ಗುದ್ದಲಿಪೂಜೆ ನಡೆದು 6 ತಿಂಗಳು; ರಸ್ತೆ ಕಾಮಗಾರಿ ಅಪೂರ್ಣ

ಕಡ್ತಲ ಗ್ರಾಮ ಪಂಚಾಯತ್‌-ವರಂಗ ಗ್ರಾಮ ಪಂಚಾಯತ್‌ ವ್ಯಾಪ್ತಿಗೆ ಸಂಪರ್ಕ ಕಲ್ಪಿಸುವ  ಮೂರ್ಸಾಲು ಮುನಿಯಾಲು ರಸ್ತೆ

Team Udayavani, May 29, 2020, 5:37 AM IST

ಗುದ್ದಲಿಪೂಜೆ ನಡೆದು 6 ತಿಂಗಳು; ರಸ್ತೆ ಕಾಮಗಾರಿ ಅಪೂರ್ಣ

ಅಜೆಕಾರು: ಕಡ್ತಲ ಗ್ರಾಮ ಪಂಚಾಯತ್‌ ಹಾಗೂ ವರಂಗ ಗ್ರಾಮ ಪಂಚಾಯತ್‌ ವ್ಯಾಪ್ತಿಗೆ ಸಂಪರ್ಕ ಕಲ್ಪಿಸುವ  ಮೂರ್ಸಾಲು ಮುನಿಯಾಲು ರಸ್ತೆಯನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ 2019ರ ಡಿಸೆಂಬರ್‌ ತಿಂಗಳಿನಲ್ಲಿ ಗುದ್ದಲಿಪೂಜೆ ನಡೆಸಲಾಗಿದ್ದು, 6 ತಿಂಗಳು ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ.

ಗುದ್ದಲಿಪೂಜೆಯ ಅನಂತರ ಹಳೆಯ ಡಾಮರು ಅಗೆದು ತೆಗೆಯಲಾಗಿದೆ. ಕಾಂಕ್ರೀಟ್‌ ಕಾಮಗಾರಿ ಮಾತ್ರ ನಡೆದಿಲ್ಲ. ಅಗೆದ ರಸ್ತೆ ಭಾಗಕ್ಕೆ ಜಲ್ಲಿ ಕಲ್ಲು ಹಾಕಿ ಕಾಮಗಾರಿ ಸ್ಥಗಿತಗೊಳಿಸಿರುವುದರಿಂದ ಸ್ಥಳೀಯರಿಗೆ ಸಂಚಾರಕ್ಕೆ ತೀವ್ರ ಸಂಕಷ್ಟ ಉಂಟಾಗಿದೆ.

ಕಡ್ತಲ  ಮೂರ್ಸಾಲು ಮುನಿಯಾಲು ಸಂಪರ್ಕ ರಸ್ತೆಯ ಸುಮಾರು 2 ಕಿ.ಮೀ. ಭಾಗ ಸಂಪೂರ್ಣ ಹದಗೆಟ್ಟಿದ್ದು ಅಭಿವೃದ್ಧಿಪಡಿಸುವಂತೆ ಸ್ಥಳೀಯರು ದಶಕಗಳಿಂದ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮನವಿ ಮಾಡುತ್ತ ಬಂದಿದ್ದರು.

ಸ್ಥಳೀಯಾಡಳಿತ ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ಸುಮಾರು 1 ಕಿ.ಮೀ. ಭಾಗಕ್ಕೆ ಕಾಂಕ್ರೀಟ್‌ ಅಳವಡಿಸುವ ಬಗ್ಗೆ ಶಾಸಕರ ಮೂಲಕ ಅನುದಾನ ಒದಗಿಸಿತ್ತು. ಅದರಂತೆ ಹಳೆಯ ರಸ್ತೆಯನ್ನು ಅಗೆದು ತೆರವುಗೊಳಿಸಿದ ಗುತ್ತಿಗೆದಾರರು ಮತ್ತೆ ಕಾಮಗಾರಿ ಪ್ರಾರಂಭಿಸಿಲ್ಲ.

ಮಳೆಗಾಲದಲ್ಲಿ ಸಂಚಾರ ಕಷ್ಟ
ರಸ್ತೆ ಅಗೆದು ಜಲ್ಲಿಕಲ್ಲುಗಳನ್ನು ರಾಶಿ ಹಾಕಿರುವು ದರಿಂದ ಮಳೆಗಾಲದಲ್ಲಿ ರಸ್ತೆಯಲ್ಲಿಯೇ ನೀರು ಶೇಖರಗೊಳ್ಳುವುದರಿಂದ ಸ್ಥಳೀಯರು ವಾಹನದಲ್ಲಿ ಸಂಚಾರ ನಡೆಸುವುದು ಅಸಾಧ್ಯವಾಗಿದೆ. ಈಗಾಗಲೇ ಈ ಪ್ರದೇಶದಲ್ಲಿ ಪ್ರತಿನಿತ್ಯ ಮಳೆ ಸುರಿಯಲು ಪ್ರಾರಂಭವಾಗಿದೆ. ಈ ಭಾಗದ ನಾಗರಿಕರು ನಿತ್ಯ ವ್ಯವಹಾರಕ್ಕೆ ಕಡ್ತಲ ಹಾಗೂ ಮುನಿಯಾಲು ಪೇಟೆಯನ್ನು ಅವಲಂಬಿಸಿದ್ದು ರಸ್ತೆ ಅವ್ಯವಸ್ಥೆಯಿಂದಾಗಿ ಸಮಸ್ಯೆಗೆ ಸಿಲುಕಿದ್ದಾರೆ.

