20 ಲಕ್ಷ ಮಂದಿಗೆ ಅನ್ನ ನೀಡಿ, ಮಾನವೀಯತೆ ಮೆರೆದ ಖೈರಾ ಬಾಬಾ

Team Udayavani, Jun 4, 2020, 6:19 PM IST

20 ಲಕ್ಷ ಮಂದಿಗೆ ಅನ್ನ ನೀಡಿ, ಮಾನವೀಯತೆ ಮೆರೆದ ಖೈರಾ ಬಾಬಾ

ಕೋವಿಡ್‌-19 ವೈರಸ್‌ ಹಾವಳಿಯಿಂದಾಗಿ ದೇಶದಲ್ಲಿ ಘೋಷಣೆಗೊಂಡ ಲಾಕ್‌ಡೌನ್‌ನಿಂದಾಗಿ ಲಕ್ಷಾಂತರು ಜನರು ನಿರಾಶ್ರಿತರಾದರು. ಊಟವಿಲ್ಲದೇ ನರಾಳಿಡಿದರು. ತಮ್ಮ ಊರು, ಮನೆ ಸೇರುವುದಕ್ಕಾಗಿ ಬಸ್‌, ರೈಲು ಇಲ್ಲದೇ ಸಾವಿರಾರು ಕಿ.ಮೀ. ಬರಿಗಾಲಿನಲ್ಲಿ ನಡೆದರು. ಇದಕ್ಕಾಗಿ ಹರಸಾಹಸಪಟ್ಟರು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಹಲವಾರು ಸಂಘ ಸಂಸ್ಥೆಗಳು, ವ್ಯಕ್ತಿಗಳು ದೇವರಂತೆ ನೆರವಿಗೆ ಧಾವಿಸಿದರು. ಊಟ, ವಸತಿ ನೀಡಿ ಕಷ್ಟಕಾಲದಲ್ಲಿ ಕಲ್ಪವೃಕ್ಷವಾದರು. ಅಂತೆಯೇ ಇದೇ ರೀತಿ ಮಹಾರಾಷ್ಟ್ರದಲ್ಲಿ 81 ವರ್ಷದ ವೃದ್ಧರೊಬ್ಬರು ಸುಮಾರು 20 ಲಕ್ಷಕ್ಕೂ ಅಧಿಕ ನಿರಾಶ್ರಿತರಿಗೆ ಅನ್ನ ನೀಡಿ, ಸಂಕಷ್ಟದಲ್ಲಿರುವವರಿಗೆ ಅನ್ನದಾತರಾಗಿದ್ದಾರೆ.

ಸ್ಥಳೀಯವಾಗಿ ಖೈರಾ ಬಾಬಾ ಎಂದೇ ಪ್ರಸಿದ್ಧರಾಗಿರುವ ಮತ್ತು ಮಹಾರಾಷ್ಟ್ರದ ಕರಂಜಿಯ ಗುರುದ್ವಾರದ ಮುಖ್ಯಸ್ಥರಾಗಿರುವ ಬಾಬಾ ಕರ್ನಲ್‌ ಸಿಂಗ್‌ ಖೈರಾ ಎನ್ನುವವರು ರಾಷ್ಟ್ರೀಯ ಹೆದ್ದಾರಿ 7ರ ಪಕ್ಕದಲ್ಲಿ ಒಂದು ಗುಡಿಸಲಿನಲ್ಲಿ ಉಚಿತವಾಗಿ ಊಟವನ್ನು ನೀಡುವ ಮೂಲಕ ಮಾನವೀಯತೆ ಮರೆದಿದ್ದಾರೆ.

ಕರಂಜಿಯ ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಬಾಬಾ ಅವರು ನೀಡುವ ಉಚಿತ ಆಹಾರದ ಶೆಡ್‌ನ್ನು ಹೊರತುಪಡಿಸಿ, ವ್ಯಾಪ್ತಿಯ 450 ಕಿ.ಮೀ. ಸುತ್ತ ಮುತ್ತ ಎಲ್ಲಿಯೂ ಊಟ, ನೀರು ಸಿಗುವುದಿಲ್ಲ. ಯಾವುದೇ ರೆಸ್ಟೋರೆಂಟ್‌, ಹೋಟೆಲ್‌ಗ‌ಳಿಲ್ಲ. ಇದು ಅರಣ್ಯ ಪ್ರದೇಶವಾಗಿದೆ. ಈ ಅರಣ್ಯದಲ್ಲಿ ನಡೆದುಕೊಂಡು ನಿರಾಶ್ರಿತರು, ಬಡವರು ಹಸಿವಿನಿಂದ ಬಳಲುತ್ತಿರುವುದನ್ನು ಗಮನಿಸಿದ ಸಿಖ್‌ ಸಮುದಾಯ. ಇಲ್ಲಿನ ಗುರುದ್ವಾರದ ಸಮಿತಿಯ ವತಿಯಿಂದ ಆಹಾರ ಒದಗಿಸುವ ನಿರ್ಣಯಕ್ಕೆ ಬರಲಾಯಿತು. ತರುವಾಯ ದೇಣಿಗೆ, ಸಹಕಾರವೂ ಕೂಡ ಪ್ರವಾಹದಂತೆ ಹರಿದುಬಂತು.

