Udayavni Special

ಬಾಲ್ಯದ ನೆನಪು: ಅಂದು ಮಂಗಳೂರು ಟು ಮುಂಬೈ ಹಡಗಿನಲ್ಲಿ ಪ್ರಯಾಣ…

ವಿ.ಟಿ. ಯಿಂದ ವಿಕ್ಟೋರಿಯಾದಲ್ಲಿ ಕ್ಲಕ್‌ ಕ್ಲಕ್‌ ಎನ್ನುತ್ತಾ ಒಂದು ರೂ. ಹನ್ನೆರಡಾಣೆಗೆ ಭವ್ಯ ಹಳೆ ಮುಂಬಯಿ ದರ್ಶನ

Team Udayavani, Jan 14, 2021, 12:39 PM IST

ಮುಂಬಯಿ ಮಹಾನಗರವೆಂಬ ಜೀವನಾನುಬಂಧ

ಬಾಲ್ಯದಲ್ಲಿ ಹಿರಿಯ ಬಂಧುಗಳು ಮಂಗಳೂರಿನಿಂದ ಹಡಗೇರಿ ಮುಂಬಯಿಗೆ ಹೊರಡುತ್ತಿದ್ದರೆ, ಆ ಹಡಗು ಪಯಣ ಒಂದಿನ ನನ್ನದೂ ಆಗಬಹುದೆಂದು ಕಾಯುತ್ತಿದ್ದವಳು ನಾನು. ಆದರೆ ಮದುವೆಯಾಗಿ ಮತ್ತೆರಡು ವರ್ಷ ಕಾಲೇಜು ವಿದ್ಯಾಭ್ಯಾಸ ಮುಗಿಸಿ ಮುಂಬಯಿಗೆ ಹೊರಡುವ ಹೊತ್ತಿಗೆ ಆ ಹಡಗುಗಳ
ಸೇವೆ ನಿಂತೇ ಹೋಗಿತ್ತು.

ಚಿಕ್ಕಮ್ಮ, ಚಿಕ್ಕಪ್ಪ ಮದುವೆಯಾಗಿ ಮುಂಬಯಿಗೆ ಹಡಗಿನಲ್ಲಿ ಹೊರಡುವಾಗ ನನಗೆ ನಿದ್ದೆಯಿಂದ ಕಣ್ಣೆಳೆದು ಬರುತ್ತಿತ್ತು. ಊಟಕ್ಕಾಗಿ ಕಾಯುತ್ತಾ, ಹಡಗಿನ ಕನಸು ಕಾಣುತ್ತಾ ಕುಳಿತಿದ್ದ ನನ್ನ ಕಣ್ಣುಗಳಲ್ಲಿ ಸಿಂದಬಾದ್‌ನ ಹಡಗೂ, ಅವನು ದ್ವೀಪವೆಂದು ಕೊಂಡು ವಿರಮಿಸಿ, ಮತ್ತದು ಚಲಿಸತೊಡಗಿದಾಗ ದ್ವೀಪವಲ್ಲ, ತಿಮಿಂಗಿಲವೆಂದರಿತ ರೋಚಕ ವಿವರವೂ ಸುಳಿಯುತ್ತಿತ್ತು.

