ನರೇಂದ್ರ ಮೋದಿ 3.0 ಭವಿಷ್ಯ: 2024ರ ರಣರಂಗಕ್ಕೂ ಮೊದಲಿದೆ 16 ಕದನ
ಮಿಝೋರಾಂ ಹೊರತುಪಡಿಸಿ ಬೇರೆಲ್ಲ ರಾಜ್ಯಗಳಲ್ಲೂ ಬಿಜೆಪಿಯೇ ಸಿಂಹಾಸನದಲ್ಲಿದೆ.
Team Udayavani
ಒಂದೆಡೆ ಮೋದಿ ಹೆಸರಿನೊಂದಿಗೇ ಎಲ್ಲ ಚುನಾವಣೆ ಗೆಲ್ಲುವ ತಂತ್ರವನ್ನು ಬಿಜೆಪಿ ಹೆಣೆಯುತ್ತಿದ್ದರೆ, ಇನ್ನೊಂದತ್ತ ಸ್ಥಳೀಯ ಸಮಸ್ಯೆಗಳನ್ನೇ ಮುಂದಿಟ್ಟುಕೊಂಡು ಗೆದ್ದೇ ಗೆಲ್ಲುತ್ತೇವೆ ಎನ್ನುವ ವಿಶ್ವಾಸದಲ್ಲಿ ಇತರೆ ಪಕ್ಷಗಳು ಮುನ್ನುಗ್ಗಲಾರಂಭಿಸಿವೆ. 2022ರಿಂದ 2023ರ ಎರಡು ವರ್ಷಗಳ ಅವಧಿಯಲ್ಲಿ 16 ರಾಜ್ಯಗಳಲ್ಲಿ ಚುನಾವಣೆ ನಡೆಯಲಿದೆ. ಅದರಲ್ಲಿ ಗೆಲ್ಲುವ ಪಕ್ಷಗಳಿಗೆ ಲೋಕಸಭಾ ಚುನಾವಣೆಯಲ್ಲೂ ಪ್ಲಸ್ ಪಾಯಿಂಟ್ ಆಗುವುದಂತೂ ಸತ್ಯ. ಹಾಗಾದರೆ ಯಾವ ರಾಜ್ಯದಲ್ಲಿ ಯಾವ ಪಕ್ಷದ ಬಗ್ಗೆ ಹೆಚ್ಚು ಒಲವಿದೆ? ಅಲ್ಲಿನ ರಾಜಕೀಯ ಚಿತ್ರಣ ಎಲ್ಲಿಗೆ ಬಂದು ನಿಂತಿದೆ ಎಂದು ಹೇಳುವ ಪ್ರಯತ್ನ ಇಲ್ಲಿದೆ...