ಬಾಬಾ ಅವರ ಈ ಅದಮ್ಯ ಸೇವೆಗೆ ಇಡೀ ಪ್ರದೇಶದಲ್ಲಿನ ಸಿಕ್ಖ್ ಸಮುದಾಯವೂ ಸಂಪೂರ್ಣ ಸಹಕಾರ ನೀಡಿದೆ. ಅಲ್ಲದೇ ಅಮೆರಿಕದ ನ್ಯೂಜೆರ್ಸಿಯಲ್ಲಿ ವಾಸಿಸುತ್ತಿರುವ ಖೈರಾ ಬಾಬಾ ಅವರ ಅಣ್ಣನಾದ ಗುರುಬಾಕ್ಸ್‌ ಸಿಂಗ್‌ ಖೈರಾ ಅವರು ಕೂಡ ಈ ಸೇವೆಗೆ ನೆರವಾಗಿದ್ದಾರೆ. ಅಲ್ಲದೇ ಅಮೆರಿಕ, ಪಾಂರ್ಡಖ್‌ವಾಡ ಸಿಖ್‌ ಸಮುದಾಯದವರು ಅಪಾರ ಪ್ರಮಾಣದ ನೆರವು ನೀಡಿವೆ.

ಸುಮಾರು 10 ವಾರಗಳ ಬಳಿಕ ಗುರುದ್ವಾರದ ಲಂಗರ್‌ನಲ್ಲಿ ಸುಮಾರು 15 ಲಕ್ಷ ಬಳಕೆ ಮಾಡಿ ಬಿಸಾಡುವ ಪ್ಲೇಟ್‌ಗಳನ್ನು ಬಿದ್ದಿರುವುದನ್ನು ಸಮಿಯೂ ಗಮನಿಸಿದೆ. ಅಲ್ಲದೇ ಸುಮಾರು 5 ಲಕ್ಷಕ್ಕೂ ಅಧಿಕ ಜನ ಊಟ, ಉಪಾಹಾರವನ್ನು ಪಾರ್ಸೆಲ್‌ ತೆಗೆದುಕೊಂಡು ಹೋಗಿದ್ದಾರೆ. ಹೀಗೆ ಸುಮಾರು 20 ಲಕ್ಷಕ್ಕೂ ಅಧಿಕ ಮಂದಿಗೆ 81ರ ವೃದ್ಧ ಖೈರಾ ಬಾಬಾ ಅವರು ಅನ್ನ ದಾಸೋಹ ಮಾಡಿ ಮಾನವೀಯತೆ ಮರೆದಿದ್ದಾರೆ.

ನಿರಂತರ ಅನ್ನ ದಾಸೋಹ
ದಿನದ ಮೂರು ಸಮಯದಲ್ಲಿ ಕೂಡ ನಿರಂತರ ಅನ್ನ ದಾಸೋಹವನ್ನು ಮಾಡಲಾಗುತ್ತಿದೆ. ಬೆಳಗ್ಗಿನ ಉಪಾಹಾರದ ಜತೆಗೆ ಟೀ ಬಿಸ್ಕೀಟ್‌ ನೀಡಲಾಗುತ್ತಿದೆ. ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ಪ್ಲೇನ್‌ ರೈಸ್‌, ದಾಲ್‌, ಅಲೂ ವಾಡಿ ನೀಡಲಾಗುತ್ತದೆ. ಜತೆಗೆ ಕುಡಿಯಲು ಶುದ್ಧ ಕುಡಿಯುವ ನೀರು ನೀಡುತ್ತಿದ್ದು, ಶೌಚ, ಸ್ನಾನಕ್ಕೆ ಬೋರವೆಲ್‌ ನೀರು ಒದಗಿಸಲಾಗುತ್ತಿದೆ. ಇದು ಈ ಗೊಂಡಾರಣ್ಯದಲ್ಲಿನ ಈ ಸೇವೆ ಪಡೆದ ಅನೇಕರು ಇವರನ್ನು ಸ್ಮರಿಸುತ್ತಿದ್ದಾರೆ.

-ಮಂಜು ಸಾಹುಕಾರ್‌, ಮಾನವಿ

ಟಾಪ್ ನ್ಯೂಸ್

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-fusion

Rural Life: ಗ್ರಾಮೀಣ ಬದುಕಿನ ಮೆಲುಕು

13-uv-fusion

MOTHER: ತಾಯಿಗಿಂತ ಮಿಗಿಲಾದ ದೇವರಿಲ್ಲ

12–uv-fusion

Village Life: ಅಪರೂಪವೆನಿಸುತ್ತಿರುವ ಹಳ್ಳಿಗಾಡಿನ ಜೀವನ

10-screenshot

Students Notes: ಸ್ಕ್ರೀನ್‌ ಶಾರ್ಟ್‌ಗಳೆಂದು ಪುಸ್ತಕವಾಗದಿರಲಿ

8-uv-fusion

Photography: ನಿಮ್ಮ ಬೊಗಸೆಯಲ್ಲಿ ಇರಲಿ ನೆನಪುಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

14-fusion

Rural Life: ಗ್ರಾಮೀಣ ಬದುಕಿನ ಮೆಲುಕು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.