ಬರೋಬ್ಬರಿ ಏಳು ಕೆಜಿ ತೂಕದ ಗೆಣಸು ಬೆಳೆದ ರೈತ
Team Udayavani, Jan 13, 2021, 5:50 PM IST
ಮಹಾಲಿಂಗಪುರ: ಚಿಮ್ಮಡ ಗ್ರಾಮದ ಪ್ರಭುಲಿಂಗೇಶ್ವರ ದೇವಸ್ಥಾನ ಹತ್ತಿರದ ಸುಲೋಚನಾ ದುಂಡಪ್ಪ ಉರಬಿನ್ನವರ
ತೋಟದಲ್ಲಿ ರೈತ ಭೀಮಪ್ಪ ರುದ್ರನ್ನವರ ಏಳು ಕೆಜಿ ಗೆಣಸು ಬೆಳೆದು ಅಚ್ಚರಿ ಮೂಡಿಸಿದ್ದಾರೆ.
10 ಗುಂಟೆ ಜಾಗದಲ್ಲಿ 16 ಕ್ವಿಂಟಲ್ ಗೆಣಸು ಬೆಳೆದಿದ್ದಾರೆ. ಸಾಮಾನ್ಯವಾಗಿ ಪ್ರತಿ ಗೆಣಸುಗಳು 250 ಗ್ರಾಂನಿಂದ 500 ಗ್ರಾಂ ತೂಕ
ಹೊಂದಿರುತ್ತವೆ. ಆದರೆ, ರೈತ ಭೀಮಪ್ಪ ಬೆಳೆದ ಗೆಣಸು ಏಳು ಕೆಜಿ ತೂಕ ಹೊಂದಿದೆ. ಸಾವಯವ ಪದ್ಧತಿ ಮೂಲಕ ಬೆಳೆ ಬೆಳೆದಿರುವ ಇವರು ತಾವೇ ಸ್ವತಃ ಸಂತೆಗಳಿಗೆ ತೆರಳಿ ಮಾರಾಟ ಮಾಡುವ ಮೂಲಕ ಅದರಲ್ಲಿಯೇ ಸುಮಾರು 50 ಸಾವಿರಕಿಂತ ಹೆಚ್ಚು ಲಾಭ ಗಳಿಸಿದ್ದಾರೆ.
ಇದನ್ನೂ ಓದಿ:ಮಂಡಲ ಪಂಚಾಯತ್ ವ್ಯವಸ್ಥೆ ಸಂಪೂರ್ಣ ಹಾಳು ಮಾಡಿದ್ದೇ ಕಾಂಗ್ರೆಸ್; ಕಾರಜೋಳ