ಏರ್ಪೋರ್ಟ್ ರಸ್ತೆ ದಟ್ಟಣೆ ತಡೆಗೆ 3 ಹಂತದ ಯೋಜನೆ; ಮಹಾಲಕ್ಷ್ಮೀ ಜಂಕ್ಷನ್ ಬಳಿ ಮೇಲ್ಸೇತುವೆ

ಬಿಡಿಎ ಕಚೇರಿಯಿಂದ ಮಹಾಲಕ್ಷ್ಮೀ ಜಂಕ್ಷನ್‌ವರೆಗೆ ಸಂಚಾರ ದಟ್ಟಣೆ ಉಂಟಾಗುತ್ತದೆ.

Team Udayavani, Oct 7, 2022, 1:14 PM IST

ಏರ್ಪೋರ್ಟ್ ರಸ್ತೆ ದಟ್ಟಣೆ ತಡೆಗೆ 3 ಹಂತದ ಯೋಜನೆ

ಬೆಂಗಳೂರು: ವಿಮಾನ ನಿಲ್ದಾಣಕ್ಕೆ ತೆರಳುವ ವಾಹನಗಳಿಗೆ ಎದುರಾಗುವ ಸಂಚಾರ ದಟ್ಟಣೆ ನಿವಾರಿಸಲು ಯೂನಿಫಾರ್ಮ್ ಕ್ಯಾರೇಜ್‌ ವಿಡ್ತ್ ಸೇರಿ 3 ಹಂತದ ಯೋಜನೆ ಅನುಷ್ಠಾನಗೊಳಿಸಲು ಬಿಬಿಎಂಪಿ ಮುಂದಾಗಿದೆ.

ನಗರದ ಕೇಂದ್ರ ಭಾಗವಾದ ಚಾಲುಕ್ಯ ವೃತ್ತ ಮಾರ್ಗವಾಗಿ ಪ್ರತಿದಿನ ಲಕ್ಷಾಂತರ ವಾಹನಗಳು ವಿಮಾನನಿಲ್ದಾಣಕ್ಕೆ ತೆರಳುತ್ತವೆ. ಹೀಗೆ ತೆರಳುವ ವಾಹನಗಳು ಚಾಲುಕ್ಯ ವೃತ್ತ, ಮಹಾಲಕ್ಷ್ಮೀ ಜಂಕ್ಷನ್‌ (ಕಾವೇರಿ ಜಂಕ್ಷನ್‌), ಮೇಖ್ರಿ ವೃತ್ತ, ಹೆಬ್ಬಾಳ ಮೇಲ್ಸೇತುವೆ ಬಳಿಯಲ್ಲಿ ಸಂಚಾರ ದಟ್ಟಣೆಗೆ ಸಿಲುಕುತ್ತಿವೆ.

ಈ ಸಮಸ್ಯೆಗೆ ಪರಿಹಾರ ಎನ್ನುವಂತೆ ಬಿಬಿಎಂಪಿ ಚಾಲುಕ್ಯ ವೃತ್ತದಿಂದ ಹೆಬ್ಬಾಳ ಮೇಲ್ಸೇತುವೆವರೆಗೆ ಹೊಸ ಮೇಲ್ಸೇತುವೆ ನಿರ್ಮಾಣಕ್ಕೆ ಯೋಜನೆ ರೂಪಿಸುತ್ತಿದೆ. ಅದರ ಜತೆಜತೆಗೆ 3 ಹಂತದ ಯೋಜನೆಗಳನ್ನು ಅನುಷ್ಠಾನಗೊಳಿಸುವುದಕ್ಕೂ ಸಿದ್ಧತೆ ನಡೆಸುತ್ತಿದೆ. ಒಂದು ವೇಳೆ ಮೇಲ್ಸೇತುವೆ ಯೋಜನೆ ಅನುಷ್ಠಾನ ಕಾರ್ಯಸಾಧುವಲ್ಲದಿದ್ದರೆ 3 ಹಂತದ ಯೋಜನೆ ಅನುಷ್ಠಾನಗೊಳಿಸಲು ಬಿಬಿಎಂಪಿ ನಿರ್ಧರಿಸಿದೆ.