ಬಾಲ್ಯದಲ್ಲಿ ಅಮ್ಮನಿಂದ ಬೈಸಿಕೊಂಡಾಗ, ಊರಿನ ಸಮುದ್ರ ಕಿನಾರೆಯುದ್ದಕ್ಕೂ ನಡೆದು ಮುಂಬಯಿ ಸೇರುವೆ, ಅಲ್ಲಿರುವ ಚಿಕ್ಕಪ್ಪ, ಅತ್ತೆಯಂದಿರು ನನ್ನನ್ನು ಕರೆಸಿಕೊಳ್ಳಬಹುದು ಎಂದುಕೊಂಡ ವಯಸ್ಸಿನಲ್ಲಿ ಆ ಹಾದಿಯ ನಡುವೆ ದಾಟಬೇಕಾದ ನದಿಗಳೂ, ಅಳಿವೆಗಳೂ ಬರುತ್ತವೆ ಎಂಬುದೂ ತಿಳಿದಿರಲಿಲ್ಲ!. ಪ್ರಥಮ ಮುಂಬಯಿ ಪಯಣದಲ್ಲಿ ಮಹಾನಗರ ಕಣ್ಣಿಗೆ ಬಿದ್ದಂತೇ ಗೋಚರಿಸಿದ ಕಟ್ಟಡಗಳ ಕಾಡು ಎಲ್ಲ ಉತ್ಸಾಹವನ್ನೂ ಬತ್ತಿಸಿ ಬಿಟ್ಟಿತ್ತು. ಆಗ ನೆಲೆಯಾಗಿದ್ದ ಭಾಂಡುಪ್‌ನ ನಮ್ಮ ಐದು ವಿಂಗ್‌ಗಳ, ನಾಲ್ಕು ಮಹಡಿಯ ಕಾಸ್ಮೋಪೊಲಿಟನ್‌ ವಸತಿ ಸಮುಚ್ಚಯ, ಇದೇ ಮುಂಬಯಿ ಎಂದು ವಿಶ್ವದರ್ಶನವನ್ನೇ ಮಾಡಿಸಿತ್ತು.

ಅವಕಾಶ ಸಿಕ್ಕಾಗ ನಗರದ ಪೂರ್ವ, ಪಶ್ಚಿಮ, ದಕ್ಷಿಣೋತ್ತರ ಬಂಧುಗಳಲ್ಲಿಗೆ ಹೋಗಿಬರುವುದು ಮಹಾನಗರದ ಎಲ್ಲತರದ ಜೀವನಾನುಭವ ಸಾರವಾಗಿತ್ತು. ವಿ.ಟಿ. ಯಿಂದ ವಿಕ್ಟೋರಿಯಾದಲ್ಲಿ ಕ್ಲಕ್‌ ಕ್ಲಕ್‌ ಎನ್ನುತ್ತಾ ಒಂದು ರೂ. ಹನ್ನೆರಡಾಣೆಗೆ ಭವ್ಯ ಹಳೆ ಮುಂಬಯಿ ದರ್ಶನದೊಂದಿಗೆ ಒಪೆರಾ ಹೌಸ್‌, ನಾನಾ ಚೌಕ್‌, ರೈಲಿನಲ್ಲಿ ಡೊಂಬಿವಲಿಯ ಬಂಧುಗಳಲ್ಲಿಗೆ ಪಯಣಿಸುವಾಗ ಮುದ ನೀಡುವ ಮುಂಬ್ರಾ, ದಿವಾಗಳ ಹಸುರರಾಶಿಯ, ನೀರಮಡುಗಳ ಪ್ರಕೃತಿಸಿರಿಯ
ದರ್ಶನ, ಬಾಂದ್ರಾ ಕಲಾನಗರದ ಅಜ್ಜನ ಮನೆಯಿಂದ ಶಶಿ ಕಪೂರ್‌, ರಾಜೇಶ್‌ ಖನ್ನಾ ಎಂದು ಉತ್ಸಾಹದಿಂದ ಪುಟಿಯುತ್ತಾ ಥಿಯೇಟರ್‌ಗಳಿಗೆ ಲಗ್ಗೆ, ವರ್ಲಿ, ಸಾಂತಾಕ್ರಾಸ್‌, ಗೋರೆಗಾಂವ್‌ ಗಳ ನಿಯಮಿತ ಭೇಟಿ, ವಸಾಯ್‌ಯ ಬಂಧುಗಳಲ್ಲಿಗೂ ಬಹುದೂರವೆನಿಸುವ ಪಯಣ!