ಪ್ರತಿಭಟನೆಗೆ ಸಿದ್ಧತೆ
ರಸ್ತೆ ಕಾಮಗಾರಿ ನಡೆಸದೆ ಸ್ಥಳೀಯರಿಗೆ ಸಂಕಷ್ಟ ಉಂಟುಮಾಡಿದ ಗುತ್ತಿಗೆದಾರ ಹಾಗೂ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಲು ಸ್ಥಳೀಯರು ಸಿದ್ಧತೆ ನಡೆಸಿದ್ದರಾದರೂ ಕೊರೊನಾ ವಿರುದ್ಧ ಲಾಕ್‌ಡೌನ್‌ ಇರುವುದರಿಂದ ಪ್ರತಿಭಟನೆ ನಡೆಸಿರಲಿಲ್ಲ. ವಾರದೊಳಗೆ ಕಾಮಗಾರಿ ಪ್ರಾರಂಭ ಮಾಡದಿದ್ದಲ್ಲಿ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಸ್ಥಳೀಯರು ತಿಳಿಸಿದ್ದಾರೆ.

ಕಾಮಗಾರಿ ನಡೆಸದ ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಮಳೆಗಾಲ ಪ್ರಾರಂಭಗೊಳ್ಳುವ ಮೊದಲು ರಸ್ತೆ ಕಾಮಗಾರಿ ಪೂರ್ಣಗೊಳಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

ಗುತ್ತಿಗೆದಾರರಿಗೆ ನೋಟಿಸ್‌ ನೀಡಲಾಗಿದೆ
ಗುತ್ತಿಗೆದಾರರಿಗೆ ಈಗಾಗಲೇ ನೋಟಿಸ್‌ ನೀಡಲಾಗಿದ್ದು ಕಾಮಗಾರಿ ಪೂರ್ಣಗೊಳಿಸುವುದಾಗಿ ಹೇಳಿದ್ದಾರೆ. ತ್ವರಿತ ಕಾಮಗಾರಿ ನಡೆಸಲು ಮತ್ತೆ ಸೂಚಿಸಲಾಗುವುದು.
-ಸುನಿಲ್‌ ಕುಮಾರ್‌, ಶಾಸಕರು

ಕಾಮಗಾರಿ ಪೂರ್ಣಗೊಳಿಸುವಂತೆ ಸೂಚನೆ
ಸ್ಥಗಿತಗೊಂಡ ಕಾಮಗಾರಿಯನ್ನು ಮಳೆಗಾಲದ ಒಳಗೆ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗುವುದು. ಕಾಮಗಾರಿ ನಡೆಸದಿದ್ದಲ್ಲಿ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಂಡು ರಸ್ತೆಯ ಜಲ್ಲಿ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು. ಅನಂತರ ರಸ್ತೆ ಅಭಿವೃದ್ಧಿಪಡಿಸಲಾಗುವುದು.
-ಸುಂದರ್‌,
ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌, ಕಾರ್ಕಳ

ಸಂಕಷ್ಟ
ಗುತ್ತಿಗೆದಾರರ ನಿರ್ಲಕ್ಷ್ಯದಿಂದಾಗಿ ರಸ್ತೆ ಕಾಮಗಾರಿ ಪೂರ್ಣಗೊಂಡಿಲ್ಲ. ಈ ಬಗ್ಗೆ ನಿರಂತರ ಪ್ರಯತ್ನಪಟ್ಟರೂ ನಿಷ್ಪ್ರಯೋಜಕವಾಗಿದೆ. ಮಳೆಗಾಲದಲ್ಲಿ  ಮೂರ್ಸಾಲು ಭಾಗದ ಜನತೆಗೆ ತೀವ್ರ ಸಂಕಷ್ಟ ಉಂಟಾಗಲಿದೆ.
-ಅರುಣ್‌ ಕುಮಾರ್‌ ಹೆಗ್ಡೆ, ಅಧ್ಯಕ್ಷರು,
ಕಡ್ತಲ ಗ್ರಾಮ ಪಂಚಾಯತ್‌

ಟಾಪ್ ನ್ಯೂಸ್

Ankola-Cm

Hill Slide: ಶಿರೂರಿಗೆ ಸಿಎಂ ಸಿದ್ದರಾಮಯ್ಯ ಭೇಟಿ, ರಕ್ಷಣಾ ಕಾರ್ಯ ಪರಿಶೀಲನೆ

1—ddsdsa

1 Second ಮಹತ್ವ!; ಚಿಕ್ಕಮಗಳೂರಿನಲ್ಲಿ ಚಲಿಸುತ್ತಿದ್ದ ಕಾರಿನ ಬಾನೆಟ್ ಮೇಲೆ ಬಿದ್ದ ಬೃಹತ್ ಮರ

13

Guru Purnima Spcl: ತಾಯಿ ಜನ್ಮ ಕೊಟ್ಟಳು, ಗುರು ಪುನರ್ಜನ್ಮಕೊಟ್ಟರು!

