ಇಂಗ್ಲೆಂಡ್ ಸರಣಿಗೆ ದಕ್ಷಿಣ ಆಫ್ರಿಕಾದ 24 ಸದಸ್ಯರ ತಂಡ
Team Udayavani, Nov 7, 2020, 11:13 PM IST
ಜೊಹಾನ್ಸ್ಬರ್ಗ್: ಮುಂದಿನ ತಿಂಗಳು ಇಂಗ್ಲೆಂಡ್ ತಂಡದ ಆಗಮನ ಆಗುವುದರೊಂದಿಗೆ ದಕ್ಷಿಣ ಆಫ್ರಿಕಾದ ನೂತನ ಕ್ರಿಕೆಟ್ ಸರಣಿ ಗರಿಗೆದರಲಿದೆ. ನ. 27ರಿಂದ ಪ್ರಾರಂಭವಾಗಲಿರುವ 3 ಏಕದಿನ ಮತ್ತು 3 ಟಿ20 ಪಂದ್ಯಗಳ ಸರಣಿಗಾಗಿ 24 ಸದಸ್ಯರ ತಂಡವನ್ನು ಪ್ರಕಟಿಸಲಾಗಿದೆ.
ತಂಡಗಳನ್ನು ಕ್ವಿಂಟನ್ ಡಿ ಕಾಕ್ ಮುನ್ನಡೆಸಲಿದ್ದಾರೆ. ಇದರಲ್ಲಿ ದೊಡ್ಡ ಮಟ್ಟದ ಯಾವ ಬದಲಾವಣೆಯೂ ಸಂಭವಿಸಿಲ್ಲ. ಮಧ್ಯಮ ವೇಗಿ ಗ್ಲೆಂಟನ್ ಸ್ಟರ್ಮ್ಯಾನ್ ಈ ತಂಡದ ಹೊಸಮುಖ.
ದಕ್ಷಿಣ ಆಫ್ರಿಕಾ ತನ್ನ ಕೊನೆಯ ಅಂತಾರಾಷ್ಟ್ರೀಯ ಸರಣಿಯನ್ನು ಮಾರ್ಚ್ನಲ್ಲಿ ಆಸ್ಟ್ರೇಲಿಯ ವಿರುದ್ಧ ಆಡಿತ್ತು. ಅನಂತರ ಭಾರತಕ್ಕೆ ಆಗಮಿಸಿತು. ಆದರೆ ಕೋವಿಡ್-19 ಕಾರಣ ಈ ಸರಣಿಯನ್ನು ಮುಂದೂಡಲಾಯಿತು.
ಇದನ್ನೂ ಓದಿ:ಅಧಿಕಾರಿಗಳು ಮತ್ತು ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘರ್ಷ :10 ಅಂಗಡಿಗಳ ಪರವಾನಿಗೆ ಅಮಾನತು
ದಕ್ಷಿಣ ಆಫ್ರಿಕಾ ತಂಡ
ಕ್ವಿಂಟನ್ ಡಿ ಕಾಕ್, ಟೆಂಬ ಬವುಮ, ಜೂನಿಯರ್ ಡಾಲಾ, ಫಾ ಡು ಪ್ಲೆಸಿಸ್, ಫಾರ್ಟಿನ್, ನ್ಯೂರನ್ ಹೆಂಡ್ರಿಕ್ಸ್, ರೀಝ ಹೆಂಡ್ರಿಕ್ಸ್, ಹೆನ್ರಿಚ್ ಕ್ಲಾಸೆನ್, ಜಾರ್ಜ್ ಲಿಂಡೆ, ಕೇಶವ್ ಮಹಾರಾಜ್, ಜೇನ್ಮನ್ ಮಾಲನ್, ಡೇವಿಡ್ ಮಿಲ್ಲರ್, ಲುಂಗಿ ಎನ್ಗಿಡಿ, ಅನ್ರಿಚ್ ಜೋರ್ಜೆ, ಆ್ಯಂಡಿಲ್ ಫೆಲುಕ್ವಾಯೊ, ಡ್ವೇನ್ ಪ್ರಿಟೋರಿಯಸ್, ಕಾಗಿಸೊ ರಬಾಡ, ತಬ್ರೇಜ್ ಶಂಸಿ, ಲುಥೊ ಪ್ರಿಟೋರಿಯಸ್, ಜಾನ್-ಜಾನ್ ಸ್ಮಟ್ಸ್, ಗ್ಲೆಂಟನ್ ಸ್ಟರ್ಮ್ಯಾನ್, ಪೀಟ್ ವಾನ್ ಬಿಲ್ಜೋನ್, ರಸ್ಸಿ ವಾನ್ ಡರ್ ಡುಸೆನ್, ಕೈಲ್ ವೆರೇನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್ ನಲ್ಲಿ ಬಂಧನ
ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್ ಹೆಗ್ಡೆ: ವಿಠಲ ಹೆಗ್ಡೆ
Dakshina Kannada; ಕ್ಯಾಪ್ಟನ್ ಬ್ರಿಜೇಶ್ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..
Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