ಸುಳ್ಳು ಸುದ್ದಿಗಳ ಬಗ್ಗೆ ಸ್ಪಷ್ಟನೆ ಕೊಟ್ಟ ನಟ ಅಕ್ಷಯ ಕುಮಾರ್
Team Udayavani, Jun 2, 2020, 4:05 AM IST
ಕೋವಿಡ್ 19 ಲಾಕ್ ಡೌನ್ ಮಧ್ಯೆ ನಟ ಅಕ್ಷಯ್ ಕುಮಾರ್ ತನ್ನ ಸಹೋದರಿ ಅಲ್ಕಾ ಬಾಟಿಯಾ ಮತ್ತು ಆಕೆಯ ಮಗುವಿಗಾಗಿ ಸ್ಪೆಷಲ್ ಚಾರ್ಟರ್ ವಿಮಾನವೊಂದನ್ನು ಬುಕ್ ಮಾಡಿದ್ದಾರೆ ಎನ್ನುವ ಸುದ್ದಿ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತಿತ್ತು.
ಆದರೆ ಇದನ್ನು ನಿರಾಕರಿಸಿರುವ ಅಕ್ಷಯ್ ಕುಮಾರ್, ಈ ಬಗ್ಗೆ ಟ್ವೀಟ್ ಮಾಡುವ ಮೂಲಕ ಇವೆಲ್ಲಾ ಸುಳ್ಳು ವರದಿಗಳು, ತಾವು ಸಹೋದರಿ ಹಾಗೂ ಆಕೆಯ ಮಗುವಿಗಾಗಿ ಯಾವುದೇ ರೀತಿಯ ವಿಮಾನವನ್ನು ಕಾಯ್ದಿರಿಸಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ತನ್ನ ಬಗ್ಗೆ ಇಲ್ಲ ಸಲ್ಲದ ಸುಳ್ಳು ಸುದ್ದಿಗಳನ್ನು ಹಬ್ಬಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ.
ಲಾಕ್ ಡೌನ್ ಜಾರಿಯಾದ ನಂತರ ತಮ್ಮ ತಂಗಿ ಎಲ್ಲಿಯೂ ಪ್ರವಾಸ ಮಾಡಿಲ್ಲ. ಅಲ್ಲದೆ ಆಕೆಗೆ ಕೇವಲ ಒಂದು ಮಗುವಿಗೆ ಆದರೆ, ಆಕೆಗೆ ಎರಡು ಮಗು ಇರುವುದಾಗಿ ವರದಿ ಮಾಡಲಾಗಿದೆ ಎಂದು ಅಕ್ಷಯ್ ಕುಮಾರ್ ಟ್ವೀಟ್ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sidhu Moosewala: ಗಂಡು ಮಗುವಿಗೆ ಜನ್ಮ ನೀಡಿದ ಸಿಧು ಮೊಸೆವಾಲ ತಾಯಿ
Box office: ಸಿದ್ದಾರ್ಥ್ ʼಯೋಧʼ ಎದುರು ಸದ್ದು ಮಾಡದ ಅದಾ ಶರ್ಮಾ ʼಬಸ್ತಾರ್ʼ
“ದೊಡ್ಡ ಸೌತ್ ಸಿನಿಮಾ ಮಾಡುತ್ತಿದ್ದೇನೆ” ಎಂದ ಕರೀನಾ: ಯಶ್ ಜೊತೆ ಬೇಬೋ ನಟಿಸೋದು ಪಕ್ಕಾ?
ಸಟ್ಟೇರುವ ಮುನ್ನವೇ ಬಹುಕೋಟಿ ʼರಾಮಾಯಣʼಕ್ಕೆ ಸಂಕಷ್ಟ: ನಿರ್ಮಾಣದಿಂದ ಹಿಂದೆ ಸರಿದ ನಿರ್ಮಾಪಕ
ನಿಜಕ್ಕೂ ಅಮಿತಾಬ್ ಬಚ್ಚನ್ ಹೃದಯ ಸಂಬಂಧಿ ಕಾಯಿಲೆಗೆ ಒಳಗಾಗಿದ್ರಾ? ಬಿಗ್ ಬಿ ಹೇಳಿದ್ದೇನು
MUST WATCH
ಹೊಸ ಸೇರ್ಪಡೆ
Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!
PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್ ಸೇದಿದ ಆಟಗಾರನ ವಿಡಿಯೋ ವೈರಲ್
ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ
Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು
Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