ಮಂಡ್ಯ:ಮದ್ಯ ಸೇವಿಸಿ ಅಸ್ವಸ್ಥ; ನಾಲ್ವರ ಸ್ಥಿತಿ ಗಂಭೀರ
Team Udayavani, May 9, 2019, 11:30 AM IST
ಮಂಡ್ಯ: ಮದ್ಯ ಸೇವಿಸಿದ ಬಳಿಕ ನಾಲ್ವರು ತೀವ್ರವಾಗಿ ಅಸ್ವಸ್ಥಗೊಂಡ ಘಟನೆ ಕೆ.ಆರ್.ಪೇಟೆಯ ಕೃಷ್ಣಾಪುರದಲ್ಲಿ ನಡೆದಿದೆ.
ಮಂಗಳವಾರ ಸಂಜೆ ಮದ್ಯದ ಅಂಗಡಿಯೊಂದರಲ್ಲಿ ಮಹದೇವ,ಸುರೇಶ್, ತಮ್ಮಯ್ಯ ಮತ್ತು ಯೋಗೇಶ್ ಮದ್ಯ ಸೇವಿದ್ದಾರೆ. ಕೂಡಲೇ ನಾಲ್ವರು ವಾಂತಿ , ಬೇಧಿಯಿಂದ ಅಸ್ವಸ್ಥಗೊಂಡಿದ್ದಾರೆ.
ನಾಲ್ವರನ್ನು ಮೊದಲು ಕೆ.ಆರ್.ಪೇಟೆ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.
ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು , ತನಿಖೆ ಮುಂದುವರಿದಿದೆ.
ಅವಧಿ ಮೀರಿದ ಮದ್ಯ ಸೇವಿಸಿ ನಾಲ್ವರು ಅಸ್ವಸ್ಥಗೊಂಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮಳಲಿ ಮಸೀದಿಯಲ್ಲಿ ದೇವಳ ರಚನೆ ಪತ್ತೆ ವಿಚಾರ: ಡಿಸಿ ಸಭೆ; ಶಾಂತಿ, ಸುವ್ಯವಸ್ಥೆಗೆ ಮನವಿ
ಫೈನಲ್ಗೆ ಗುಜರಾತ್ ಟೈಟನ್ಸ್; ಮಿಲ್ಲರ್ ಆಕ್ರಮಣಕಾರಿ ಆಟಕ್ಕೆ ಸೋತ ರಾಜಸ್ಥಾನ ರಾಯಲ್ಸ್
ದಟ್ಟ ಮಂಜು ಹಿನ್ನೆಲೆ: ವಿಮಾನ ಸಂಚಾರದಲ್ಲಿ ವ್ಯತ್ಯಯ
ಲಾರಿಯಿಂದ ದ್ರವ ಪದಾರ್ಥ ಸೋರಿಕೆ: ವರ್ತಕರು,ವಿದ್ಯಾರ್ಥಿಗಳು ಅಸ್ವಸ್ಥ
ಪೊಲೀಸ್ ಕಸ್ಟಡಿಯಿಂದ ಆರೋಪಿ ಪರಾರಿ ; ಮೂವರು ಪೊಲೀಸರ ಅಮಾನತು