ಟಿ.ವಿ. ಎಂಬ ಬ್ರಹ್ಮರಾಕ್ಷಸ ನಗರದ ಮನೆ, ಮನೆಗಳನ್ನೂ ಹೊಕ್ಕು, ಬಂಧುವರ್ಗದ ಹೊಕ್ಕುಬಳಕೆಯ ಸುಮಧುರ ಸಂಬಂಧವನ್ನು ಸ್ವಾಹಾ ಮಾಡಿತು. ದೂರವಾಣಿ ಸೌಲಭ್ಯಕ್ಕೂ ಇತಿಶ್ರೀ ಬಿದ್ದು ಮೊಬೈಲ್‌ ಎಂಬ ಚರವಾಣಿ ಎಲ್ಲ ಸಂಬಂಧವನ್ನೂ ಅಂಗೈಗೇ ಸೀಮಿತಗೊಳಿಸಿತು. ಮತೀಯ ದಂಗೆಗಳ ಹಾಲಾಹಲದಲ್ಲಿ ನಗರ ಸುಟ್ಟುಹೋಗಿ ಫಿನಿಕ್ಸ್‌ ಹಕ್ಕಿಯಂತೆ ಮತ್ತೆ ಎದ್ದು ಬಂದಾಗ, ಬಾಂಬ್‌ ಸ್ಫೋಟಕ್ಕೂ ಸಮಚಿತ್ತ ಕಳೆದುಕೊಳ್ಳದೆ ಎದ್ದು ನಿಂತಾಗ, ಮಹಾಪ್ರಳಯದಲ್ಲೂ ಮಾನವೀಯತೆಯ ಸಹೃದಯ ಸಿರಿಯನ್ನು ತೋರಿದಾಗ, ಜೀವನಶ್ರದ್ಧೆಯ, ಜೀವನೋತ್ಸಾಹದ, ಮಾನವೀಯ ಬಂಧಗಳ
ಕರ್ಮಭೂಮಿ ಎಂಬ ಧನ್ಯತಾಭಾವ ಹೃದಯವನ್ನು ತುಂಬಿತು.

ಮನೆಕೆಲಸದ ಸಹಾಯಕರ ಉಸ್ತುವಾರಿಗೆ ಮನೆಯನ್ನೇ ಬಿಟ್ಟು ಹೋಗಬಹುದಾದ ನಂಬುಗೆ, ವಿಶ್ವಾಸದ ಪ್ರತೀಕ, ನಮ್ಮ ಮುಂಬಯಿ. ಊರಿನಿಂದ ದೂರಾಗಿ ಈ ಪರನಾಡಿನಲ್ಲಿ ನನ್ನ ಕನ್ನಡನುಡಿ ಕಿವಿಗೆ ಬೀಳಲೆಂದು ಹಾತೊರೆದ ಕಾಲವೆಷ್ಟು! ಯಾರೂ ಕನ್ನಡದವರಿಲ್ಲವೇ ಎಂದು ಹೃದಯ ತಳಮಳಿಸಿದ ಬಗೆಯೆಂತು! ಮತ್ತೆ ನನ್ನ ಪ್ರಥಮ ಅನುವಾದ ಕೃತಿಯ ಲೋಕಾರ್ಪಣೆಯೊಂದಿಗೆ ಮುಂಬಯಿ ಕನ್ನಡ ಸಾಹಿತ್ಯಲೋಕದಲ್ಲಿ ಒಂದಾದ ಸಂತಸ, ಸಂಭ್ರಮದ ಪರಿ ಎಂತಹುದು!

