ಗಂಜಿ ಕೆಂದ್ರದಲ್ಲಿ ಜ್ವರದಿಂದ ಮೃತಪಟ್ಟ 5 ವರ್ಷದ ಬಾಲಕ

Team Udayavani, Sep 10, 2019, 11:10 AM IST

ಬೆಳಗಾವಿ: ರಾಮದುರ್ಗ ತಾಲುಕಿನ ಸುರೇಬಾನ ಗಂಜಿ ಕೆಂದ್ರದಲ್ಲಿ ಜ್ವರದಿಂದ ಬಳಲುತ್ತಿದ್ದ ಬಾಲಕನೋರ್ವ ಸಾವನ್ನಪ್ಪಿರುವ ಘಟನೆ ನಡೆದಿದೆ.

5 ವರ್ಷದ ಬಾಲಕ ಅಬ್ದುಲ್ ಸಾಬ್ ಮುಲ್ಲಾನವರ ಮೃತ ದುರ್ದೈವಿ.

ದೊಡ್ಡ ಹಂಪಿಹೊಳಿ ಗ್ರಾಮದಲ್ಲಿ ನೆರೆ ಹಾವಳಿಯಿಂದ ಮನೆ ಬಿದ್ದಿರುವ ಕಾರಣ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸುರೇಬಾನ್ ಗ್ರಾಮದ ಎಪಿಎಂಸಿ ಆವರಣದಲ್ಲಿ ಬಾಲಕನ ಕುಟುಂಬದವರು ವಾಸವಿದ್ದರು.

ರಾಮದುರ್ಗ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ವೈದ್ಯರ ನಿರ್ಲಕ್ಷದಿಂದ ಬಾಲಕ ಮೃತಪಟ್ಟಿದ್ದಾನೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

5 ಲಕ್ಷ ಪರಿಹಾರ ಘೋಷಣೆ
ರಾಮದುರ್ಗದ ಸುರೇಬಾನ ಕಾಳಜಿ ಕೇಂದ್ರದಲ್ಲಿ ಮೃತಪಟ್ಟ 5 ವರ್ಷದ ಬಾಲಕನ ಕುಟುಂಬಸ್ಥರಿಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ 5 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