ಬಿಬಿಎಂಪಿ ಅಧಿಕಾರಿಗಳು ಚರ್ಚಿಸಿದಂತೆ ಚಾಲುಕ್ಯ ವೃತ್ತದಿಂದ ಹೆಬ್ಟಾಳ ಮೇಲ್ಸೇತುವೆ ಬಳಿಯ ಎಸ್ಟೀಂ ಮಾಲ್‌ವರೆಗೆ ಯೂನಿಫಾರ್ಮ್ ಕ್ಯಾರೇಜ್‌ ವಿಡ್‌¤ ಹೆಸರಿನಲ್ಲಿ ಒಂದೇ ಅಗಲದ ರಸ್ತೆ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. ಚಾಲುಕ್ಯ ವೃತ್ತ  ದಿಂದ ಎಸ್ಟೀಂ ಮಾಲ್‌ವರೆಗಿನ 7.1 ಕಿ.ಮೀ. ಉದ್ದದ ರಸ್ತೆಯನ್ನು ಒಂದೇ ಅಗಲವಾಗಿರುವಂತೆ ಮಾಡ ಲಾಗುತ್ತದೆ. ಎರಡೂ ಬದಿಯ ರಸ್ತೆಯು 3 ಪಥ ವಾಗಿರಲಿದ್ದು, ಅದರಿಂದ ವಾಹನಗಳು ಸರಾಗ ವಾಗಿ ಸಂಚರಿಸಬಹುದಾಗಿದೆ. ಈವರೆಗೆ ಬಾಟೆಲ್‌ ನೆಕ್‌ ಸ್ಥಳಗಳಲ್ಲಿ ವಾಹನದ ವೇಗ ತಗ್ಗುವುದನ್ನು ತಡೆಯಬಹುದಾಗಿದೆ.

ಯೂನಿಫಾಮ್‌ ಕ್ಯಾರೇಜ್‌ ವಿಡ್ತ್ ಸಮರ್ಪಕವಾಗಿ ಜಾರಿಯಾಗಲು ಬಾಟೆಲ್‌ ನೆಕ್‌ ಜಾಗಗಳಲ್ಲಿ ರಸ್ತೆ ಅಗಲೀಕರಣ ಮಾಡಲಾಗುತ್ತದೆ. ಅದಕ್ಕಾಗಿ ಎಷ್ಟು ಭೂಮಿ ಸ್ವಾಧೀನಪಡಿಸಿಕೊಳ್ಳಬೇಕು ಎಂಬುದನ್ನು ಅಧಿಕಾರಿಗಳು ಚರ್ಚಿಸುತ್ತಿದ್ದಾರೆ. ಅದರ ಜತೆಗೆ ರಸ್ತೆ ಅಗಲೀಕರಣ ಸಂದರ್ಭದಲ್ಲಿ ಚಾಲುಕ್ಯ ವೃತ್ತದಿಂದ ಎಸ್ಟೀಂ ಮಾಲ್‌ವರೆಗೆ ವೈಟ್‌ಟಾಪಿಂಗ್‌ ರಸ್ತೆ ನಿರ್ಮಿಸಲಾಗುತ್ತದೆ.