ನಮ್ಮ ಸಂಘ, ಸಂಸ್ಥೆಗಳು, ಕನ್ನಡ ಪತ್ರಿಕೆಗಳ ಮೂಲಕ ಹೃದಯವನ್ನು ತಟ್ಟಿದ ಕನ್ನಡ ನುಡಿ, ನಗರದ ಸಾಹಿತಿ ಶ್ರೇಷ್ಠರ ಸಹೃದಯ ಸಂಸರ್ಗ, ಸಾಹಿತ್ಯಲೋಕದಲ್ಲಿ ಮನವರಳಿಸಿದ ಪುಸ್ತಕ ಸಂಪದ, ನನ್ನ ನೆಲೆವೀಡು ಘಾಟ್‌ಕೋಪರ್‌ನ ಸಸ್ಯಕಾಶಿ, ಅಲ್ಲಿ ಮನಕ್ಕೆ ತಂಪೆರೆವ ಆಕರ್ಷಕ ಪಕ್ಷಿಲೋಕದ ಸಿರಿಸಂಪದ.

ಆದರೆ ಕಳೆದೊಂದು ವರ್ಷದಿಂದ ಎಲ್ಲವೂ ಸ್ತಬ್ಧವಾದಂತೆ ಬಂದೆರಗಿದ ಕೊರೊನಾದ ಆಘಾತ ಜೀವಸಂಕುಲವನ್ನೇ ತಾಡಿಸಿದಂತಿದೆ. ಪಕ್ಷಿಗಳೂ ಸಹಜಸ್ವಭಾವವನ್ನು ಮರೆತಿವೆ. ಸದಾ ನನ್ನ ಹೂಕುಂಡಗಳಲ್ಲಿ ಮೊಟ್ಟೆಯಿಡುತ್ತಿದ್ದ ಪಾರಿವಾಳಗಳು ಈ ವರ್ಷ ಒಂದು ಮೊಟ್ಟೆಯಿಟ್ಟದ್ದು ಕಾಣಲಿಲ್ಲ. ನಗರವೀಗ ಸಹಜ ಸ್ಥಿತಿಗೆ ಮರಳುತ್ತಿರುವಾಗ, ಬಂಧುತ್ವ, ಸ್ನೇಹದ ಬೆಸುಗೆ ಇನ್ನಷ್ಟು ಬಿಗಿಯಾಗುವಂತಿದ್ದರೆ, ವಿಶ್ವವನ್ನೇ ಕಬಳಿಸುತ್ತಿರುವ ವೈರಾಣುವಿನ ಕಬಂಧ ಬಾಹುವಿನಿಂದ ನಗರ ಹೊರಬರಲೆತ್ನಿಸಿದ ಪರಿ ಅನನ್ಯ! ಈ ದಿಸೆಯಲ್ಲಿ ನಗರ ನೈರ್ಮಲ್ಯ ಕಾಪಾಡುವ ಮುಂಬಯಿ ಮಹಾನಗರಪಾಲಿಕೆಯ ಸ್ಮರಣೀಯ ನಗರ ಸೇವಕರುಗಳಿಗೆ, ಅಗತ್ಯ ವಸ್ತುಗಳು ಜನರ ಕೈ ಸೇರುವಂತೆ ಶ್ರಮಿಸಿದವರೆಲ್ಲರಿಗೆ, ಅಹರ್ನಿಶಿ ಇತರರಿಗಾಗಿ ಜೀವತೇದ ವೈದ್ಯಕೀಯ ಕ್ಷೇತ್ರದ ಧನ್ವಂತರಿಗಳಿಗೆ, ಸೇವಾದೀಪ್ತಿಯ ದಾದಿಯರಿಗೆ ಈ ನಗರ ಎಂದೆಂದೂ ಋಣಿಯಾಗಬೇಕಿದೆ.
ಶ್ಯಾಮಲಾ ಮಾಧವ
ಮುಂಬಯಿ
ಅನುವಾದಕಿ

ಟಾಪ್ ನ್ಯೂಸ್

ಛತ್ರಪತಿ ಶಿವಾಜಿ ಕರ್ನಾಟಕದ ಹೊಯ್ಸಳ ವಂಶಸ್ಥ :ಡಿಸಿಎಂ ಕಾರಜೋಳ

ಛತ್ರಪತಿ ಶಿವಾಜಿ ಕರ್ನಾಟಕದ ಹೊಯ್ಸಳ ವಂಶಸ್ಥ :ಡಿಸಿಎಂ ಕಾರಜೋಳ

ಮುಂದಿನ 4 ವರ್ಷದಲ್ಲಿ ಬಾಹ್ಯಾಕಾಶದಲ್ಲಿ ನಿರ್ಮಾಣವಾಗಲಿದೆ ತೇಲುವ ರೆಸಾರ್ಟ್‌!

