ಕಾಡಾನೆ ದಾಳಿಗೆ ಭತ್ತದ ಬಣವೆ ನಾಶ: ಮನನೊಂದ ರೈತ ಆತ್ಮಹತ್ಯೆ
Team Udayavani, Dec 11, 2020, 1:48 PM IST
ಮುಂಡಗೋಡ: ಗದ್ದೆಯಲ್ಲಿನ ಭತ್ತದ ಬಣವೆಯನ್ನು ಕಾಡಾನೆಗಳು ದಾಳಿ ನಡೆಸಿ ನಾಶ ಪಡಿಸಿರುವುದನ್ನು ಕಂಡ ರೈತನೊಬ್ಬ ಮನನೊಂದು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ತೊಗ್ರಳ್ಳಿ ಗ್ರಾಮದಲ್ಲಿ ನಡೆದಿದೆ.
ಬೆಡಸಗಾಂವ ಗ್ರಾಪಂ ವ್ಯಾಪ್ತಿಯ ತೊಗ್ರಳ್ಳಿ ಗ್ರಾಮದ ಪ್ರಭಾಕರ ವಾಮನ್ ಕೂರ್ಸೆ ಎಂಬ ರೈತನೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ವಿವಿಧ ಕಡೆಗಳಲ್ಲಿ ಸಾಲ ಪಡೆದು ಭತ್ತದ ಬೆಳೆ ಬೆಳೆದು ಕಟಾವ್ ಮಾಡಿ ಬಣವೆ ಹಾಕಲಾಗಿತ್ತು. ಆದರೆ ಬುಧವಾರ ಕಾಡಾನೆಗಳು
ಭತ್ತದ ಬಣವೆಯನ್ನು ಸಂಪೂರ್ಣ ನಾಶ ಪಡಿಸಿವೆ. ಇದನ್ನು ಕಂಡ ರೈತ ಪ್ರಭಾಕರ ಸಾಲ ಭರಿಸುವುದು ಹೇಗೆ ಎಂದು ಮನನೊಂದು ಗದ್ದೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಳೆದ ಒಂದು ತಿಂಗಳಿಂದ ಕಾಡಾನೆಗಳು ತಾಲೂಕಿನಲ್ಲಿ ನಿರಂತರವಾಗಿ ದಾಳಿ ನಡೆಸುತ್ತಿದ್ದು ಇದರಿಂದ ರೈತರು ಹಾನಿ ಅನುಭವಿಸುತ್ತಿದ್ದಾರೆ.
ಇದನ್ನೂ ಓದಿ:ಗೋಹತ್ಯೆ ನಿಷೇಧ ಕಾಯ್ದೆಯಿಂದ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗಲಿದೆ :ಸಿದ್ದರಾಮಯ್ಯ
ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.