ಶ್ರೀಲಂಕಾ ಸಂಪುಟದಲ್ಲಿ ಮೂವರು ರಾಜಪಕ್ಸೆಗಳು
Team Udayavani, Aug 13, 2020, 6:27 AM IST
ಕೊಲಂಬೊ: ಶ್ರೀಲಂಕಾದಲ್ಲಿ ನೂತನ ಪ್ರಧಾನಿ ಮಹಿಂದಾ ರಾಜಪಕ್ಸೆ ನೇತೃತ್ವದಲ್ಲಿ ಬುಧವಾರ ರಚಿಸಿರುವ ಸಚಿವ ಸಂಪುಟದಲ್ಲಿ ಒಟ್ಟು ಮೂವರು ರಾಜಪಕ್ಸೆಗಳು ಸೇರ್ಪಡೆಯಾಗಿದ್ದಾರೆ. ಪ್ರಧಾನಿಯಾಗಿರುವ ಮಹಿಂದಾ ರಾಜಪಕ್ಸೆ ಹಣಕಾಸು ಹಾಗೂ ನಗರಾಭಿವೃದ್ಧಿ ಖಾತೆಯ ಹೊಣೆ ಹೊತ್ತಿದ್ದರೆ, ಅವರ ಪುತ್ರ ನಮಾಲ್ ರಾಜಪಕ್ಸೆ ಯುವಜನ ಕಲ್ಯಾಣ ಹಾಗೂ ಕ್ರೀಡಾ ಸಚಿವರಾಗಿದ್ದಾರೆ. ಮಹಿಂದಾ ಅವರ ಹಿರಿಯ ಸಹೋದರ ಚಾಮಲ್ ರಾಜಪಕ್ಸೆ ನೀರಾವರಿ ಸಚಿವರಾಗಿದ್ದಾರೆ. ರಾಜಪಕ್ಸ ನೇತೃತ್ವದ ಶ್ರೀಲಂಕಾ ಪೀಪಲ್ಸ್ ಪಾರ್ಟಿ(ಎಸ್‌ಎಲ್‌ಪಿಪಿ) ಸಂಸತ್ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿತ್ತು. ಎಸ್‌ಎಲ್‌ಪಿಪಿಯಲ್ಲಿ ರಾಜಪಕ್ಸೆ ಕುಟುಂಬದ ಐವರು ಸದಸ್ಯರು ಜನಪ್ರತಿನಿಧಿಗಳಾಗಿ ಆಯ್ಕೆಯಾಗಿದ್ದಾರೆ. ಶ್ರೀಲಂಕಾ ಅಧ್ಯಕ್ಷರಾಗಿರುವ ಗೊಟಬಾಯ ರಾಜಪಕ್ಸೆ ಕೂಡ ಮಹಿಂದಾ ಅವರ ಸಹೋದರರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು