ಧಾರವಾಡದಲ್ಲಿ 4ನೇ ಬಾರಿ ಅರಳಿದ ಕಮಲ; ಫ‌ುಲ್‌ ಜೋಶ್‌

ಸತತ ಜಯಕಾರ; ಮೋದಿ ಝೇಂಕಾರ

Team Udayavani, May 24, 2019, 6:00 AM IST

ಧಾರವಾಡ: ಬಿಜೆಪಿ ಭದ್ರಕೋಟೆ ಎಂದೇ ಕರೆಯಿಸಿಕೊಳ್ಳುವ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ, ಹಾಲಿ ಸಂಸದ ಪ್ರಹ್ಲಾದ ಜೋಶಿ ಸತತ 4ನೇ ಬಾರಿಗೆ ಜಯಭೇರಿ ಬಾರಿಸಿದ್ದಾರೆ.

ಅವರು ಒಟ್ಟು 6,84,837 ಮತಗಳನ್ನು ಪಡೆದು ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ವಿನಯ್‌ಕುಲಕರ್ಣಿ(4,79,765 ಮತಗಳು) ಅವರನ್ನು ಎರಡು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಸೋಲಿಸಿ ಲೋಕಸಭೆಗೆ ಆಯ್ಕೆಯಾಗಿದ್ದಾರೆ.

2014ರ ಲೋಕಸಭೆ ಚುನಾವಣೆಯಲ್ಲಿ 1.13 ಲಕ್ಷಮತಗಳ ಅಂತರದಿಂದ ಗೆಲುವು ಸಾಧಿಸಿದ್ದ ಸಂಸದ ಪ್ರಹ್ಲಾದ ಜೋಶಿ ಈ ಬಾರಿ ಗೆಲುವಿನ ಅಂತರ ಕಡಿಮೆಯಾಗುತ್ತದೆ ಎಂದೇ ವಿಶ್ಲೇಷಿಸಲಾಗಿತ್ತು. ಆದರೆ ಗೆಲುವಿನ ಅಂತರ ಇನ್ನಷ್ಟು ಹೆಚ್ಚಿದ್ದು, 2 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಲೆ ಸುನಾಮಿಯಂತೆಕೆಲಸ ಮಾಡಿದೆ. ಕಾಂಗ್ರೆಸ್‌ನಲ್ಲಿ ಟಿಕೆಟ್‌ ಹಂಚಿಕೆಯಲ್ಲಿ ಉಂಟಾದ ಗೊಂದಲದ ಪರಿಪೂರ್ಣ ಲಾಭವನ್ನು ಪಡೆದುಕೊಂಡ ಬಿಜೆಪಿ ಮತ್ತು ಆರೆಸ್ಸೆಸ್‌ ಕ್ರಮಬದಟಛಿವಾಗಿ ತೆರೆಮರೆಯಲ್ಲೇ ಕೆಲಸ ಮಾಡಿದ್ದು ಬಿಜೆಪಿ ಗೆಲುವಿಗೆ ಪ್ರಮುಖ ಕಾರಣವಾಗಿದೆ.

7ರಲ್ಲೂ ಕಮಲ ಮುನ್ನಡೆ: ಇನ್ನು ಧಾರವಾಡ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಒಟ್ಟು 8 ವಿಧಾನಸಭಾ ಕ್ಷೇತ್ರಗಳ ಪೈಕಿ ಹುಬ್ಬಳ್ಳಿ-ಧಾರವಾಡ ಪೂರ್ವ ಕ್ಷೇತ್ರವನ್ನು ಹೊರತುಪಡಿಸಿದರೆ ಇನ್ನುಳಿದ ಎಲ್ಲ ಏಳೂ ಕ್ಷೇತ್ರಗಳಲ್ಲಿ ಬಿಜೆಪಿ ಭಾರೀ ಮುನ್ನಡೆ ಕಾಯ್ದುಕೊಂಡಿದ್ದೇ ಕಾಂಗ್ರೆಸ್‌ ಸೋಲಿಗೆ ಪ್ರಮುಖ ಕಾರಣವಾಯಿತು.

ನಿರೀಕ್ಷೆಯಂತೆ ಹುಬ್ಬಳ್ಳಿ-ಧಾರವಾಡ ಕೇಂದ್ರ ಕ್ಷೇತ್ರದಲ್ಲಿಯೇ ಅತೀ ಹೆಚ್ಚು 53 ಸಾವಿರ ಮತಗಳು ಬಿಜೆಪಿಗೆ ಮುನ್ನಡೆಯಾಗಿ ಸಿಕ್ಕಿದ್ದು, ಬಿಜೆಪಿಯ ಗೆಲುವನ್ನು ಖಚಿತ ಪಡಿಸಿತು. ಕಲಘಟಗಿ-38 ಸಾವಿರ, ಹು-ಧಾ ಪಶ್ಚಿಮ-52 ಸಾವಿರ, ಧಾರವಾಡ ಗ್ರಾಮೀಣ-24 ಸಾವಿರ,
ಕುಂದಗೋಳ-20 ಸಾವಿರ, ಶಿಗ್ಗಾವಿ-18 ಸಾವಿರ, ಹಾಗೂ ನವಲಗುಂದ-283 ಮತಗಳು ಬಿಜೆಪಿಗೆ ಮುನ್ನಡೆಯಾಗಿ ಸಿಕ್ಕವು. ಹು-ಧಾ ಪೂರ್ವ ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್‌ಗೆ 6296 ಮತಗಳ ಲೀಡ್‌ ಸಿಕ್ಕಿದ್ದು, ಉಳಿದೆಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿ ಬಹುದೊಡ್ಡ ಅಂತರದ ಗೆಲುವಿಗೆ ನಾಂದಿ ಬರೆಯಿತು.

ಪ್ರಧಾನಿ ನರೇಂದ್ರ ಮೋದಿ ಅವರ ಆಶೀರ್ವಾದ, ಅಭಿವೃದಿಟಛಿ, ಸಜ್ಜನಿಕೆ ಮತ್ತು ಕ್ಷೇತ್ರದಲ್ಲಿ ನಾನು ಮಾಡಿದ ಕೆಲಸಕ್ಕೆ ಜಯ ಸಿಕ್ಕಿದೆ. ಸಮ್ಮಿಶ್ರ ಸರ್ಕಾರ ಅಪವಿತ್ರ ಎನ್ನುವುದನ್ನು ಮತದಾರರು ಮತ್ತೂಮ್ಮೆ ಸಾಬೀತು ಪಡಿಸಿದ್ದಾರೆ. ಇದು ಜಾತಿ ರಾಜಕಾರಣದ ಸೋಲು.
– ಸಂಸದ ಪ್ರಹ್ಲಾದ ಜೋಶಿ

ಮತದಾರರು ನೀಡಿದ ತೀರ್ಪನ್ನು ನಾನು ತಲೆಬಾಗಿ ಸ್ವೀಕರಿಸುತ್ತೇನೆ. ಇಲ್ಲಿ ಪ್ರಹ್ಲಾದ ಜೋಶಿ ಅವರು ಗೆದ್ದಿಲ್ಲ, ಬದಲಿಗೆ ಮೋದಿಯವರ ಅಲೆ ಅವರನ್ನು ಗೆಲ್ಲಿಸಿದೆ ಅಷ್ಟೆ. ನನ್ನ ಜನಸೇವೆ ನಾನು ಅಧಿಕಾರದಲ್ಲಿ ಇಲ್ಲದಿದ್ದರೂ ಮುಂದುವರಿಯುತ್ತದೆ.
-ವಿನಯ್‌ ಕುಲಕರ್ಣಿ,
ಸೋತ ಅಭ್ಯರ್ಥಿ (ಕಾಂಗ್ರೆಸ್‌ )

ಗೆಲುವಿಗೆ 3 ಕಾರಣ
1.ಪ್ರಧಾನಿ ನರೇಂದ್ರ ಮೋದಿ ಅವರ ಸುನಾಮಿ ಅಲೆ ಜತೆಗೆ
ವ್ಯವಸ್ಥಿತ ಪ್ರಚಾರ ಅಬ್ಬರ
3.ಲಿಂಗಾಯತರು ಮತ್ತಷ್ಟು ಗಟ್ಟಿಯಾಗಿ ಬಿಜೆಪಿ ಬೆಂಬಲಕ್ಕೆ ನಿಲ್ಲು ವಂತೆ ಮಾಡಿದ ತಂತ್ರ ಜಾತಿಬೇಧ ಮರೆತು
2.ಯುವಕರು ಮೋದಿ ಹಾಗೂ ಬಿಜೆಪಿ ಬೆನ್ನಿಗೆ ನಿಂತಿದ್ದು

ಸೋಲಿಗೆ 3 ಕಾರಣ
1. ಕೊನೆ ಕ್ಷಣದಲ್ಲಿ ಟಿಕೆಟ್‌ ನೀಡಿದ್ದರಿಂದ ಕೈ ಅಭ್ಯರ್ಥಿಗೆ
ಜನಮನ ತಲುಪಲು ಆಗಲಿಲ್ಲ
2.ಕಾಂಗ್ರೆಸ್‌ ಪಕ್ಷದಲ್ಲಿನ ಒಳಜಗಳ ಮತ್ತು ಗುಂಪುಗಾರಿಕೆ, ಪ್ರಚಾರಕ್ಕೆ ಕಡಿಮೆ ಅವಧಿ ಸಿಕ್ಕಿದ್ದು
3.ಪ್ರಚಾರಕ್ಕೆ ಗಾಂಧಿ ಕುಟುಂಬ ಮತ್ತು ಸ್ಟಾರ್‌ ಕ್ಯಾಂಪೇನರ್‌
ಗಳು ಬರಲೇ ಇಲ್ಲ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