ಮಹಾಲಕ್ಷ್ಮೀ ಜಂಕ್ಷನ್‌ ಬಳಿ ಮೇಲ್ಸೇತುವೆ: ಸುಗಮ ವಾಹನ ಸಂಚಾರ ವ್ಯವಸ್ಥೆ ಕಲ್ಪಿಸಲು ಸಂಚಾರ ದಟ್ಟಣೆ ಹೆಚ್ಚಾಗಿ ಉಂಟಾಗುವ ಸದಾಶಿವನಗರ ಕಡೆ ತೆರಳುವ ಮಹಾಲಕ್ಷ್ಮೀ ಜಂಕ್ಷನ್‌ ಬಳಿ ಗ್ರೇಡ್‌ ಸಪರೇಟರ್‌ (ಮೇಲ್ಸೇ ತುವೆ) ನಿರ್ಮಿಸಲಾಗುತ್ತದೆ. ಸದ್ಯ ಮಹಾಲಕ್ಷ್ಮೀ ಜಂಕ್ಷನ್‌ ಬಳಿ ವಾಹನಗಳು ಮ್ಯಾಜಿಕ ಬಾಕ್ಸ್‌ ಕೆಳಸೇತುವೆಯ ಮೇಲ್ಭಾಗದ ಸಣ್ಣ ಮೇಲ್ಸೇತುವೆ ಸುತ್ತುವರಿದು ಸಂಚರಿಸಬೇಕು. ಇದರಿಂದಾಗಿ ಬಿಡಿಎ ಕಚೇರಿಯಿಂದ ಮಹಾಲಕ್ಷ್ಮೀ ಜಂಕ್ಷನ್‌ವರೆಗೆ ಸಂಚಾರ ದಟ್ಟಣೆ ಉಂಟಾಗುತ್ತದೆ. ಮೇಲ್ಸೇತುವೆ ನಿರ್ಮಾಣದಿಂದಾಗಿ ವಾಹನ ಸರಾಗವಾಗಿ ಸಾಗಲಿದೆ.

ಬಿಡಿಎ ಮೇಲ್ಸೇತುವೆ ಅಗಲೀಕರಣ: ಬಿಡಿಎ ಕಚೇರಿ ಎದುರು ನಿರ್ಮಿಸಿರುವ ಗ್ರೇಡ್‌ ಸಪರೇಟರ್‌ ಮೇಲ್ಸೇತುವೆಯು ಕಿರಿದಾಗಿದೆ. ಚಾಲುಕ್ಯ ವೃತ್ತದಿಂದ ಸರಾಗವಾಗಿ ಸಾಗಿ ಬರುವ ವಾಹನಗಳು ಬಿಡಿಎ ಕಚೇರಿ ಎದುರಿನ ಮೇಲ್ಸೇತುವೆ ಬಳಿ ನಿಧಾನವಾಗಿ ಸಾಗುವಂತಾಗುತ್ತಿದೆ. ಇದರಿಂದಾಗಿ ಸಂಚಾರ ದಟ್ಟಣೆ ಹೆಚ್ಚುತ್ತಿದೆ. ಅದನ್ನು ನಿವಾರಿಸಲು ಈಗಿರುವ ಎರಡೂ ಬದಿಯಲ್ಲಿನ ಎರಡು ಪಥದ ಮೇಲ್ಸೇತುವೆಯನ್ನು ಅಗಲೀಕರಿಸಿ ತಲಾ 3 ಪಥದ ಮೇಲ್ಸೇತುವೆ ನಿರ್ಮಿಸಲಾಗುತ್ತದೆ. ಅದರ ಜತೆಗೆ ವಿಂಡ್ಸರ್‌ ಮ್ಯಾನರ್‌ ಬಳಿಯ ರೈಲ್ವೆ ಕೆಳಸೇತುವೆಗೆ ಹೊಸದಾಗಿ ಒಂದು ವೆಂಟ್‌ ಅಳವಡಿಸಿ ಅಲ್ಲಿ ರಸ್ತೆ ನಿರ್ಮಿಸಲೂ ಬಿಬಿಎಂಪಿ ಯೋಜಿಸಿದೆ.