2027ಕ್ಕೆ ಬಾಹ್ಯಾಕಾಶದಲ್ಲಿ ನಿರ್ಮಾಣವಾಗಲಿದೆ ತೇಲುವ ರೆಸಾರ್ಟ್‌!

ಗುಜರಾತ್ ನಲ್ಲಿ ಕಾಂಗ್ರೆಸ್ ಹಿನ್ನಡೆ : ಅಮಿತ್ ಚಾವ್ ​ಡಾ ರಾಜೀನಾಮೆ

ಭದ್ರತೆ ನಡುವೆಯೂ ಕೆಆರ್‌ಎಸ್ ಬೃಂದಾವನದಲ್ಲಿ ಗಂಧದ ಮರ ಕಳವಿಗೆ ಯತ್ನ

ಭದ್ರತೆ ನಡುವೆಯೂ ಕೆಆರ್‌ಎಸ್ ಬೃಂದಾವನದಲ್ಲಿ ಗಂಧದ ಮರ ಕಳವಿಗೆ ಯತ್ನ

ಮಂಡ್ಯ : ನಿರ್ಬಂಧವಿದ್ದರೂ ಕೆಆರ್‌ಎಸ್ ಡ್ಯಾಂ ಮೇಲೆ ವಾಹನ ಚಾಲನೆ ಆರೋಪ ; ಪಿಎಸ್‌ಐ ಅಮಾನತು

ಮಂಡ್ಯ : ನಿರ್ಬಂಧವಿದ್ದರೂ ಕೆಆರ್‌ಎಸ್ ಡ್ಯಾಂ ಮೇಲೆ ವಾಹನ ಚಾಲನೆ ಆರೋಪ ; ಪಿಎಸ್‌ಐ ಅಮಾನತು

Dishaank app helps you check Karnataka land records

ಭೂಮಿಯ ಬಗ್ಗೆ ಪಿನ್ ಟು ಪಿನ್ ಮಾಹಿತಿ ನೀಡುತ್ತದೆ “ದಿಶಾಂಕ್ ಆ್ಯಪ್”..!

ನಿವೃತ್ತಿಗೊಂಡು ತವರಿಗೆ ಮರಳಿದ ಯೋಧನಿಗೆ ಗ್ರಾಮಸ್ಥರಿಂದ ಸಾಂಪ್ರದಾಯಿಕ ಸ್ವಾಗತ

ನಿವೃತ್ತಿಗೊಂಡು ತವರಿಗೆ ಮರಳಿದ ಯೋಧನಿಗೆ ಗ್ರಾಮಸ್ಥರಿಂದ ಸಾಂಪ್ರದಾಯಿಕ ಸ್ವಾಗತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

the-solution-for-the-obesity

ಆಧುನಿಕ ಶೈಲಿಯ ಆಹಾರ ಪದಾರ್ಥ; ಸ್ಥೂಲಕಾಯ ನಿವಾರಣೆಗೆ ಸರಳ ಮನೆಮದ್ದು

Special Interview with Lyricist Nagendra Prasad

ಎಕ್ಸ್ ಕ್ಲ್ಯೂಸಿವ್ ಇಂಟರ್ ವ್ಯೂ – ‘ಭಾರತ ಸಂಗೀತ ಪ್ರಧಾನವಾದ ದೇಶ’ : ನಾಗೇಂದ್ರ ಪ್ರಸಾದ್

ಫೆಡರರ್‌, ನಡಾಲ್‌, ಜೊಕೊ‌:ತ್ರಿವಿಕ್ರಮರಿಗೆ ಇನ್ನೆಷ್ಟು ಗ್ರ್ಯಾನ್‌ಸ್ಲ್ಯಾಮ್‌ ಒಲಿಯುತ್ತೆ?

