಾಟ್ನಾಕ್ಕೆ 139 ಪ್ರಯಾಣಿಕರನ್ನು ಹೊತ್ತ ವಿಮಾನ ತುರ್ತು ಭೂಸ್ಪರ್ಶ

udayavani youtube

Shree Chamundeshwari Kshetra Arikodi

udayavani youtube

ಮೈಮೇಲೆ ದೇವರು ಬಂದಿದ್ದಾರೆ ಎಂದು ಲಸಿಕೆ ಹಾಕಲು ಬಂದವರನ್ನೇ ಯಾಮಾರಿಸಿದ ವ್ಯಕ್ತಿ

udayavani youtube

ಕಾರು ಶೋರೂಂ ಒಳಗೆ ನುಗ್ಗಿದ ಕಾಡು ಹಂದಿ!

ಹೊಸ ಸೇರ್ಪಡೆ

ಎಂಡೋ ಸಂತ್ರಸ್ತ ಮಕ್ಕಳ ಕೈಯಲ್ಲಿ ಅರಳುವ ಕರಕುಶಲತೆ

ಎಂಡೋ ಸಂತ್ರಸ್ತ ಮಕ್ಕಳ ಕೈಯಲ್ಲಿ ಅರಳುವ ಕರಕುಶಲತೆ

ಗರ್ಭಿಣಿಯರಲ್ಲಿ ಬಾಯಿಯ ಆರೋಗ್ಯ ಸವಾಲುಗಳು

ಗರ್ಭಿಣಿಯರಲ್ಲಿ ಬಾಯಿಯ ಆರೋಗ್ಯ ಸವಾಲುಗಳು

ವಿಭಿನ್ನವಾಗಿರುವುದಕ್ಕೆ ಭಯ ಪಡಬೇಕೇ?

ವಿಭಿನ್ನವಾಗಿರುವುದಕ್ಕೆ ಭಯ ಪಡಬೇಕೇ?

ಮಂಗಳೂರು ರಾಮಕೃಷ್ಣ ಮಠ, ರಾಮಕೃಷ್ಣ ಮಿಷನ್‌: ಗೌರವಾಭಿನಂದನೆ, ಪೌರ ಸಮ್ಮಾನ

ಮಂಗಳೂರು ರಾಮಕೃಷ್ಣ ಮಠ, ರಾಮಕೃಷ್ಣ ಮಿಷನ್‌: ಗೌರವಾಭಿನಂದನೆ, ಪೌರ ಸಮ್ಮಾನ

ದಿನಕ್ಕೊಂದು ಹವಾಮಾನ: ಗೇರು ಕೃಷಿಗೆ ಸಂಕಷ್ಟ

ದಿನಕ್ಕೊಂದು ಹವಾಮಾನ: ಗೇರು ಕೃಷಿಗೆ ಸಂಕಷ್ಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.