ಕೋಲ್ಕತಾ, ಅಹ್ಮದಾಬಾದ್ನಲ್ಲಿ ಐಪಿಎಲ್ ಪ್ಲೇ ಆಫ್; ಪುಣೆಯಲ್ಲಿ ವನಿತಾ ಟಿ20 ಚಾಲೆಂಜ್ ಸರಣಿ
Team Udayavani, May 3, 2022, 11:04 PM IST
ಹೊಸದಿಲ್ಲಿ: ಐಪಿಎಲ್ ಪ್ಲೇ ಆಫ್ ಪಂದ್ಯಗಳ ವೇಳಾಪಟ್ಟಿಯನ್ನು ಬಿಸಿಸಿಐ ಮಂಗಳವಾರ ಪ್ರಕಟಿಸಿದೆ. ಈ ಹಂತದ 4 ಪಂದ್ಯಗಳು ಕೋಲ್ಕತಾ ಹಾಗೂ ಅಹ್ಮದಾಬಾದ್ನಲ್ಲಿ ನಡೆಯಲಿವೆ.
ಈ ಹನಡುವೆ 3 ವನಿತಾ ತಂಡಗಳ ನಡುವಿನ ಟಿ20 ಚಾಲೆಂಜ್ ಸರಣಿಯ ಆತಿಥ್ಯ ಪುಣೆ ಪಾಲಾಗಿದೆ. ಈ ಪಂದ್ಯಗಳು ಮೇ 23, 24, 26 ಮತ್ತು 28ರಂದು ನಡೆಯಲಿವೆ.
ಐಪಿಎಲ್ ಪಂದ್ಯಾವಳಿಯ ಮೊದಲ ಕ್ವಾಲಿಫೈಯರ್ (ಮೇ 24) ಮತ್ತು ಎಲಿಮಿನೇಟರ್ ಪಂದ್ಯ (ಮೇ 25) ಕೋಲ್ಕತಾದ “ಈಡನ್ ಗಾರ್ಡನ್ಸ್’ ಅಂಗಳದಲ್ಲಿ ನಡೆಯಲಿದೆ. ಗ್ರೂಪ್ ಹಂತದಲ್ಲಿ ಮೊದಲೆರಡು ಸ್ಥಾನ ಪಡೆದ ತಂಡಗಳು ಮೊದಲ ಕ್ವಾಲಿಫೈಯರ್ನಲ್ಲಿ ಎದುರಾಗಲಿವೆ. ಇಲ್ಲಿ ಗೆದ್ದ ತಂಡ ನೇರವಾಗಿ ಫೈನಲ್ ತಲುಪುತ್ತದೆ.
3ನೇ ಹಾಗೂ 4ನೇ ಸ್ಥಾನ ಪಡೆದ ತಂಡಗಳು ಎಲಿಮಿನೇಟರ್ ಸುತ್ತಿನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯಲಿವೆ. ಇಲ್ಲಿ ಸೋತ ತಂಡ ಕೂಟದಿಂದ ನಿರ್ಗಮಿಸುತ್ತದೆ. ಗೆದ್ದ ತಂಡ ಮೊದಲ ಕ್ವಾಲಿಫೈಯರ್ನಲ್ಲಿ ಪರಾಭವಗೊಂಡ ತಂಡವನ್ನು ದ್ವಿತೀಯ ಕ್ವಾಲಿಫೈಯರ್ನಲ್ಲಿ ಎದುರಿಸಲಿದೆ. ಈ ಪಂದ್ಯ ಮೇ 27ರಂದು ಅಹ್ಮದಾಬಾದ್ನ “ನರೇಂದ್ರ ಮೋದಿ ಸ್ಟೇಡಿಯಂ’ನಲ್ಲಿ ಏರ್ಪಡಲಿದೆ. ಮೇ 29ರ ಫೈನಲ್ ಕೂಡ ಇಲ್ಲಿಯೇ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು
Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