ಅರಮನೆ ನಗರದಲ್ಲಿ ನಾಳೆ ಏರ್ ಶೋ
Team Udayavani, Oct 1, 2019, 3:09 AM IST
ಮೈಸೂರು: ಮೈಸೂರು ದಸರಾ ಮಹೋತ್ಸವದ ಪ್ರಯುಕ್ತ ಅ.2ರಂದು ಬನ್ನಿಮಂಟಪ ಮೈದಾನದಲ್ಲಿ ಭಾರತೀಯ ವಾಯುಸೇನೆಯಿಂದ ಏರ್ ಶೋ ಆಯೋಜಿಸಲಾಗಿದೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್, ಅಕ್ಟೋಬರ್ ಮೊದಲ ವಾರದಲ್ಲೇ ಭಾರತೀಯ ವಾಯುಸೇನೆ ಸಪ್ತಾಹ ಇರುವುದರಿಂದ ಈ ಬಾರಿ ಮೈಸೂರಿನಲ್ಲಿ ಏರ್ಶೋ ಕೈತಪ್ಪುವ ಸಾಧ್ಯತೆ ಇತ್ತು. ಸರ್ಕಾರದ ಮಟ್ಟದಲ್ಲಿ ಬಹಳ ಪ್ರಯತ್ನ ಮಾಡಿದ್ದರಿಂದ ಏರ್ ಶೋ ಆಯೋಜನೆ ಸಾಧ್ಯವಾಗಿದೆ ಎಂದರು.
ಏರ್ ಶೋ ನಡೆಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದು, ಭಾರತೀಯ ವಾಯುಸೇನೆಯ ತಂಡ ಪೂರ್ವ ತಾಲೀಮು ನಡೆಸಿದೆ. ಅ.2ರಂದು ಬೆಳಗ್ಗೆ 11.30ಕ್ಕೆ ಏರ್ ಶೋ ಆರಂಭವಾಗಲಿದ್ದು, 40 ರಿಂದ 45 ನಿಮಿಷಗಳ ಕಾಲ ಏರ್ ಶೋನಲ್ಲಿ ಫ್ಲವರ್ ಪೆಟಲ್ ಡ್ರಾಪ್, ಸ್ಲಿಥೆರಿಂಗ್ ಮತ್ತು ಏರ್ ಡ್ರಾಪ್, ಸ್ಕೈಡೈವಿಂಗ್ ಪ್ರದರ್ಶನ ನೀಡಲಿದ್ದಾರೆ.
ಆ್ಯಂಬುಲೆನ್ಸ್ ಮತ್ತು ಅಗ್ನಿಶಾಮಕ ದಳವನ್ನು ಬನ್ನಿಮಂಟಪ ಮೈದಾನಕ್ಕೆ ನಿಯೋಜಿಸಿದ್ದು, ವಾಯುಸೇನೆ ಯೋಧರು ಸಾಹಸ ಪ್ರದರ್ಶನ ನೀಡುವ ಪ್ರದೇಶದಲ್ಲಿ ಧೂಳು ಏಳದಂತೆ ನಿಯಂತ್ರಿಸಲಾಗುವುದು. ಜತೆಗೆ ಸಾಹಸ ಪ್ರದರ್ಶನದ ನಡುವೆ ಜನರು ಓಡಾಡಬಾರದು. ಜತೆಗೆ ಸಾಹಸ ಪ್ರದರ್ಶನದ ವೇಳೆ ಯೋಧರ ಬಳಿ ಹೋಗದಂತೆ ಅವರು ಮನವಿ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ
Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ
Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ
ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil
ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?
MUST WATCH
ಹೊಸ ಸೇರ್ಪಡೆ
ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ
MDH- Everest ಮಸಾಲೆ ನಿಷೇಧ: ಸಿಂಗಾಪುರ, ಹಾಂಕಾಂಗ್ ನಿಂದ ವಿವರ ಕೇಳಿದ ಭಾರತ
Priyanka Gandhi; ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ
Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು
Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್