ಫೆಡರರ್‌, ನಡಾಲ್‌, ಜೋಕೊ‌: ತ್ರಿವಿಕ್ರಮರಿಗೆ ಇನ್ನೆಷ್ಟು ಗ್ರ್ಯಾನ್‌ಸ್ಲ್ಯಾಮ್‌ ಒಲಿಯುತ್ತೆ?

Untitled-1

ಆಟೋವೇ ಅರಮನೆ : ಮೊಮ್ಮಕ್ಕಳ ಶಿಕ್ಷಣಕ್ಕಾಗಿ ಆಟೋ ಓಡಿಸಿ ಬದುಕು ಸಾಗಿಸುವ 74 ರ ವೃದ್ಧ

Sridevi death anniversary: Lesser-known facts about the ‘first female superstar’ of Indian cinema

ಶ್ರೀದೇವಿ ಪುಣ್ಯಸ್ಮರಣೆ : ಬೊಗಸೆ ಕಂಗಳ ನಟಿ ಅಭಿಮಾನಿಗಳಿಗೆ ಆಘಾತ ನೀಡಿದ ದಿನವಿದು..!

MUST WATCH

udayavani youtube

ಮಂಗಳೂರು ಜೈಲು ಮೇಲ್ದರ್ಜೆಗೇರಿಸಲಾಗುವುದು; ಡಿಜಿಪಿ ಅಲೋಕ್ ಕುಮಾರ್

udayavani youtube

Udayavani 02-March-2021 News Bulletin | Udayavani

udayavani youtube

ಮಂಗಳೂರು: ನಗರದ ಸಮಗ್ರ ಅಭಿವೃದ್ಧಿಗೆ ಆದ್ಯತೆ: ನೂತನ ಮೇಯರ್ ಪ್ರೇಮಾನಂದ ಶೆಟ್ಟಿ

udayavani youtube

ಹಳೆಯ ವೃತ್ತ ಪತ್ರಿಕೆಯಿಂದ ಶಿವಾಜಿ ಮಹಾರಾಜರ ಕಲಾಕೃತಿ:

udayavani youtube

ಚಿಟ್ ಚಾಟ್ ವಿಥ್ ಸಿಂಗರ್ ಶ್ರೀ ಹರ್ಷ | Interview with Shree Harsha | Harshadhwani

ಹೊಸ ಸೇರ್ಪಡೆ

Guru Ravidasa service is unique

ಗುರು ರವಿದಾಸರ ಸೇವೆ ಅನನ್ಯ

Advice to young ones to stay away from evil

ದುಶ್ಚಟಗಳಿಂದ ದೂರವಿರಲು ಯುವಕರಿಗೆ ಸಲಹೆ

programme held at muddebihala

60 ಗ್ರಾಪಂಗಳ 1000 ಸದಸ್ಯರಿಗೆ ಸನ್ಮಾನ

ಛತ್ರಪತಿ ಶಿವಾಜಿ ಕರ್ನಾಟಕದ ಹೊಯ್ಸಳ ವಂಶಸ್ಥ :ಡಿಸಿಎಂ ಕಾರಜೋಳ

ಛತ್ರಪತಿ ಶಿವಾಜಿ ಕರ್ನಾಟಕದ ಹೊಯ್ಸಳ ವಂಶಸ್ಥ :ಡಿಸಿಎಂ ಕಾರಜೋಳ

govinda-karjola

ವಿಮಾನ ನಿಲ್ದಾಣ ಕಾಮಗಾರಿ ಶೀಘ್ರ ಪೂರ್ಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.