ಫುಟ್ ಬಾಲ್ ಪಂದ್ಯದ ವೇಳೆ ನೂಕುನುಗ್ಗಲು: 8 ಸಾವು
Team Udayavani, Jan 25, 2022, 11:20 PM IST
ಯೋಂಡೆ (ಕ್ಯಾಮರೂನ್): ಕ್ಯಾಮರೂನ್ ರಾಜಧಾನಿ ಯೋಂಡೆಯಲ್ಲಿ ಫುಟ್ಬಾಲ್ ಪಂದ್ಯ ನಡೆಯುತ್ತಿದ್ದ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತಕ್ಕೆ ಕನಿಷ್ಠ 8 ಮಂದಿ ಮೃತಪಟ್ಟಿದ್ದು, 50ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ದುರ್ಘಟನೆ ಸಂಭವಿಸಿದೆ.
“ಆಫ್ರಿಕನ್ ಕಪ್ ಆಫ್ ನೇಶನ್ಸ್’ ಪಂದ್ಯಾವಳಿಯ ಕೊನೆಯ ನಾಕೌಟ್ ಪಂದ್ಯದಲ್ಲಿ ಆತಿಥೇಯ ಕ್ಯಾಮರೋಸ್ ತಂಡ ಆಡುವುದನ್ನು ಕಣ್ತುಂಬಿಕೊಳ್ಳಲು ಭಾರೀ ಸಂಖ್ಯೆಯ ವೀಕ್ಷಕರು ಮುಂದಾಗಿದ್ದರು.
ಆಗ ನೂಕುನುಗ್ಗಲು ಉಂಟಾದಾಗ ಕಾಲ್ತುಳಿತ ಸಂಭವಿಸಿತು ಎಂದು ಪ್ರಾಥಮಿಕ ವರದಿಯಲ್ಲಿ ತಿಳಿಸಲಾಗಿದೆ.