Tharun Sudhir:‌ ತನ್ನ ಜೀವನದ ಹೀರೋಯಿನ್ ಪರಿಚಯಿಸಲು ರೆಡಿಯಾದ ತರುಣ್‌ ಸುಧೀರ್

Tharun Sudhir:‌ ತನ್ನ ಜೀವನದ ಹೀರೋಯಿನ್ ಪರಿಚಯಿಸಲು ರೆಡಿಯಾದ ತರುಣ್‌ ಸುಧೀರ್

Nipha

Nipah virus; ನಿಫಾ ಸೋಂಕಿಗೆ 14 ವರ್ಷದ ಕೇರಳ ಬಾಲಕ ಮೃತ್ಯು

ರಿಲೀಸ್‌ಗೂ ಮುನ್ನವೇ ಟೊವಿನೋ ಥಾಮಸ್ ʼAjayante Randam Moshanamʼ ಚಿತ್ರಕ್ಕೆ ಕಾನೂನು ಕಂಟಕ

ರಿಲೀಸ್‌ಗೂ ಮುನ್ನವೇ ಟೊವಿನೋ ಥಾಮಸ್ ʼAjayante Randam Moshanamʼ ಚಿತ್ರಕ್ಕೆ ಕಾನೂನು ಕಂಟಕ

CM Siddaramaiah resorting to blackmail strategy is ridiculous: V Sunil Kumar

CM Siddaramaiah ಬ್ಲ್ಯಾಕ್ ಮೇಲ್ ತಂತ್ರಕ್ಕೆ ಮುಂದಾಗಿರುವುದು ಹಾಸ್ಯಾಸ್ಪದ: ಸುನೀಲ್ ಕುಮಾರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi; ಕಡಲ್ಕೊರೆತ ಪ್ರದೇಶಗಳಿಗೆ ಸಚಿವೆ ಲಕ್ಷ್ಮೀ‌ ಹೆಬ್ಬಾಳ್ಕರ್ ಭೇಟಿ

Udupi; ಕಡಲ್ಕೊರೆತ ಪ್ರದೇಶಗಳಿಗೆ ಸಚಿವೆ ಲಕ್ಷ್ಮೀ‌ ಹೆಬ್ಬಾಳ್ಕರ್ ಭೇಟಿ

Kota-poojary

CM Siddaramaiah; ನನ್ನ ಮೇಲಿನ ಆರೋಪವನ್ನು ಹಿಂಪಡೆಯಬೇಕು: ಕೋಟ

1-sadsad

Udupi ಪ್ರವಾಹ ನಿಗಾಕ್ಕೆ ವಿಶೇಷ ಟಾಸ್ಕ್ ಫೋರ್ಸ್‌ ರಚನೆ

1-asaas

Udupi ಪ್ರವಾಸೋದ್ಯಮ: ನಿನ್ನೆ, ಇಂದು, ನಾಳೆ ವಿಚಾರಗೋಷ್ಠಿ

Kapu-Accident

Kapu: ಬೈಕ್‌ -ಕಾರು ಮುಖಾಮುಖಿ ಢಿಕ್ಕಿ; ಬೈಕ್‌ ಸವಾರ ಮೃತ್ಯು

MUST WATCH

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

udayavani youtube

ಅಘನಾಶಿನಿ ಆರ್ಭಟ

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

ಹೊಸ ಸೇರ್ಪಡೆ

Ankola-Cm

Hill Slide: ಶಿರೂರಿಗೆ ಸಿಎಂ ಸಿದ್ದರಾಮಯ್ಯ ಭೇಟಿ, ರಕ್ಷಣಾ ಕಾರ್ಯ ಪರಿಶೀಲನೆ

Guru Purnima Spcl: ವೈಎನ್‌ಪಿ ಎಂಬ ಅಪರೂಪದ ಶಿಕ್ಷಕರು

Guru Purnima Spcl: ವೈಎನ್‌ಪಿ ಎಂಬ ಅಪರೂಪದ ಶಿಕ್ಷಕರು

1—ddsdsa

1 Second ಮಹತ್ವ!; ಚಿಕ್ಕಮಗಳೂರಿನಲ್ಲಿ ಚಲಿಸುತ್ತಿದ್ದ ಕಾರಿನ ಬಾನೆಟ್ ಮೇಲೆ ಬಿದ್ದ ಬೃಹತ್ ಮರ

13

Guru Purnima Spcl: ತಾಯಿ ಜನ್ಮ ಕೊಟ್ಟಳು, ಗುರು ಪುನರ್ಜನ್ಮಕೊಟ್ಟರು!

Guru Purnima: ಅವರ ಜೀವನವೇ ನನಗೊಂದು ಸಂದೇಶ

Guru Purnima: ಅವರ ಜೀವನವೇ ನನಗೊಂದು ಸಂದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.