ನಾಲ್ವರು ಗಗನಯಾತ್ರಿಗಳ ತರಬೇತಿ ಪುನರಾರಂಭ
Team Udayavani, May 24, 2020, 5:30 AM IST
ಭಾರತದ ಮೊದಲ ಮಾನವಸಹಿತ ಬಾಹ್ಯಾಕಾಶ ಯೋಜನೆಯ ಅಂಗವಾಗಿ ನಡೆಯಲಿರುವ ಗಗನಯಾನಕ್ಕಾಗಿ ಆಯ್ಕೆ ಮಾಡಲಾಗಿದ್ದ ನಾಲ್ವರು ಭಾರತೀಯ ಗಗನ ಯಾತ್ರಿಗಳು ರಷ್ಯಾದಲ್ಲಿ ತರಬೇತಿಯನ್ನು ಪುನರಾರಂಭಿಸಿದ್ದಾರೆ.
ಕೋವಿಡ್-19 ವೈರಸ್ ಸೋಂಕಿನ ಕಾರಣದಿಂದಾಗಿ ತರಬೇತಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಈಗ ಭಾರತೀಯ ಗಗನಯಾತ್ರಿಗಳ ತರಬೇತಿಯನ್ನು ಮೇ 12ರಂದು ಪುನರಾರಂಭಿಸಲಾಗಿದೆ.