15 ದಿನಗಳಲ್ಲಿ ಸಮಗ್ರ ಯೋಜನಾ ವರದಿ
ಈ ಯೋಜನೆಗಳ ಕುರಿತಂತೆ ಅಂತರ ಇಲಾಖೆಗಳ ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚಿಸಲಾಗಿದೆ. ಈ ಕುರಿತಂತೆ ಬಿಬಿಎಂಪಿ ಖಾಸಗಿ ಸಂಸ್ಥೆ ಮೂಲಕ ಸಮ ಗ್ರ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸುತ್ತಿದೆ. ಇನ್ನೊಂದು 15 ದಿನಗಳಲ್ಲಿ ಡಿಪಿಆರ್‌ ಸಿದ್ಧವಾಗಲಿದ್ದು, ಅದನ್ನು ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ. ಜತೆಗೆ ಚಾಲುಕ್ಯ ವೃತ್ತದಿಂದ ಹೆಬ್ಟಾಳವರೆಗೆ ಮೇಲ್ಸೇತುವೆ ನಿರ್ಮಾಣಕ್ಕೆ ತಗಲುವ ವೆಚ್ಚ ಮತ್ತು ಯೋಜನೆ ಅನುಷ್ಠಾನಕ್ಕೆ ಎದುರಾಗುವ ಸಮಸ್ಯೆ ಹಾಗೂ 3 ಹಂತದ ಯೋಜನೆಯ ವೆಚ್ಚ ಮತ್ತು ಸಮಸ್ಯೆಯನ್ನು ತುಲನೆ ಮಾಡಿ ನಂತರ ಯಾವ ಯೋಜನೆ ಅನುಷ್ಠಾನಗೊಳಿಸಬೇಕು ಎಂಬ ಬಗ್ಗೆ ಸರ್ಕಾರ ನಿರ್ಧರಿಸಿ ಬಿಬಿಎಂಪಿಗೆ ಸೂಚಿಸಲಿದೆ.

ವಿಮಾನ ನಿಲ್ದಾಣಕ್ಕೆ ತೆರಳುವ ವಾಹನಗಳಿಗೆ ಎದುರಾಗುವ ಸಂಚಾರ ದಟ್ಟಣೆ ನಿವಾರಣೆಗೆ 3 ಹಂತದ ಯೋಜನೆ ರೂಪಿಸಲಾಗುತ್ತಿದೆ. ಚಾಲುಕ್ಯ ವೃತ್ತದಿಂದ ಎಸ್ಟಿಂ ಮಾಲ್‌ ವರೆಗೆ ಯೂನಿಫಾರ್ಮ್ ಕ್ಯಾರೇಜ್‌ ವಿಡ್ತ್ ರಸ್ತೆ ನಿರ್ಮಾಣ, ಮಹಾಲಕ್ಷ್ಮೀ ಜಂಕ್ಷನ್‌ನಲ್ಲಿ ಮೇಲ್ಸೇತುವೆ ನಿರ್ಮಾಣ ಹಾಗೂ ಬಿಡಿಎ ಕಚೇರಿ ಎದುರಿನ ಮೇಲ್ಸೇತುವೆ ಅಗಲೀಕರಣಕ್ಕೆ ಡಿಪಿಆರ್‌ ಸಿದ್ಧಪಡಿಸಲಾಗುತ್ತಿದೆ.
●ಪ್ರಹ್ಲಾದ್‌, ಬಿಬಿಎಂಪಿ ಪ್ರಧಾನ
ಎಂಜಿನಿಯರ್‌

ಗಿರೀಶ್‌ ಗರಗ

ಟಾಪ್ ನ್ಯೂಸ್

sumalata

Vijayendra ಜತೆ ಚರ್ಚೆ: ಮಂಡ್ಯದಲ್ಲೇ ನಿರ್ಧಾರ ತಿಳಿಸುತ್ತೇನೆ ಎಂದ ಸುಮಲತಾ

1-weqewqe

Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್

Yatindra

Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ

1-ewqeqwqe

AAP ‘ಮಹಾರ್‍ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?

jds

JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ

19-gobi

Gobi Manchurian ಬ್ಯಾನ್‌ ಎಫೆಕ್ಟ್: ಚಾಟ್ಸ್‌ ಮಾರಾಟ ಕುಸಿತ

18-

Book Brahma ಸ್ವಾತಂತ್ರ‍್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು

7-bng

Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

sumalata

Vijayendra ಜತೆ ಚರ್ಚೆ: ಮಂಡ್ಯದಲ್ಲೇ ನಿರ್ಧಾರ ತಿಳಿಸುತ್ತೇನೆ ಎಂದ ಸುಮಲತಾ

1-weqewqe

Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್

Yatindra

Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ

1-ewqeqwqe

AAP ‘ಮಹಾರ್‍ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್

Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ

Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.